Home 2025 February (Page 6)

ಪುತ್ತೂರು : ಬೈಕ್, ರಿಕ್ಷಾ ಅಪಘಾತ – ಗಂಭೀರ ಗಾಯಗೊಂಡ ಬೈಕ್ ಸವಾರ ಸಾವು

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ಫೆ.4ರಂದು ರಾತ್ರಿ ಬೈಕ್ ಮತ್ತು ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.ಕೆಮ್ಮಿಂಜೆ ಬೈಲು ದಿ.ಪುರುಷೋತ್ತಮ ಎಂಬವರ ಪುತ್ರ ಚೇತನ್(46ವ)ರವರು ಮೃತಪಟ್ಟವರು. ಘಟನೆಯಿಂದ ಬೈಕ್‍ನಲ್ಲಿ ಸಹಸವಾರ ಮನೀಷ್(10ವ)ರವರು

ಧರ್ಮಸ್ಥಳ ಗ್ರಾ.ಯೋ.ವತಿಯಿಂದ ‘ವಾತ್ಸಲ್ಯ’ ಮನೆ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಮೂಡುಬಿದಿರೆ ವತಿಯಿಂದ ವಾಲ್ಪಾಡಿ ಗ್ರಾಮದ ಶ್ರೀಮತಿ ಬಿಜಿಲು ಎಂಬವರಿಗೆ ನಿರ್ಮಿಸಲಾದ ‘ವಾತ್ಸಲ್ಯ’ ಮನೆ ಹಸ್ತಾಂತರ ಕಾರ್ಯಕ್ರಮವು ನಡೆಯಿತು. ಯೋಜನೆಯ ಟ್ರಸ್ಟಿ,ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ ಅವರು ದೀಪ ಬೆಳಗಿಸಿ ಉದ್ಘಾಟಿಸಿ ‘ ಸಮಾಜದಲ್ಲಿ

ಮಂಗಳೂರು : ಬಾಯಿ ಕ್ಯಾನ್ಸರ್ ಮಾಹಿತಿ ಶಿಬಿರ ಮತ್ತು ತಪಾಸಣಾ ಶಿಬಿರ

ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್ ಗಳು ತಡೆಗಟ್ಟಬಹುದಾದ ರೋಗವಾಗಿದ್ದು, ತಂಬಾಕು ಉತ್ಪನ್ನಗಳನ್ನು ಬಳಸದೇ ಇದ್ದಲ್ಲಿ ಖಂಡಿತವಾಗಿಯೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 90 ರಷ್ಟು ಕ್ಷೀಣಿಸುತ್ತದೆ. ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್ ಗಳು ತಂಬಾಕು ಉತ್ಪನ್ನಗಳಾದ ಗುಟ್ಕಾ, ಪಾನ್ ಪರಾನ್, ಬೀಡಿ, ಸಿಗರೇಟುಗಳ ದುರ್ಬಳಕೆಯಿಂದ ಬರುತ್ತದೆ. ಇದನ್ನು

ಫೆ.6ರಂದು ರಾಜ್ಯ ಸರ್ಕಾರದ ವಿರುದ್ಧ ಕಾರ್ಕಳದಲ್ಲಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಭ್ರಷ್ಟರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ,ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಕಾರ್ಕಳ ಬಿಜೆಪಿ ನೇತೃತ್ವದಲ್ಲಿ ಫೆ.6ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ನಿರಂತರವಾಗಿ ಎಲ್ಲಾ ವಿಭಾಗಗಳಲ್ಲೂ ಬೆಲೆ ಏರಿಕೆಯನ್ನು ನಡೆಸುತ್ತಲೇ ಇದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ

ಪುತ್ತೂರು: ಕಂಪೌಂಡರ್ ನರಸಿಂಹ ಭಟ್ ಅಸ್ತಂಗತ

ಪುತ್ತೂರು: ‘ದಾಲ ಪೊಡ್ಯೋರ್ಚಿ ಪೂರ ಕಮ್ಮಿ ಆಪುಂಡು ಹಹಹ’ ಎಂದೇ ಪುತ್ತೂರು ಸಹಿತ ಹತ್ತೂರಿನ ಜನಮನ ಗೆದ್ದ ನಗುಮೊಗದ ಕಂಪೌಂಡರ್ ಡಾಕ್ಟರ್ ಎಂದೇ ಖ್ಯಾತರಾದ ಹಾರಾಡಿ ನಿವಾಸಿ ಕಂಪೌಂಡರ್ ನರಸಿಂಹ ಭಟ್ (82ವ) ಅವರು ಫೆ.3 ರ ರಾತ್ರಿ ಅಸ್ತಂಗತರಾಗಿದ್ದಾರೆ. ತನ್ನ 16ನೇ ವಯಸ್ಸಿನಿಂದ ಪುತ್ತೂರಿನ ಚಿಕಿತ್ಸಾಲಯವೊಂದರಲ್ಲಿ ಕಾಂಪೌಂಡ‌ರ್ ಆಗಿ 68 ವರ್ಷ ಸೇವೆ

