ಉಪ್ಪುಂದ ಸಂರಕ್ಷಿತ ಸಮುದ್ರ ಪ್ರಬೇಧಗಳ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ

ಬೈಂದೂರು; ಯಶಸ್ವಿ ಫಿಶ್ ಮಿಲ್ ಮತ್ತು ಆಯಿಲ್ ಕಂಪೆನಿ, ಮಂಗಳೂರು ಐಸಿಎಆರ್-ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ, ಮೀನುಗಾರಿಕಾ ಇಲಾಖೆ – ಕರ್ನಾಟಕ ಸರ್ಕಾರ, ಸ್ಮಾಲ್ ಪೆಲಾಜಿಕ್ ಪರ್ಸಿನ್ ಫಿಷರೀಸ್ – ಕರ್ನಾಟಕ ಸ್ಪೇಟ್ FIP, ಆಳ ಸಮುದ್ರ ತಾಂಡೇಲರ ಸಂಘದ ವತಿಯಿಂದ ಅಳಿವಿನಂಚಿನಲ್ಲಿರುವ, ಅಪಾಯವನ್ನೆದುರಿಸುತ್ತಿರುವ, ಮತ್ತು ಸಂರಕ್ಷಿತ (ETP) ಸಮುದ್ರ ಪ್ರಭೇಧಗಳ ಸಂರಕ್ಷಣೆಯ ಕುರಿತು ಜಾಗ್ರತಿ ಮಾಹಿತಿ ಕಾರ್ಯಾಗಾರ ಉಪ್ಪುಂದ ಪರಿಚಯ ದೇವಕಿ ಬಿ.ಆರ್.ಸಂಭಾಂಗಣದಲ್ಲಿ ಜು. 23ರಂದು ನಡೆಯಿತು.

ಪ್ರಧಾನ ವಿಜ್ಞಾನಿ ಡಾ. ಕೆ. ಎಮ್. ರಾಜೇಶ್ ಪ್ರಾಸ್ತಾವಿಸಿ ನಮ್ಮ ಸಾಗರಗಳ ಭವಿಷ್ಯವು ಸಂರಕ್ಷಣೆ ಒಂದು ಆಯ್ಕೆಯಲ್ಲ ಹೊಣೆಗಾರಿಕೆ ಎಂಬುದನ್ನು ಅರಿತುಕೊಳ್ಳಬೇಕು. ಅಳಿವಿನಂಚಿನಲ್ಲಿರುವ, ಅಪಾಯವನ್ನೆದುರಿಸುತ್ತಿರುವ, ಮತ್ತು ಸಂರಕ್ಷಿತ (ETP) ಸಮುದ್ರ ಪ್ರಭೇಧಗಳ ಸಂರಕ್ಷಣೆಯನ್ನು ಉತ್ತೇಜಿಸಲು ಆಯೋಜಿಸಲಾಗಿರುವ ಜಾಗೃತಿ ಕಾರ್ಯಕ್ರಮ ಸಾಗರದ ಜೀವವೈವಿಧ್ಯತೆಯನ್ನು ರಕ್ಷಿಸುವ ಈ ಸುಸಂಕಲ್ಪಿತ ಪ್ರಯತ್ನದಲ್ಲಿ ಬೋಟಿನ ಚಾಲಕರ ಹಾಗೂ ಮೀನುಗಾರರ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಮಂಗಳೂರು ಐ.ಸಿ.ಎ.ಅರ್-ಸಿ.ಎಂ.ಎಫ್.ಅರ್.ಐ, ಹಿರಿಯ ವಿಜ್ಞಾನಿ .ಡಾ. ಜಿ. ಬಿ. ಪುರುಷೋತ್ತಮ ಶಾರ್ಕ್, ತೊರಕೆ ಮತ್ತು ಪಣಕೋರಿ ಜಾತಿಯ ಮೀನುಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.
ಮಂಗಳೂರು ಐ.ಸಿ.ಎ.ಆರ್-ಸಿ.ಎಂ.ಎಫ್.ಆರ್.ಐ, ಸುನಿಲ್ ಕುಮಾರ್ ಐಲ್, ಇತರೆ ಅಳಿವಿನಂಚಿನಲ್ಲಿರುವ, ಅಪಾಯವನ್ನೆದುರುಸುತ್ತಿರುವ, ಸಂರಕ್ಷಿತ ಹಾಗೂ ಸಂರಕ್ಷಣೆಯ ಅಗತ್ಯವಿರುವ ಸಮುದ್ರ ಜೀವಿಗಳ ಕುರಿತು ಜಾಗೃತಿ ಮೂಡಿಸಿದರು.

ಮಂಗಳೂರು ಐ.ಸಿ.ಎ.ಅರ್.ಸಿ.ಎಂ.ಎಫ್.ಅರ್.ಐ
ಪ್ರಧಾನ ವಿಜ್ಞಾನಿ ಡಾ. ಕೆ. ಎಮ್. ರಾಜೇಶ್ ಅಕಸ್ಮಿಕವಾಗಿ ದಡಕ್ಕೆ ತೇಲಿ ಬರುವಂತಹ ಅಳಿವಿನಂಚಿನಲ್ಲಿರುವ, ಅಪಾಯವನ್ನೆದುರುಸುತ್ತಿರುವ, ಸಂರಕ್ಷಿತ ಪ್ರಭೇದಗಳನ್ನು ಮರಳಿ ಸಮುದ್ರಕ್ಕೆ ಕಳುಹಿಸುವ ಅಥವ ದಫನ್ ಮಾಡುವ ಪ್ರಮಾಣಿಕೃತ ಕಾರ್ಯಚರಣೆಗಳ ಮೂಲಕ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಆರ್.ಎಫ್.ಓಂ. ರಾಘವೇಂದ್ರ ಭಾರತೀಯ ವನ್ಯಜೀವಿಗಳ ಕಾಯಿದೆ, 1972ರ ಅಡಿಯಲ್ಲಿ ಸಂರಕ್ಷಿಸಲ್ಪಡುವ ಸಮುದ್ರ ಜೀವಿಗಳ ಹಿಡಿಯುವುದರ ಪರಿಣಾಮಗಳು, ಕಾಯಿದೆಯ ಉಲ್ಲಂಘನೆ ಮತ್ತು ದಂಡಗಳ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಆಶಾಲತಾ ಸುಸ್ಥಿರ ಸಮುದ್ರ ಮೀನುಗಾರಿಕೆ ಮತ್ತು ಅಳಿವಿನಂಚಿನಲ್ಲಿರುವ, ಅಪಾಯವನ್ನೆದುರುಸುತ್ತಿರುವ, ಸಂರಕ್ಷಿತ ಪ್ರಭೇದಗಳ ಸಂರಕ್ಷಣೆಯಲ್ಲಿ ಮೀನುಗಾರಿಕೆ ಇಲಾಖೆಯ ಪಾತ್ರದ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ, ಯಶಸ್ವಿ ಫಿಶ್ ಮಿಲ್ ಮತ್ತು ಆಯಿಲ್ ಕಂಪೆನಿ ಮ್ಯಾನೇಜಿಂಗ್ ಡೈರೆಕ್ಟರ್ ಉದಯ ಕುಮಾರ್ ಸಾಲಿಯಾನ್, ಆಳ ಸಮುದ್ರ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಬೈಂದೂರು ಘಟಕದ ಅಧ್ಯಕ್ಷ ಸಂತೋಷ ಖಾರ್ವಿ ಉಪಸ್ಥಿತರಿದ್ದರು.