Home Posts tagged uppala

ಮಂಜೇಶ್ವರ :ತಲಪಾಡಿಯಲ್ಲಿ ಭೀಕರ ವಾಹನ ಅಪಘಾತ:ಹಲವರ ಸ್ಥಿತಿ ಗಂಭೀರ

ಮಂಜೇಶ್ವರ : ತಲಪಾಡಿಯಲ್ಲಿ ಭೀಕರ ವಾಹನ ಅಪಘಾತ ಕಾಸರಗೋಡು ಭಾಗದಿಂದ ಮಂಗಳೂರು ಕಡೆ ಪ್ರಯಾಣಿಕರನ್ನು ಹೇರಿ ಕೊಂಡು ಹೋಗುತಿದ್ದ ಕರ್ನಾಟಕ ಸಾರಿಗೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ಭಾಗದಲ್ಲಿ ನಿಲುಗಡೆಗೊಂಡಿದ್ದ ಆಟೋ ರಿಕ್ಷಾ ಹಾಗೂ ಬಸ್ಸಿಗಾಗಿ ಕಾಯತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡಿದಿದೆ. ಹೊಡೆತದ ರಭಸಕ್ಕೆ ಆಟೋ ರಿಕ್ಷಾ ಪೂರ್ಣವಾಗಿ ಜಖಂ ಗೊಂಡಿದೆ.

ಮಂಜೇಶ್ವರ: ವ್ಯಕ್ತಿಯೋರ್ವನನ್ನು ಇರಿದು ಕೊಲೆ

ಮಂಜೇಶ್ವರ : ವ್ಯಕ್ತಿಯೋರ್ವನನ್ನು ಕಡಿದು ಕೊಲೆ ಮಾಡಿದ ಘಟನೆ ಮಂಜೇಶ್ವರದ ಉಪ್ಪಳದಲ್ಲಿ ನಡೆದಿದೆ. ಕಣ್ಣೂರು ಪಯ್ಯನ್ನೂರು ನಿವಾಸಿ ಹಾಗೂ ಉಪ್ಪಳ ಮೀನು ಮಾರುಕಟ್ಟೆ ಸಮೀಪದ ಫ್ಲಾಟಿನ ನೌಕರನಾಗಿರುವ ಸುರೇಶ್ ಕುಮಾರ್ (48) ಸಾವನ್ನಪ್ಪಿದ ದುರ್ದೈವಿ. ಮಂಗಳವಾರ ರಾತ್ರಿ ಉಪ್ಪಳ ಮೀನು ಮಾರುಕಟ್ಟೆ ಪರಿಸರದಲ್ಲಿ ಈ ದುಷ್ಕೃತ್ಯ ನಡೆದಿದೆ. ಘಟನೆಗೆ ಸಂಬಂಧಿಸಿ ಉಪ್ಪಳ ಫತ್ವಾಡಿ ಕಾರ್ಗಿಲ್ ನಿವಾಸಿ ಸವಾದ್( 23) ಎಂಬಾತನನ್ನು ಮಂಜೇಶ್ವರ ಪೊಲೀಸರು  ವಶಕ್ಕೆ ತೆಗೆದಿದ್ದಾರೆ.

ಮಂಜೇಶ್ವರ: ಎಟಿಎಂಗೆ ಹಣ ತುಂಬಿಸಲು ಬಂದ ವಾಹನದಿಂದ ದರೋಡೆ

ಮಂಜೇಶ್ವರ : ಎಟಿಎಂಗೆ ಹಣ ತುಂಬಿಸಲು ಬಂದ ವಾಹನದ ಗಾಜು ಪುಡಿಗೈದು ೫೦ಲಕ್ಷ ರೂ. ದರೋಡೆಗೈದು ತಂಡ ಪರಾರಿಯಾದ ಘಟನೆ ಉಪ್ಪಳದಲ್ಲಿ ನಡೆದಿದೆ. ವಾಹನದ ಗಾಜು ಒಡೆದು ಹಣವಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡು ತಂಡ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಉಪ್ಪಳದಲ್ಲಿ ಈ ಘಟನೆ ನಡೆದಿದೆ. ಎಟಿಎಂನಲ್ಲಿ ಹಣ ತುಂಬುತ್ತಿದ್ದಾಗ ಖಾಸಗಿ ಕಂಪನಿಯ ವಾಹನದಲ್ಲಿ ಕಳ್ಳತನ ನಡೆದಿದೆ. ಸ್ಥಳಕ್ಕಾಗಮಿಸಿದ ಉಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ

ಕೊಂಡೆವೂರಿನಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಚಂಡಿಕಾ ಯಾಗ

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಗಾಯತ್ರೀ ದೇವಿ ಹಾಗೂ ಭಗವಾನ್ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮವು ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ದಿ. 22.02.2024 ಗುರುವಾರದಂದು, ಚಂಡಿಕಾ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.