Home ಕರಾವಳಿ Archive by category ಉಡುಪಿ (Page 150)

ಕಟಪಾಡಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ

ಕಟಪಾಡಿ ಮಟ್ಟು ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಸುಮಾರು 45ರಿಂದ 50 ವರ್ಷ ವಯಸ್ಸಿನ ಗಂಡಸಿನ ಶವ ಕಟಪಾಡಿ ಮಟ್ಟು ಹೊಳೆಯಲ್ಲಿ ತೇಲಿ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು, ಬಾರೀ ಸೆಳೆತ ಹೊಂದಿದ ನೆರೆಯ ನೀರಿನಲ್ಲಿ ಸಾಹಸಮಯವಾಗಿ ತಡಕ್ಕೆ ಸೇರಿಸಿ ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದರು, ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಶವಾಗಾರಕ್ಕೆ

ಶ್ರೀ ಕ್ಷೇತ್ರ ಉಚ್ಚಿಲಕ್ಕೆ ಖ್ಯಾತ ಹೋಟೆಲ್ ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ ಭೇಟಿ

ಶ್ರೀ ಕ್ಷೇತ್ರ ಉಚ್ಚಿಲಕ್ಕೆ ಖ್ಯಾತ ಹೋಟೆಲ್ ಉದ್ಯಮಿಗಳಾದ ಶ್ರೀ ಬಂಜಾರ ಪ್ರಕಾಶ್ ಶೆಟ್ಟಿಯವರು ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀ ಅಮ್ಮನವರ ದರ್ಶನ ಮಾಡಿದರು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ರೂ.25 ಲಕ್ಷ ದೇಣಿಗೆ ನೀಡಿದ ಇವರಿಗೆ ನಾಡೋಜ ಡಾ. ಜಿ. ಶಂಕರ್ ರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ವಾಸುದೇವ ಸಾಲ್ಯಾನ್, ಉದ್ಯಮಿ ಶ್ರೀಪತಿ ಭಟ್

ಮಳೆಗೆ ಸಂಪೂರ್ಣವಾಗಿ ಹದಗೆಟ್ಟ ಮುಖ್ಯರಸ್ತೆ : ಚರಂಡಿ ಮೋರಿಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು

ಕಾರ್ಕಳ : ಕಳೆದ ಮಾರ್ಚ್ ತಿಂಗಳಲ್ಲಿ ಕಾರ್ಕಳದಲ್ಲಿ ಬಹಳ ಅದ್ದೂರಿಯಾಗಿ ಕಾರ್ಕಳ ಉತ್ಸವ ಜರುಗಿದ್ದು. ಈ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಮುಖ್ಯ ರಸ್ತೆಗಳು, ಚರಂಡಿ ಮೋರಿಗಳಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ಡಾಮರೀಕರ್ಣ ಮಾಡಲಾಗಿತ್ತು. ಇದೀಗ ಕಾರ್ಕಳದ ಮುಖ್ಯ ರಸ್ತೆಗಳಲ್ಲಿ ಒಳ ಚರಂಡಿಯ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಕಾರ್ಕಳ ಮುಖ್ಯ ರಸ್ತೆಯ ಡಾಮರು ಎದ್ದು ಹೊಂಡಗಳು ಬಿದ್ದು ಪಾದಾಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಹೋಗುವುದೇ ಒಂದು

ತಾತ್ಕಾಲಿಕವಾಗಿ 500 ಕೋಟಿ ರೂ. ತಕ್ಷಣ ಬಿಡುಗಡೆ : ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

ಇತ್ತೀಚೆಗೆ ರಾಜ್ಯಾದ್ಯಂತ ಸುರಿದ ಭಾರೀ ಮಳೆಗೆ ಹಾಳಾಗಿರುವ ಮೂಲಭೂತ ಸೌಕರ್ಯಗಳನ್ನು ಮರು ಸ್ಥಾಪಿಸಲು ತಾತ್ಕಾಲಿಕವಾಗಿ 500 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆಗಿರುವ ಮಳೆಹಾನಿಯ ಬಗ್ಗೆ ಮಣಿಪಾಲದ ಜಿ.ಪಂ ಸಭಾಂಗಣದಲ್ಲಿ ಇಂದು ನಡೆಸಿದ ಸಮಗ್ರ ಸಮೀಕ್ಷಾ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಳೆಹಾನಿಯ

