ತಲಪಾಡಿ: ಲಾರಿಗಳ ನಡುವೆ ಸಿಲುಕಿ ಚಾಲಕ ಮೃತ್ಯು

ಉಳ್ಳಾಲ: ಎರಡು ಕಂಟೈನರ್ ಲಾರಿಗಳ ನಡುವೆ ಸಿಲುಕಿ ಲಾರಿ ಚಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾ,.ಹೆ.66ರ ತಲಪಾಡಿ ಟೋಲ್ ಗೇಟ್ ಸಮೀಪ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಹರ್ಯಾಣ ಮೂಲದ ಶಮೀಮ್ (38) ಮೃತಪಟ್ಟ ಚಾಲಕ. ಹರಿಯಾಣದಿಂದ ಕೇರಳ ಕಡೆಗೆ ಒಂದೇ ಸಂಸ್ಥೆಗೆ ಸೇರಿದ , ಸಂಬಂಧಿ ಚಾಲಕರು ಎರಡು ಕಂಟೈನರ್ ಲಾರಿಗಳಲ್ಲಿ ಕೇರಳ ಕಡೆಗೆ ಸರಕು ಸಾಗಾಟ ನಡೆಸುತ್ತಿದ್ದರು. ತಲಪಾಡಿ ಟೋಲ್ ಸಮೀಪ ಒಂದು ಕಂಟೈನರ್ ಲಾರಿಯನ್ನು ಚಾಲಕ ಶಮೀಮ್ ಚಹಾ ಕುಡಿಯಲೆಂದು ನಿಲ್ಲಿಸಿದ್ದರು.

ಇದೇ ಸಂದರ್ಭ ಅದೇ ಸಂಸ್ಥೆಗೆ ಸೇರಿದ ಇನ್ನೊಂದು ಲಾರಿ ಶಮೀಮ್ ಅವರ ಸಂಬಂಧಿಯೇ ಆಗಿರುವ ಚಾಲಕ ಮೊದಲಿಗೆ ನಿಲ್ಲಿಸಲಾಗಿದ್ದ ಲಾರಿಯ ಮುಂದೆ ಹೋಗಿ ಲಾರಿಯನ್ನು ನಿಲ್ಲಿಸಿದ್ದರು. ಶಮೀಮ್ ತಾನು ನಿಲ್ಲಿಸಿದ್ದ ಲಾರಿ ಮುಂದೆ ನಿಂತಿದ್ದ ಸಂದರ್ಭ, ಎದುರಿನಲ್ಲಿ ನಿಲ್ಲಿಸಿದ್ದ ಲಾರಿ ಏಕಾಏಕಿ ಹಿಂದೆ ಚಲಿಸಿ ಶಮೀಮ್ ಎರಡು ಲಾರಿಗಳ ನಡುವೆ ಸಿಲುಕಿದ್ದಾನೆ.

ಗಂಭೀರವಾಗಿ ಗಾಯಗೊಂಡ ಶಮೀಮ್ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಒಳಭಾಗದಲ್ಲಿ ಅಂಗಾಂಗಳಿಗೆ ಗಂಭೀರ ರೀತಿಯಲ್ಲಿ ಗಾಯಗಳಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಶಮೀಮ್ ಹಾಗೂ ಅಪಘಾತಕ್ಕೀಡಾದ ಲಾರಿ ಚಾಲಕ ಸಹೋದರ ಸಂಬಂಧಿಗಳಾಗಿದ್ದಾರೆ. ಎರಡು ಕಂಟೈನರ್ ಲಾರಿಗಳು ಸಿಬಿಐನ ಹಿರಿಯ ಅಧಿಕಾರಿಯ ಸಹೋದರನಿಗೆ ಸೇರಿದ್ದಾಗಿ ತಿಳಿದುಬಂದಿದೆ.

Related Posts

Leave a Reply

Your email address will not be published.