Home Posts tagged #v4news karnataka (Page 66)

ಕೋವಿಡ್ ನಿಂದ ಆರಂಭವಾದ ಹಾಡು ನೀ ಹಾಡು ಪಯಣ

ಕೋವಿಡ್, ಜಗತ್ತನ್ನೇ ತನ್ನ ಕಪಿ ಮುಷ್ಟಿಯಲ್ಲಿ ಕಟ್ಟಿ ಹಾಕಿದ್ದ ಸಂದರ್ಭ ಅದು. ಆ ಸಂದರ್ಭದಲ್ಲಿ ಒಂದು ಹೊಸ ಚಿಂತನೆಯೊಂದಿಗೆ ನಮ್ಮ ಊರಿನ ಗಾನ ಕೋಗಿಲೆಗಳಿಗೆ ಚೈತನ್ಯವಾಗಿ ರೂಪುಗೊಂಡದ್ದೇ ಉಡುಪಿ ಶೈನಿಂಗ್ ಸ್ಟಾರ್ ವೇದಿಕೆ. ಅಂದು ಮಣಿಪಾಲ ಮಹಿಳಾ ಸಮಾಜ ಎಂಬ ಮಹಾನ್ ಶಕ್ತಿಗಳಿಂದ ನಿರ್ಮಾಣ ಗೊಂಡ ಉಡುಪಿ ಶೈನಿಂಗ್ ಸ್ಟಾರ್ ಎಂಬ ವೇದಿಕೆ ಮುಂದೊಂದು ದಿನ ಇಡೀ ಕರಾವಳಿಯೇ

ಪುತ್ತೂರು : ಬಸ್ ಇಲ್ಲದ ಮೇಲೆ ಪಾಸ್ ಯಾಕೆ? ವಿದ್ಯಾರ್ಥಿಗಳ ಆಕ್ರೋಶ

ಪುತ್ತೂರು: ರೆಂಜ ಮಾರ್ಗವಾಗಿ ಸುಳ್ಯ ಪದವಿಗೆ ಬಸ್ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜ.3 ರಂದು ಪುತ್ತೂರು ತಾಲೂಕು ಆಡಳಿತ ಸೌಧ ಮತ್ತು ಕೆಎಸ್‍ಆರ್‍ಟಿಸಿ ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಬಸ್ ಇಲ್ಲದ ಮೇಲೆ ನಮಗೆ ಪಾಸ್ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರು ರೆಂಜ ಮಾರ್ಗವಾಗಿ ಸುಳ್ಯಪದವಿಗೆ ಈ ಹಿಂದೆ ಬಸ್ ಸಂಪರ್ಕ ವ್ಯವಸ್ಥೆ ಇದ್ದು

ಆರ್ಸೊ ಪತ್ರಿಕೋದ್ಯಮ, ಕಿಟಾಳ್ ಯುವ ಪ್ರಶಸ್ತಿ ಪ್ರದಾನ

“ಕೊಂಕಣಿ ಸಾಹಿತ್ಯ ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಕೊಂಕಣಿ ಪತ್ರಿಕೆ ಮತ್ತು ನಿಯತಕಾಲಿಕೆಗಳು ಮುಖ್ಯ ಕಾರಣ. ಕೊಂಕಣಿ ಪತ್ರಿಕೊದ್ಯಮಕ್ಕೆ ಶತಮಾನದ ಇತಿಹಾಸವಿದೆ. ಕೊಂಕಣಿ ಬರಹಗಾರರಿಗೆ ಉತ್ತೇಜನ ನೀಡಿ, ಅವರನ್ನು ಸಾಹಿತಿಗಳನ್ನಾಗಿ ಮಾಡುವುದರಲ್ಲಿ ಕೊಂಕಣಿ ಪತ್ರಿಕೆಗಳ ಪ್ರಕಾಶಕರು ಮತ್ತು ಸಂಪಾದಕರ ಶ್ರಮ ಗಣನೀಯ. ಅವರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸುವುದು ಉತ್ತಮ ಕೆಲಸ. ಹಿರಿಯ ಮತ್ತು ನಿವೃತ್ತ ಪತ್ರಕರ್ತರನ್ನು ಮಾತ್ರವಲ್ಲ, ಹಾಲಿ

ದ.ಕ ಪತ್ರಕರ್ತರ ಜಿಲ್ಲಾ ಸಮ್ಮೇಳನ ಉದ್ಘಾಟನೆ

ಮಂಗಳೂರು; ಸಮಾಜದ ಅಭಿವೃದ್ಧಿಗೆ ಪತ್ರಕರ್ತರ ಕೊಡುಗೆಗಾಗಿ ಶ್ರೇಷ್ಠವಾದುದು. ಜನ ಸಾಮಾನ್ಯರ ಮತ್ತು ಸರಕಾರದ ಮಧ್ಯೆ ಸೇತುವೆಯಾಗಿ ಮಾಧ್ಯಮಗಳು ಕೆಲಸ‌ ಮಾಡುತ್ತಿದೆ ಎಂದು ಎಂಆರ್‌ಜಿ ಗ್ರೂಪ್ ಆಡಳಿತ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಪತ್ರಕರ್ತರ ಜಿಲ್ಲಾ ಸಮ್ಮೇಳನ -2023 ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನನ್ನ ಎಲ್ಲಾ ಬೆಳವಣಿಗೆಗೆ

