Home Posts tagged #v4news karnataka (Page 57)

ಆಪ್ ರಾಜ್ಯ, ಜಿಲ್ಲಾ ಸಮಿತಿ ಬರ್ಕಾಸ್ತು

ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಘಟಕದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಯವರು, ಕರ್ನಾಟಕ ರಾಜ್ಯ, ಜಿಲ್ಲೆಗಳಲ್ಲಿನ ಎಲ್ಲಾ ಪದಾಧಿಕಾರಿಗಳು, ಘಟಕಗಳನ್ನು ಅನ್ವಯಿಸುವಂತೆ ವಿಸರ್ಜಿಸಿರುತ್ತಾರೆ. ಎಲ್ಲಾ ವಿಧಾನಸಭಾ ಅಭ್ಯರ್ಥಿ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪೂರ್ಣಪ್ರಮಾಣದಲ್ಲಿ ಸಕ್ರಿಯವಾಗಿ ಪಕ್ಷದ ನಾಯಕರು, ಕಾರ್ಯಕರ್ತರ ಸಮನ್ಚಯದಲ್ಲಿ

ಮಾಜಿ ಕೇಂದ್ರ ಸಚಿವ, RJD ಹಿರಿಯ ನಾಯಕ ಶರದ್ ಯಾದವ್ ನಿಧನ

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಮತ್ತು RJD ಪಕ್ಷದ ಹಿರಿಯ ನಾಯಕ ಶರದ್ ಯಾದವ್ ಅವರು ಗುರುವಾರ ನಿಧನರಾಗಿದ್ದಾರೆ.ಅವರಿಗೆ 75 ವರ್ಷ ವಯಸ್ಸಾಗಿತ್ತು. ಶರದ್ ಯಾದವ್ ಅವರ ನಿಧನದ ಸುದ್ದಿಯನ್ನು ಪುತ್ರಿ ಸುಭಾಷಿಣಿ ಶರದ್ ಯಾದವ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶರದ್ ಯಾದವ್ ಅವರನ್ನು ಗುರುಗ್ರಾಮ್ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.

ಪಡುಹಿತ್ಲು ಜಾರಂದಾಯ ಸನ್ನಿಧಿಗೆ ಸ್ವರ್ಣ ಖಡ್ಸಲೆ ಹಾಗೂ ಬೃಹತ್ ಕಾಲುದೀಪ ಅರ್ಪಣಾ ಮೆರವಣಿಗೆ

ಪಡುಬಿದ್ರಿ ಪಡುಹಿತ್ಲು ಜಾರಂದಾಯ ಬಂಟ ದೈವಸ್ಥಾನಕ್ಕೆ ಊರ ಪರವೂರ ಭಕ್ತಾಧಿಗಳು ನೀಡಿದ ಸುಮಾರು 60ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಖಡ್ಸಲೆ ಹಾಗೂ ಬೃಹತ್ ಕಾಲು ದೀಪವನ್ನು ಅದ್ಧೂರಿಯಾಗಿ ನೂರಾರು ಮಂದಿ ಭಕ್ತರು ಸೇರಿದ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಅರ್ಪಿಸಲಾಯಿತು. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಧಾನದಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ಅವಳಿ ಕುದುರೆಗಳು, ಭಜನಾ ಕುಣಿತ, ಕುದುರೆ ರಥ, ಚೆಂಡೆ, ವಾದ್ಯ ವಾದನ ಮುಂತಾದವುಗಳು ಗಮನ ಸೆಳೆದವು. ಈ ಬಗ್ಗೆ

ಯುವ ಜನತೆಗೆ ವಿವೇಕಾನಂದರ ಕರೆ

ಯಾರಿಗೆ ತನ್ನಲ್ಲಿ ತನಗೆ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು. ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ. ಶೈವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢ ಆಚರಣೆಗಳನ್ನಾಗಲಿ ಬೋಧಿಸಬೇಡಿ.

1-100ರ ಮಗ್ಗಿಬಾಯಿಪಾಠ ; ಶ್ರೀ ಚೈತನ್ಯ ಟೆಕ್ನೋ ಶಾಲಾ 31 ಮಕ್ಕಳ ದಾಖಲೆ

ಮಂಗಳೂರು: ಈ ಹಿಂದೆ ಮಗ್ಗಿಯನ್ನು ಭಾಯಿಪಾಠ ಮಾಡೋದು ಒಂದು ಸಾಧನೆಯಾಗಿತ್ತು ಹಾಗೂ ವಿದ್ಯಾರ್ಥಿಗಳಿಗೆ ಸವಾಲು ಕೂಡ ಆಗಿತ್ತು. ಆದರೆ ಇದೀಗ ಬದಲಾದ ಶಿಕ್ಷಣ ಕಲಿಕೆಯಲ್ಲಿ ಸರಳವಾಗಿ ಮಗ್ಗಿ ಅಥವಾ ಟೇಬಲ್ ಗಳನ್ನು ಮಕ್ಕಳು ಲೀಲಾಜಾಲವಾಗಿ ಕಂಠ ಪಾಠದಿಂದ ಹೇಳುತ್ತಾ ಇದೀಗ ದಾಖಲೆಯ ಮೇಲೆ ದಾಖಲೆ ನಿರ್ಮಿಸುತ್ತಿದ್ದಾರೆ. ಅಂತಹ ಒಂದು ದಾಖಲೆಯನ್ನು ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮಕ್ಕಳು ಮಾಡಿದ್ದಾರೆ. ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು

ನೇತ್ರಾವತಿಯಲ್ಲಿ ಯುವಕನ ಮೃತದೇಹ ಪತ್ತೆ

ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಯುವಕನೋರ್ವ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಸಜಿಪ ನಿವಾಸಿ ರಾಜೇಶ್ ಪೂಜಾರಿ ಸ್ಥಾನಮನೆ(36) ಎಂದು ಗುರುತಿಸಲಾಗಿದೆ. ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಇಂದು ಬೆಳಗ್ಗೆ ದ್ವಿಚಕ್ರ ವಾಹನವೊಂದು ಅನಾಥ ಸ್ಥಿತಿಯಲ್ಲಿ ಬಿದ್ದುಕೊಂಡಿತು. ಈ ಬಗ್ಗೆ ಸಂಶಯಗೊಂಡ ಸಾರ್ವಜನಿಕರು ಯಾರೋ ಬಂಟ್ವಾಳ ನಗರ ಪೆÇೀಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ

ಮಂಕು ಭಾಯ್ ಫಾಕ್ಸಿ ರಾಣಿ ಕನ್ನಡ ಸಿನಿಮಾ ಜ.13ರಂದು ರಾಜ್ಯಾದ್ಯಂತ ಬಿಡುಗಡೆ

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿರುವ ಗಗನ್ ಎಂ. ನಿರ್ದೇಶನದ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಜನವರಿ 13ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಸಿನಿಮಾ ಗಗನ್. ಎಂ ನಿರ್ದೇಶನದ ಚೊಚ್ಚಲ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ನಾಯಕಿಯಾಗಿ ಬ್ರಹ್ಮಗಂಟು ಧಾರಾವಾಹಿಯ ಗೀತಾ ಭಾರತಿ ಹಾಗೂ ಪಂಚಮಿ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರೂಪೇಶ್ ಶೆಟ್ಟಿ ಅವರು ಕನ್ನಡದಲ್ಲಜ ಹೀರೋ ಆಗಿ ನಟಿಸಿದ 5ನೇ ಸಿನಿಮಾವಿದು. ಈಗಾಗಲೇ ಸಿನಿಮಾದ

ಪಡುಬಿದ್ರಿ: ಹೆದ್ದಾರಿಯಲ್ಲಿ ಆಂಧ್ರ ಮೂಲದ ಯುವತಿಯ ರಕ್ಷಣೆ

ಪಡುಬಿದ್ರಿಯ ಠಾಣಾ ವ್ಯಾಪ್ತಿಯ ರಾ.ಹೆದ್ದಾರಿಯಲ್ಲಿ ರಾತ್ರಿ ಹೊತ್ತು ಒಬ್ಬಂಟಿಗಳಾಗಿ ನಡೆದುಕೊಂಡು ಹೋಗುತ್ತಿದ್ದ ಆಂಧ್ರದ ನೆಲ್ಲೂರು ನಿವಾಸಿ ಹನು (29) ಎಂಬ ಯುವತಿಯನ್ನು ಸಮಾಜ ಸೇವಕ ವಿಶುಶೆಟ್ಟಿ ಅವರು ಸ್ಥಳೀಯ ಪೊಲೀಸರ ಸಹಾಯದಿಂದ ರಕ್ಷಿಸಿ ಚಿಕಿತ್ಸೆಗಾಗಿ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾನು ನಡೆದುಕೊಂಡೇ ತನ್ನೂರನ್ನು ಸೇರುತ್ತೇನೆ ಎಂದು ಮೊಂಡು ಹಠ ಮಾಡಿದ ಯುವತಿಯನ್ನು ಉಡುಪಿಯ ಸಖಿ ಸೆಂಟರ್‍ಗೆ ದಾಖಲಿಸಲು ಅವರು

ಪಡೀಲ್‍ನ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ

ಮಂಗಳೂರಿನ ಪಡೀಲ್‍ ಕೊಡಕಲ್‍ನಲ್ಲಿ ಇಂದು ಜಯ ಶೆಟ್ಟಿ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಹಲವಾರು ಪ್ರಮುಖ ದಾಖಲೆ ಪತ್ರಗಳ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಗ್ನಿ ಶಾಮಕದಳದ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ ಜಯಶೆಟ್ಟಿ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿರಬಹುದೆಂದು

ಅಯ್ಯಪ್ಪ ವೃತದಾರಿ ಹೃದಯಾಘಾತದಿಂದ ನಿಧನ

ಮೂಡುಬಿದಿರೆ: ಅಯ್ಯಪ್ಪ ವೃತದಾರಿ ಮೂಡುಬಿದಿರೆ ಮಿಜಾರು ಸಮೀಪದ ಕೊಪ್ಪದ ಕುಮೇರು ಶೇಖರ ಪೂಜಾರಿ (74) ಅವರು ಶಬರಿಮಲೆಗೆ ಹೋಗಿದ್ದ ವೇಳೆ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಶೇಖರ ಪೂಜಾರಿ ಅವರು ಕಳೆದ 48 ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆಗೆ ಯಾತ್ರೆ ಹೋಗುತ್ತಿದ್ದರು. ಮೂಡುಬಿದಿರೆ ಪರಿಸರದಲ್ಲಿ ಹಿರಿಯ ಮಾಲಾಧಾರಿಯಾಗಿದ್ದ ಅವರು ಈ ವರ್ಷ 48 ನೇ ವರ್ಷದ ಮಾಲಾಧಾರಿಯಾಗಿದ್ದರು. ಯಾತ್ರೆ ಕೈಗೊಂಡಿದ್ದ ಅವರು ಭಾನುವಾರ ಇರುಮುಡಿ ಹೊತ್ತು