Home Posts tagged #v4newskarnataka (Page 156)

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮುಖಂಡನ ಕಗ್ಗೊಲೆ : ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು..!

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡನ ಕಗ್ಗೊಲೆಯಾಗಿದೆ. ಬೆಳ್ಳಾರೆಯ ನೆಟ್ಟಾರು ನಿವಾಸಿ 32 ವರ್ಷದ ಪ್ರವೀಣ್ ನೆಟ್ಟಾರು ಎಂಬಾತನನ್ನು ದುಷ್ಕರ್ಮಿಗಳು ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಇಟ್ಟುಕೊಂಡಿದ್ದ ಪ್ರವೀಣ್ ತನ್ನ ಅಂಗಡಿಯನ್ನು ಬಂದ್ ಮಾಡುವ ವೇಳೆಗೆ ಒಂದೇ ಬೈಕ್

ಎಂ.ಪಿ ಸಿಲ್ಕ್ಸ್ ಆಷಾಢ ಆಫರ್ ರಿಯಾಯಿತಿ ದರದಲ್ಲಿ ವಿವಿಧ ಬ್ರ್ಯಾಂಡೆಡ್ ವಸ್ತ್ರಗಳು ಶೇ.50ರಷ್ಟು ಡಿಸ್ಕೌಂಟ್

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಎಂ.ಪಿ. ಸಿಲ್ಕ್ಸ್ ಮಳಿಗೆಯಲ್ಲಿ ಆಷಾಢ ಪ್ರಯುಕ್ತ ಬಿಗ್ ಸೇಲ್‍ನ್ನು ಹಮ್ಮಿಕೊಂಡಿದ್ದು, ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದ್ದು, ಉತ್ತಮ ಗುಣಮಟ್ಟದ ವಸ್ತ್ರಗಳು ಕೈಗೆಟಕುವ ದರದಲ್ಲಿ ಸಿಗಲಿದೆ. ವಿವಿಧ ವಿನ್ಯಾಸದ ಮತ್ತು ಉತ್ತಮ ಗುಣಮಟ್ಟವನ್ನು ಹೊಂದಿರುವ ವಸ್ತ್ರ ಮಳಿಗೆ ಎಂ.ಪಿ. ಸಿಲ್ಕ್ಸ್. ಈ ಬಾರಿಯ ಆಷಾಢ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದಾರೆ. ಸೂರತ್ ಸೀರೆ, ಫ್ಯಾನ್ಸಿ ಮತ್ತು ಕಾಟನ್

ಗೂಂಡಾಗಿರಿಗೆ ಬಜರಂಗದಳವನ್ನು ಸರ್ಕಾರವೇ ಕಳುಹಿಸಿದ್ದೆ..? : ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿಕೆ

ಹೊಟೇಲ್‍ಗೆ ಹೋಗಿ ಗ್ರಾಹಕರನ್ನು ಹೊರಗೆ ಕಳುಹಿಸಿ ಗೂಂಡಾಗಿರಿ ಪ್ರದರ್ಶಿಸಲು ಆ ಸಂಘಟನೆಗೆ ಅಧಿಕಾರ ನೀಡಿದವರು ಯಾರು ಬಿಜೆಪಿ ಸರಕಾರವೇ ಇವರನ್ನು ಕಳುಹಿಸಿದ್ದೇ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಪ್ರಶ್ನಿಸಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಪಬ್ ದಾಳಿ ಆದಾಗಲೂ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಈಗ ಮತ್ತೆ ಬಿಜೆಪಿ ಸರಕಾರ ಇರುವಾಗ ಚುನಾವಣೆ

ಆಲೂರು : ಕಲುಷಿತ ಆಹಾರ ಸೇವನೆಯಿಂದ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಹಾಸನದ ಆಲೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಶಾಲೆಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ನೀಡಿ, ಪರಿಶೀಲನೆ ನಡೆಸಿದ್ರು. ಅಡುಗೆ ಕೊಠಡಿ, ಸಾಮಗ್ರಿಗಳ ಕೊಠಡಿ, ಆಹಾರ ಪದಾರ್ಥಗಳನ್ನು ಪರೀಶೀಲನೆ ಮಾಡಿ, ಶಾಲಾ ಕೊಠಡಿಗಳು, ಸ್ನಾನಗೃಹಗಳು, ಶೌಚಲಯಕ್ಕೆ ಭೇಟಿ ನೀಡಿದ್ರು. ನಂತರ ಮಾತನಾಡಿದ ಅವರು ಸದ್ಯ ಈ ವಸತಿ ಶಾಲೆ ಕಟ್ಟಡದಲ್ಲಿ 204 ಮಕ್ಕಳು ಇದ್ದು 25 ಮಕ್ಕಳಿಗೆ ವಾಂತಿ ಬೇಧಿ ಸುಸ್ತು ಕಾಣಿಸಿಕೊಂಡಿದ್ದು.

