ಕುಂದಾಪುರ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕೊರಗರ ಭೂಮಿ ಸಮಸ್ಯೆ ಹಾಗೂ ವಿವಿಧ ಬೇಡಿಕೆಗೆ ಸಂಬಂಧಪಟ್ಟಂತೆ ನಾಡ ಗ್ರಾಪಂ ಮುಂಭಾಗ ಧರಣಿ ನಡೆಸುತ್ತಿದ್ದು, ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ. ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ಸೂಚನೆಯಂತೆ ಸ್ಥಳಕ್ಕೆ ಆಗಮಿಸಿದ ಕುದಾಪುರ ತಹಶೀಲ್ದಾರ್
ಬ್ರಹ್ಮಾವರ : ಉಡುಪಿ ಜಿಲ್ಲೆ ಬಾರ್ಕೂರು ಮೂಲದ ಸ್ವೀಝಲ್ ಫುರ್ಟಾಡೊ ಅವರು ಸೌತ ಅಮೇರಿಕಾ ಪೆರುವಿನಲ್ಲಿ ನಡೆದ ಮಿಸ್ ಟೀನ್ ಇಂಟರ್‍ನ್ಯಾಶನಲ್ ಸ್ಪರ್ಧೆಯಲ್ಲಿ ಮಿಸ್ ಟೀನ್ ಯೂನಿವರ್ಸಲ್ ಇಂಟರ್‍ನ್ಯಾಷನಲ್ ಪ್ರಿನ್ಸಸ್ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಸ್ವೀಜಲ್ ಅವರು ‘ಮಿಸ್ ಟೀನ್ ಯೂನಿವರ್ಸಲ್ ಏಷ್ಯಾ’ ಮತ್ತು ‘ಅತ್ಯುತ್ತಮ ರಾಷ್ಟ್ರೀಯ ಕಾಸ್ಟೂಮ್ಸ್ ಪ್ರಶಸ್ತಿ’ಯನ್ನೂ
ಉಡುಪಿ : ಇತ್ತೀಚೆಗೆ ಉಡುಪಿ ಜಿಲ್ಲೆಯ ಉದ್ಯಾವರದ ಬೊಳ್ಜೆ ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತ ರಕ್ಷಿತ್ ಸಾಲಿಯಾನ್ ಮೇಲೆ ಅಪರಿಚಿತರಾದ ಮೂವರು ಮಾರಕಾಯುಧಗಳಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ವರದಿಯಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲೆಯ ಕಾಪು ಪೋಲಿಸ್ ಠಾಣೆಯುಲ್ಲಿ ದೂರು ದಾಖಲಾಗಿದ್ದು ಈ ಕುರಿತಂತೆ ಪೋಲೀಸರು ವಿಚಾರಣೆ ನಡೆಸಲು ಪ್ರಾರಂಭಿಸಿದಾಗ ಈ ಹಿಂದೆ ಹಲವಾರು ದರೋಡೆ, ಕಳ್ಳತನ ಕೊಲೆ ಇತ್ಯಾದಿ ಆರೋಪಗಳನ್ನು ಹೊತ್ತು, ಇದೀಗ ಜಾಮೀನಿನ ಮೇಲೆ ತಿರುಗಾಡುತ್ತಿರುವ
ಉಡುಪಿ : ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಅಬ್ಬರದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಬೇಸಿಗೆಯ ಧಗೆ ಮತ್ತು ಕುಡಿಯುವ ನೀರಿನ ಕೊರತೆಯಿಂದ ಬೇಸತ್ತ ಕರಾವಳಿ ಜನತೆಗೆ ನಿಟ್ಟುಸಿರು