Home Posts tagged #sulya (Page 6)

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಸಚಿವ ಎಸ್. ಅಂಗಾರ

ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಅಂಗಾರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಠರದ ಅಲ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬುಧವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹರಿವು ನಿಲ್ಲಿಸಿದ ಸುಳ್ಯದ ಜೀವನದಿ ಪಯಸ್ವಿನಿ

ಸುಳ್ಯ: ಸುಳ್ಯದ ಜೀವನದಿ ಪಯಸ್ವಿನಿಯು ಹರಿವು ನಿಲ್ಲಿಸಿದ್ದು ಇದೀಗ ಕಾಂತಮಂಗಲ, ದೊಡ್ಡೆರಿ ಹಾಗೂ ಬಸವನಪಾದೆಯ ಸುಮಾರು 125 ಮನೆಗಳಿಗೆ ಕಳೆದ ಕೆಲ ದಿನಗಳಿಂದ ನೀರು ವ್ಯತ್ಯಯವಾಗಿತ್ತು. ಇದನ್ನು ಸರಿ ಪಡಿಸಲು ಹಲವಾರು ವಿಧಗಳಲ್ಲಿ ಪ್ರಯತ್ನಿಸಿದ್ದರು ಅಷ್ಟರಲ್ಲಾಗಲೇ ಚುನಾವಣೆ ಘೋಷಣೆ ಆದ ಹಿನ್ನಲೆಯಲ್ಲಿ ಟ್ಯಾಂಕರ್ ಹಾಗೂ ಪಂಚಾಯತ್ ವಾಹನದಲ್ಲಿ ಕೆಲ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು ಅದು ಕೂಡಾ ಕಷ್ಟಾ ಸಾಧ್ಯವಾದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್

ಸುಳ್ಯದ ಸಂಪಾಜೆಯಲ್ಲಿ ಕಾರು ಹಾಗೂ ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ

ಕಾರು ಹಾಗೂ ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿರುವ ಘಟನೆ ಸಂಪಾಜೆಯಲ್ಲಿ ನಡೆದಿದೆ.ಮಡಿಕೇರಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಹಾಗೂ ಮಂಗಳೂರು ಕಡೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ ಎನ್ನಲಾಗಿದೆ. ಕಾರಿನಲ್ಲಿ ಮಂಡ್ಯ ಜಿಲ್ಲೆಯ 8 ಮಂದಿ ಪ್ರಯಾಣಿಸುತ್ತಿದ್ದು, ಕಾರಿನಲ್ಲಿದ್ದ 3 ಮಕ್ಕಳು, ಎರಡು ಮಹಿಳೆಯರು ಹಾಗು ಒಬ್ಬರು ಪುರುಷ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಚಿವ ಸುನಿಲ್ ಕುಮಾರ್ ಭೇಟಿ

ಸುಬ್ರಹ್ಮಣ್ಯ: ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸುನಿಲ್ ಕುಮಾರ್ ಮಂಗಳವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಬುಧವಾರ ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದರುಶನ ಪಡೆದು, ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು, ಪ್ರಸಾದ ಸ್ವೀಕರಿಸಿದರು. ಕುಕ್ಕೆಯಲ್ಲಿ ಸುನಿಲ್ ಕುಮಾರ್ ಶೇಷ ಸೇವೆ ನೆರವೇರಿಸಿದರು. ಬಳಿಕ ಆದಿ ಸುಬ್ರಹ್ಮಣ್ಯಕ್ಕೆ ತೆರಳಿ ಶ್ರೀ ದೇವರ

ಮೀನುಗಾರಿಕಾ ಇಲಾಖೆಯಿಂದ 5 ಸಾವಿರ ಮೀನು ಮರಿಗಳ ವಿತರಣೆ

ಸುಳ್ಯ. ಮೀನುಗಾರಿಕೆ ಇಲಾಖೆಯ ವತಿಯಿಂದ 5 ಸಾವಿರ ಮೀನು ಮರಿಗಳ ವಿತರಣೆ ಕಾರ್ಯಕ್ರಮ ನಡೆಯಿತು. ಸಚಿವ ಎಸ್. ಅಂಗಾರ ಅವರು ಸುಮಾರು 80 ಫಲಾನುಭವಿಗಳಿಗೆ ಉಚಿತವಾಗಿ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ವಿತರಿಸಿ ಮತನಾಡಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ಎ ವಿ ತೀರ್ಥರಾಮ , ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ , ರಾಧಾಕೃಷ್ಣ ಬೋಳ್ಳೂರ್, ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಶ್ರೀ ಶೆಣೈ, ಮೀನುಗಾರಿಕಾ

