ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಬೈಂದೂರು ದಸರಾ-2023ಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಬೈಂದೂರು ದಸರಾ ಮಹೋತ್ಸವಕ್ಕೆ ಅಪ್ಪಣ್ಣ ಹೆಗ್ಡೆ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಪ್ರಗತಿಯಾದರು ಸಹ ಮನಃಶಾಂತಿ ಹಾಗೂ ನೆಮ್ಮದಿಯನ್ನು ಹಣ ಹಾಗೂ ಪ್ರಗತಿಯಿಂದ ಪಡೆಯಲು
ಅಕ್ರಮವಾಗಿ ಪಿಡಬ್ಲ್ಯೂಡಿ ರಸ್ತೆಯಂಚಿನಲ್ಲಿ ನಿರ್ಮಾಣ ನಡೆಸುತ್ತಿದ್ದ ನಾಲ್ಕು ಕಟ್ಟಡ ಪ್ರದೇಶಕ್ಕೆ ಸ್ವತಃ ಪಿಡಬ್ಲ್ಯೂಡಿ ಅಧಿಕಾರಿಗಳೇ ಸ್ಥಳಕ್ಕೆ ಬಂದು ಪರಿಶೀಲಿಸಿ ಕಾಮಗಾರಿ ನಡೆಸದಂತೆ ಕಟ್ಟಡ ಕಾಮಗಾರಿ ತಡೆಯೊಡ್ಡಿದ ಘಟನೆ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಈ ಅಕ್ರಮಕ್ಕೆ ಸ್ವತಃ ಗ್ರಾ.ಪಂ. ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬುದಾಗಿ ಸಾರ್ವಜನಿಕ ಲಿಖಿತ ದೂರು ಜಿಲ್ಲಾಧಿಕಾರಿಗಳು ಸಹಿತ ಎಲ್ಲಾ ಇಲಾಖೆಗಳಿಗೂ ರವಾನೆ ಆಗಿದೆ. ಸದ್ಯಕ್ಕೆ
ಕುಂದಾಪುರ: ಅತಿ ವೇಗದಿಂದ ಸಾಗುತ್ತಿದ್ದ ಖಾಸಗಿ ಬಸ್‍ವೊಂದು ಚಾಲಕ ನಿಯಂತ್ರಣ ತಪ್ಪಿ ಅರಾಟೆ ಎಂಬಲ್ಲಿ ಹೈಮಾಸ್ಟ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ, ಪಕ್ಕದ ರಸ್ತೆಗೆ ಉರುಳಿದ ಘಟನೆ ನಡೆದಿದೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆ ಸೇರಿದಂತೆ ಸುಮಾರು 20ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದಿಂದ ಪ್ರಯಾಣಿಕರನ್ನು ಹೊತ್ತ ಬಸ್ ರಾಷ್ಟ್ರೀಯ
ತುಳುನಾಡಿನ ಪರಶುರಾಮನಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಘೋರ ಅಪಚಾರ, ಅವಮಾನ ಮಾಡಿದ್ದಾರೆ ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉಡುಪಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಮದಗ್ನಿ ಆರಾಧಕರು ಪರಶುರಾಮನ ಅರಾಧನೆ ಮಾಡುತ್ತಾರೆ. ಪರಶುರಾಮನ ಕೀರ್ತಿ, ಪ್ರಭಾವದಿಂದಾಗಿ ಅವರು ದೇವರು ಎನ್ನುವ ನಂಬಿಕೆ ಇದೆ. ತನ್ನ ಪರಾಕ್ರಮದಿಂದ ಸಮುದ್ರವನ್ನು ಹಿಂದೆ ಸರಿಸಿ ಭೂಮಿ
ಸಾಣೂರು ಗ್ರಾಮದ ಇಂದಿರಾನಗರ ಹಲ್ಲೆಕಿ ಪರಿಸರದಲ್ಲಿ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ನಡೆದಿದೆ. ರಾತ್ರಿ 9 ಗಂಟೆಗೆ ಬೈಕಿ ನಲ್ಲಿ ದಾರಿಯಲ್ಲಿ ಹೋಗುತಿದ್ದ ಮೆಸ್ಕಾಂ ಇಲಾಖೆಯ ದೇವಣ್ಣ ರಾವ್ ಮತ್ತು ಸಾಣೂರು ಪಂಚಾಯತ್ ಸದಸ್ಯ ಪ್ರಕಾಶ್ ರಾವ್ ಇಬ್ಬರು ಚಿರತೆ ಘರ್ಜಿಸುವ ಸದ್ದನು ಕೇಳಿ ವೀಕ್ಷಿಸಿದಾಗ ಚಿರತೆ ಉರುಳಿಗೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಕಾರ್ಕಳ ನಗರದ ಸಾಮಾಜಿಕ ಕಾರ್ಯಕರ್ತ ಪುರಸಭೆಯ ಮಾಜಿ ಸದಸ್ಯರಾದ ಪ್ರಕಾಶ್ ರಾವ್ ಅವರಿಗೆ ವಿಷಯವನ್ನು
ಕಾರ್ಕಳ : ಪರಶುರಾಮ ನಕಲಿ ಮೂರ್ತಿ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಯನ್ನು ಗುಜುರಿಗೆ ಹಾಕಿ ಅವ್ಯವಹಾರ ವೆಸಗಿದ್ದಾರೆ. ಅದರ ಮೂಲಕ ಬಿಜೆಪಿ ಸರಕಾರದ ಕರ್ಮಕಾಂಡಗಳು ಹೊರಗೆ ಬರುತ್ತಿವೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಕಾರ್ಕಳ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಬಳಿಯ ಮೈದಾನದಲ್ಲಿ ಶಾಸಕ ಸುನೀಲ್ ಕುಮಾರ್ ವಿರುದ್ಧ ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಕ್ಕರೆ ಕಾರ್ಖಾನೆ ಹಗರಣ ದಲ್ಲಿ 15 ಕೋಟಿ, ನಕಲಿ
108 ವರ್ಷ ಇತಿಹಾಸದ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಮಟಪಾಡಿಯ 9 ನೇ ನೂತನ ಹವಾನಿಯಂತ್ರಿತ ಶಾಖೆ ಮತ್ತು ನವರತ್ನ ಮಿನಿ ಸಭಾಂಗಣದ ಉದ್ಘಾಟನೆ ಜರುಗಿತು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರು ನೂತನÀ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಸರಕಾರದ ಯಾವೂದೇ ಸೌಲಭ್ಯವನ್ನು ಬಯಸದೆ ಜನರಿಂದ ಜನರಿಗಾಗಿ ಎನ್ನುವ ದ್ಯೇಯದಲ್ಲಿ ಜನರ ವಿಸ್ವಾಸಗಳಿಸಿ ಇಂದು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿ
ಕಾರ್ಕಳ : ತಾಲ್ಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪುನರಪಿ ಪರಶುರಾಮನ ಕಂಚಿನ ಪ್ರತಿಮೆಯನ್ನೇ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಆಗ್ರಹಿಸಿದ್ದಾರೆ. ತಾಲ್ಲೂಕಿನ ಬೈಲೂರು ಪರಶುರಾಮ ಥೀಮ್ ಪಾರ್ಕ್ ಪರಿಸರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಂಚಿನ ಮೂರ್ತಿಯನ್ನು ಮಾಡಲು ಕನಿಷ್ಠ 2ವರ್ಷವಾದರೂ ಅಗತ್ಯವಿದೆ. ಪ್ರವಾಸೋದ್ಯಮ ಇಲಾಖೆದವರು ನಿರ್ಮಿತಿ ಕೇಂದ್ರದವರಿಗೆ ನೀಡಿದ್ದು, ನಿರ್ಮಿತಿ ಕೇಂದ್ರದವರು ಅದನ್ನು ಮಾಡುವುದು
ದಸರಾ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕರಾವಳಿ ಭಾಗಕ್ಕೆ ಬಂದು ದಾಸರ ಮತ್ತು ಸಂತರ ಪದಗಳನ್ನು ಹಾಡಿ ಜನರನ್ನು ಬೆರಗುಗೊಳಿಸುತ್ತಿದ್ದರು. ಇದೀಗ ದಾವಣಗೆರೆ ಮೂಲದ ಭೈರಪ್ಪ ಅವರು ಕರಾವಳಿ ಭಾಗಕ್ಕೆ ಆಗಮಿಸಿದ್ದು, ದಾಸರ ಮತ್ತು ಸಂತರ ಪದಗಳನ್ನು ಹಾಡಿ ಜೀವನದ ಮೌಲ್ಯವನ್ನು ಬಿತ್ತರಿಸುವ ಕಾಯಕಕ್ಕೆ ಮುಂದಾಗಿದ್ದಾರೆ. 4 ಅಡಿ ಉದ್ದದ ಬಿದಿರಿನ ದಂಡವೊಂದಕ್ಕೆ 3 ಸ್ಥರದ ಸೋರೆ ಕಾಯಿ ಬುರುಡೆಗೆ ತಂತಿಯೊಂದನ್ನು ಅಳವಡಿಸಿ ಹಾಡು ಹಾಡುವಾಗ ಸ್ವರ ತಂತುಗಳು ತಂತಿ ಮೂಲಕ
62ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಬೈಂದೂರಿನ ಮಣಿಕಾಂತ ಹೋಬಳಿದಾರ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ. 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಸರ್ವಿಸರ್ಸ್ ತಂಡವನ್ನು ಪ್ರತಿನಿಧಿಸಿದ 21 ವರ್ಷದ ಮಣಿಕಾಂತ ಹೋಬಳಿದಾರ್ ಅವರು 100 ಮೀ. ಓಟದ ಸೆಮಿಫೈನಲನ್ನು ಕೇವಲ 10.23 ಸೆಕೆಂಡ್‍ಗಳಲ್ಲಿ ಓಡುವ ಮೂಲಕ ರಾಷ್ಟ್ರೀಯ ದಾಖಲೆ ಬರೆದು ಅಗ್ರಸ್ಥಾನದೊಂದಿಗೆ ಫೈನಲ್‍ಗೆ




