ಬಿಡುವಂತಾಗಿದೆ. ಉಡುಪಿ ಜಿಲ್ಲೆಯಾದ್ಯಂತ ತುಂತುರು ಮಳೆ ಮುಂದುವರಿದು ಮೋಡ ಕವಿದ ವಾತಾವರಣ ಮನೆಮಾಡಿದೆ. ಆದರೆ ಕಡಲತೀರದ ಸೌಂದರ್ಯವನ್ನು ಸವಿಯಲು ದೂರದೂರಿನಿಂದ ಬಂದ ಪ್ರವಾಸಿಗರಿಗೆ ಮಾತ್ರ ಮಳೆಯ ದಿಢೀರ್ ಆಗಮನ ಸಂತೋಷವನ್ನುಂಟು ಮಾಡಲಿಲ್ಲ. ಬಿಪರ್ ಜೋಯ್
ಬೈಂದೂರು ತಾಲೂಕಿನ ನಾಡ ಗ್ರಾ.ಪಂ ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು 5 ಸೆಂಟ್ಸ್ ಕಾಲೊನಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಗುಡಿಸಲಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಚಂದು ಪೂಜಾರ್ತಿ ಎಂಬವರಿಗೆ ಸಮಾನ ಮನಸ್ಥಿತಿ ಯವಕರ ವಾಟ್ಸಾಪ್ ಗ್ರೂಪ್ ಹಾಗೂ ಲಯನ್ಸ್ ಕ್ಲಬ್ ನಾವುಂದ, ಗ್ರಾಮ ಪಂಚಾಯತ್ ನಾಡ, ಮತ್ತು ಪತ್ರಕರ್ತ ಮಿತ್ರರು ಸುಸಜ್ಜಿತವಾದ ಮನೆಯನ್ನು ನಿರ್ಮಿಸಿ ಕೊಟ್ಟರು. ಬಂಧುಗಳಿಲ್ಲದೆ ತಟ್ಟಿಯಲ್ಲಿ ಬದುಕನ್ನು ಸಾಗಿಸುತ್ತಿದ್ದ ಚೆಂದು ಅಜ್ಜಿಯ ಸಂಕಷ್ಟದ ಬದುಕಿನ
ಎರ್ಮಾಳಿನ ಮೂಡಬೆಟ್ಟು ಪ್ರದೇಶದಲ್ಲಿ ರಾತ್ರಿ ಸಮಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರು ಚಿರತೆಯನ್ನು ಕಂಡು ಭಯಭೀತರಾದ್ದು, ರಾತ್ರಿ ಎಲ್ಲಾ ಜಾಗರಣೆಯಿಂದ ಕೂರುವಂತಾಗಿದೆ. ಎರ್ಮಾಳು ಅದಮಾರು ರಸ್ತೆಯ ಮೂಡಬೆಟ್ಟು ಎಂಬಲ್ಲಿ ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದವರಿಗೆ ಈ ಚಿರತೆ ವಿದ್ಯುತ್ ದೀಪದಡಿಯಲ್ಲಿ ನಡೆದು ಹೋಗುತ್ತಿದ್ದ ದೃಶ್ಯ ಕಂಡುಬಂದಿದೆ. ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಎಲ್ಲರೂ ಒಟ್ಟಾಗಿ ಟಾರ್ಚ್ ಸಹಿತ ದೊಣ್ಣೆ ಹಿಡಿದು ಚಿರತೆಗಾಗಿ
