ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರ ಬುಧವಾರದಂದು ಋತ್ವಿಜರಿಂದ ಪೂಜೆಯೊಂದಿಗೆ ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿವೆ. ಅತಿರುದ್ರ ಮಹಾಯಾಗದ ಎರಡನೇ ದಿನವಾದ ಫೆಬ್ರವರಿ 23, 2023 ರ ಗುರುವಾರದಂದು ಮುಂಜಾನೆ ಸಮಯದಲ್ಲಿ ಅತಿರುದ್ರ ಯಾಗಮಂಟಪದಲ್ಲಿ
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರ ಬುಧವಾರದಂದು ಋತ್ವಿಜರಿಂದ ಪೂಜೆಯೊಂದಿಗೆ ಅತಿರುದ್ರ ಮಹಾಯಾಗ ಶುಭಾರಂಭಗೊಂಡಿತು. ಬೆಳಿಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ಶತಚಂಡಿಕಾ ಯಾಗಮಂಟಪದಲ್ಲಿ ಶತಚಂಡಿಕಾ ಯಾಗ ಪ್ರಾರಂಭಗೊಂಡಿತು. ಈ ಶುಭ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ರಘುಪತಿ ಭಟ್, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ, ನಾಳೆ ಫೆಬ್ರವರಿ 22, 2023 ರ ಬುಧವಾರದಂದು ಪ್ರಾರಂಭಗೊಳ್ಳಲಿರುವ ಅತಿರುದ್ರ ಮಹಾಯಾಗಕ್ಕೆ 180 ವೈಧಿಕರು ಶ್ರೀ ಉಮಾಮಹೇಶ್ವರ ಸನ್ನಿಧಾನಕ್ಕೆ ಫೆಬ್ರವರಿ 21, 2023 ರ ಮಂಗಳವಾರದಂದು ಆಗಮಿಸಿದ್ದಾರೆ. ಅತಿರುದ್ರ ಮಹಾಯಾಗ ಸಮಿತಿ ಮತ್ತು ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನವರು, ಯಾಗಕ್ಕಾಗಿ ಆಗಮಿಸಿದ ಎಲ್ಲಾ ವೈಧಿಕರನು ಕರೆದುಕೊಂಡು ಶ್ರೀ ಉಮಾಮಹೇಶ್ವರ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗ ನಿಟ್ಟಿನಲ್ಲಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯ ವತಿಯಿಂದ ಫೆಬ್ರವರಿ 21, 2023 ರ ಮಂಗಳವಾರದಂದು ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ, ಶಾಸಕ ಕೆ. ರಘುಪತಿ ಭಟ್ ಅವರು, 121 ಋತ್ವಿಜರ ನೇತೃತ್ವದಲ್ಲಿ
ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ನಡೆಯಲಿರುವ ‘ಅತಿರುದ್ರ ಮಹಾಯಾಗ’ದ ಸಲುವಾಗಿ ಶಿವಪಾಡಿಯ ಸಾನಿಧ್ಯದಲ್ಲಿ ಅನೇಕ ಕಾರ್ಯಕ್ರಮಗಳೊಂದಿಗೆ ಜೋರಾಗಿ ತಯಾರಿಗಳು ಕೂಡ ಸಾಗುತ್ತ ಇವೆ. ಮಹಾಯಾಗದ ಪ್ರಯುಕ್ತ ಫೆಬ್ರವರಿ 20, 2023 ರ ಸೋಮವಾರದಂದು ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನಕ್ಕೆ ನಟ ರಕ್ಷಿತ್ ಶೆಟ್ಟಿ ಅವರು ಆಗಮಿಸಿ, ದೇಗುಲದಲ್ಲಿ ನಡೆಯುತ್ತಿರುವ ಸಕಲ ತಯಾರಿಗಳನ್ನು ವೀಕ್ಷಿಸಿ,
ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 15 ನೆಯ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮ ಹಾಗೂ ಮಹಾ ಶಿವರಾತ್ರಿ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರುಗಿತು. ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಶಿಕಾರಿಪುರ ಕೃಷ್ಣಮೂರ್ತಿ, ಉದಯ ಕುಮಾರ್, ರಘುರಾಮ ರಾವ್ ಮತ್ತು ತಂಡದವರಿಂದ ರುದ್ರ ಪಠನ, ಉರ್ವ ಶ್ರೀ ಮಾರಿಯಮ್ಮ ಕ್ಷೇತ್ರ ಪಾರಾಯಣ ಬಳಗದವರಿಂದ ಸಾಮೂಹಿಕ ಕುಂಕುಮಾರ್ಚನೆ, ಶ್ರೀ ಲಲಿತಾ ಸಹಸ್ರನಾಮಾರ್ಚನೆ ಜರುಗಿತು. ಸ್ವಾಮಿನಿ
ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನಿಧ್ಯ. ಕಲ್ಲಡ್ಕದ ಅಮ್ಟೂರಿನಲ್ಲಿರುವ ಈ ಸಾನಿಧ್ಯವು ಹಲವಾರು ಕಾರಣಿಕ ಶಕ್ತಿಯ ಮೂಲಕ ಹೆಸರುವಾಸಿಯಾಗಿದೆ. ಕಷ್ಟ ಅಂತ ಬಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿದ ಪುಣ್ಯ ಸಾನಿಧ್ಯ. ಇದೀಗ ಕ್ಷೇತ್ರದಲ್ಲಿ ಮನೋಜ್ ಕಟ್ಟೆಮಾರ್ ನೇತೃತ್ವದಲ್ಲಿ ಇದೇ ಬರುವ ಫೆ.25ರಂದು ದೊಂದಿ ಬೆಳಕಿನಲ್ಲಿ ಶ್ರೀ ಮಂತ್ರದೇವತೆ ದೈವದ ವೈಭವದ ವಾರ್ಷಿಕ ಕೋಲೋತ್ಸವ ನಡೆಯಲಿದೆ. ಹಾಗೂ ಫೆ.26ರಂದು ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವಾರ್ಷಿಕ
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರ ಬುಧವಾರದಿಂದ ಮಾರ್ಚ್ 05, 2023 ರ ಭಾನುವಾರದವರೆಗೆ ಸಂಪನ್ನಗೊಳ್ಳಲಿರುವ ‘ಅತಿರುದ್ರ ಮಹಾಯಾಗ’ ಪ್ರಯುಕ್ತ ಪ್ರತೀದಿನ ಗ್ರಾಮವಾರು ಹೊರೆಕಾಣಿಕೆ ಕಾರ್ಯಕ್ರಮ ನಡೆಯುತ್ತಿದ್ದು, ಈ ಪಾವನ ಕಾರ್ಯಕ್ಕೆ ಭಕ್ತಾದಿಗಳು ಧವಾಸಧಾನ್ಯ, ಬೆಳೆಕಾಳು, ತರಕಾರಿ, ಅಕ್ಕಿ, ತೆಂಗಿನಕಾಯಿ ಮತ್ತಿತರ ದ್ರವ್ಯಗಳನ್ನು ಹೊರೆಕಾಣಿಕೆಯಾಗಿ ಸಮರ್ಪಿಸಲು ಸುವರ್ಣಾವಕಾಶ ಇದಾಗಿದೆ. ಈ ಪುಣ್ಯಕಾರ್ಯದಲ್ಲಿ
ಶಿವಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆಬ್ರವರಿ 22, 2023 ರ ಬುಧವಾರ ಬೆಳಿಗ್ಗೆ 06:30 ಕ್ಕೆ ‘ಅತಿರುದ್ರ ಮಹಾಯಾಗ’ದ ಮಹಾಸಂಕಲ್ಪದಿಂದ ಮೊದಲ್ಗೊಂಡು, 121 ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಪ್ರಾರಂಭಗೊಳ್ಳಲಿದೆ. ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀದೇವರಿಗೆ ನವಕಪ್ರಧಾನ ಹೋಮಪುರಸ್ಸರ ನವಕಲಶ ಅಭಿಷೇಕ, ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 12:00 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಮಾಧುರ್ಯ, ಸಂಜೆ 05:30
ಉಳ್ಳಾಲ ತಾಲೂಕಿನ ಕಾಪಿಕಾಡ್ ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಆಹೋರಾತ್ರಿ ಭಜನೋತ್ಸವ ಆಯೋಜಿಸಲಾಯಿತು. ಶನಿವಾರ ಮುಂಜಾನೆ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಆಹೋರಾತ್ರಿ ಭಜನೋತ್ಸವಕ್ಕೆ ಉದ್ಯಮಿ ವನಿತಾ ಶೆಟ್ಟಿ ಮತ್ತು ಗಣೇಶ್ ಶೆಟ್ಟಿ ದಂಪತಿಗಳು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಶನಿವಾರ ಮುಂಜಾನೆ ಆರಂಭಗೊಂಡ ಭಜನೋತ್ಸವವು ರಾತ್ರಿ ಶಿವರಾತ್ರಿಯ ಜಾಗರಣೆಯೊಂದಿಗೆ ಮುಂದುವರಿದು ಭಾನುವಾರ ಬೆಳಿಗ್ಗೆ ತನಕ