Home 2024 (Page 4)

ಮಂಗಳೂರು : ಡಿ.14ರಂದು ಉಚಿತ ವೃತ್ತಿ ಜಾಗೃತಿ ಕಾರ್ಯಾಗಾರ

ಭಾರತದ ಟ್ರೆಂಡಿಂಗ್ ಕೆರಿಯರ್ ಗೈಡೆನ್ಸ್ ಪ್ಲಾಟ್ಫಾರ್ಮ್ ಮತ್ತು ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ಸಹಯೋಗದೊಂದಿಗೆ “ಡ್ರಾ ಮೈ ಕೆರಿಯರ್” ವೃತ್ತಿ ಜಾಗೃತಿ ಕಾರ್ಯಾಗಾರವು ಡಿ.14 ರಂದು ನಗರದ ಐಎಂಎ ಸಭಾಂಗಣದಲ್ಲಿ ನಡೆಸುತ್ತಿದೆ.ಕಾರ್ಯಾಗಾರವು 9,10, ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಅಭಿರುಚಿಯನ್ನು

ಮಾಜೀ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನ

ಕರ್ನಾಟಕದ ಮಾಜೀ ಮುಖ್ಯಮಂತ್ರಿ ಹಾಗೂ ಭಾರತದ ವಿದೇಶಾಂಗ ಸಚಿವರಾಗಿದ್ದ ಸೋಮನಹಳ್ಳಿ ಮಲ್ಲಪ್ಪ ಕೃಷ್ಣ ಅವರು ಮುಂಜಾವ ಎರಡೂವರೆ ಗಂಟೆಗೆ ಬೆಂಗಳೂರು ಸದಾಶಿವನಗರದ ಸ್ವಗೃಹದಲ್ಲಿ ನಿಧನರಾದರು. ಕೃಷ್ಣರ ತಂದೆ ಸೋಮನಹಳ್ಳಿ ಮಲ್ಲಪ್ಪನವರು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಶಾಸನ ಸಭೆಯ ಸದಸ್ಯರಿದ್ದರು. ವಿದೇಶದಲ್ಲಿ ಶಿಕ್ಷಣ ಮುಗಿಸಿದ ಕೃಷ್ಣ ಅವರು ದೇಶಕ್ಕೆ ಹಿಂತಿರುಗಿ

ವಿಟ್ಲ: ಜೋಕಾಲಿಗೆ ಕುತ್ತಿಗೆ ಸಿಲುಕಿ ಬಾಲಕಿ ಸಾವು

ವಿಟ್ಲ: ಆಟವಾಡುತ್ತಿದ್ದ ವೇಳೆ ಜೋಕಾಲಿಗೆ ಕುತ್ತಿಗೆ ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಇದೊಂದು ಆತ್ಮಹತ್ಯೆ ಎಂದು ತಿಳಿದು ಬಂದಿದೆ ಈ ಬಗ್ಗೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೇರಾ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಮಡಲ ನಿವಾಸಿ ಕಿಶೋರ್ ರವರ ಪುತ್ರಿ ತೀರ್ಥಶ್ರೀ (8) ಮೃತಪಟ್ಟ ಬಾಲಕಿ. ಯಾವ ಕಾರಣಕ್ಕೆ

ಶಯದೇವಿಸುತೆ ಮರವಂತೆಯವರ ಮುಡಿಗೇರಿದ,“ಕರ್ನಾಟಕ ಸಾಧಕ ರತ್ನ ಪ್ರಶಸ್ತಿ

ಶ್ರೀ ಮಹಾದೇವ ಎಜುಕೇಷನ್, ಆರ್ಟ್ & ಕಲ್ಚರಲ್ ಟ್ರಸ್ಟ್(ರಿ.) ಬಳ್ಳಾರಿ, ಜೆ.ಟಿ. ಫೌಂಡೇಷನ್ ಮತ್ತು ಶ್ರೀ ಎಸ್.ಆರ್.ಎಂ. ಸೇವಾ ಸಂಸ್ಥೆ(ರಿ.) ಬಳ್ಳಾರಿ ಹಾಗೂ, ಅಖಿಲ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮಿತಿ ಬಳ್ಳಾರಿ – ಇವರ ಸಹಯೋಗದಲ್ಲಿ, “ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ” ವು 2024, ನವೆಂಬರ್ 30 ಹಾಗೂ

ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ – ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ

 ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ,  ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ, ಐಕ್ಯೂಎಸಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಮಟ್ಟದ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ -2024 ದಿನಾಂಕ 05.12.2024 ರಂದು ಕಾಲೇಜಿನ ಸಭಾಂಗಣದಲ್ಲಿ   ನಡೆಯಿತು.  ಕರ್ನಾಟಕ ಅರೆ ಭಾಷೆ

