Home Articles posted by v4team (Page 157)

ಲಾರಿ ಮಾಲಕರು – ಟ್ರಾನ್ಸ್‌ಪೋರ್ಟರ್ಸ್ ನಡುವೆ ಸಂಧಾನ ವಿಫಲ : ಸೆ.29 ರಿಂದ ಲಾರಿ ಮುಷ್ಕರ

ಮಂಗಳೂರು : ಇಲ್ಲಿನ ಪಣಂಬೂರು ಪೊಲೀಸ್ ಉಪ ಆಯುಕ್ತರ ಕಚೇರಿಯಲ್ಲಿ ಸೆ.27 ರಂದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಲಾರಿ ಮಾಲಕರು ಹಾಗೂ ಟ್ರಾನ್ಸ್‌ಪೋರ್ಟರ್ಸ್ ನಡುವೆ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಸೆ.29 ರ ಶುಕ್ರವಾರದಿಂದ ಲಾರಿ ಮುಷ್ಕರ ನಡೆಯಲಿದೆ. ಸಭೆಯ ಬಳಿಕ ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ ಮಾತನಾಡಿ ‘ಲಾರಿ ಮಾಲಕರ

ಸುಳ್ಯ: ಕೆವಿಜಿ ಶಿಕ್ಷಣ ಸಂಸ್ಥೆಗಳ ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣ: 6 ಮಂದಿ ದೋಷಿಗಳೆಂದು ಹೈಕೋರ್ಟ್ ತೀರ್ಪು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ.ಎಸ್. ರಾಮಕೃಷ್ಣ ಅವರ ಹತ್ಯೆ ಪ್ರಕರಣದ ತೀರ್ಪನ್ನು ರಾಜ್ಯ ಹೈ ಕೊರ್ಟು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಡಾ.ರೇಣುಕಾ ಪ್ರಸಾದ್ ಸೇರಿದಂತೆ 6 ಮಂದಿಯನ್ನು ದೋಷಿಗಳು ಎಂದು ತೀರ್ಮಾನಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. 2011ರ ಏಪ್ರಿಲ್ ತಿಂಗಳಿನಲ್ಲಿ ಎ.ಎಸ್. ರಾಮಕೃಷ್ಣ ಸುಳ್ಯ ನಗರದ ರಸ್ತೆಯೊಂದರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ

ಉಳ್ಳಾಲ: ಬೆಳ್ಮ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ

ಉಳ್ಳಾಲ: ಬೆಳ್ಮ ಗ್ರಾಮ ಪಂಚಾಯಿತಿ ವರ್ಷದಲ್ಲಿ ಸಾಧಿಸಿದ ಜೀವನ ಗುಣಮಟ್ಟ, ಸ್ವಂತ ಸಂಪನ್ಮೂಲ ಕ್ರೋಢೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಆಡಳಿತ, ಸೇವಾ ಪೂರೈಕೆ ಮತ್ತು ನಾವೀನ್ಯತೆ ಯೋಜನೆಗಳ ಸಹಿತ ಸರಕಾರದ 138 ಪ್ರಶ್ನೆಗಳಿಗೆ ಯಶಸ್ವಿಯಾಗಿ ಪ್ರತಿಕ್ರಿಯಿಸಿದ ಫಲವಾಗಿ 2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಉಳ್ಳಾಲ ತಾಲೂಕಿನಿಂದ ಬೆಳ್ಮ ಗ್ರಾ.ಪಂ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿದೆ. 2002ರಲ್ಲಿ ಬಯಲು

