Home 2024 (Page 34)

ಆ.31: ಅಲೋಶಿಯನ್ ಫೆಸ್ಟ್ 2024 : ಪಿಯು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ಉತ್ಸವ ಆಯೋಜನೆ

ಮಂಗಳೂರು: “ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ಅಲೋಶಿಯಸ್ ಫೆಸ್ಟ್ 2024 ಇದರ ಉದ್ಘಾಟನಾ ಸಮಾರಂಭವನ್ನು ಎಲ್.ಸಿ.ಆರ್.ಐ. ಸಭಾಂಗಣದಲ್ಲಿಶನಿವಾರ, ಆಗಸ್ಟ್ 31 ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ“ ಎಂದು ಕುಲಪತಿ ವಂ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ.

ಮಂಗಳೂರು: ಸೆ.12ಕ್ಕೆ “ರಾನಿ” ಕನ್ನಡ ಸಿನಿಮಾ ಬಿಡುಗಡೆ

ಮಂಗಳೂರು: “ಸೆ.12ಕ್ಕೆ ಬಹು ನಿರೀಕ್ಷಿತ ರಾನಿ ಕನ್ನಡ ಸಿನಿಮಾ ಬಿಡುಗಡೆಗೊಳ್ಳಲಿದೆ. ಆಕ್ಷನ್ ಜೊತೆಗೆ ಫ್ಯಾಮಿಲಿ ಒರಿಯೆಂಟೆಡ್ ಕಥಾನಕ ಇದರಲ್ಲಿದ್ದು ಪ್ರೇಕ್ಷಕರು ಸಿನಿಮಾ ಇಷ್ಟಪಡಲು ಬೇಕಾದ ಎಲ್ಲಾ ಅಂಶಗಳು ಸಿನಿಮಾದಲ್ಲಿ ಇರಲಿದೆ” ಎಂದು ಚಿತ್ರ ನಿರ್ದೇಶಕ ಗುರುತೇಜ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. “ಸಿನಿಮಾದಲ್ಲಿ ಕನ್ನಡದ ಖ್ಯಾತ ನಟರಾದ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: 2022-23ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕೊಡಮಾಡುವ 2022 ಮತ್ತು 2023ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಆರು ಮಂದಿ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. 2022ನೇ ಸಾಲಿನಲ್ಲಿ ಹಂಝತುಲ್ಲಾಹ್‌ ಕುವೇಂಡ ಬೆಂಗಳೂರು (ಬ್ಯಾರಿ ಭಾಷೆ ಮತ್ತು ಸಂಘಟನೆ), ಮರಿಯಮ್‌ ಇಸ್ಮಾಈಲ್‌ ಉಳ್ಳಾಲ (ಬ್ಯಾರಿ ಸಾಹಿತ್ಯ) ಮತ್ತು ಎಂ.ಜಿ. ಶಾಹುಲ್‌ ಹಮೀದ್‌ ಗುರುಪುರ

ಆ.31 ರಂದು ’ನವ್- ರಂಗ್’ ಎಡ್ಡಿ ಸಿಕ್ವೇರಾ ನಾಟಕ ಕೃತಿ ಬಿಡುಗಡೆ

ಹಿರಿಯ ರಂಗಕರ್ಮಿ, ನಿರೂಪಕ ಮತ್ತು ಚಿತ್ರ ಕಲಾವಿದ ಎಡ್ಡಿ ಸಿಕ್ವೇರಾ ಇವರ ಸಮಗ್ರ ರಂಗ ಕೃತಿಗಳ ಸಂಗ್ರಹ ‘ನವ್ ರಂಗ್’ ಶನಿವಾರ, ಆಗೋಸ್ತ್ 31 ರಂದು ಇಳಿಸಂಜೆ 6.00 ಕ್ಕೆ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂ| ಡಾ| ಪ್ರವೀಣ್ ಮಾರ್ಟಿಸ್ ಬಿಡುಗಡೆ ಮಾಡಲಿರುವರು. ಮೈಕಲ್ ಡಿ ಸೊಜಾ ಟ್ರಸ್ಟ್

ಬೈಂದೂರು : ಕೆಸರಲ್ಲೊಂದು ದಿನ ಗಮ್ಮತ್ ಕಾರ್ಯಕ್ರಮ

ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ನೇತೃತ್ವದಲ್ಲಿ ಕೆಸರಲ್ಲೊಂದು ದಿನ ಗಮ್ಮತ್ ಕಾರ್ಯಕ್ರಮವು ನೆಲ್ಯಾಡಿ ಬೈಲ್ & ಜೆ.ಎನ್.ಆರ್ ಹಾಲ್, ಯಡ್ತರೆ-ಬೈಂದೂರಿನಲ್ಲ ಅದ್ದೂರಿಯಾಗಿ ನಡೆಯಿತು. ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮನ ಉದ್ಘಾಟಿಸಿ ಮಾತನಾಡಿ, ಕುಂದಾಪ್ರ ಕನ್ನಡ ಕೇವಲ ಭಾಷೆಯಲ್ಲ ಅದು ಈ ನೆಲದ ಬದುಕು, ಸಂಸ್ಕೃತಿ ಆಚರಣೆಯ ಹೂರಣ. ಇದನ್ನು

