Home Posts tagged #v4news karnataka (Page 149)

ಶ್ರೀ ಮಹಾವೀರ ಕಾಲೇಜು ತುಳುನಾಡ ಸಿರಿ-2022

ಮೂಡುಬಿದಿರೆ : ತುಳು ಲಿಪಿ, ಭಾಷೆ ಕಲಿಕೆಗೆ ಪಿಯು ಅಂತದಲ್ಲೂ ಅವಕಾಶ ಕಲ್ಪಿಸಲು ಸತತ ಹೋರಾಟ ನಡೆಸಲಾಗುತ್ತಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಈ ಹಂತದಲ್ಲೂ ನಾವು ಯಶಸ್ವಿಯಾಗಲು ಸಾಧ್ಯ ಕರ್ನಾಟಕ ಸರ್ಕಾರದ ಪ್ರಯತ್ನದಿಂದಾಗಿ ರಾಜ್ಯ, ರಾಷ್ಟ್ರ ಮನ್ನಣೆ ಲಭಿಸಿದೆ. ತುಳು ಭವನ ನಿರ್ಮಾಣಕ್ಕಾಗಿ ಯಡಿಯೂರಪ್ಪ ಸರ್ಕಾರ 2 ಕೋಟಿ ನೀಡಿದ್ದರೆ ಬೊಮ್ಮಾಯಿ ಸರ್ಕಾರ 4,4 ಕೋಟಿ

ದೂರದೃಷ್ಟಿಗೆ ಇನ್ನೊಂದು ಹೆಸರು ಕೀರ್ತಿಶೇಷ ರತ್ನವರ್ಮ ಹೆಗ್ಗಡೆ

ದೂರದೃಷ್ಟಿಗೆ ಇನ್ನೊಂದು ಹೆಸರು ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಅರವತ್ತರ ದಶಕದಲ್ಲಿಯೇ ಉನ್ನತ ಶಿಕ್ಷಣದ ಮಹತ್ವವನ್ನು ಅರಿತು ಉಜಿರೆಯಂತಹ ಪ್ರದೇಶದಲ್ಲಿ ಕಾಲೇಜನ್ನು ಸ್ಥಾಪಿಸಿ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ ಎಂದು ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ನಡೆದ ಪೂಜ್ಯ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಸ್ಮಾರಕ ಮಂಗಳೂರು

ಮಂಜೇಶ್ವರ : ಶಸ್ತ್ರಾಸ್ತ್ರದೊಂದಿಗೆ ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಜೇಶ್ವರ: ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಬಂದೂಕು ಹಾಗೂ ಶಸ್ತ್ರಾಸ್ತ್ರದೊಂದಿಗೆ ಉಪ್ಪಳದಲ್ಲಿ ತಿರುಗಾಡುತಿದ್ದ ಮೂವರನ್ನು ಮಂಜೇಶ್ವರ ಎಸ್ಸೈ ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಈ ತಂಡದಲ್ಲಿದ್ದ ಪ್ರಮುಖ ಆರೋಪಿ ಅಯಾಝ್ ಎಂಬಾತನನ್ನು ಆತನ ಸಹೋದರ ಪೊಲೀಸರಲ್ಲಿ ಬಲ ಪ್ರಯೋಗಿಸಿ ಬಿಡಿಸಿರುವುದಾಗಿ ಆರೋಪಿಸಲಾಗಿದೆ. ಬಳಿಕ ಹೆಚ್ಚಿನ ಪೊಲೀಸರು ಸ್ಥಳಕ್ಕಾಗಮಿಸಿ ಆಟೋ ರಿಕ್ಷಾದಲ್ಲಿದ್ದ ಇಬ್ಬರನ್ನು ಹಾಗೂ ಆಯಾಝ್ ನ ಸಹೋದರನನ್ನು ಬಂಧಿಸಿದ್ದಾರೆ.