ಮೂಡುಬಿದಿರೆ:ಗ್ರಾ. ಪಂ. ಸದಸ್ಯ ವಾಸು ಗೌಡ ನಿಧನ

ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಗ್ರಾ. ಪಂಚಾಯತ್ ಸದಸ್ಯ ವಾಸು ಗೌಡ ಗುಡ್ಡೆಯಂಗಡಿ ಅವರು ಇಂದು ಬೆಳಿಗ್ಗೆ ಹೃದಯಾಘಾತಕ್ಕೊಳಗಾಗಿ ಸ್ವಗೃಹದಲ್ಲಿ ನಿಧನ ಹೊಂದಿದರು.ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಅವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

ಉಡುಪಿ : ಫೆ.04ರಂದು ಮಹತಿ ಎಂಟರ್‌ಪ್ರೈಸಸ್ ಪವರ್ ಟ್ರೋನಿಕ್ ಸಿಸ್ಟಮ್ ಸೊಲಾರ್ & ಯುಪಿಎಸ್ ಸೊಲ್ಯೂಷನ್ಸ್‌ನ ಉದ್ಘಾಟನೆ

ಉಡುಪಿ : ಉಡುಪಿ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಎದುರು ಶ್ರೀ ವಾಸುದೇವ ಬಿಲ್ಡಿಂಗ್‌ನ ನೆಲ ಮಹಡಿಯಲ್ಲಿ ಮಹತಿ ಎಂಟರ್‌ಪ್ರೈಸಸ್ ಪವರ್ ಟ್ರೋನಿಕ್ ಸಿಸ್ಟಮ್ ಸೊಲಾರ್ & ಯುಪಿಎಸ್ ಸೊಲ್ಯೂಷನ್ಸ್‌ನ ಉದ್ಘಾಟನಾ ಸಮಾರಂಭವು ಫೆ.04ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ರಜತಪೀಠಪುರ ಪೇಜಾವರ ಅಧೋಕ್ಷಜ ಮಠದ ಪರಮ ಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

ಸುಳ್ಯ: ಕೆಳ ಮತ್ತು ಮಧ್ಯಮ ವರ್ಗಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ – ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ ಸದಾಶಿವ

ಕೆಳ ಮತ್ತು ಮಧ್ಯಮ ವರ್ಗದ ಜನರ ಏಳಿಗೆಯ ದೃಷ್ಠಿಯಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ. ಅಟಲ್ ಟಿಂಕರ್ ಲ್ಯಾಬ್‌ಗಳನ್ನು ಶಾಲೆಗಳಿಗೆ ವಿಸ್ತರಿಸಿರುವುದು, ಆದಾಯ ತೆರಿಗೆ ಪಾವತಿಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿರುವುದು, ಕಿಸಾನ್ ಕೆಡಿಟ್‌ನ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದು ಜೊತೆಗೆ ಪ್ರತಿ ಜಿಲ್ಲಾ

ಮಂಗಳೂರು: ಕೋಸ್ಟ್‌ಗಾರ್ಡ್ ನಿಂದ ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ : ರಾಜ್ಯಪಾಲ ಗೆಹ್ಲೋಟ್ ಉಪಸ್ಥಿತಿ

ಭಾರತೀಯ ಕೋಸ್ಟ್‌ಗಾರ್ಡ್ ನ 49ನೆ ರೈಸಿಂಗ್ ಡೇಯ ಅಂಗವಾಗಿ ನಡೆದ ‘ಡೇ ಎಟ್ ಸೀ’ ಎಂಬ ಕೋಸ್ಟ್ ಗಾರ್ಡ್‌ನಿಂದ ಶೌರ್ಯದ ಅಣುಕು ಪ್ರದರ್ಶನ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ  ನಡೆಯಿತು. ಸಮುದ್ರ ಮಧ್ಯೆ ಹಡಗುಗಳಲ್ಲಿ ಸಂಭವಿಸುವ ಅನಾಹುತ, ಕಡಲ್ಗಳ್ಳರ ಪತ್ತೆ, ಅಪಾಯಕ್ಕೆ ಸಿಲುಕುವ

ಮಂಗಳೂರು : ಚೀನಾದ ಹಾರ್ಬಿನ್‌ನಲ್ಲಿ ನಡೆಯಲಿರುವ ಏಷ್ಯಾನ್ ವಿಂಟರ್ ಗೇಮ್ಸ್-2025: ಐಸ್ ಸ್ಕೇಟಿಂಗ್‌ಗೆ ಆಯ್ಕೆಯಾದ ಡೇನಿಯಲ್, ಡ್ಯಾಶಿಯಲ್

ಚೀನಾದ ಹಾರ್ಬಿನ್‌ನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಏಷ್ಯನ್ ವಿಂಟರ್ ಗೇಮ್ಸ್ 2025ಕ್ಕೆ ಮಂಗಳೂರಿನ ಡೇನಿಯಲ್ ಕಾನ್ಸೆಸಾವೊ ಮತ್ತು ಡ್ಯಾಶಿಯಲ್ ಕಾನ್ಸೆಸಾವೊ ಅವರು ಟೀಮ್ ಇಂಡಿಯಾ-ಐಸ್ ಸ್ಕೇಟಿಂಗ್‌ಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಜಿಲ್ಲೆಯಲ್ಲಿ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡುವವರು ಅನೇಕರಿದ್ದಾರೆ. ಅದೇ ಸಾಲಿಗೆ ಮಂಗಳೂರಿನ ಸಹೋದರ ಮತ್ತು