ಸಾಹಿತ್ಯ ಸಂಭ್ರಮದಲ್ಲಿ ರಸಮಂಜರಿ ಕಾರ್ಯಕ್ರಮ

ಉಜಿರೆ, ಫೆ: ದಕ್ಷಿಣ ಕನ್ನಡ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಗೀತಲಹರಿ’ ಸಂಗೀತ ಕಾರ್ಯಕ್ರಮವನ್ನು ಗಾಯಕಿ ಅನಸೂಯ ದೇವಸ್ಥಳಿ ಅವರು ನಡೆಸಿಕೊಟ್ಟರು. “ಮನವನ್ನು ತಣಿಸುವ ಮೋಹನಸೂತ್ರ”, “ಅವಳಿಲ್ಲಿಗೆ ಬಂದಾಗ”, “ಮಣ್ಣಿನಲಿ ಮಾಡಿರಲಿ ತನುವಿನಲಿ ನೀ ಕುಳಿತು”, “ಬಾರೋ ವಸಂತ”, “ಶೂದಷಚೈತ್ರದ ಸುಂದರಿ ನೀನು” ಹಾಡುಗಳಿಗೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು. ತಬಲಾದಲ್ಲಿ ಗೌರವ್

ಸಾಹಿತ್ಯ ಸಮ್ಮೇಳನದಲ್ಲಿ ಮನಸೆಳೆದ ನೃತ್ಯೋತ್ಸವ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಇಪ್ಪತ್ತೈದನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಶುಕ್ರವಾರದಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ ತಂಡ ನೃತ್ಯ ರೂಪಕದ ಮೂಲಕ ಕಲಾ ಆರಾಧಕರನ್ನು ಮೂಕವಿಸ್ಮಿತರನ್ನಾಗಿಸಿತು. ವಿದುಷಿ ಶಾಲಿನಿ ಆತ್ಮಭೂಷಣ ನಿರ್ದೇಶನದಲ್ಲಿ ಹತ್ತೊಂಬತ್ತು ಮಂದಿ ಕಲಾವಿದರು ತಂಡ ತಂಡವಾಗಿ ‘ನೃತ್ಯೋsಹಂ’ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.   ಸರ್ವ ದೇವರ ಸಂತೃಪ್ತಿಗೆಂದು ಪುಷ್ಪಾಂಜಲಿ

ಸಾಹಿತ್ಯ ಸಮ್ಮೇಳನದಲ್ಲಿ 16ಕ್ಕೂ ಅಧಿಕ ಕನ್ನಡ ಪುಸ್ತಕಗಳ ಲೋಕಾರ್ಪಣೆ

ಉಜಿರೆ, ಫೆ.4: ಸಾಹಿತ್ಯವು ಭಾಷೆ ಮತ್ತು ಅಕ್ಷರದ ಸಮ್ಮಿಶ್ರಣ. ಪತ್ರಕರ್ತರು ಮತ್ತು ಸಾಹಿತಿಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಪತ್ರಕರ್ತರ ಗುರುತಿಸುವಿಕೆ ಒಂದು ದಿನಕ್ಕೆ ಮುಗಿದರೂ ಸಾಹಿತಿಗಳ ಗುರುತಿಸುವಿಕೆ ತುಂಬಾ ದಿನ ಇರುತ್ತದೆ ಎಂದು ಅಮರಸುಳ್ಯ ಅಧ್ಯಯನ ಕೇಂದ್ರ ಸುಳ್ಯದ ನಿರ್ದೇಶಕ ಡಾ. ಬಿ. ಪ್ರಭಾಕರ ಶಿಶಿಲ ಹೇಳಿದರು. ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ

ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ‘ನಗೆಹಬ್ಬ’

ಉಜಿರೆ, ಫೆ.4: ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ಖ್ಯಾತ ಹಾಸ್ಯ ಕಲಾವಿದ ಪಟ್ಟಾಭಿರಾಮ ಸುಳ್ಯ ಅವರು ನಡೆಸಿಕೊಟ್ಟ ನಗೆಹಬ್ಬ ಕಾರ್ಯಕ್ರಮವು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ತಮ್ಮ ಅದ್ಭುತವಾದ ಮಿಮಿಕ್ರಿ ಕಲೆಯ ಮೂಲಕ ಹಾಸ್ಯಲೋಕಕ್ಕೆ ಕರೆದೊಯ್ದರು. ದೈನಂದಿನ ಜೀವನದಲ್ಲಿ ಕೇಳಿಬರುವ ಸೈರನ್ ಸದ್ದು, ಆ್ಯಂಬುಲೆನ್ಸ್, ವಿಮಾನ

ಸಾಹಿತ್ಯ ವೇದಿಕೆಯಲ್ಲಿ ‘ಗಮಕ’ ವೈಭವ

ಉಜಿರೆ, ಫೆ.4: ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ಗಮಕ ವಾಚನ ನಡೆಯಿತು. ಮಂಗಳೂರಿನಲ್ಲಿ ಗಮಕಕ್ಕೆ ಹೆಚ್ಚು ಮನ್ನಣೆ ನೀಡಿದ ಯಜ್ಞೇಶ್‌ ಎಸ್. ಸುರತ್ಕಲ್‌ ಅವರು ಗಮಕ ವಾಚನ ನಡೆಸಿದರು. ‘ಆದಿನಾಥನ ಪೂರ್ವವೃತ್ತಾಂತ’ದಿಂದ ಪ್ರಾರಂಭಗೊಂಡು ದುರ್ಯೋಧನ