Home Blog Left SidebarPage 189

ಸುರತ್ಕಲ್ ; ಸೌಹಾರ್ದ ಆಟಿಕೂಟ, ಗ್ರಾಮೀಣ ಆಟೋಟ ಸ್ಪರ್ಧೆ

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಸುರತ್ಕಲ್ ಬ್ಲಾಕ್ ಕಿಸಾನ್ ಘಟಕದ ವತಿಯಿಂದ ಸುರತ್ಕಲ್ ಪಡ್ರೆಯಲ್ಲಿ ಸೌಹಾರ್ದ ಆಟಿಕೂಟ, ಗ್ರಾಮೀಣ ಆಟೋಟ ಸ್ಪರ್ಧೆ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಸೌಹಾರ್ದ ಆಟಿಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸ್ಪರ ಅರಿತು ಬಾಳುವ, ಸೌಹಾರ್ದತೆಯಿಂದ ಬಾಂಧವ್ಯವನ್ನು ಬೆಳೆಸುವ

ಉಳ್ಳಾಲ ; ನಿಷೇಧಿತ ಎಂಡಿಎಂಎ ಮಾರಾಟ – ರಿಕ್ಷಾ ಚಾಲಕ ಸೆರೆ

ಉಳ್ಳಾಲ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದ ಭಗಂಬಿಲ ಸ್ಮಶಾನದ ಮೈದಾನದಲ್ಲಿ ಸಾರ್ವಜನಿಕವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಾಂತಿಬಾಗ್ ನಿವಾಸಿ ಮಹಮ್ಮದ್ ಶರೀಫ್ ಯಾನೆ ಫೈಝಲ್ ನನ್ನು ಬಂಧಿಸಲಾಗಿದೆ. ಬಂಧಿತನಿಂದ 12 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಎರಡು ಮೊಬೈಲ್ ಫೋನ್ ಸಮೇತ ಮಾದಕ ವಸ್ತುವನ್ನು ಮಾರಾಟ ಮಾಡಲು ಉಪಯೋಗಿಸಿದ ಆಟೋರಿಕ್ಷವನ್ನು ವಶಕ್ಕೆ ಪಡೆದು ವಶಕ್ಕೆ ಪಡೆದು ಕಾನೂನು ಕ್ರಮ

ಮಂಗಳೂರು – ಮಹಿಳೆಯರಿಗಾಗಿ ವಿಶೇಷ ಆಟೋಟ ಸ್ಪರ್ಧೆ ಉದ್ಘಾಟನಾ ಸಮಾರಂಭ

ಮಂಗಳೂರು ನಗರದ ಪಚ್ಚನಾಡಿ ದೇವಿನಗರದಲ್ಲಿ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಸಹಕಾರದಲ್ಲಿ ಶ್ರೀ ದೇವಿ ಮಾತೃ ಮಂಡಳಿ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪಚ್ಚನಾಡಿ ಇವರ ವತಿಯಿಂದ ಪಚ್ಚನಾಡಿ ದೇವಿನಗರದ ಕೇಂದ್ರ ಮೈದಾನದಲ್ಲಿ ಮಹಿಳೆಯರಿಗಾಗಿ ನಡೆದ ವಿಶೇಷ ಆಟೋಟ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಿತು. ಕುಮಾರಿ ತನಿಷ್ಕ ಆರ್ ಕುಲಾಲ್ ಹಾಗೂ ಸಾನ್ವಿ ಎಮ್ ಇವರು ಶ್ರೀ ಗಣೇಶನ ಸ್ತುತಿಃ ಮಾಡಿದರು. ಶ್ರೀಮತಿ ಭವ್ಯಾ ಅವರು ದೀಪ ಬೆಳಗಿಸಿ ಕಾರ್ಯಕ್ರಮ

