Home Posts tagged #udupi (Page 50)

ಬ್ರಹ್ಮಾವರ : ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮ

ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್, ಬ್ರಹ್ಮಾವರ ಪೊಲೀಸ್ ಠಾಣೆಯ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮ ಬ್ರಹ್ಮಾವರ ಕ್ರಾಸ್‍ಲ್ಯಾಂಡ್ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರಾಜಶೇಖರ ವಂದಲಿ ಮಾತನಾಡಿ, ನಾನಾ ಮಾದಕ ವಸ್ತುಗಳ

ಉಡುಪಿಯ ಕೋಡಿ ಬೆಂಗ್ರೆ ಶಾಲೆಯಲ್ಲಿ ಶಿಕ್ಷಕರ ಕೊರತೆ: ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಉಡುಪಿ ಜಿಲ್ಲೆಯ ಕೋಡಿ ಬೆಂಗ್ರೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚು ಮಾಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. 98 ವರ್ಷ ಇತಿಹಾಸ ಇರುವ ಉಡುಪಿಯ ಕೋಡಿ ಬೆಂಗ್ರೆ ಶಾಲೆಯಲ್ಲಿ ಈಗ ಕೇವಲ ಮೂವರು ಖಾಯಂ ಶಿಕ್ಷಕರಿದ್ದು 1ರಿಂದ 7ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಇಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ನೆಪ ಒಡ್ಡಿ ಮೂವರು ಶಿಕ್ಷಕರಲ್ಲಿ ಒಬ್ಬರನ್ನು ವರ್ಗಾವಣೆ

ಅಂಬಲಪಾಡಿ ನೀರಿನ‌ ಸಮಸ್ಯೆ: ಪಂಚಾಯತ್ ಅಧ್ಯಕ್ಷರ ಹೇಳಿಕೆ ವಿರುದ್ಧ ಗ್ರಾಮಸ್ಥರು ಗರಂ

ಉಡುಪಿ: ಉಡುಪಿ ಜಿಲ್ಲೆಯ ಅಂಬಲಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ‌ ಸಮಸ್ಯೆ ತೀವ್ರಗೊಂಡಿದ್ದು ಗ್ರಾಮದ ಮಹಿಳೆಯರು ಪಂಚಾಯತ್ ಗೆ ಮುತ್ತಿಗೆ ಹಾಕಿದ್ದರು. ಅಲ್ಲಿನ 90ಕ್ಕು ಅಧಿಕ ಮನೆಗಳಿಗೆ ನೀರು ಸಿಗದಿರುವ ಪರಿಣಾಮ, ನೀರು ಪೂರೈಕೆ ಮಾಡಬೇಕು ಎಂದು ಕೊಡ ಹಿಡಿದು ಪಂಚಾಯತ್ ಗೆ ಮುತ್ತಿಗೆ ಹಾಕಿದ್ದ ಮಹಿಳೆಯರು ಮತ್ತು ಗ್ರಾಮಸ್ಥರು ತಮ್ಮ ಪ್ರತಿಭಟನೆ ದಾಖಲಿಸಿದ್ದರು. ಆದರೆ ಈ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೋಹಿಣಿ

ಗಂಗೊಳ್ಳಿ : ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದ ಜೆಟ್ಟಿ ನಿರ್ಮಾಣ ಕಾರ್ಯ

ಕರಾವಳಿಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿ ಸಂಪೂರ್ಣ ನಿರ್ಲಕ್ಷ್ಯಕ್ಕೊಗಾದ ಸ್ಥಿತಿಗೆ ತಲುಪಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಇಲ್ಲಿನ ಜೆಟ್ಟಿಯ ಒಂದು ಭಾಗ ಕುಸಿದು ಮೀನುಗಾರಿಕೆಗೆ ತೊಂದರೆಯಾಗಿದ್ದರೂ ಜೆಟ್ಟಿಯ ಮರು ನಿರ್ಮಾಣದ ಕಾರ್ಯ ಕನಸಾಗಿಯೇ ಉಳಿದಿದೆ. ಗಂಗೊಳ್ಳಿಯಲ್ಲಿ 2013ರಲ್ಲಿ 10 ಕೋಟಿ ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲಾಗಿತ್ತು. ಇದು 2016ರಲ್ಲಿ ಹಾನಿಗೊಳಗಾಯಿತು. 2018 ರಲ್ಲಿ ದುರಸ್ತಿಗಾಗಿ ಹೆಚ್ಚುವರಿ 3

ಆಂಟಿ ಕಮ್ಯುನಲ್ ವಿಂಗ್ ಕಾರ್ಯವೈಖರಿಯನ್ನು ಸ್ಪಷ್ಟಪಡಿಸಲಿ: ಶಾಸಕ ಯಶ್ಪಾಲ್ ಸುವರ್ಣ

ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರವಾಗಿರಿಸಿ ಆಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲು ಹೊರಟಿದೆ. ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದೆ. ಇದರಿಂದ ಮಂಗಳೂರಿನಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆರೋಪಿಸಿದರು. ವೈದ್ಯಕೀಯ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಪೋಷಕರಲ್ಲಿ ಈ ವಿಂಗ್ ಆತಂಕಕ್ಕೆ ಕಾರಣವಾಗಲಿದೆ. ತಮ್ಮ ಮಕ್ಕಳನ್ನ ಕಾಲೇಜುಗಳಿಗೆ ಕಳುಹಿಸಲು