ಉಡುಪಿಯಲ್ಲಿ ಇನ್‍ಸ್ಪೈಯರ್ ನೀಟ್ ಅಕಾಡೆಮಿ ಕಾರ್ಯಾಚರಿಸುತ್ತಿದ್ದು, 2023-24ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ. ಎಸೆಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳು ದೀರ್ಘಕಾಲಿಕ ತರಬೇತಿಗಳನ್ನು ಈ ಸಂಸ್ಥೆಯಲ್ಲಿ ಪಡೆಯಬಹುದು. ಇನ್‍ಸ್ಫೈಯರ್ ನೀಟ್ ಅಕಾಡೆಮಿ ಸಂಸ್ಥೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಓರಿಯಂಟೆಡ್ ಕಲಿಕೆ, ಉನ್ನತಿಗಾಗಿ ಸ್ಟಡಿ ಮೆಟೀರಿಯಲ್ಸ್, ಹಾಗೂ ಉತ್ತಮ ಬೋದಕ ವೃಂದದವರು ಇದ್ದಾರೆ. ಹಾಸ್ಟೆಲ್ ಸೌಲಭ್ಯ
ರಾಜ್ಯ ಸರಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ನಗರಕ್ಕೆ ಡಿಕೆ ಶಿವಕುಮಾರ್, ತುಮಕೂರು ಜಿಲ್ಲೆಗೆ ಡಾ. ಜಿ ಪರಮೇಶ್ವರ್, ಗದಗ ಜಿಲ್ಲೆಗೆ ಹೆಚ್.ಕೆ ಪಾಟೀಲ್, ಬೆಂಗಳೂರು ಗ್ರಾಮಾಂತರಕ್ಕೆ ಕೆ.ಹೆಚ್ ಮುನಿಯಪ್ಪ, ರಾಮನಗರಕ್ಕೆ ರಾಮಲಿಂಗಾರೆಡ್ಡಿ, ಚಿಕ್ಕಮಗಳೂರಿಗೆ ಕೆಜೆ ಜಾರ್ಜ್, ವಿಜಯಪುರಕ್ಕೆ ಎಂ.ಬಿ
ಉಡುಪಿ : ಭಾರತದಲ್ಲಿ ವಾರ್ಷಿಕವಾಗಿ, ಕ್ಯಾನ್ಸರ್ ಹೊಂದಿರುವ 78,000 ಮಕ್ಕಳಲ್ಲಿ 80% ಕ್ಕಿಂತ ಹೆಚ್ಚು ಮಕ್ಕಳು ಪೂರ್ಣ ಗುಣಮುಖವಾಗುವ ಅವಕಾಶವನ್ನು ಹೊಂದಿದ್ದಾರೆ. ಕ್ಯಾನ್ಸರ್ ನಿಂದ ಬದುಕುಳಿದವರು ಚಿಕಿತ್ಸೆಯ ತಡ ಪರಿಣಾಮಗಳು ಮತ್ತು ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುವುದರಿಂದ, ಕ್ಯಾನ್ಸರ್ ಚಿಕಿತ್ಸೆಯಿಂದ ಬದುಕುಳಿದವರಿಗೆ ವಿಶೇಷ ಚಿಕಿತ್ಸಾಲಯವನ್ನು ಹೊಂದಿರುವುದು ಮುಖ್ಯವಾಗಿದೆ. ಇದರ ಸಲುವಾಗಿ ಕ್ಯಾನ್ಸರ್ ಬದುಕುಳಿದವರಿಗೆ
ಬ್ರಹ್ಮಾವರ : ದೇವಾಲಯಗಳ ನಗರ ಬಾರಕೂರಿನಲ್ಲಿ ದೇವರ ಅಭಿಷೇಕಕ್ಕೆ ಕೂಡಾ ನೀರಿನ ಕೊರತೆ ಕಾಡುತ್ತಿದೆ. ಅತೀ ಪ್ರಾಚೀನ ಸೀಮೆಯ ಅಧಿ ದೇವರಾದ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುರಾತನ ತೀರ್ಥ ಬಾವಿಯಲ್ಲಿ ನೀರು ಬತ್ತಿ ಹೋಗಿ ಅಭಿಷೇಕ ಪ್ರೀಯ ಶಿವನಿಗೆ ಕೂಡಾ ನೀರಿನ ಕೊರತೆ ಉಂಟಾಗಿದೆ. ದೇವಸ್ಥಾನದ ತೀರ್ಥ ಬಾವಿಯಲ್ಲಿ ಬೆಳಿಗ್ಗಿನ ಹೊತ್ತು ಅರ್ದ ಕೊಡಪಾನ ಮುಳುಗುವಷ್ಠು ನೀರು ಇರುವುದನ್ನು ಇಲ್ಲಿನ ಅರ್ಚಕರು ಜೋಪಾನ ಮಾಡಿ ತೆಗೆದು ನಿತ್ಯ ಪೂಜೆಗೆ ಅಭಿಷೇಕ




