ಮಂಜೇಶ್ವರ : ಆಟೋ ರಿಕ್ಷಾ, ಟ್ಯಾಕ್ಸಿ, ಬಸ್ ನಿರೀಕ್ಷಣಾ ಕೇಂದ್ರ ಬದಲಾಯಿಸಲು ಕ್ರಮ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮುಗಿದ ನಂತರ ನಷ್ಟವಾಗುತ್ತಿರುವ ಆಟೋರಿಕ್ಷಾ, ಟ್ಯಾಕ್ಸಿ ನಿಲ್ದಾಣ ಹಾಗೂ ಬಸ್ ನಿರೀಕ್ಷಣಾ ಕೇಂದ್ರಗಳನ್ನು ಬದಲಾಯಿಸಲು ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಕಾಸರಗೋಡು ಜಿಲ್ಲಾ ಮೋಟಾರು ಮತ್ತು ಇಂಜಿನಿಯರಿಂಗ್ ಕಾರ್ಮಿಕರ ಸಂಘ ಎಐಟಿಯುಸಿ ಜಿಲ್ಲಾ ಸಮಿತಿ ಅಧಿಕಾರಿಗಳನ್ನು ಒತ್ತಾಯಿಸಿದೆ. ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಮುಸ್ತಫಾ ಕಡಂಬಾರ್ ಅಧ್ಯಕ್ಷತೆ

ಬೈಂದೂರು : ಯೋಗ ಪರ್ಯಟನ ವಿಶೇಷ ಸತ್ಸಂಗ ಕಾರ್ಯಕ್ರಮ

ವಿವೇಕ ಜಾಗ್ರತ ಬಳಗಗಳು ಮಧ್ಯ ವಲಯ -4 ಡಿವೈನ್ ಪಾರ್ಕ್ ಟ್ರಸ್ಟ್ ರಿಜಿಸ್ಟರ್ ಸಾಲಿಗ್ರಾಮ ಇವರ ಅಂಗಸಂಸ್ಥೆ, ಯೋಗ ಪರ್ಯಟನ ವಿಶೇಷ ಸತ್ಸಂಗ ಕಾರ್ಯಕ್ರಮ ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರ ನಾಗೂರು ಸಂಭ್ರಮದಲ್ಲಿ ನಡೆಯಿತು. ಬೈಂದೂರು ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಯುತ ಗುರುರಾಜ್ ಗಂಟಿಹೊಳೆ ಯವರಿಗೆ ಡಿವೈನ್ ಪಾರ್ಕ್ ನ ಸಂಸಾರಿ ಸಂತ ಪರಮಪೂಜ್ಯ ಡಾಕ್ಟರ್ ಜೀ ಅವರ ಸಾಧನಾ ಗಾಥೆಯ 5 ಆವೃತ್ತಿಯನ್ನು ಹಸ್ತಾಂತರಿಸಿದರು. ಕೋಟ ಮೂಡು ಗಿಳಿಯಾ ರು ಸರ್ವಕ್ಷೇಮ

ಉಡುಪಿ : ಕೈಮಗ್ಗ ಸೀರೆಗಳ ಉತ್ಸವ

ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಆಶ್ರಯದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ಉಡುಪಿ, ತಾಳಿಪಾಡಿ, ಶಿವಳ್ಳಿ, ಬ್ರಹ್ಮಾವರ, ಪಡುಪಣಂಬೂರು, ಮಂಗಳೂರು, ಬಸ್ರೂರು ಮತ್ತು ಮಿಜಾರು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಿತು. ಮೂರು ದಿನದ ಕೈಮಗ್ಗ ಸೀರೆಗಳ ಉತ್ಸವಕ್ಕೆ ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಚಾಲನೆ ನೀಡಿದರು.ಉದ್ಯಮಿ

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತ ದಿಂದ ಮೃತ್ಯು

ಸ್ಯಾಂಡಲ್​ವುಡ್​ನಲ್ಲಿ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತ ಆಗಿ ಮೃತಪಟ್ಟಿದ್ದಾರೆ.  ಥೈಲ್ಯಾಂಡ್​​ಗೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಲೋ ಬಿಪಿ ಹಾಗು ಹೃದಯಾಘಾತ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಹೃದಯಾಘಾತ ಉಂಟಾದ ಸಂದರ್ಭದಲ್ಲಿ ಸ್ಪಂದನಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ.