ಫೈಟಿಂಗ್ ಕಾರ್ಮಿಕನಿಗೆ 1 ಕೋಟಿ ರೂ. ಅದೃಷ್ಟ ಬಹುಮಾನ

ಮಂಜೇಶ್ವರ ಪಾವೂರು ಗೇರುಕಟ್ಟೆ ನಿವಾಸಿ ಪೈಂಟರ್ ಬಾವ ಎಂದೇ ಪರಿಚಿತರಾಗಿರುವ ಮೊಹಮ್ಮದ್ ಎಂಬವರಿಗೆ 1 ಕೋ.ರೂ. ಕೇರಳ ರಾಜ್ಯಲಾಟರಿ ಒಲಿದಿದೆ. ಡ್ರಾ ಆಗುವ ತಾಸುಗಳ ಮೊದಲು ಟಿಕೇಟ್ ತೆಗೆದ ಅದೃಷ್ಟವಂತನಾಗಿದ್ದಾನೆ. ಈತನಿಗೆ 5 ಮಕ್ಕಳ ಪೈಕಿ 2 ಮಕ್ಕಳನ್ನು ಮದುವೆ ಮಾಡಿಸಿ ಕೊಟ್ಟ ಬಳಿಕ 50ಲಕ್ಷ ರೂ. ಗಿಂತಲೂ ಮಿಕ್ಕ ಸಾಲದಲ್ಲಿ ಮುಳುಗಿ ಇದ್ದ ಮನೆಯನ್ನು ಕೂಡಾ ಮಾರಿ ಇನ್ನು ಮುಂದಕ್ಕೆ ಏನೆಂದು ತಿಳಿಯದೆ ಕೂತಿರುವಾಗ ದೇವರು ನನಗೆ ನೀಡಿದ

ಅನಧಿಕೃತ ಗ್ಯಾಸ್ ಗೋಡನ್ ತೆರವುಗೊಳಿಸಲು ನಿರ್ಲಕ್ಷ್ಯ : ಅಪಾಯದಂಚಿನಲ್ಲಿ ದಲಿತ ಕುಟುಂಬಗಳು

ಪಡುಬಿದ್ರಿ ಗ್ರಾಮದ ಪಾದೆಬೆಟ್ಟುವಿನಲ್ಲಿ ಬಹಳಷ್ಟು ವರ್ಷಗಳಿಂದ ಅನಧಿಕೃತವಾಗಿ ದಲಿತ ಕಾಲೊನಿಯಲ್ಲಿ ಸುತ್ತಲೂ ವಾಸದ ಮನೆಗಳಿರುವ ಪ್ರದೇಶದಲ್ಲಿ ಗ್ಯಾಸ್ ಗೋಡಾನ್ ಕಾರ್ಯಚರಿಸುತ್ತಿದ್ದರೂ ಈ ಬಗ್ಗೆ ಗ್ರಾ.ಪಂ. ಸಹಿತ ಸಂಬಂಧಿಸಿದ ಇಲಾಖಾಧಿಕಾರಿಗಳು ತೆರವುಗೊಳಿಸಲು ನಿರ್ಲಕ್ಷ್ಯ ಧೋರಣೆ ತಾಳಿದು, ಅನಿವಾರ್ಯ ಸ್ಥಿತಿ ಒದಗಿ ಬಂದರೆ ನಾವೆಲ್ಲರೂ ಒಂದಾಗಿ ಅಪಾಯಕಾರಿ ಗೋಡನ್ ದ್ವಂಸಗೊಳಿಸುವುದಾಗಿ ದಲಿತ ಮುಖಂಡ ಸುಂದರ್ ಮಾಸ್ತರ್ ಎಚ್ಚರಿಸಿದ್ದಾರೆ. ಗೋಡಾನ್ ಪ್ರದೇಶದಿಂದ