ಹೊಳೆಗೆ ಹಾರಿದ್ದ ಯುವಕನ ಪತ್ತೆಗೆ ಶೋಧ

ಕಳೆದ ಜು.6 ರಂದು ಕಾಪು ಠಾಣಾ ವ್ಯಾಪ್ತಿಯ ಮಣಿಪುರ ದೆಂದುರುಕಟ್ಟೆ ಅಲೆವೂರು ರಸ್ತೆಯ ಸೇತುವೆಯ ಬಳಿ ಹೊಳೆಗೆ ಹಾರಿರುವ ಶಂಕೆಯಿರುವ ಯುವಕ 28 ವರ್ಷದ ಪುನಿತ್ ಈವರೆಗೂ ಪತ್ತೆಯಾಗಿಲ್ಲ. ಮಂಗಳವಾರ ಬೆಳಿಗ್ಗಿನಿಂದಲೇ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ, ಪ್ರವೀಣ್ ಕುರ್ಕಾಲು, ಅಶೋಕ್ ದೆಂದೂರು ಕಟ್ಟೆ ಮತ್ತು ಉಡುಪಿ ಜಿಲ್ಲಾ ಅಗ್ನಿ ಶಾಮಕ ದಳದ ಸಿಬ್ಬಂದಿ ಸೇತುವೆಯಿಂದ ಸುಮಾರು 8 ಕಿಲೋ ಮೀಟರ್ ದೂರದ ವರಗೆ ಹುಡುಕಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.

ಭಾರೀ ಮಳೆಗೆ ಕುಸಿದ ಮೋರಿ : ಹೊಳೆಯ ಪಾಲಾದ ರಸ್ತೆ

ಬೈಂದೂರು ವಿಧಾನಸಭಾ ಕ್ಷೇತ್ರದ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೂರಕುಂದ ಸಮೀಪದ ಕಲ್ಮಕ್ಕಿಯಲ್ಲಿ ಕಳೆದ 2-3ದಿನಗಳಿಂದ ಸುರಿದ ಭಾರಿ ಮಳೆಗೆ ರಸ್ತೆಗೇ ಅಳವಡಿಸಿದ್ದ ಮೋರಿ ಕುಸಿದು ಸಂಪರ್ಕ ರಸ್ತೆ ಹೊಳೆಯ ಪಾಲಾಗಿದೆ. ಹಲವಾರು ಮನೆಗೆ ಸಂಪರ್ಕವೇ ಇಲ್ಲದಂತಾಗಿದೆ. ಶಾಸಕರಾದ ಸುಕುಮಾರ ಶೆಟ್ಟಿ ಯವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಪಟ್ಟಣ ಪಂಚಾಯತ್ ಇಂಜಿನಿಯರ್ ಲ್ಲಿ ಎಸ್ಟಿಮೇಟ್ ಮಾಡಲು ಆದೇಶ ಮಾಡಿದರು.ತಕ್ಷಣಕ್ಕೆ ತುರ್ತು ಅಗತ್ಯ ಕ್ರಮ

ಮೂಡಬೆಳ್ಳೆ ವ್ಯಾಪ್ತಿಯಲ್ಲಿ ಸಂಪೂರ್ಣ ಬೆಳೆ ನಾಶ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಗದ್ದೆಯಲ್ಲಿ ನೀರು ನಿಂತು ಕಷ್ಟಪಟ್ಟು ಮಾಡಿದ ಸಹಸ್ರಾರು ಎಕ್ರೆ ಕೃಷಿ ನಾಶಗೊಂಡಿದೆ.ಈ ಬಗ್ಗೆ ಮಾತನಾಡಿದ ಉಡುಪಿ ತಾ.ಪಂ. ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಮಳೆಯ ಆರ್ಭಟಕ್ಕೆ ಕೃಷಿ ಭೂಮಿಯಲ್ಲಿ ನೀರು ನಿಂತು ಬಹಳಷ್ಟು ಖರ್ಚು ಮಾಡಿ ಮಾಡಿದ ನಾಟಿ, ನೀರಿನಡಿಯಲ್ಲಿ ಕೊಳೆಯುತ್ತಿದ್ದು, ಕೃಷಿಕರು ಕಂಗ್ಗಲಾಗಿದ್ದಾರೆ. ಅಳಿವಿನ ಹಂತದಲ್ಲಿರುವ ಕೃಷಿ ಚಟುವಟಿಕೆಗಳನ್ನು ನಡೆಸಿ ಕೈ ಸುಟ್ಟುಕೊಂಡಿರುವ ಕೃಷಿಕರ ನೆರವಿಗೆ