ಇರಾ ಯುವಕ ಮಂಡಲ : ಸೌಹಾರ್ದತೆಗೆ ಸಾಕ್ಷಿಯಾದ ಈದ್‍ಮಿಲಾದ್ ಆಚರಣೆ

ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನವಾದ ಇಂದು ಈದ್ ಮಿಲಾದ್ ಹಬ್ಬವಾಗಿ ಆಚರಿಸುತ್ತಿದ್ದು, ಇರಾದಲ್ಲಿಯೂ ಮುಸ್ಲಿಂ ಬಾಂಧವರು ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಸೌಹಾರ್ದತೆಗೆ ಸಾಕ್ಷಿಯಾದ ಇರಾದ ಯುವಕ ಮಂಡಲ ಮತ್ತು ಸುವರ್ಣ ಮಹೋತ್ಸವ ಸಮಿತಿಯ ಸದಸ್ಯರು ಮಿಲಾದ್ ರ್ಯಾಲಿಯಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರಿಗೆ ಶುಭಾಶಯಕೋರಿದ್ದು, ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಇರಾ ಯುವಕ ಮಂಡಲದ ಕಾರ್ಯದರ್ಶಿ ಜಯರಾಜ್ ಶೆಟ್ಟಿ

ಹಾಸನ: ಕರ್ನಾಟನ ಬಂದ್‍ಗೆ ನಮ್ಮ ಬೆಂಬಲ ಇದೆ: ಶಾಸಕ ಸಿಮೆಂಟ್ ಮಂಜು

ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಹೇಳಿದರು. ಅವರು ಹಾಸನದಲ್ಲಿ ಮಾತನಾಡಿ, ಆಡಳಿತರೂಡ ಸರ್ಕಾರ ವಕೀಲರನ್ನು ಇಟ್ಟು ವಾದ ಮಾಡುವಲ್ಲಿ ವಿಫಲವಾಗಿದೆ. ನಮ್ಮ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ. ನಮಗೆ ನೀರಿಲ್ಲದಿರುವಾಗ ಪರರಿಗೆ ನೀರು ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಉಳ್ಳಾಲ: ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಬಲೆಗೆ

ಉಳ್ಳಾಲ: ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಸೋಮೇಶ್ವರ ಉಚ್ಚಿಲ ಮೀನುಗಾರರ ಬಲೆಗೆ ಸುಮಾರು 75 ಕೆಜಿ ಬೃಹತ್ ಗಾತ್ರದ ಮೀನು ಬಲೆಗೆ ಬಿದ್ದಿದೆ. ಸಮುದ್ರ ತಟದ ಸಮೀಪ ಬೀಸಿದ ಬಲೆಗೆ ಈ ಮೀನು ಬಿದ್ದಿದೆ. ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಬಲೆಗೆ ಮೀನು ಬಿದ್ದಿದೆ. ಈ ವರ್ಷದ ತಮ್ಮ ಮೀನುಗಾರಿಕೆಯಲ್ಲಿ ಸಿಕ್ಕ ಅತಿದೊಡ್ಡ ಮೀನು

ಪುತ್ತೂರು : ಬೆಂಕಿ, ಹರಿತವಾದ ಆಯುಧ ಬಳಸಿ ತಾಲೀಮು ಪ್ರದರ್ಶನ

ಪುತ್ತೂರು : ಆಧುನಿಕ ಫಿಟ್ನೆಸ್ ಸೆಂಟರ್‍ಗಳ ಭರಾಟೆಯ ನಡುವೆಯೂ, ಪ್ರಾಚೀನ, ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವ್ಯಾಯಾಮಗಳಿಗೆ, ದೇಹದಾಢ್ರ್ಯ ಪ್ರದರ್ಶನದ ಜೊತೆಗೆ ವ್ಯಾಯಾಮ ಶಾಲೆಗಳು ಆಕರ್ಷಕ ಹಾಗು ಸಾಹಸಮಯ ಪ್ರದರ್ಶನಕ್ಕೂ ಹೆಸರುವಾಸಿಯಾಗಿವೆ. ಪುತ್ತೂರಿನ ಉದಯ ಕುಮಾರ್ ಈಗಲೂ ತಾಲೀಮು ತರಬೇತಿಯನ್ನು ನೀಡುತ್ತಿದ್ದಾರೆ. ತಾಲೀಮಿನಲ್ಲಿ ಸುಮಾರು 42 ಪ್ರಕಾರದ ತಾಲೀಮು ಪ್ರದರ್ಶನಗಳಿದ್ದು, ಸಿಂಗಲ್ ಬಾಣ, ಡಬಲ್