ಕಟಪಾಡಿ ಕೇಶವ ಭಂಡಾರಿ ನಿಧನ

ಉಡುಪಿ ತಾಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷರು, ಸಮಾಜ ಮುಖಿ ಹೋರಾಟಗಾರ, ಸಂಘಟಕ, ಸಮಾಜದ ಮುಖಂಡ ಕಟಪಾಡಿ ಕೇಶವ ಭಂಡಾರಿಯವರು ಅಸೌಖ್ಯದಿಂದ ನಿಧನರಾಗಿದ್ದಾರೆ. ಕೇಶವ ಭಂಡಾರಿ ಅವರು, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಸ್ಥಾಪಕ ನಿರ್ದೇಶಕರೂ, ಪ್ರಸ್ತುತ ಜಿಲ್ಲಾ ಸವಿತಾ ಸಮಾಜದ ಗೌರವ ಸಲಹೆಗಾರರಾಗಿ ಸೇವೆಯಲ್ಲಿ ಸಲ್ಲಿಸುತ್ತಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕೇಶವ ಭಂಡಾರಿ ಅಂತ್ಯಕ್ರಿಯೆಯಲ್ಲಿ ಉಡುಪಿ ಜಿಲ್ಲಾ

ಹೆಜಮಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಕಾಮಗಾರಿ ಉದ್ಘಾಟನೆ

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3 ಕೋಟಿ 75 ಲಕ್ಷ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಪಟ್ಟ ಬಳಿಯ ನಡಿದಂಡೆ ಸಂರಕ್ಷಣೆ – 2 ಕೋಟಿ, ಪರಪಟ್ಟ – ನದಿಕುದ್ರು ರಸ್ತೆಯ ಕಾಂಕ್ರೀಟಿಕರಣ – 40 ಲಕ್ಷ, ಗುಂಡಿ ರಸ್ತೆ ಕಾಂಕ್ರೀಟಿಕರಣ -50

ಕಾಪು : ಕಡಲು ಕೊರೆತ ಪ್ರದೇಶಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

ಕಾಪು ಕ್ಷೇತ್ರದ ಮೂಳೂರು, ಪೊಲಿಪು, ಉದ್ಯಾವರದ ಕಡಲು ಕೊರೆತ ಪ್ರದೇಶಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು, ಕಾಪು ಪುರಸಭಾ ಅಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಪರಿಶೀಲನೆ ನಡೆಸಿದರು. ಪ್ರತಿ ಬಾರಿಯೂ ಮಳೆಗಾಲ ಆರಂಭವಾದಾಗ ಜನಪ್ರತಿನಿಧಿಗಳು ಆಗಮಿಸಿ ಭರವಸೆ ನೀಡುವುದು, ಒಂದಿಷ್ಟು ಬಂಡೆಕಲ್ಲುಗಳನ್ನು ತಂದು ಕಡಲಿಗೆ ಹಾಕುವುದು ಮಾಮೂಲು. ನಮ್ಮ ಈ ಭಾಗದ ಸಮಸ್ಯೆ ಜೀವಂತ ಎಂಬುದಾಗಿ ಸ್ಥಳೀಯರು ಅಸಮಾದಾನ ವ್ಯಕ್ತ ಪಡಿಸಿದ್ದಾರೆ. ಮಾಧ್ಯಮದೊಂದಿಗೆ

ಕಾಪು: ಕಡಲು ಕೊರೆತ ಪ್ರದೇಶಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ: ಶೀಘ್ರ ಪರಿಹಾರದ ಭರವಸೆ

ಕಾಪು ಕ್ಷೇತ್ರದ ಮೂಳೂರು, ಪೊಲಿಪು, ಉದ್ಯಾವರದ ಕಡಲು ಕೊರೆತ ಪ್ರದೇಶಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು, ಕಾಪು ಪುರಸಭಾ ಅಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.  ಪ್ರತಿ ಬಾರಿಯೂ ಮಳೆಗಾಲ ಆರಂಭವಾದಾಗ ಜನಪ್ರತಿನಿಧಿಗಳು ಆಗಮಿಸಿ ಭರವಸೆ ನೀಡುವುದು, ಒಂದಿಷ್ಟು ಬಂಡೆಕಲ್ಲುಗಳನ್ನು ತಂದು ಕಡಲಿಗೆ ಹಾಕುವುದು ಮಾಮೂಲು. ನಮ್ಮ ಈ ಭಾಗದ ಸಮಸ್ಯೆ ಜೀವಂತ ಎಂಬುದಾಗಿ ಸ್ಥಳೀಯರು ಅಸಮಾದಾನ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ

ಚಂಡಮಾರುತದಿಂದ ಸಮುದ್ರ ಪ್ರಕ್ಷುಬ್ಧ : ಮಲ್ಪೆ ಬೀಚ್‌ನ ಉದ್ದಕ್ಕೂ ಸುರಕ್ಷತಾ ಬಲೆಗಳ ನಿರ್ಮಾಣ

ಉಡುಪಿ : ಚಂಡಮಾರುತದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಸುರಕ್ಷತಾ ಬೇಲಿಯನ್ನು ಅಳವಡಿಸಲಾಗಿದೆ. ಮುಂಗಾರು ಮಳೆ ಕಡಿಮೆಯಾಗಿದ್ದರೂ, ದೊಡ್ಡ ಅಲೆಗಳು ಸಮುದ್ರದ ತೀರಕ್ಕೆ ಅಪ್ಪಳಿಸುತ್ತಿದ್ದು ಸಮುದ್ರದ ಅಬ್ಬರ ಮುಂದುವರಿದಿದೆ. ಈ ಸಮಯದಲ್ಲಿ ನೀರಿಗೆ ಇಳಿಯುವುದು ಅಪಾಯಕಾರಿ. ಈ ನಿಟ್ಟಿನಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿಯು ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ನ ಒಂದು ಕಿಲೋ ಮೀಟರ್