ರೆಮಲ್ ಚಂಡಮಾರುತದ ಕಾರಣದಿಂದಾಗಿ ಮಿಜೋರಾಂ, ಅಸ್ಸಾಂಗಳಲ್ಲೂ ಭಾರೀ ಮಳೆ ಹಾಗೂ ಭೂಕುಸಿತದಿಂದ 31 ಮಂದಿ ಮರಣ
ರೆಮಲ್ ಚಂಡಮಾರುತದ ಕಾರಣದಿಂದಾಗಿ ಮಿಜೋರಾಂ, ಅಸ್ಸಾಂಗಳಲ್ಲೂ ಭಾರೀ ಮಳೆ ಹಾಗೂ ಭೂಕುಸಿತದಿಂದ 31 ಮಂದಿ ಮರಣ ಹೊಂದಿದ್ದಾರೆ.
ಮಿಝೋರಾಂನಲ್ಲಿ 27 ಮತ್ತು ಅಸ್ಸಾಂನಲ್ಲಿ ನಾಲ್ವರು ಮೃತರಾಗಿದ್ದಾರೆ. ಐಜ್ವಾಲ್ ಹೊರವಲಯದ ಗಣಿ ಕುಸಿತದಲ್ಲಿ ಹದಿನಾಲ್ಕು ಜನರು ಸತ್ತಿದ್ದಾರೆ. ಲಿಮೆನ್, ಸಲೇ, ಫ್ಯಾಲಗ್, ಬಬಾಲ್ ಮೊದಲಾದ ಕಡೆ 13 ಜನ ಎಂದು 27 ಮಂದಿ ಮರಣಿಸಿದ್ದಾರೆ. ಐಜ್ವಾಲ್ ಗಣಿ ಕುಸಿತದಲ್ಲಿ 12 ಮಂದಿ ನಾಪತ್ತೆಯಾಗಿದ್ದು, ಕುಸಿದ ಮಣ್ಣುಗಳಡಿ ಅವರಿಗಾಗಿ ಹುಡುಕಾಟ ನಡೆದಿದೆ.

ಅಸ್ಸಾಂನಲ್ಲಿ ನಾಲ್ವರು ಮಳೆ, ಭೂಕುಸಿತಕ್ಕೆ ಸತ್ತಿದ್ದಾರೆ. ಒಬ್ಬ ವಿದ್ಯಾರ್ಥಿ ಸಾವು ಕಂಡಿದ್ದಾನೆ. ಹವಾಮಾನ ತೀವ್ರವಾಗಿರುವಾಗ ಶಾಲೆಗೆ ರಜೆ ಕೊಡದಿರುವವರ ಬಗೆಗೆ ಸಾಕಷ್ಟು ಟೀಕೆ ಕೇಳಿ ಬಂದಿದೆ.


