ಮೂಡುಬಿದಿರೆ : ದ್ವಿಚಕ್ರ ವಾಹನದಿಂದ ಬಿದ್ದು ಸಂಶಯಾಸ್ಪದ ಸಾವು

ಮೂಡುಬಿದಿರೆ : ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ಗುರುವಾರ ಸಂಜೆ ಬೈಕ್‌ನಿಂದ ಬಿದ್ದು ಚಿನ್ನದ ಕೆಲಸಗಾರ, ತೋಡಾರು ಗ್ರಾಮದ ಸೀತಾರಾಮ ಆಚಾರ್ಯ(49) ಮೃತಪಟ್ಟಿದ್ದು ಪೋಲಿಸರು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.ಮೂಡುಬಿದಿರೆ ಜ್ಯೋತಿನಗರದಲ್ಲಿ ಚಿನ್ನದ ವೃತ್ತಿಗೆ ಸಂಬಂಧಿಸಿದ ವಿಘ್ನೇಶ್ ಮೆಷಿನ್ ಕಟ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದು

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ವಿಟ್ಲ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಓಂ ಸಾಯಿ ಇಂಡಸ್ಟ್ರೀಸ್ ನ ಮಾಲಕ ಬದನಾಜೆ ನಿಡ್ಯ ನಿವಾಸಿ ದಾಮೋದರ್ ಪೂಜಾರಿ (60) ಎಂದು ಗುರುತಿಸಲಾಗಿದೆ. ಮೃತರು ಇಬ್ಬರು ಮಕ್ಕಳನ್ನು ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ

ಕುಂಜತ್ ಬೈಲ್ ರಸ್ತೆ ಕಾಮಗಾರಿ ಗುದ್ದಲಿ ಪೂಜೆ

ವಾರ್ಡ್ -15 ಕುಂಜತ್ ಬೈಲ್ ದಕ್ಷಿಣದಲ್ಲಿ 39 ಲಕ್ಷ ಮೊತ್ತದ ರಸ್ತೆ ಕಾಮಗಾರಿ ಅಭಿವೃದ್ಧಿಗೆ ಗುದ್ದಲಿ ಪೂಜೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿ ಯವರು ನೆರವೇರಿಸಿದರು. ವಾರ್ಡ್ ವ್ಯಾಪ್ತಿಯ ಗಾಂಧಿನಗರ ಅಡ್ಡರಸ್ತೆ 20 ಲಕ್ಷ, ಗಾಂಧಿನಗರ – ಪಳನೀರು ರಸ್ತೆ -ಕಾಲೇಜು ಅಭಿವೃದ್ಧಿ ರಸ್ತೆ 10 ಲಕ್ಷ, ಗಾಂಧಿನಗರ ಪ್ರಮೋದ್ ಮನೆ ಬಳಿ ಇಂಟರ್ ಲಾಕ್ ವ್ಯವಸ್ಥೆ

ಚಿತ್ರಾಪುರ:ಶ್ರೀ ಕೃಷ್ಣ ಬಾಲಾಂಜನೇಯ ಮಂದಿರ ಹಾಗೂ ಬೊಬ್ಬರ್ಯ ಬಂಟ ದೈವದ ಧರ್ಮ ಚಾವಡಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಚಿತ್ರಾಪುರ: ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡ ಶ್ರೀ ಕೃಷ್ಣ ಬಾಲಾಂಜನೇಯ ಮಂದಿರ ಹಾಗೂ ಬೊಬ್ಬರ್ಯ ಬಂಟ ದೈವದ ಧರ್ಮ ಚಾವಡಿ,ರಂಗ ಮಂದಿರ ದ ಉದ್ಘಾಟನೆ ಮತ್ತು ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ, ಶಾಸಕರಾದ ಡ.ಭರತ್ ಶೆಟ್ಟಿ ವೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5 ನೇ జిಲ್ಲಾ ಸಮ್ಮೇಳನ

ಮಂಗಳೂರು: ಪೇಯ್ಡ್ ನ್ಯೂಸ್ ಸಂಸ್ಕೃತಿ ಪತ್ರಿಕೋದ್ಯಮದ ಪಾವಿತ್ರ್ಯತೆಗೆ ಧಕ್ಕೆ ತರುವ ಅಪಾಯ ಇದೆ. ಸತ್ಯ ಸಂಗತಿಗಳನ್ನು ಮರೆಮಾಚುವ ಮತ್ತು ಸುಳ್ಳನ್ನು ವೈಭವೀಕರಿಸುವ ಸ್ಥಿತಿ ಉಂಟಾಗಿದೆ ಎಂದು ಮೂಡಬಿದಿರೆ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ‌ ದಕ್ಷಿಣ ಕನ್ನಡ ಜಿಲ್ಲಾ