Home 2023 October (Page 8)

ಮೂಡುಬಿದಿರೆ|| ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ: ಸಾಧಕರಿಗೆ ಗೌರವ ಪುರಸ್ಕಾರ ಪ್ರದಾನ

ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಮೂಡುಬಿದಿರೆ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಾಲ್ಕನೇ ದಿನದಂದು ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆಯ ಖ್ಯಾತ ತಜ್ಞ ವೈದ್ಯ ಡಾ.ಹರೀಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಯಕ್ಷಗಾನ-ಸ್ವರೂಪ ಮತ್ತು ನಾವೀನ್ಯ’ ಎಂಬ

ನೆಲ್ಯಾಡಿ: ಶಿರಾಡಿ ಘಾಟ್‍ನಲ್ಲಿ ಅಕ್ಕಿ ಸಾಗಾಟದ ಲಾರಿ ಬೆಂಕಿಗಾಹುತಿ

ನೆಲ್ಯಾಡಿ: ಶಿರಾಡಿ ಘಾಟ್‍ನ ಡಬಲ್ ಟರ್ನ್‍ನಲ್ಲಿ ಹಾಸನ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಅಕ್ಕಿ ಸಾಗಾಟದ ಲಾರಿಯೊಂದು ಬೆಂಕಿಗಾಹುತಿ ಆಗಿರುವ ಘಟನೆ ನಡೆದಿದೆ. ಶಿರಾಡಿ ಘಾಟ್‍ನ ಡಬಲ್ ಟರ್ನ್‍ನಲ್ಲಿ ಹಾಸನ ಕಡೆಯಿಂದ ಮಂಗಳೂರಿಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಾರಿ ಚಾಲಕ ಹಾಗೂ

ಮಂಗಳೂರು: ನೀಲಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಕೆಪಿಟಿಸಿಎಲ್‌ನ ಉದ್ಯೋಗಿಗಳು

ಮಂಗಳೂರಿನಲ್ಲಿ ದಸರಾ ಸಂಭ್ರಮದ ಕಳೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಹಿಳಾ ಮಣಿಗಳು ಬಣ್ಣ ಬಣ್ಣದ ಬಟ್ಟೆಗಳೊಂದಿಗೆ ಮಿಂಚುತ್ತಿದ್ದಾರೆ. ಅಂತೆಯೇ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಮಂಗಳೂರಿನ ಕಾವೂರಿನಲ್ಲಿರುವ ಕೆಪಿಟಿಸಿಎಲ್‌ನ ಟಿಎಲ್ ಮತ್ತು ಎಸ್‌ಎಸ್ ವಿಭಾಗದ ಮಹಿಳಾ ಉದ್ಯೋಗಿಗಳಾದ ಸ್ಮಿತಾ, ಮೇಘಾ, ಜೀನಾ, ಸೌಮ್ಯ ಮತ್ತು ನಿಶ್ತಾ ಅವರು ಅ.೧೮ರಂದು ನೀಲಿ

ಮಂಗಳೂರು: ಯೆಯ್ಯಾಡಿಯಲ್ಲಿ ಟೋನಿ & ಗೈ ಎಸ್ಸೆನ್ಸುಯಲ್ಸ್ ಕೇಶ ವಿನ್ಯಾಸದ ಸುಸ್ಸಜ್ಜಿತ ಮಳಿಗೆ ಶುಭಾರಂಭ

ಮಂಗಳೂರು: ಟೋನಿ ಅಂಡ್ ಗೈ ಎಸ್ಸೆನ್ಸುಯಲ್ಸ್ ಕೇಶ ವಿನ್ಯಾಸದ ಎರಡನೆಯ ನೂತನ ಸುಸಜ್ಜಿತ ಮಳಿಗೆ ಮಂಗಳೂರಿನ ಯೆಯ್ಯಾಡಿಯಲ್ಲಿ ಶುಭಾರಂಭಗೊಂಡಿದೆ. ದೇಶದ ಹೆಸರಾಂತ ಕೇಶ ವಿನ್ಯಾಸ ಕಂಪನಿಯಲ್ಲಿ ಒಂದಾದ ಟೋನಿ ಅಂಡ್ ಗೈ ನೂತನ ಎರಡನೇ ಶಾಖೆ ನಗರದ ಯೆಯ್ಯಾಡಿಯಲ್ಲಿರುವ ಸುಸಜ್ಜಿತ ಮಳಿಗೆಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಯುವ ಕಾಂಗ್ರೆಸ್ ಮುಖಂಡ

ಬೈಂದೂರು: ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಬೈಂದೂರು ದಸರಾ-2023ಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಬೈಂದೂರು ದಸರಾ ಮಹೋತ್ಸವಕ್ಕೆ ಅಪ್ಪಣ್ಣ ಹೆಗ್ಡೆ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಪ್ರಗತಿಯಾದರು ಸಹ ಮನಃಶಾಂತಿ ಹಾಗೂ ನೆಮ್ಮದಿಯನ್ನು ಹಣ ಹಾಗೂ ಪ್ರಗತಿಯಿಂದ ಪಡೆಯಲು