ಬೀಟ್ ಪೊಲೀಸ್ ಸಭೆ : ಅನೈತಿಕ ಚಟುವಟಿಕೆಗಳ ತಾಣ ಹೆಜಮಾಡಿ ಬಂದರು

ಹೆಜಮಾಡಿಯ ಮೀನುಗಾರಿಕಾ ಬಂದರು ಪ್ರದೇಶ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಈ ಬಗ್ಗೆ ಪಡುಬಿದ್ರಿ ಪೆÇಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯರು ಸಹಿತ ಗ್ರಾಮಸ್ಥರು ಹೆಜಮಾಡಿ ಬಂದರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ. ಹೆಜಮಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಬೀಟ್ ಪೊಲೀಸ್ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯರೊರ್ವರು, ಶನಿವಾರ ಹಾಗೂ ಭಾನುವಾರ ಅತೀ ಹೆಚ್ಚು ಮಣಿಪಾಲ ಕಡೆಯಿಂದ ಜೋಡಿಗಳು ಬರುತ್ತಿದ್ದು , ಅವರಿಂದ ಈ ಪ್ರದೇಶಕ್ಕೆ

ಉಡುಪಿಯಲ್ಲಿ ನಡೆದ ಸಂಸ್ಕøತೋತ್ಸವ-2022

ಸಂಸ್ಕøತ ಭಾಷೆಯ ಪ್ರಚಾರದ ಉದ್ದೇಶದಿಂದ ಸಂಸ್ಕøತ ಸಪ್ತಾಹ ಎಂಬುದಾಗಿ ಏಳುದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಿದ್ದರು. ಈ ಪ್ರಯುಕ್ತ ಉಡುಪಿಯ ಸಂಸ್ಕøತ ಭಾರತೀ ಘಟಕವೂ, ಉಡುಪಿಯ ತೆಂಕುಪೇಟೆಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯ ಸಮೀಪದ, ಸಂಸ್ಕøತ ಭಾರತೀ ಕಾರ್ಯಾಲಯದಲ್ಲಿ ಆಗಸ್ಟ್ 11, 2022 ರಿಂದ ಆಗಸ್ಟ್ 15, 2022 ರವರೆಗೆ “ಸಂಸ್ಕøತೋತ್ಸವ -2022” ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮೊದಲ ದಿನ ಆಗಸ್ಟ್ 11 ರಂದು ಅತಿಥಿ

ಪಡುಬಿದ್ರಿ ಯುವಕನೋರ್ವ ನೇಣಿಗೆ ಶರಣು

ಪೈಂಟಿಂಗ್ ವೃತ್ತಿ ನಡೆಸುತ್ತಿದ್ದ ಯುವಕನೋರ್ವ ಅಣ್ಣನೊಂದಿಗೆ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣೆಗೆ ಶರಣಾದ ಘಟನೆ ನಡೆದಿದೆ.ಮೃತ ಯುವಕ ಸೋನಿತ್ ಪೂಜಾರಿ(30), ಇವರು ಅಣ್ಣ ಅತ್ತಿಗೆಯೊಂದಿಗೆ ಅವರಾಲು ಮಟ್ಟು ರಸ್ತೆಯ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಣ್ಣ ಅತ್ತಿಗೆ ಕೆಲಸಕ್ಕೆ ಹೋಗುತ್ತಿದ್ದು, ಅವರ ಮಗು ಶಾಲೆಗೆ ಹೋಗುತ್ತಿತ್ತು, ಇಂದು ಕೆಲಸಕ್ಕೆ ಹೋಗದ ಈತ ಸಂಜೆ ಸುಮಾರು ಐದು ಗಂಟೆಯ ವರಗೆ ಪೇಟೆಯಲ್ಲೇ ಇದ್ದ ಈತ ಮತ್ತೆ ಮನೆಗೆ ಮರಳಿದ್ದ. ಈತನ

ಆತ್ಮಾವಲೋಕನ ಮಾಡಿಕೊಳ್ಳೋಣ :ಡಾ|| ಚೂಂತಾರು

ನಮಗೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ‘ಆಜಾದೀ ಕಾ ಅಮೃತ ಮಹೋತ್ಸವ’ ಎಂಬ ಪರಿಕಲ್ಪನೆಯೊಂದಿಗೆ ‘ಹರ್ ಘರ್ ತಿರಂಗಾ’ ಅಭಿಯಾನದಂತೆ ಪ್ರತಿ ಮನೆಗಳಲ್ಲಿ ಮತ್ತು ಮನಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದೇವೆ ಮತ್ತು ಅರಳಿಸಿದ್ದೇವೆ ಹಾಗೂ ನಮ್ಮೊಳಗೆ ಸುಪ್ತವಾಗಿರುವ ದೇಶ ಪ್ರೇಮವನ್ನು ಬಡಿದೆಬ್ಬಿಸಿದ್ದೇವೆ. ಈ ದಿನದಂದು ನಾವೆಲ್ಲಾ ನಮ್ಮ 75 ವರ್ಷಗಳ ಸಾಧನೆಯನ್ನು ಪುನರಾಮರ್ಶಿಸಿಕೊಂಡು,