ಸಮುದ್ರ ಮಧ್ಯೆ ಹೃದಯಾಘಾತ : ಜೀವ ಉಳಿಸಿದ ಕೋಸ್ಟ್‌ ಗಾರ್ಡ್‌ ತಂಡ

ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದ ಮಧ್ಯೆ ಹೃದಯಾಘಾತಕ್ಕೆ ಒಳಗಾದ ಮೀನುಗಾರನಿಗೆ ಸಮುದ್ರದಲ್ಲೇ ಪ್ರಥಮ ಚಿಕಿತ್ಸೆ ನೀಡಿರುವ ಕೋಸ್ಟ್‌ ಗಾರ್ಡ್‌ ಮೀನುಗಾರನ ಜೀವ ಉಳಿಸಿದೆ. ಮೀನುಗಾರ ವಸಂತ ಎನ್ನುವವರಿ ಮೀನುಗಾರಿಕೆಗೆ ಹೋಗಿದ್ದ ಸಂದರ್ಭ ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್‌ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಉಸಿರಾಟದ ಸಮಸ್ಯೆ ಪ್ರಾರಂಭವಾಗಿದೆ. ಇದನ್ನು ಗಮನಿಸಿದ ಇನ್ನೊಂದು ಮೀನುಗಾರಿಕಾ ದೋಣಿಯ ಸಿಬ್ಬಂದಿ

ವಿಶ್ವ ರೇಬಿಸ್ ದಿನ, ಸೆಪ್ಟಂಬರ್ 28

ಪ್ರತಿ ವರ್ಷ ಸೆಪ್ಟಂಬರ್ 28ರಂದು ವಿಶ್ವದಾದ್ಯಂತ ವಿಶ್ವ ರೇಬಿಸ್ ದಿನ ಎಂದು ಆಚರಿಸಿ, ರೇಬಿಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 2007ನೇ ವರ್ಷದಿಂದ ಈ ಆಚರಣೆ ಜಾರಿಗೆ ಬಂದಿತು. 2023ನೇ ವರ್ಷದ ಆಚರಣೆಯ ಧ್ಯೇಯ ವಾಕ್ಯ “Rabies one health, Zero Deaths” ಅಂದರೆ “ರೇಬಿಸ್ ಒಂದೇ ಆರೋಗ್ಯ, ಶೂನ್ಯ ಸಾವು” ಎಂಬುದಾಗಿದೆ. ಸೆಪ್ಟಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಪ್ರೆಂಚ್ ರಸಾಯನ ಶಾಸ್ತ್ರ ತಜ್ಞ ಹಾಗೂ ಸೂಕ್ಷ್ಮ

ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ

ನಾವೆಲ್ಲಾ ಆಲ್ಜೀಮರ್ಸ್ ಬಗ್ಗೆ ಬಹಳಷ್ಟು ವಿಚಾರ ತಿಳಿದು ಕೊಂಡಿದ್ದರೂ, ಸಂಪೂರ್ಣವಾದ ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲದಿರುವುದೇ ವಿಷಾದದ ವಿಚಾರ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳನ್ನು ಅಲ್ಜೀಮರ್ಸ್ ತಿಳುವಳಿಕಾ ತಿಂಗಳು ಮತ್ತು ಸೆಪ್ಟೆಂಬರ್ 21 ರಂದು ಅಲ್ಜೀಮರ್ಸ್ ತಿಳುವಳಿಕಾ ದಿನ ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಹೆಚ್ಚಿನ ಜನರು ಈ ರೋಗ ಇಳಿ ವಯಸ್ಸಿನ ಜನರಲ್ಲಿ ಮಾತ್ರ ಬರುತ್ತದೆ ಎಂದು ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ತಮ್ಮ