ಫೆಬ್ರವರಿ 18 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯಮಟ್ಟದ ಮೊದಲ ಬುಡೋಕನ್ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ವಿಟ್ಲದ ಕಳೆದ 30 ವರ್ಷಗಳಿಂದ ವಿಠಲ ಸುವರ್ಣ ರಂಗ ಮಂದಿರದಲ್ಲಿ ತರಬೇತಿ ನೀಡುತ್ತಿರುವ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ಅಳಿಕೆ ಇವರ ವಿಧ್ಯಾರ್ಥಿಗಳು ಭಾಗವಹಿಸಿದ್ದಾರೆ.ವಿಜೇತ ಮಕ್ಕಳ ಹೆಸರು ಈ ಕೆಳಗಿನಂತಿವೆ, ವಿಟ್ಲ ಜೇಸೀಸ್ ಸ್ಕೂಲ್
ಆನೆ ದಾಳಿಯಂದ ಮತಪಟ್ಟ ರೆಂಜಲಾಡಿ ಗ್ರಾಮದ ನೈಲ ರಂಜಿತಾ ಹಾಗೂ ರಮೇಶ್ ರೈ ಅವರ ಮನೆಗೆ ಬಂದರು ಮೀನುಗರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಸಚಿವರ ಆಗಮನವಾಗುತ್ತಿದ್ದಂತೆ ಮನೆಯವರು ತೀವ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ಕಳೆದ ಕೆಲವು ತಿಂಗಳಿಂದ ಆನೆಗಳ ಹಾವಳಿಯ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಆದರೆ ಯಾರೂ ಸರಿಯಾದ ಕ್ರಮ ಕೈಗೊಂಡಿಲ್ಲ. ನೀವು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಿದ್ದರೆ ನನ್ನ ಮಗಳ ಪ್ರಾಣ
ವಿಟ್ಲ: ಸಾಲೆತ್ತೂರು ಸಮೀಪದ ಮೆದು ಎಂಬಲ್ಲಿನ ಪೆಟ್ರೋಲ್ ಬಂಕ್ ಎದುರುಗಡೆ ನಿಲ್ಲಿಸಿದ್ದ ಬಾರೀ ಗಾತ್ರದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಲಾರಿಯ ಮುಂದಿನ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಪೆಟ್ರೋಲ್ ಬಂಕಿನ ಎದುರು ಈ ಘಟನೆ ನಡೆದಿದ್ದು, ಈ ಸಂದರ್ಬದಲ್ಲಿ ಸ್ಥಳೀಯರು ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ತಳಕ್ಕಾಗಮಿಸಿದ್ದಾರೆ.
ಊರಿಗೆ ಬಂದು ಉಪಟಳ ನೀಡಿ, ಇಬ್ಬರನ್ನೂ ಬಲಿ ತೆಗೆದುಕೊಂಡ ಕಾಡಾನೆಯನ್ನು ಸೆರೆ ಹಿಡಿಯಲು ಕಡಬ ಭಾಗದಲ್ಲಿ `ಆಫರೇಷನ್ ಎಲಿಫೆಂಟ್’ ಕಾರ್ಯಾಚರಣೆ ಆರಂಭಗೊಂಡಿದೆ. ಎಲ್ಲಾ ಸಿದ್ಧತೆಗಳೊಂದಿಗೆ ಮಂಗಳವಾರ ಬೆಳಿಗ್ಗಿನಿಂದಲೇ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಕಾಡಾನೆಯನ್ನು ಹಿಡಿಯಲು ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ 5 ಆನೆಗಳು ಆಗಮಿಸಿದೆ. ಕಾಡಾನೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ,ಕಂಜನ್ ಹಾಗು ಮಹೇಂದ್ರ ಎಂಬ
ಪುತ್ತೂರು: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯಮಟ್ಟದ ಓಫನ್ ಕರಾಟೆ ಸ್ಪರ್ಧೆಯಲ್ಲಿ ಪುತ್ತೂರಿನ ಇಬ್ಬರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ರಿಶೋನ್ ಲಸ್ರಾದೊ ಕುಮಿಟೆ ವಿಭಾಗದಲ್ಲಿ ತೃತೀಯ ಮತ್ತು ರಿಯೋನ್ ಲಸ್ರಾದೋ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ನಿವಾಸಿಗಳಾದ ರೋಶನ್ ಲಸ್ರಾದೋ ಮತ್ತು ಸುಶಾಂತಿ ರೋಡ್ರಿಗಸ್ ದಂಪತಿಗಳ ಪುತ್ರರಾಗಿದ್ದು, ಪುತ್ತೂರು ಬೆಂಥನಿ ಆಂಗ್ಲ
ಶಿವಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆಬ್ರವರಿ 22, 2023 ರ ಬುಧವಾರ ಬೆಳಿಗ್ಗೆ 06:30 ಕ್ಕೆ ‘ಅತಿರುದ್ರ ಮಹಾಯಾಗ’ದ ಮಹಾಸಂಕಲ್ಪದಿಂದ ಮೊದಲ್ಗೊಂಡು, 121 ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಪ್ರಾರಂಭಗೊಳ್ಳಲಿದೆ. ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀದೇವರಿಗೆ ನವಕಪ್ರಧಾನ ಹೋಮಪುರಸ್ಸರ ನವಕಲಶ ಅಭಿಷೇಕ, ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 12:00 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಮಾಧುರ್ಯ, ಸಂಜೆ 05:30
ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮವು ಪ್ರಾತಃಕಾಲ 06:30 ಕ್ಕೆ ರುದ್ರಾಭಿಷೇಕ, ಪಂಚಾಮೃತ ವಿಶೇಷ ಸೇವೆಗಳೊಂದಿಗೆ ಪ್ರಾರಂಭಗೊಂಡಿತು. ಸಹಸ್ರಾರು ಭಕ್ತಾಭಿಮಾನಿಗಳು ಸನ್ನಿಧಾನಕ್ಕೆ ಆಗಮಿಸಿ, ದೇವರ ಪ್ರಾರ್ಥನೆಗೈದು, ಫೆಬ್ರವರಿ 22 ರಿಂದ ಮಾರ್ಚ್ 05 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಯಾಗ ದ್ರವ್ಯಗಳನ್ನು ಸಮರ್ಪಣೆಗೈದು, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಿಂದ ಉಮಾಮಹೇಶ್ವರ ಸನ್ನಿಧಾನಕ್ಕೆ
ಮಂಗಳೂರು ತಾಲೂಕಿನ ಹರೇಕಳ ಗ್ರಾಮದಲ್ಲಿ ಗೇಣಿದಾರ ರೈತರ, ಹೆಂಚು, ನೇಯ್ಗೆ, ಬೀಡಿ ಕಾರ್ಮಿಕರ ಹೋರಾಟದ ನೇತೃತ್ವ ವಹಿಸಿ ಕಮ್ಯೂನಿಸ್ಟ್ ಪಕ್ಷವನ್ನು ಮುನ್ನಡೆಸಿದ್ದ ಹಿರಿಯ ಸಂಗಾತಿ ಕಡೆಂಜ ಕಾಮಣ್ಣ ರೈಗಳ ಸ್ಮರಣಾರ್ಥವಾಗಿ ಹರೇಕಳದಲ್ಲಿ ಕಾಂ. ಕಾಮಣ್ಣ ರೈ ಭವನ ಡಿವೈಎಫ್ಐ ನವೀಕೃತ ಕಟ್ಟಡವು ನಿರ್ಮಾಣಗೊಳ್ಳುತ್ತಿದೆ. ಹರೇಕಳದಲ್ಲಿ ಡಿವೈಎಫ್ಐ 90 ರ ದಶಕದಲ್ಲಿ ಊರಿನ ಜನನಾಯಕ ಕಾಮ್ರೇಡ್ ಕಾಮಣ್ಣ ರೈ ನೆನಪಿನಲ್ಲಿ ಸ್ವಂತ ಕಟ್ಟಡವನ್ನು ಕಟ್ಟಿತು. ಈ ಕಟ್ಟಡ ನಂತರ ಗ್ರಾಮದ
ಸಾರಿಗೆ ಇಲಾಖೆಗೆ ಮತ್ತು ಸಾರಿಗೆ ಸಚಿವರಿಗೆ ಚಾಲಕರಿಗಾಗಿ 1. ಚಾಲಕರ ನಿಗಮ ಮಂಡಳಿ ಮಾಡಿ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಕುಟುಂಬ ನಿರ್ವಹಣೆಗೆ ಅನುಕೂಲ ಅನುಕೂಲ ಮಾಡಿಕೊಡುವಂತೆ 2. ಚಾಲಕರ ದಿನಾಚರಣೆ ಎಚ್ ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಘೋಷಣೆಯಾಗಿದ್ದು ಪ್ರತಿ ಜಿಲ್ಲೆಯಲ್ಲಿ 10 ಚಾಲಕರಿಗೆ ಸಾರಥಿ ನಂಬರ್ ಒನ್ ಪ್ರಶಸ್ತಿ ಜೊತೆಗೆ 25,000 ಧನಸಹಾಯ ನೀಡುವ ಕಾರ್ಯಕ್ರಮವನ್ನು ಬಜೆಟ್ ನಲ್ಲಿ ತೋರಿಸಿದರು ಕೂಡ ಈಡೇರಿಸಿದೆ ಇರುವುದು 3. ಓಲಾ ಉಬರ್ ನಂತಹ ಮಹಾ ವಂಚಕ
ಮೂಡುಬಿದಿರೆ: ಯಕ್ಷರಂಗದ ಭಾಗವತಿಕೆಯ ಭೀಷ್ಮ ಎಂದೇ ಖ್ಯಾತರಾಗಿರುವ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು(86) ಗುರುವಾರ ಸಾಯಂಕಾಲ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಮಾರೂರಿನಲ್ಲಿರುವ ನೂಯಿ ಸ್ವಗೃಹದಲ್ಲಿ ನಿಧನರಾದರು. ಕಳೆದ ಕೆಲವು ದಶಕಗಳಿಂದ ಯಕ್ಷಗಾನ ಭಾಗವತಿಕೆಯಲ್ಲಿ ತಮ್ಮ ಕಂಚಿನ ಕಂಠದ ಮೂಲಕ ಸುಪ್ರಸಿದ್ಧರಾಗಿದ್ದ ಅವರು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು.ವರ್ಷ ಪ್ರಾಯದ ಭಾಗವತರು ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ ನಿಧನರಾಗಿದ್ದಾರೆ.ನಾಲ್ವರು




























