Home 2024 (Page 41)

ಮೂಡುಬಿದಿರೆ: ಕಾಲು ಜಾರಿ ಬಿದ್ದು ಸಮಾಜ ಮಂದಿರ ಸಭಾದ ವಾಚ್ ಮೆನ್ ಸಾವು

ಮೂಡುಬಿದಿರೆಯ ಸಮಾಜ ಮಂದಿರ ಸಭಾದಲ್ಲಿ ವಾಚ್ ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಕುಮಾರ್ ಹೆಗ್ಡೆ (56 ವ) ಅವರು ಬಿಪಿ ಹೈ ಆಗಿ ಸೋಮವಾರ ಬೆಳಿಗ್ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕೊಕ್ರಾಡಿಯ ನಿವಾಸಿ ಸುಕುಮಾರ್ ಹೆಗ್ಡೆ ಅವರು ಕಳೆದ 5 ವರ್ಷಗಳಿಂದ ಸಮಾಜ ಮಂದಿರದಲ್ಲಿ ವಾಚ್ ಮೆನ್ ಆಗಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದು, ಹಗಲಿನಲ್ಲಿ ಬೇರೆ

ಮಂಗಳೂರು: ಸ್ಪೀಕರ್ ಯು.ಟಿ. ಖಾದರ್ ಅವರಿಗೆ ತುಳು ಅಕಾಡೆಮಿಯಿಂದ ಸನ್ಮಾನ

ಕರ್ನಾಟಕ ವಿಧಾನಸಭೆಯಲ್ಲಿ ತುಳು ಭಾಷೆಯನ್ನು ಮಾತನಾಡಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಂಗಳೂರಲ್ಲಿ ಸನ್ಮಾನಿಸಿದರು. ಖಾದರ್ ಅವರಿಗೆ ಸಾಲು ಹಾಗೂ ಪುಸ್ತಕ ಮತ್ತು ಸ್ಮರಣಿಕೆ ನೀಡಿ, ಅಭಿನಂದಿಸಿದರು. ಈ ವೇಳೆ ತುಳು ಸಾಹಿತ್ಯ

ಪ್ಯಾರಿಸ್ ಒಲಿಂಪಿಕ್ಸ್ : ಶೂಟರ್ ಮನು ಭಾಕರ್‌ಗೆ ಕಂಚು

ಪ್ಯಾರಿಸ್ ಒಲಿಂಪಿಕ್ಸ್​ನ ಎರಡನೇ ದಿನ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಈ ಮಹಾ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳ್ಳೊಡಿದ್ದಾರೆ. ಈ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ

ಮುಂದಿನ ಪೀಳಿಗೆಗಾಗಿ ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವ ಪರಿಸರ ಜಾಗೃತಿ ಕಾರ್ಯಕ್ರಮಗಳು ಅತೀ ಅವಶ್ಯಕ – ರೊ. ಹರೀಶ್ ಶೆಟ್ಟಿ

ಭಾರತ ಸರಕಾರ ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ10ನೇ ತೋಕೂರು, ಶ್ರೀ ಜಾರಂದಾಯ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಹರಿಪಾದೆ, ಡಾ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆ ತಪೋವನ ತೋಕೂರು ಇವರ ಜಂಟಿ ಆಶ್ರಯದಲ್ಲಿ ಮೇಬೈಲು ಸದಾಶಿವ

ಶ್ರೀಮಹಾಗಣಪತಿ ಸೇವಾ ಸಮಿತಿ ಗುಡ್ಡೆ ಹೋಟೆಲ್ ನಾಡ : ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಲೋಕೇಶ್ ಕಾಂಚನ್ ಅಯ್ಕೆ

ಕಳೆದ 12 ವರ್ಷಗಳಿಂದ ಸಾರ್ವಜನಿಕ ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿಯಿಂದ ಹಲವಾರು ಜನಪರ ಹಾಗೂ ಸಮಾಜಮುಖಿ ಕೆಲಸ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇತ್ತಿಚೆಗೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಶಿರೂರು, ಮುದ್ದು ಮನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು

ಪ್ಯಾರಿಸ್ ಒಲಿಂಪಿಕ್: ಬಾಕ್ಸಿಂಗ್  ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್ಫೈನಲ್ಗೆ