ಮೂಡುಬಿದರೆ : ಆಟಿಸಂ ಥೆರಪಿ ಕೊಠಡಿ ಉದ್ಘಾಟನಾ ಸಮಾರಂಭ

75 ನೇ ಸ್ವಾತಂತ್ರ್ಯದ ಅಮ್ರತಮಹೋತ್ಸವದ ಶುಭ ದಿನದಂದು ನಮ್ಮ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಜೊತೆಗೆ ಮೂಡಬಿದ್ರಿಯ ಪ್ರಖ್ಯಾತ ವಕೀಲರಾದ ಪ್ರವೀಣ್ ಲೋಬೊ ಹಾಗೂ ವಿಜೇತ ಡೇಸಾ ದಂಪತಿಗಳ ಸುಪುತ್ರಿಯಾದ ಇವಾ ಕ್ರಿಶೆಲ್ ಲೋಬೊ ಇವರ ಪ್ರಥಮ ಪರಮ ಪ್ರಸಾದ ಸ್ವೀಕಾರದ ಸವಿನೆನಪಿಗಾಗಿ ನಮ್ಮ ಸಂಸ್ಥೆಯ ಆಟಿಸಂ ಮಕ್ಕಳಿಗಾಗಿ ಕೊಡುಗೆಯಾಗಿ ನೀಡಿದ ಎಲ್ಲಾ ಸೌಕರ್ಯಗಳನ್ನೊಳಗೊಂಡ ಆಟಿಸಂ ಥೆರಪಿ ಕೊಠಡಿಯ ಉದ್ಘಾಟನಾ ಕಾರ್ಯಕ್ರಮವು ಗಣ್ಯರ

ಸಹಿತಾ ಸಾಧನೆಗೆ ಶಿಕ್ಷಣ ಸಚಿವರ “ಕರೆ”

ವಿಶ್ವ ಟೇಕ್ವಾಂಡೋ ಚಾಪಿಯನ್‌ ಶಿಪ್‌ ನಲ್ಲಿ ಮಹಿಳೆಯರ (ಕಿರಿಯ) ವಿಭಾಗದಲ್ಲಿ ಬೆಳ್ಳಿ ಗೆದ್ದ ಶಾರದಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥನಿ ಸಂಹಿತಾ ಅಲೆವೂರಾಯ ಅವರನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದಾರೆ.ಸಂಹಿತಾ ಹೆತ್ತವರಾದ ಕದ್ರಿಯ ವಾಸುದೇವ ಭಟ್‌ ಕುಂಜತ್ತೋಡಿ ಅವರಿಗೆ ಕರೆ ಮಾಡಿದ ಶಿಕ್ಷಣ ಸಚಿವರು, ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಕ್ರೀಡೆಯ ಕುರಿತು ಮಕ್ಕಳಿಗೆ ನೀಡುತ್ತಿರುವ

ಪುತ್ತೂರು :ಮಾಜಿ ಪ್ರಧಾನಿ ಎಬಿ ವಾಜಪೇಯಿ ಅವರ ಪುಣ್ಯ ಸ್ಮರಣೆ

ಪುತ್ತೂರು: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ವ್ಯಕ್ತಿಯಾಗಿರದೆ ರಾಷ್ಟ್ರಕ್ಕೆ ಶಕ್ತಿಯಾಗಿದ್ದರು. ರಾಜಕೀಯವಾಗಿ ಜನಪ್ರತಿನಿಧಿ, ಕಾರ್ಯಕರ್ತ ಹೇಗಿರಬೇಕು ಎಂಬುದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅವರು ನುಡಿನಮನ ಸಲ್ಲಿಸಿದರು. ವಾಜಪೇಯಿ ಅವರದ್ದು ಅಪರೂಪದ