21ನೇ ಒಡಿಯೂರು ಶ್ರೀಗುರುದೇವ ಸೇವಾ ಬಳಗ ಮುಂಬಯಿ ಘಟಕದ ವಾರ್ಷಿಕೋತ್ಸವ

ಸುಖ ದುಃಖಗಳನ್ನು ಸಮತೋಲನದಲ್ಲಿಡಲು ಆಧ್ಯಾತ್ಮಿಕತೆ ಬೇಕು .ಸುಖ ವೆಂದರೆ ಮನಸ್ಸಿನ ಸ್ಥಿತಿ ಯಾಗಿದೆ ಮನಸ್ಸನ್ನು ಏಕಾಗ್ರತೆಯಲ್ಲಿಟ್ಟು ಆಧ್ಯಾತ್ಮಿಕದ ವಿಚಾರಧಾರೆಗಳನ್ನು ನಮ್ಮಲ್ಲಿ ಇರಿಸಿಕೊಂಡಾಗ ಧರ್ಮದ ಕಡೆಗೆ ನಮ್ಮ ನಡೆಯಲು ಸಾಧ್ಯವಾಗುತ್ತದೆ ತಾಯಂದಿರು ಮಕ್ಕಳಿಗೆ ಜ್ಞಾನದ ಬೆಳಕಾಗಬೇಕು ಯುವ ಸಮುದಾಯ ಜಾಗೃತರದಾಗ ದೇಶ ಸದೃಡ ವಾಗುತ್ತದೆ ಎಂದುಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀಕ್ಷೇತ್ರ ಒಡಿಯೂರು ಇದರ

ಮಂಗಳೂರಲ್ಲಿ ಟೈಲರ್ ಅಸೋಸಿಯೇಶನ್ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ದ.ಕ. ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟೈಲರ್‍ಗಳು ಬೀದಿಗಿಳಿದು ಪ್ರತಿಭಟಿಸಿದರು. ಕರ್ನಾಟಕ ರಾಜ್ಯ ಟೈಲರ್ ಸಂಘಟನೆಯ ಕರೆಯ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಮಂಗಳೂರಿನ ಬಲ್ಮಠ ಬಳಿಯ ಶಾಂತಿನಿಲಯ ಸಮೀಪದ ಮೈದಾನದಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಟೈಲರ್‍ಗಳು ಭಾಗವಹಿಸಿ

ಮಂಗಳೂರಲ್ಲಿ ಪಬ್ ಭಜರಂಗದಳ ದಾಳಿ ವಿಚಾರ ಯಾವುದೇ ದೈಹಿಕ ಹಲ್ಲೆ ನಡೆದಿಲ್ಲ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿಕೆ

ಪಬ್ ಮೇಲೆ ಬಜರಂಗದಳ ದಾಳಿ ಘಟನೆ ಸಂಬಂಧಿಸಿ ಹೇಳಿಕೆ ನೀಡಿರುವ ಪೆÇಲೀಸ್ ಕಮಿಷನರ್ ಶಶಿಕುಮಾರ್, ನಗರದಲ್ಲಿ ಯಾವುದೇ ಪಬ್ ಅಟ್ಯಾಕ್ ಆಗಿಲ್ಲ. ಅಪ್ರಾಪ್ತ ಯುವಕ- ಯುವತಿಯರು ಇದ್ದರೆಂದು ಆಕ್ಷೇಪ ಎತ್ತಿದ್ದರು ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ.ಇಂದು ಬೆಳಗ್ಗೆ ಬಲ್ಮಠದ ಪಬ್ ಆವರಣಕ್ಕೆ ಬಂದು ಪರಿಶೀಲನೆ ನಡೆಸಿದ ಕಮಿಷನರ್‍ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ರಾತ್ರಿ ಹತ್ತು- ಹನ್ನೆರೆಡು ಮಂದಿ ಪಬ್ ಮುಂಭಾಗದಲ್ಲಿ ಜಮಾಯಿಸಿದ್ದರು. ಪಬ್

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಗೆ ಖಂಡನೆ : ಕಾಪುವಿನಲ್ಲಿ ಎಸ್‍ಡಿಪಿಐ ವತಿಯಿಂದ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಬೆಲೆ ಏರಿಕೆ ಹಾಗೂ ಜಿಎಸ್‍ಟಿ ನೀತಿಯ ವಿರುದ್ಧ ಕಾಪುಪೇಟೆಯಲ್ಲಿ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಪ್ರತಿಭಟನಾ ಸಭೆ ನೆರವೇರಿತು. ಎಸ್ಡಿಪಿಐ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ಮೂಳೂರು ಮಾತನಾಡಿ, ಕೇಂದ್ರದ ತೆರಿಗೆ ನೀತಿಯಿಂದ ಬಡವರು ತಿನ್ನುವ ಅನ್ನದ ಬಟ್ಟಲಿಗೆ ಟ್ಯಾಕ್ಸ್ ಹಾಕಿದ್ದಾರೆ. ಹಾಲು, ಮಜ್ಜಿಗೆ, ಮೊಸರಿಗೆ ಜಿಎಸ್‍ಟಿ ಹಾಕಿ ಜನರನ್ನು ಬದುಕದಂತೆ