ಪ್ಯಾರಿಸ್ ಒಲಿಂಪಿಕ್‌ ಕ್ರೀಡಾಕೂಟದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶನಿವಾರ ರಾತ್ರಿ ನಡೆದ ಪೈಪೋಟಿಯಲ್ಲಿ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ಎದುರು ಪ್ರಾಬಲ್ಯ ಮೆರೆದ ಪ್ರೀತಿ,  5–0 ಅಂತರದ ಗೆಲುವು ಸಾಧಿಸಿದ್ದಾರೆ.ಏಷಿಯನ್‌ ಗೇಮ್ಸ್‌ ಕಂಚಿನ

ಸಂಕಷ್ಟ ಪರಿಹಾರ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಕೊರಗಜ್ಜ ದೈವದ ಮೊರೆ ಹೋದ ಶಾಸಕ ವಿನಯ್ ಕುಲಕರ್ಣಿ!

ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿಯಿಂದ ಸಂಕಷ್ಟ ಪರಿಹಾರ ಹಾಗೂ  ಇಷ್ಟಾರ್ಥ ಸಿದ್ಧಿಗಾಗಿ ಕೊರಗಜ್ಜ ದೈವಕ್ಕೆ ಹರಕೆ ಕೋಲ ಸೇವೆಯು ಶನಿವಾರದಂದು ನಡೆಯಿತು. ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಇವರು ಚುನಾವಣಾ ಪೂರ್ವದಲ್ಲಿಯೇ

ಪುತ್ತೂರು: ಪತಿಯಿಂದ ಪತ್ನಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು

ಪುತ್ತೂರು : ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚೂರಿಯಿಂದ ಇರಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ ಗ್ರಾಮದ ಕಣಿಯಾರು ಗ್ರಾಮದ ಜೋರುಕಟ್ಟೆ ಎಂಬಲ್ಲಿ ನಡೆದಿದೆ. ಜೋರುಕಟ್ಟೆ ನಿವಾಸಿ ಮೊಹಮ್ಮದ್ ಎಂಬವರ ಪುತ್ರಿ ಸಜರಾ (40) ಹಲ್ಲೆಗೊಳಗಾದವರು. ಆಕೆಯ ಪತಿ ಮಡಂತ್ಯಾರು ಸಮೀಪದ ಕೊಲತ್ತಬೈಲು ಮಾಲಾಡಿ ನಿವಾಸಿ ಹಕೀಂ ಎಂಬಾತ ಹಲ್ಲೆ ನಡೆಸಿರುವುದಾಗಿ

ಕಾರ್ಕಳ: ಗ್ಯಾಸ್ ಸಿಲಿಂಡ್ ಸ್ಫೋಟ, ಅಪಾಯದಿಂದ ಮನೆಮಂದಿ ಪಾರು

ಕಾರ್ಕಳದ ಪುಲ್ಕೇರಿ ಬೈಪಾಸ್ ಬಳಿಯ ಕಟ್ಟಡವೊಂದರ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ವಸತಿಗೃಹದ ಹೊರಾಂಗಣದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ರಾತ್ರಿ 11.30ರ ವೇಳೆಗೆ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಮನೆಯ ಗೋಡೆ, ಬಾಗಿಲು ಸಂಪೂರ್ಣ ನುಚ್ಚು ನೂರಾಗಿದೆ. ಫ್ಲ್ಯಾಟ್ ನ ಒಳಗಿರುವ ಪೀಠೋಪಕರಣಗಳು, ಬಟ್ಟೆಬರೆ,

ಕೈಗಾರಿಕಾ ಕಂಪನಿಗಳನ್ನು ಸರಕಾರದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸುವಂತೆ ಸುಳ್ಯ ಶಾಸಕರಿಂದ ಸಚಿವರಿಗೆ ಮನವಿ

ಕಾಣಿಯೂರು: ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗಾರಿಕಾ ಕಂಪನಿಗಳನ್ನು ಸರಕಾರದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸುವಂತೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ರಾಜ್ಯ ಬೃಹತ್ ಕೈಗಾರಿಕಾ ಮಂತ್ರಿ ಎಂ ಬಿ ಪಾಟೀಲ್ ಅವರಿಗೆ ಬೇಡಿಕೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸರಕಾರದ ಪಶುಸಂಗೋಪನ ಸಚಿವರಾದ k ವೆಂಕಟೇಶ್ ಅವರನ್ನು ಭೇಟಿಯಾಗಿ