ಬ್ಲೇಡ್ ಕಂಪೆನಿಗಳ ಮೋಸದ ಜಾಲಕ್ಕೆ ಬಲಿಬೀಳಬೇಡಿ- ಸಂತೋಷ್ ಬಜಾಲ್

ಮಂಗಳೂರಿಗೆ ಒಂದೊಂದು ಹೆಸರಲ್ಲಿ ಆಗಮಿಸುತ್ತಿರುವ ಬ್ಲೇಡ್ ಕಂಪೆನಿಗಳು ಜನಸಾಮಾನ್ಯರ ದುಡಿಮೆಯ ಹಣವನ್ನು ಉಳಿತಾಯ ಹೆಸರಿನ ಯೋಜನೆಯಲ್ಲಿ ಕೊಳ್ಳೆಹೊಡೆದು ಕೋಟ್ಯಾಂತರ ಹಣವನ್ನು ಮೋಸ ಮಾಡಿ ಬಾಗಿಲು ಮುಚ್ಚಿದ ಪ್ರಕರಣಗಳ ಬಗ್ಗೆ ಸಾಲು ಸಾಲು ಉದಾಹರಣೆಗಳಿವೆ.ಜನರ ಆರ್ಥಿಕ ಸಂಕಷ್ಟಗಳ ಪರಿಹಾರಕ್ಕೆಂದು ಮಂಗಳೂರಿಗೆ ಬರುವ ಇಂತಹ ಬ್ಲೇಡ್ ಕಂಪೆನಿಗಳ ಮೋಸದ ಜಾಲಕ್ಕೆ ಜನತೆ ಬಲಿಬೀಳಬಾರದು ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪಿಎಸಿಎಲ್ ಅನ್ಯಾಯದ

ಮಂಗಳೂರು: ಬಹುಮಹಡಿ ಕಟ್ಟಡದಿಂದ ಹಾರಿ ಬಿಲ್ಡರ್ ಆತ್ಮಹತ್ಯೆ

ನಗರದ ಬೆಂದೂರ್ ವೆಲ್‌ನಲ್ಲಿರುವ ಅಪಾರ್ಟ್ ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ವಾಸವಿದ್ದ ಗುತ್ತಿಗೆದಾರ, ಬಿಲ್ಡರ್ ಮೋಹನ್ ಅಮೀನ್ (೬೫) ಆತ್ಮಹತ್ಯೆಗೈದ ಘಟನೆ ನಡೆದಿದೆ.   ಅವರಿಂದು ಸುಮಾರಿಗೆ ತಾವು ವಾಸವಿದ್ದ14 ಮಹಡಿಯ ಅಪಾರ್ಟ್ ಮೆಂಟ್‌ನ ಟೆರೇಸ್ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಮಂಗಳೂರಿನ ವಿವಿಧ ಅಪಾಟ್ಮೆಂಟ್‌ನ್ನು ಮೋಹನ್ ಆಮೀನ್ ನಿರ್ಮಾಣ ಮಾಡಿದ್ದರು. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ

ಪುತ್ತೂರು: ಗೃಹರಕ್ಷಕದಳ ಕಛೇರಿ ಕಟ್ಟಡಕ್ಕೆ ಸರಕಾರದಿಂದ ಜಾಗ ಮಂಜೂರು

  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪುತ್ತೂರು ಘಟಕವು ಸುಮಾರು 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಹೊಸ ಕಛೇರಿ ನಿರ್ಮಿಸುವ ಸಲುವಾಗಿ ಸರಕಾರದಿಂದ 10 ಸೆಂಟ್ಸ್ ಖಾಲಿ ಜಾಗ ಕೊಟೆಚಾ ಸಭಾಂಗಣದ ಸಮೀಪದ ಶಿವನಗರದಲ್ಲಿ ಮಂಜೂರಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಪುತ್ತೂರು ಘಟಕಕ್ಕೆ ಭೇಟಿ ನೀಡಿ ಹೊಸತಾಗಿ ಮಂಜೂರಾದ ಜಾಗದ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ,