ಮಂಗಳೂರು,ಅ.18(ಕ.ವಾ):- ಪಂಪ್ ವೆಲ್ ನಲ್ಲಿ ಕರ್ನಾಟಕ ಬ್ಯಾಂಕ್ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಮಹಾವೀರ ವೃತ್ತ ಅಭಿವೃದ್ಧಿ ಕಾಮಗಾರಿಗೆ ಅ.18ರಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಸ್ಮಾರ್ಟ್ ಸಿಟಿ, ಕರ್ನಾಟಕ ಬ್ಯಾಂಕ್
ಬಂಟ್ವಾಳ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ಸರ್ಕಾರವು ಸಿಐಡಿಗೆ ವರ್ಗಾಯಿಸಿದೆ. ಪ್ರಕರಣದ ಕಡತಗಳನ್ನು ಬಂಟ್ವಾಳ ಪೊಲೀಸರು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಿದ್ದಾರೆ. ಗುರುವಾರ ರಾತ್ರಿ ಸುಮಾರು 11.15ಕ್ಕೆ ಕೆಲ ದುಷ್ಕರ್ಮಿಗಳು ಶಾಸಕ ಹರೀಶ್ ಪೂಂಜಾರವರ ಕಾರನ್ನು ಅಡ್ಡಗಟ್ಟಿದ್ದರು. ಶಾಸಕರ ಕಾರು ಚಾಲಕನ ದೂರಿನಂತೆ ಫರಂಗಿಪೇಟೆ ಎಂಬಲ್ಲಿ ಘಟನೆ ನಡೆದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್
ಸುಳ್ಯ: ಸುಳ್ಯದಲ್ಲಿ ಕಳೆದ 6 ಬಾರಿ ಶಾಸಕರಾಗಿ ಸಚಿವರಾಗಿರುವ ಅಂಗಾರರ ವಿರುದ್ಧ ಸುಳ್ಯದ ಕಾಂಗ್ರೆಸಿಗರಿಗೆ ಕಳೆದ 30 ವರ್ಷಗಳಿಂದ ಯಾವುದೇ ಸರ್ಕಸ್ ಮಾಡಿದರೂ ಗೆಲ್ಲಲು ಸಾಧ್ಯವಾಗಿಲ್ಲ. ಮುಂದೆಯೂ ಗೆಲ್ಲಲು ಸಾಧ್ಯವಿಲ್ಲ ಎಂದು ಸುಳ್ಯ ಬಿಜೆಪಿ ನಗರ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ ಮತ್ತು ಸಿಎ ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಹೇಳಿದರು. ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, “ಸುಳ್ಯದ ಜನತೆ ಅಂಗಾರರನ್ನು
ಪುತ್ತೂರು : ಆಟೋ ರಿಕ್ಷಾವೊಂದು ಡಿವೈಡರ್ ಗೆ ಡಿಕ್ಜಿಯಾಗಿ ಪಲ್ಟಿಯಾದ ಘಟನೆ ಪುತ್ತೂರು ಉಪ್ಪಿನಂಗಡಿಯ ಪಡೀಲ್ ನಲ್ಲಿ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡ ಮಹಿಳೆ ಮತ್ತು ಚಾಲಕನನ್ನು ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪಿ.ಎಸ್.ಐ ಸೇಸಮ್ಮ ಮತ್ತು ಎ.ಎಸ್.ಐ ರಾಧಾಕೃಷ್ಣ ಅವರು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಾಲಕ ಅಬ್ದುಲ್ ಎಂಬವರ ಆಟೋ ಡಿವೈಡರ್‍ಗೆ ಬಡಿದ ಹಿನ್ನಲೆಯಲ್ಲಿ ಮಹಿಳೆ ಕುಸುಮಾವತಿಯವರಿಗೆ ಗಾಯವಾಗಿತ್ತು. ಈ ವೇಳೆ ಜನರು
ಮಂಜೇಶ್ವರ : ಕಿಡ್ನಿ ವೈಫಲ್ಯಕ್ಕೊಳಗಾಗಿ ಚಿಕಿತ್ಸೆಯಲ್ಲಿರುವ ಮಂಜೇಶ್ವರದ ಕಾಂಗ್ರೆಸ್ ಕಾರ್ಯಕರ್ತ ಬಶೀರ್ ರವರಿಗೆ ಹರ್ಷಾದ್ ವರ್ಕಾಡಿಯವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸಂಗ್ರಹಿಸಿದ ಚಿಕಿತ್ಸಾ ಸಹಾಯ ಮೊತ್ತವನ್ನು ಹಸ್ತಾಂತರಿಸಲಾಯಿತು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ. ಕೆ. ಅವರು 40,000 ರೂ. ಮೊತ್ತವನ್ನು ಬಶೀರ್ ರವರಿಗೆ ಹಸ್ತಾಂತರಿಸಿದರು. ಮಾಜಿ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲಾಕ್
ಸದಾ ಬದುಕಿನ ಜಂಜಾಟ ಕೆಲಸದ ಒತ್ತಡದ ನಡುವೆಯೂ ‘ಓ ಮನವೇ ರಿಲಾಕ್ಸ್ ಪ್ಲೀಸ್ ‘ ಎನ್ನುವ ಮನಗಳಿಗೆ ಮುದ ನೀಡುವಂತಹ ಬೀಸುವ ತಂಗಾಳಿಯ ಕಡಲ ಅಲೆಗಳ ನರ್ತನ ಮತ್ತೊಂದೆಡೆ ರಮ್ಯ ರಮಣೀಯ ಕಾಮಿನಿ ಹೊಳೆಯ ನಡುವೆ ಪ್ರವಾಸಿಗರನ್ನು ಕೈ ಬೀಸಿ ಸೆಳೆಯುತ್ತಿರುವ ಪ್ರಕೃತಿ ಸೌದರ್ಯದ ಸೊಬಗೇ ಪಡುಬಿದ್ರಿಯ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್.ಪ್ರವಾಸ್ಯೋದ್ಯಮ ಇಲಾಖೆ ಉಡುಪಿ ಜಿಲ್ಲೆಯ ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್ ಮನಮೋಹಕವಾಗಿ
ಮೂಡುಬಿದಿರೆ : ಅನಧಿಕೃತ ಮತ್ತು ಅವೈಜ್ಞಾನಿಕ ರೀತಿಯಲ್ಲಿ ಕಾರ್ಯಚರಿಸುತ್ತಿರುವ ಸುರತ್ಕಲ್ ಟೋಲ್ಗೇಟನ್ನು ತೆರವುಗೊಳಿಸುವಂತೆ ಆಗ್ರಹಿಸಿ ಮೂಡುಬಿದಿರೆಯ ಬ್ಲಾಕ್ ಕಾಂಗ್ರೆಸ್, ಸಿಪಿಐಎಂ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಸುರತ್ಕಲ್ ಟೋಲ್ ಎಂದರೆ ರೌಡಿಗಳನ್ನು ಸಾಕುವಂತಹ ವ್ಯವಸ್ಥೆಯಾಗಿದೆ. 400 ಕೋಟಿ ರೂಪಾಯಿ ಸಂಗ್ರಹಿಸಿ ಇಡೀ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಯಶಸ್ವಿನಿ ಆನೆಗೆ ಅರಣ್ಯ ಇಲಾಖೆಯಿಂದ ಮಾಲಿಕತ್ವ ಪ್ರಮಾಣ ಪತ್ರ ದೊರೆತಿದೆ. ಕಳೆದ 18 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ಆನೆಗೆ ಇದ್ದರೂ ಮಾಲಿಕತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಇದೀಗ ಮುಂದಿನ 5 ವರ್ಷಗಳ ವರೆಗೆ ಮಾಲಿಕತ್ವ ದೊರೆತಿರುವುದಾಗಿ ಅರಣ್ಯ ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕೆಲ ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಾಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿರುವ
ಬಂಟ್ವಾಳ: ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ರಾತ್ರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಅವರು, ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಫಳ್ನೀರು ನಿವಾಸಿ ರಿಯಾಜ್ (38) ಎಂಬಾತನನ್ನು ಬಂಧಿಸಲಾಗಿದ್ದು, ಘಟನೆಗೆ ಸಂಬಂಧಿಸಿ
ಬಹರೈನ್ : ಯಕ್ಷಧ್ರುವ ಪಟ್ಲಾ ಫೌಂಡೇಶನ್‍ನ ಬಹರೈನ್ ಹಾಗು ಸೌದಿ ಅರೇಬಿಯಾ ಘಟಕವು ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು ತನ್ನ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ” ಶಶಿಪ್ರಭಾ ಪರಿಣಯ” ಎನ್ನುವ ಪ್ರಸಂಗವನ್ನು ಆಡಿತೋರಿಸಲಿದೆ. ಈ ಕಾರ್ಯಮದ ಪೂರ್ವಭಾವಿ ತಯಾರಿಯು ಭರದಿಂದ ಸಾಗಿದ್ದು ದ್ವಿತೀಯ ವಾರ್ಷಿಕ ಪಟ್ಲ ಸಂಭ್ರಮಕ್ಕೆ ಇದಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ. ಈ ಯಕ್ಷಗಾನ ಕಾರ್ಯಕ್ರಮವು ಅಕ್ಟೋಬರ್ 28ರ ಶುಕ್ರವಾರದಂದು ಮನಾಮದಲ್ಲಿರುವ




























