ತಲಪಾಡಿ ಗ್ರಾಮದ ತಚ್ಛಣಿ ಗ್ರೌಂಡ್ ; ಭಾರತ ದೇಶದಲ್ಲಿ ನಿಷೇಧಿತ ಮಾದಕ ವಸ್ತುವಾದ MDMA ಅನ್ನು ದುಬಾರಿ ಹಣಕ್ಕೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ದಿನಾಂಕ :01-09-2025 ರಂದು ಮಂಗಳೂರು ನಗರದ ಉಳ್ಳಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಚ್ಛಣಿ ಗ್ರೌಂಡ್ ನಲ್ಲಿ ಭಾರತ ದೇಶದಲ್ಲಿ ನಿಷೇಧಿತ ಮಾದಕ ವಸ್ತುವಾದ MDMA ಅನ್ನು ದುಬಾರಿ ಹಣಕ್ಕೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಫಝಲ್ ಹುಸೇನ್(33) ಮತ್ತು ನೌಶಾದ್(32) ಎಂಬುವರಿಂದ

15 ಗ್ರಾಂ MDMA, ಡಿಯೋ ಬೈಕ್, ಎರಡು ಮೊಬೈಲ್ ಫೋನ್, ಪೋರ್ಟಬಲ್ ಡಿಜಿಟಲ್ ತೂಕದ ಯಂತ್ರ,ಇತ್ಯಾದಿಗಳ ಅಂದಾಜು ಮೌಲ್ಯ ₹ 95500/-ರೂ. ಇವುಗಳನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು,

ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣಾ Cr. No. 155/25 U/S NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಕಾರ್ಯಾಚರಣೆಯು ಎಸಿಪಿ ರವರಾದ ಶ್ರೀಮತಿ ವಿಜಯಕ್ರಾಂತಿ ಕೆ ಎಸ್ ಪಿ ಎಸ್ ರವರ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿಗಳಿಂದ ಯಶಸ್ವಿಯಾಗಿ ಕೈಗೊಳ್ಳಲಾಗಿದೆ.

add - S.L Shet ..march 2025

Related Posts

Leave a Reply

Your email address will not be published.