ಮಂಜೇಶ್ವರ|| ಸರ್ಕಾರಿ ಶಾಲೆಯಲ್ಲಿ ಶುಚಿತ್ವವಿಲ್ಲದ ಶೌಚಾಲಯ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಶಾಲಾ ಮಕ್ಕಳು

ಮಂಜೇಶ್ವರದ ಉಪಜಿಲ್ಲಾ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳಲ್ಲಿ ಹಾಗೂ ಖಾಸಗಿ ಶಾಲೆಗಳ ಶೌಚಾಲಯಗಳಲ್ಲಿ ಶುಚಿತ್ವ ಇಲ್ಲದೇ ಇರುವುದು ಪೋಷಕರಲ್ಲಿ ಸಾಂಕ್ರಾಮಿಕ ರೋಗದ ಭೀತಿಯನ್ನು ಹೆಚ್ಚಿಸಿದೆ. ಮಂಜೇಶ್ವರ ಉಪಜಿಲ್ಲೆಯ ವ್ಯಾಪ್ತಿಯಲ್ಲಿರುವ ಶಾಲೆಯೊಂದರಲ್ಲಿ ಶೌಚಾಲಯದಲ್ಲಿ ಮಾಲಿನ್ಯ ಕಟ್ಟಿ ನಿಂತು ದುರ್ವಾಸನೆಯಿಂದ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವ

ಪುತ್ತೂರು: ಅ.22ರಂದು ಪುತ್ತೂರುದ ಪಿಲಿಗೊಬ್ಬು -2023 ಹಾಗೂ ಫುಡ್ ಫೆಸ್ಟ್

ಪುತ್ತೂರು: ತುಳು ನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆಯಾದ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅ. 22ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಪುತ್ತೂರುದ ಪಿಲಿಗೊಬ್ಬು -2023 ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರುದ ಪಿಲಿಗೊಬ್ಬು ಸಮಿತಿಯ

ಪುತ್ತೂರು: ಅ.22ರಂದು ಪುತ್ತೂರುದ ಪಿಲಿರಂಗ್‍ನ ಸೀಸನ್ -2

ಪುತ್ತೂರು: ಹುಲಿ ಕುಣಿತದಂತಹ ಸಾಂಸ್ಕೃತಿಕ ಕಲೆ ನಮ್ಮ ಊರಿಗೂ ಬರಲಿ ಎಂಬ ಉದ್ದೇಶದಿಂದ ಆರಂಭಗೊಂಡಿರುವ ಪುತ್ತೂರುದ ಪಿಲಿರಂಗ್‍ನ ಸೀಸನ್ -2 ಪುತ್ತೂರು ಕಿಲ್ಲೆ ಮೈದಾನದಲ್ಲಿ ಅ. 22ರಂದು ನಡೆಯಲಿದೆ ಎಂದು ಪಿಲಿರಂಗ್ ಸಾರಥ್ಯ ವಹಿಸಿರುವ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು. ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪುತ್ತೂರಿಗೆ

ಮಂಗಳೂರು: ವಿ.ಟಿ.ರೋಡ್ ಬಾಲಕ ವೃಂದ, ಶ್ರೀ ಶಾರದಾ ಪೂಜಾ ಸಮಿತಿಯಿಂದ ಶ್ರೀ ಶಾರದಾ ಪೂಜಾ ಮಹೋತ್ಸವ

ಮಂಗಳೂರಿನ ವಿ.ಟಿ.ರೋಡ್ ಬಾಲಕ ವೃಂದ, ಶ್ರೀ ಶಾರದಾ ಪೂಜಾ ಸಮಿತಿಯ ವತಿಯಿಂದ ನಗರದ ಶ್ರೀ ವಿಠೋಭ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀ ಕೃಷ್ಣ ಮಂದಿರದ ಸಭಾಗೃಹದಲ್ಲಿ ಶ್ರೀ ಶಾರದಾ ಪೂಜಾ ಮಹೋತ್ಸವವು ಅ.23 ರ ವರೆಗೆ ನಡೆಯಲಿದೆ.ಅ.18ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಅ.19ರಂದು ದೇವಿಯ ಪ್ರತಿಷ್ಠೆ, ಅ.20ರಂದು ಚಂಡಿಕಾ ಹವನ, ಸಾರ್ವಜನಿಕ ಮಹಾ

ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ

ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಪುಣಚದಲ್ಲಿ ನಡೆದಿದೆ. ಪುಣಚ ಚೆಕ್ಕುತ್ತಿ ನಿವಾಸಿ ಶ್ರೀ ಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಶ್ರೀ ಕೃಷ್ಣ ಸೆಂಟ್ರಿoಗ್ ಕೆಲಸ ನಿರ್ವಹಿಸುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ವಿಟ್ಲ ಪೊಲೀಸರು