ನದಿಗಳು ಇಲ್ಲದ ಪ್ರಪಂಚದ ಅತಿ ದೊಡ್ಡ ದೇಶ

ಜಗತ್ತಿನಲ್ಲಿ ನದಿಗಳು ಇಲ್ಲದ ಅತಿ ದೊಡ್ಡ ದೇಶವಾಗಿದೆ ಸೌದಿ ಅರೇಬಿಯಾ. ಬಾವಿ, ಒಯಸಿಸ್ ಸಾಕಾಗದ ಕಾಲವಿದು.ನದಿಗಳು ಇಲ್ಲದ ದೇಶಗಳು ಈಗ ಕುಡಿಯುವ ನೀರಿಗೆ ಡಿಸಾಲಿನೇಶನ್ ಎಂಬ ಉಪ್ಪುಕಳೆ ತಂತ್ರಜ್ಞಾನವನ್ನು ನಂಬಿವೆ. ಕೆಳಗಿನವುಗಳೆಲ್ಲ ನದಿಗಳು ಇಲ್ಲದ ದೇಶಗಳಾಗಿವೆ.ಸೌದಿ ಅರೇಬಿಯಾ 70 ಶೇಕಡಾ ಕುಡಿಯುವ ನೀರನ್ನು ಉಪ್ಪು ಕಳೆ ಮೂಲಕ ಪಡೆಯುತ್ತದೆ.

ಅತಿ ಹೆಚ್ಚು ಎಂದರೆ 70 ಶೇಕಡಾ ಉಪ್ಪು ಕಳೆ ತಂತ್ರಜ್ಞಾನದ ಮೂಲಕ ಕುಡಿಯುವ ನೀರು ಪಡೆಯುವ ದೇಶ ಕತಾರ್.ಯುಎಇ- ಅರಬ್ ಅಮೀರರ ಒಕ್ಕೂಟ ದೇಶ ಅತ್ಯಾಧುನಿಕ ಕೊಲ್ಲಿ ದೇಶವಾಗಿದೆ. ಇಲ್ಲಿ ಬಳಸಿದ ನೀರು ಶುದ್ಧೀಕರಿಸಿ ಮರು ಬಳಸುವ ತಂತ್ರಜ್ಞಾನ ವೃದ್ಧಿಸಿದೆ. ಕುವೈತ್ ಬಹುತೇಕ ಊಟೆಗಳ ಮತ್ತು ನೆಲದಡಿಯ ನೀರನ್ನು ಅವಲಂಬಿಸಿದೆ.

ಬಹರೇನ್ 60 ಶೇಕಡಾ ಕುಡಿಯುವ ನೀರನ್ನು ಡಿಸಾಲಿನೇಶನ್ ಮೂಲಕ ಪಡೆಯುತ್ತದೆ. ಮಾಲ್ಡೀವ್ಸ್ ಬಹು ಕಾಲ ಒಳ್ಳೆಯ ಮಳೆ ಕಾಣುತ್ತದೆ. ಹಾಗಾಗಿ ಮಳೆ ಕುಯಿಲು ಇಲ್ಲಿನವರ ದಾಹ ತಣಿಸುತ್ತದೆ.
