ಸುಳ್ಯ: ಸುಳ್ಯದ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ಸುಳ್ಯ ತಾಲೂಕು ದಸರ ಉತ್ಸವ ಸಮಿತಿಯ ಆಶ್ರಯದಲ್ಲಿ 51ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ ಅ. 2ರಿಂದ ಅ. 10ರವರೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ನಡೆಯಲಿದೆ ಎಂದು ದಸರಾ ಉತ್ಸವ ಸಮಿತಿ
ಕಾರ್ಕಳ ರಾಷ್ಟ್ರಪಿತ ಗಾಂಧಿಯವರ ಸ್ವದೇಶಿ ಚಳುವಳಿ ಭಾಗವಾಗಿದ್ದ ಖಾದಿ ಉತ್ಪನ್ನಗಳಿಗೆ ದೇಶದಲ್ಲಿ ಭಾರಿ ಬೇಡಿಕೆ ಇತ್ತು ಖಾದಿ ಭಂಡಾರಗಳು ಕಾಂಗ್ರೆಸ್ ಆಡಳಿತದಲ್ಲಿ ಮುಚ್ಚಲ್ಪಟ್ಟವು ಪರಿಣಾಮವಾಗಿ 75 ಸ್ವಾತಂತ್ರ್ಯೋತ್ಸವ ಸಂದರ್ಭ ಖಾದಿ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಸಲಾಗದೆ ಪಾಲಿಸ್ಟರ್ ಬಟ್ಟೆ ಉಪಯೋಗಿಸಬೇಕಾಯಿತು ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದರು. ಅವರು ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ಈಗ ನರೇಂದ್ರ ಮೋದಿ ಖಾದಿ
ಮಂಗಳೂರು : ಸುರತ್ಕಲ್ ಜಂಕ್ಷನ್ ಅನ್ನು ವೀರ್ ಸಾವರ್ಕರ್ ಜಂಕ್ಷನ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸೆಪ್ಟೆಂಬರ್ 30 ರಂದು ಶುಕ್ರವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ವೃತ್ತಕ್ಕೆ ಮರುನಾಮಕರಣ ಮಾಡುವಂತೆ ಶಾಸಕ ಡಾ.ಭರತ್ ಶೆಟ್ಟಿ ಮನವಿ ಮಾಡಿದ್ದರು. ಆಗಸ್ಟ್ 3, 2021 ರಂದು ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿಯ ವರದಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಪ್ರಸ್ತಾವನೆಯನ್ನು ಎಂಸಿಸಿ ಸದಸ್ಯರಾದ ಎ ಸಿ
ಮಂಗಳೂರು ರಥಬೀದಿ ವೆಂಕಟರಮಣ ದೇವಸ್ಥಾನ, ಆಚಾರ್ಯಮಠ ವಠಾರದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿರುವ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಪತ್ನಿ ಸಮೇತರಾಗಿ ಭೇಟಿ ನೀಡಿ ಶಾರದೆಯ ದರ್ಶನ ಪಡೆದರು. ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಜತೆಗಿದ್ದರು…
ವಿಜಯಪುರ;ತನ್ನೂರಿಗೆ ಪಿಯು ಕಾಲೇಜು ಬೇಕೆಂದು 5 ವರ್ಷಗಳಿಂದ ಹೋರಾಡಿದ್ದ ಯುವಕ ಕೊನೆಗೆ ರಕ್ತದಲ್ಲಿ ಸರಕಾರಕ್ಕೆ ಪತ್ರ ಬರೆದಿದ್ದಾನೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ನಿವಾಸಿ ವಿಜಯರಂಜನ ಜೋಶಿ ಸ್ವಂತ ಊರಿನಲ್ಲಿ ಸರಕಾರಿ ಪಿಯು ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ್ದರು. ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದರು ಆದರೆ ಯಾವುದೇ ಪ್ರಯೋಜನ ವಾಗಿರಲಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಅವ್ರು ಸಿಎಂ ಆಗಿದ್ದಾಗಲೂ