ಕುಂದಾಪುರ: ಗಾಳ ಹಾಕಿ ಮೀನು ಹಿಡಿದ ಖ್ಯಾತ ನಟ ರಿಷಬ್ ಶೆಟ್ಟಿ

ಕುಂದಾಪುರ:ಕಾಂತಾರ ಸಿನೆಮಾದ ಮೂಲಕ ಮನೆ ಮಾತಾಗಿರುವ ಜನಪ್ರಿಯ ನಟ ರಿಷಬ್ ಶೆಟ್ಟಿ ಅವರು ಕುಂದಾಪುರ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವುದರ ಮುಖೇನ ಗಮನ ಸೆಳೆದಿದ್ದಾರೆ.ಕುರುಡಿ,ಕೆಂಬೇರಿ,ಕಲ್ಲ್ ಪೊಟರಿ,ಹೊಳೆ ಬೈಗಿ ಸೇರಿದಂತೆ ಇನ್ನಿತರ ಜಾತಿಯ ಮೀನುಗಳು ಅವರ ಗಾಳಕ್ಕೆ ಬಿದ್ದಿದ್ದು. ಗಾಳ ಹಾಕಿ ಮೀನು ಹಿಡಿಯುವುದರಲ್ಲಿಯೂ ಪಂಟರ್ ಎನಿಸಿಕೊಂಡಿದ್ದಾರೆ.ಬಾಲ್ಯದ

ಸುಳ್ಯ: ರಾಷ್ಟ್ರೀಯ ವಿಚಾರ ಸಂಕಿರಣದ ಆಮಂತ್ರಣ ಪತ್ರ ಹಾಗೂ ಕರಪತ್ರದ ಅನಾವರಣ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 2 ರಂದು ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕಿರಣದ ಆಮಂತ್ರಣ ಪತ್ರ ಹಾಗೂ ಕರಪತ್ರದ ಅನಾವರಣ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಹಾಗೂ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಆಮಂತ್ರಣ ಪತ್ರ ಹಾಗೂ ಕರಪತ್ರವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ

ಪುತ್ತೂರು : ಆಶೀರ್ವಾದ ಎಂಟರ್‌ಪ್ರೈಸೆಸ್ ನ 2.0 ಶುಭಾರಂಭ ಹಾಗೂ ಲೋಗೋ ಅನಾವರಣ

ಪುತ್ತೂರಿನ ದರ್ಬೆಯಲ್ಲಿರುವ ಆಶೀರ್ವಾದ ಎಂಟರ್‌ಪ್ರೈಸೆಸ್ ನ 2.0ದ ಶುಭಾರಂಭ ಹಾಗೂ ಲೋಗೋ ಅನಾವರಣ ಮತ್ತು ೧೬೦ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮವು ಅಗಸ್ಟ್ 25ರಂದು ಸಂಜೆ 3 ಗಂಟೆಗೆ ನಡೆಯಲಿದೆ. ಆಶೀರ್ವಾದ ಎಂಟರ್‌ಪ್ರೈಸಸ್ 2.0 ಶುಭಾರಂಭಗೊಳ್ಳಲಿದೆ. ಈ ಹಿಂದೆ ವಿನೂತನ ಹಾಗೂ ವಿಶೇಷ ಬಹುಮಾನಗಳನ್ನು ಗ್ರಾಹಕರಿಗೆ ನೀಡುತ್ತಿದ್ದ ಆಶೀರ್ವಾದ ಎಂಟರ್

ಟೋಲ್ ಗೇಟ್ ಬಗ್ಗೆ ಶಾಶ್ವತ ರದ್ಧತಿ ಪತ್ರ ಕೈ ಸೇರುವವರಗೆ ಹೋರಾಟ ನಿರಂತರ:ಆ.24ರಂದು ಹತ್ತು ಸಾವಿರಕ್ಕೂ ಅಧಿಕ ಮಂದಿ ಸೇರಿ ಪ್ರತಿಭಟನೆ

ಪಡುಬಿದ್ರಿ-ಬೆಳ್ಮಣ್-ಕಾರ್ಕಳ ಟೋಲ್ ಹೋರಾಟ ವಿರೋಧಿ ಸಮಿತಿಯ ವತಿಯಿಂದ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ನಡೆಯಲು ಉದ್ಧೇಶಿಸಿದ ಟೋಲ್ ಗೇಟ್ ವಿರೋಧಿ ಹೋರಾಟವು ಯಾವುದೇ ಗೊಂದಲಗಳಿಲ್ಲಿದೆ ಅ.24ರಂದು ನಿರ್ಧರಿಸಿದಂತೆ ನಡೆಯಲಿದೆ ಎಂಬುದಾಗಿ ಸಮಿತಿ ಕಾರ್ಯದರ್ಶಿಯೂ ನ್ಯಾಯಾವಾದಿಯೂ ಆದ ಸರ್ವಜ್ಞ ತಂತ್ರಿ ಸ್ಪಷ್ಟ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೇರೆ

ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಓರಿಯಂಟೇಶನ್ ಕಾರ್ಯಾಗಾರ

ಬ್ರಹ್ಮಾವರ :ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಾಗಾರ ನಡೆಯಿತು. ಇಂದಿನ ಪ್ರಪಂಚದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹೆಚ್ಚಿನ ಶ್ರಮವಹಿಸಬೇಕಾಗಿದೆ. ಕಾಲಹರಣ ಮತ್ತು ಕೆಟ್ಟ ಅಭ್ಯಾಸಗಳಿಗೆ ತೊಡಗದೆ ವಿಚಾರಶೀಲವಾಗಿರಬೇಕೆಂದು ಹಾಗೂ ಹೆಚ್ಚು ಸಮಯ ಕಲಿಕೆಗಾಗಿ ಮೀಸಲಾಗಿರಬೇಕೆಂದು