ಖೋಟಾ ನೋಟು ಚಲಾವಣೆ ಆರೋಪ : ಇಬ್ಬರು ಆರೋಪಿಗಳ ಬಂಧನ

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇರೆಗೆ ಕದ್ರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಮಂಗಳವಾರ ತನ್ನ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಂಧಿತರನ್ನು ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ನಿಜಾಂ ( 32 ), ಜೆಪ್ಪು ಮಂಗಳೂರು ನಿವಾಸಿ ರಜೀಮ್ ಅಲಿಯಾಸ್ ರಾಫಿ ( 31) ಎಂದು ಗುರುತಿಸಲಾಗಿದೆ. ಜ. 2ರಂದು ಮಂಗಳೂರು ನಗರದ

ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅಸ್ತಂಗತ : ಬಿಜೆಪಿ ರಾಜ್ಯಾದ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಸಂತಾಪ

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನಿಧನಕ್ಕೆ ಬಿಜೆಪಿ ರಾಜ್ಯಾದ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ. ಆಧ್ಯಾತ್ಮಿಕ ಬದುಕಿನ ಮುಖಾಂತರ ಒಂದು ಸುಂದರವಾದ ಜೀವನ ವ್ಯವಸ್ಥೆಯಲ್ಲಿ ಕಲ್ಪಿಸಿದವರು. ನಡೆದಾಡುವ ದೇವರು ಲಿಂಗೈಕ್ಯರಾಗಿದ್ದಾರೆ. ಅವರ ಅಗಲಿಕೆಯಿಂದ ಅವರ ಲಕ್ಷಾಂತರ ಭಕ್ತರಲ್ಲಿ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.

ಕಾಸರಗೋಡು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ  ತುಳು ಲಿಪಿ ನಾಮಫಲಕ ಅನಾವರಣ

ಅನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ  ತುಲು ಲಿಪಿ ನಾಮಫಲಕದ ಅನಾವರಣ ಮಾಡಲಾಯಿತು. ದೇವಸ್ಥಾನದ ತುಲು ಲಿಪಿ ನಾಮಫಲಕದ ಉದ್ಘಾಟನೆಯನ್ನು ಅನಂತಪುರ ಕ್ಷೇತ್ರದ ಆಡಳಿತ ಮುಖ್ಯಸ್ಥರಾದ ಉದಯಕುಮಾರ್ ಗಟ್ಟಿ ಇವರು ನೆರವೇರಿಸಿದರು. ಕಾರ್ಯಕ್ರಮಕ್ಕೆ  ಜೈ ತುಲುನಾಡು (ರಿ.) ಸಂಘಟನೆಯ ಉಪಾಧ್ಯಕ್ಷರಾದ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ತುಳು ವರ್ಲ್ಡ್ (ರಿ.) ಮಂಗಳೂರು ಇದರ ಅಧ್ಯಕ್ಷರು

ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ, ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರಿಂದ ಸಂತಾಪ

ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಲಿದೆ.ಜ್ಞಾನಯೋಗಾಶ್ರಮದ ಆವರಣದಲ್ಲಿ ಸ್ವಾಮೀಜಿಗಳ ಅಂತ್ಯಸಂಸ್ಕಾರ ನಡೆಯಲಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದ್ದು, ಸ್ವಾಮೀಜಿ ಅಪೇಕ್ಷೆಯಂತೆಯೇ ಅಂತ್ಯಕ್ರಿಯೆ

ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ, ಗೃಹ ಸಚಿವರ ಮಾರಕ ಹೇಳಿಕೆ ಆರೋಪ

ಪುತ್ತೂರು: ವಿಧಾನಸಭೆಯ ಅಧಿವೇಶನದಲ್ಲಿ ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ, ಅಡಿಕೆ ಬೀದಿ ಪಾಲಾಗುತ್ತದೆ ಎಂಬ ಮಾರಕ ಹೇಳಿಕೆ ನೀಡಿ ಬೆಳೆಗಾರರನ್ನು ಸಂದಿಗ್ಧ ಪರಿಸ್ಥಿತಿಗೆ ತಂದೊಡ್ಡಿದ್ದಾರೆಂದು ಆರೋಪಿಸಿದಲ್ಲದೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತತ್‍ಕ್ಷಣವೆ ಸಚಿವ ಸ್ಥಾನದಿಂದ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ ಜ.2ರಂದು ಮನವಿ

ಕಿನ್ನಿಗೋಳಿ : ಶಾಲಾ ಬಾಲಕನಿಗೆ ಬಸ್ ಢಿಕ್ಕಿ, ಬಾಲಕ ಸ್ಥಳದಲ್ಲೇ ಮೃತ್ಯು

ಶಾಲಾ ಬಾಲಕನಿಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಧಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಕಟೀಲು ಹೆದ್ದಾರಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಚರಣ್ (15) ಗುರುತಿಸಲಾಗಿದೆ. ಚರಣ್ ಕಟೀಲು ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವಾಗ ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಚರಣ್ ಸ್ಧಳದಲ್ಲಿಯೇ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. ಸ್ಧಳಕ್ಕೆ