ಉಡುಪಿ: ಅ.1ರಂದು ಕೃತಿಗಳ ಅನಾವರಣ ಕಾರ್ಯಕ್ರಮ ಸುಹಾಸಂ ಉಡುಪಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಇವರ ಜಂಟಿ ಆಶ್ರಯದಲ್ಲಿ ದಿ. ಪಂಡಿತ ಯಜ್ಞನಾರಾಯಣ ಉಡುಪರ ಪುರಾಣ ಭಾರತ ಕೋಶದ ಪರಿಷ್ಕೃತ ಆವೃತ್ತಿ, ಕೃತಿಗಳ ಅನಾವರಣ ಸಮಾರಂಭವು ಅಕ್ಟೋಬರ್ 1, 2022 ರ ಶನಿವಾರದಂದು ಸಂಜೆ ೪ ಗಂಟೆಗೆ ಉಡುಪಿಯ ಕಿದಿಯೂರು ಹೋಟೆಲ್ನ ಅನಂತಶಯನ ಸಭಾಂಗಣದಲ್ಲಿ ಜರುಗಲಿದೆ.ಈ ಕೃತಿಯ ಬಿಡುಗಡೆಯನ್ನು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾದ
ಬಹುನಿರೀಕ್ಷಿತ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಗಡಿನಾಡು ಗುಂಡ್ಲುಪೇಟೆ ಪಟ್ಟಣದಿಂದ ಆರಂಭವಾಗಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಪಾದಯಾತ್ರೆ ಮುಗಿಸಿ ರಾಜ್ಯಕ್ಕೆ ಕಾಲಿಟ್ಟ ರಾಹುಲ್ ಗಾಂಧಿಯವರಿಗೆ ಗುಂಡ್ಲುಪೇಟೆಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಇಡೀ ರಾಜ್ಯಮಟ್ಟದ ನಾಯಕರು ಹಾಗೂ ರಾಷ್ಟ್ರಮಟ್ಟದ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 40 ಸಾವಿರಕ್ಕು ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಈ
ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು ನಿವಾಸಿ ಚಂದು ಪೂಜಾರ್ತಿ (73) ಎನ್ನುವ ಇಳಿ ವಯಸ್ಸಿನ ಅಜ್ಜಿ ಏಕಾಂಗಿ ಆಗಿ ಬದುಕುತ್ತಿದ್ದು ಅವರ ವಾಸದ ಮನೆ ಶಿಥಿಲಾವಸ್ಥೆಯಲ್ಲಿದೆ ಅಜ್ಜಿಗೊಂದು ಸೂರೊಂದನ್ನು ಕಲ್ಪಿಸುವ ಕಾರ್ಯಕ್ಕೆ ಸಮಾಜ ಬಾಂಧವರುಮ,ದಾನಿಗಳು ಕೈ ಜೋಡಿಸಬೇಕಾಗಿದೆ.ನಾಡ ಗ್ರಾಮದ ತೆಂಕಬೈಲು ಗೋಳಿಹಕ್ಲು 5.ಸೆಂಟ್ಸ್ ಕಾಲೋನಿಯಲ್ಲಿ ವಾಸಮಾಡುತ್ತಿರುವ ಚಂದು ಅಜ್ಜಿಗೆ ಮಕ್ಕಳಿಲ್ಲ,ಅವರ ಪತಿ ನಿಧನರಾಗಿ 30 ವರ್ಷಗಳು ಕಳೆದು
ಮೇಲ್ಕಾರಿನ ಬಿರ್ವ ಸಂಕೀರ್ಣ ದಲ್ಲಿ ರಾಜ್ಯ ರೈತ ಸಂಘದ ನೂತನ ಪಾಣೆ ಮಂಗಳೂರು ಗ್ರಾಮ ಘಟಕದ ಉದ್ಘಾಟನೆ ಹಾಗೂ ವಿಚಾರ ಸಂಕೀರಣದ ಉದ್ಘಾಟನೆ ಯನ್ನು ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಉದ್ಘಾಟಿಸಿ ರೈತರ ಮುಂದಿರುವ ಸವಾಲುಗಳು ಎದುರಿಸಲು ಸಂಘಟಿತ ಹೋರಾಟ ಅಗತ್ಯ ಅಲ್ಲದೇ ಎಲ್ಲಾ ಕ್ಷೇತ್ರದಲ್ಲಿರುವವರಿಗೆ ಅವರದ್ದೆ ಆದ ಸಂಘಟನೆಗಳಿವೆ ಆದರೇ ಸಮಾಜದ ದೊಡ್ಡ ಸಮೂಹವಾದ ರೈತ ಸಂಘಟನೆಗಳು ರಾಜಕೀಯವಾಗಿ ಹಾಗೂ ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಒಂದಾಗದಿರುವುದು
ದೇಶಾದ್ಯಂತ ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ಇದೀಗ ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಎರಡನೇ ಪ್ರವೇಶ ಭಾಗದ ಸಿಕ್‍ಲೈನ್ ರಿಕ್ಷಾ ನಿಲ್ದಾಣದ ಸಮೀಪದಲ್ಲಿ ಕಸದ ರಾಶಿಯಲ್ಲಿ ರೈಲ್ವೇ ಲೋಗೋ ಇರುವ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರ ಕಸದ ರಾಶಿಯಲ್ಲಿ ಇದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು, ಎಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.