ಉಪ್ಪುಂದಲ್ಲಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿತ

ಕುಂದಾಪುರ: ಬೈಂದೂರು ತಾಲೂಕಿನ ಉಪ್ಪುಂದ ಗ್ರಾ.ಪಂ ವ್ಯಾಪ್ತಿಯ ಅಮ್ಮನವರ ತೊಪ್ಲು ಎಂಬಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕುಸಿದ ಘಟನೆ ವರದಿಯಾಗಿದೆ. ಭಾರೀ ಮಳೆಯ ಹಿನ್ನೆಲೆ ಅಂದಾಜು 15 ವರ್ಷ ಹಿಂದಿನ ಮೂರು ಕೊಠಡಿಗಳುಳ್ಳ ಈ ಕಟ್ಟಡದ ಮೇಲ್ಮಾಡು ಸಹಿತ ಗೋಡೆಗಳು ಕುಸಿದಿದೆ. ಶಾಲೆಗೆ ರಜೆಯಿದ್ದ ಕಾರಣ ಹಾಗೂ ಸಂಜೆಮೇಲೆ ಶಾಲಾ ಕಟ್ಟಡ ಕುಸಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಶಿಥಿಲಗೊಂಡಿದ್ದ ಕಟ್ಟಡ.. ಅಮ್ಮನವರ ತೊಪ್ಲು ಭಾಗದ 60 ಕ್ಕೂ ಅಧಿಕ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಗ್ಯಾಸ್ಟ್ರೋಇಂಟೆಸ್ಟಿನಲ್ ರೇಡಿಯೇಷನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಆರಂಭ

ಮಣಿಪಾಲ, 8 ಜುಲೈ 2022: ರೇಡಿಯೊಥೆರಪಿ ಮತ್ತು ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ಇಂದು ಗ್ಯಾಸ್ಟ್ರೊಇಂಟೆಸ್ಟಿನಲ್ ರೇಡಿಯೇಶನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಗೆ ಚಾಲನೆ ನೀಡಲಾಯಿತು. ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕೆಎಂಸಿ, ಮಣಿಪಾಲದ ಡೀನ್ ಡಾ ಶರತ್ ಕೆ ರಾವ್ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಅವರು ಜಂಟಿಯಾಗಿ ಉದ್ಘಾಟಿಸಿದರು.

ಜುಲೈ 9ರಂದು ಪಡುಬಿದ್ರಿ ಸೊಸೈಟಿಯ ಹವಾನಿಯಂತ್ರಿತ ಸಿಟಿ ಶಾಖೆ ಉದ್ಘಾಟನೆ

ಪಡುಬಿದ್ರಿಯಲ್ಲಿ ನವೀಕೃತ ಹವಾನಿಯಂತ್ರಿತ ಸಿಟಿ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ ಕೃಷಿ ಸಲಕರಣೆಗಳ ಮಾರಾಟ ವಿಭಾಗದ ಶುಭಾರಂಭವು ಜು. 9 ರಂದು ನಡೆಯಲಿದೆ.ಗ್ರಾಹಕರಿಗೆ ಹವಾನಿಯಂತ್ರಿತ ಶಾಖೆಯೊಂದಿಗೆ ಸೊಸೈಟಿಯಲ್ಲಿ ದೊರಕುತ್ತಿರುವ ವಿವಿಧ ಸೇವೆಗಳನ್ನು ಆಧುನೀಕರಣ ಗೊಳಿಸುವ ಸಲುವಾಗಿ ಪಡುಬಿದ್ರಿ ಸೊಸೈಟಿಯ ಹೃದಯ ಶಾಖೆಯಾದÀ ಸಿಟಿ ಶಾಖೆಯನ್ನು ಸಂಪೂರ್ಣ ಹವಾನಿಯಂತ್ರಿತ ಶಾಖೆಯನ್ನಾಗಿ ನವೀಕೃತ ಗೊಳಿಸಿ ಇದರೊಂದಿಗೆ ಕೃಷಿ ಸಲಕರಣೆ ಮಾರಾಟ ವಿಭಾಗದ ಉದ್ಘಾಟನೆಯನ್ನು