ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವಕ್ಕೆ ಕೇಳಿಬಂದ ಅಪಸ್ವರಗಳ ನಡುವೆಯೂ ಅದೇ ಸ್ಥಳದಲ್ಲಿ ಉಪಕುಲಪತಿಗಳ ಸಮಕ್ಷಮದಲ್ಲಿ ಪರಿಸರಪೂರಕ ಗಣೇಶನ ವಿಗ್ರಹವನ್ನಿಟ್ಟು ಗಣೇಶೋತ್ಸವ ಆಚರಣೆ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಕೊಣಾಜೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್
ಉಳ್ಳಾಲ : ಉಡುಪಿಯ ರವಿ ಕಟಪಾಡಿ ಮಾದರಿಯಲ್ಲಿ ಉಳ್ಳಾಲ ಧರ್ಮನಗರ ಜ್ಯೂನಿಯರ್ ಬಾಯ್ಸ್ ನ ಯುವಕರ ತಂಡ ಎರಡರ ಮಗುವಿನ ಚಿಕಿತ್ಸೆಗೆ ವಿಭಿನ್ನ ರೀತಿಯ ವೇಷತೊಟ್ಟು ಸಂಗ್ರಹಿಸಿದ ನಗದನ್ನು ಹೆತ್ತವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಉಳ್ಳಾಲ ತೆಂಗಿನಹಿತ್ಲು ರಾಹುಗುಳಿಗ ಬನದ ಅರ್ಚಕ ಭಾಸ್ಕರ್ ತೆಂಗಿನಹಿತ್ಲು ಅವರು ಬಂಟ್ವಾಳ ತಾಲೂಕಿನ ಮಂಕುಡೆಕೋಡಿ ನಿವಾಸಿ ಎರಡರ ಹರೆಯದ ನ್ಯೂರೋಬ್ಲಾಸ್ಟೋಮಾ (ಕ್ಯಾನ್ಸರ್) ಕಾಯಿಲೆಯಿಂದ ಬಳಲುತ್ತಿರುವ ಹೇಮಂತ್
ಉಳ್ಳಾಲ: ಬೈಕಿನಲ್ಲಿ ಬಂದು ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಹಣಕ್ಕಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೋಲಿಸ್ರ ತಂಡ ಬಂಧಿಸಿದ್ದಾರೆ. ತ್ರಿಶೂರ್ ವಡಕಂಚೇರಿ ನಿವಾಸಿ ಶೇಕ್ ತನ್ಸಿರ್ (20) ಮತ್ತು ಕೋಝಿಕ್ಕೋಡ್ ಕಡಮೇರಿ ನಿವಾಸಿ ಸಾಯಿಕೃಷ್ಣ ( 19) ಬಂಧಿತರು. ಇಬ್ಬರಿಂದ 2.77 ಗ್ರಾಂ ತೂಕದ ನಿಷೇಧಿತ ಎಂಡಿಎಂಎ, ಎರಡು ಮೊಬೈಲ್ ಹಾಗೂ ರೂ. 50,000 ಬೆಲೆಬಾಳುವ ಎಫ್ ಝೆಡ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ
ಉಳ್ಳಾಲ ತಾಲೂಕು ಮತ್ತು ಬಂಟ್ವಾಳ ತಾಲೂಕಿನ ಅಧೀಕೃತ ಟಿವಿಎಸ್ ದ್ವಿಚಕ್ರ ವಾಹನದ ಡೀಲರ್ ಆಗಿರುವ ಸೋನಾ ಮೋಟರ್‍ಸ್‌ನವರಿಂದ ಇದೀಗ ಮುಡಿಪುವಿನಲ್ಲಿ ಸೋನಾ ಟಿವಿಎಸ್ ಶೋರೂಂ ಶುಭಾರಂಭಗೊಂಡಿದೆ. ಮುಡಿಪು ಜಕ್ಷನ್‌ನ ಯೂನಿಯನ್ ಬ್ಯಾಂಕ್‌ನ ಹತ್ತಿರದ ಸೂರ್ಯೇಶ್ವರ ಬಿಲ್ಡಿಂಗ್‌ನಲ್ಲಿ ಶುಭಾರಂಭ ಗೊಂಡ ಈ ನೂತನ ಶೋರೂಂನಲ್ಲಿ ಸೇಲ್ಸ್, ಸರ್ವಿಸ್, ಸ್ಪೇರ್‍ಸ್‌ಗಳು ಲಭ್ಯವಿದೆ. ಹಾಗೂ ಸೋನಾ ಟಿವಿಎಸ್‌ನ ಎಲ್ಲಾ ಶೋರೂಂನಲ್ಲಿ ಇಂಡಿಯನ್ ಫೇಸ್ಟಿವಲ್ ಧಮಾಕ
ಬಂಟ್ವಾಳದ ತನ್ನ ಪತ್ನಿ ಮನೆಯಲ್ಲಿ ಉಳ್ಳಾಲ ತಾಲೂಕು ಕೊಂಡಾಣ ಮಿತ್ರನಗರ ನಿವಾಸಿ ರವೀಂದ್ರ (35) ಆತ್ಮಹತ್ಯೆಗೈದ ಘಟನೆ ನಡೆದಿದೆ. ರವೀಂದ್ರ ಅವರು ನಿನ್ನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ತೆರಳಿದ್ದು ಮದ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಗಂಡು ಮಗುವನ್ನು ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಪತ್ನಿಯ ಮನೆ ವಾಪಸ್ಸಾಗಿದ್ದರು. ಸಂಜೆ ಪತ್ನಿ ಮೊಬೈಲ್ ಕರೆ ಮಾಡಿದಾಗ ರವೀಂದ್ರ ಅವರು ಕರೆ ಸ್ವೀಕರಿಸಿಲ್ಲ. ಗಾಬರಿಗೊಂಡ
ಉಳ್ಳಾಲ: ಕಾರು ಚಾಲಕನೊರ್ವ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಇತರ ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದ ಘಟನೆ ರಾ.ಹೆ. 66ರ ಜೆಪ್ಪುವಿನ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಮೀಪದಲ್ಲಿ ನಡೆದಿದ್ದು ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸಿಯಾಝ್ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿದ್ದ ಲಾರಿ ಸಿಯಾಝ್ ಕಾರು
ಉಳ್ಳಾಲ ಕ್ಷೇತ್ರವನ್ನು ಮುಂದಿನ 30-40 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕುಡಿಯುವ ನೀರು, ರಸ್ತೆ, ವಿದ್ಯುತ್ ಮೂಲಭೂತ ಸೌಕರ್ಯವನ್ನು ಒದಗಿಸುವ ಮೂಲಕ, ಮಂಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಸಿದ್ಧಪಡಿಸಲಾಗುವುದು ಎಂದು ವಿಧಾನ ಸಭೆಯ ಸ್ಪೀಕರ್, ಸ್ಥಳೀಯ ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ. ಅವರು ನಗರದ ಸರ್ಕ್ಯೂಟ್ ಹೌಸ್‍ನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮಂಗಳೂರು ಕ್ಷೇತ್ರದಲ್ಲಿ ವಿದ್ಯುತ್
ಬೈಕ್ ಕಳವುಗೈದು ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದ ಯುವಕ ಸೇದಲು ಗಾಂಜಾ ಸಿಗದೆ ಜಿಗುಪ್ಸೆಗೊಂಡು ಇಂದು ಬೆಳಿಗ್ಗೆ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ.ತಲಪಾಡಿ ಗ್ರಾಮದ ನಾರ್ಲ,ಪಡೀಲ್ ನಿವಾಸಿ ಪೈಝಲ್(24) ಆತ್ಮಹತ್ಯೆಗೈದ ಯುವಕ.ಫೈಝಲ್ ಇಂದು ಬೆಳಿಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ಕುಣಿಕೆ ಬಿಗಿದು ಆತ್ಮಹತ್ಯೆಗೈದಿದ್ದಾನೆ.ಮನೆಯಲ್ಲಿ ಫೈಸಲ್
ಉಪ್ಪಳ ಹಿದಾಯತ್ ನಗರದಲ್ಲಿ ಪೋಲಿಸರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯನನ್ನು ಮಂಜೇಶ್ವರ ಪೋಲಿಸರು ಬಂಧಿಸಿದ್ದಾರೆ. ಮುಸ್ಲಿಂ ಲೀಗ್ ಮುಖಂಡ, ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ, ಉಪ್ಪಳ ಹಿದಾಯತ್ ಬಜಾರ್‍ನ ಗೋಲ್ಡನ್ ಅಬ್ದುಲ್ ರಹಮಾನ್ ಬಂಧಿತ ಆರೋಪಿಯಾಗಿದ್ದಾನೆ. ಉಪ್ಪಳ ಹಿದಾಯತ್ ನಗರದಲ್ಲಿ ಗಸ್ತಿನಲ್ಲಿದ್ದ ಪೋಲಿಸರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಹಲ್ಲೆಯಿಂದ
ಉಳ್ಳಾಲ: ನಮ್ಮೂರ ಸನ್ಮಾನ ಸಮಿತಿ ದೇರಳಕಟ್ಟೆ ಆಶ್ರಯದಲ್ಲಿ ಸ್ಪೀಕರ್ ಯುಟಿ ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮವು ದೇರಳಕಟ್ಟೆ ಸಿಟಿ ಗ್ರೌಂಡ್‍ನಲ್ಲಿ ನಡೆಯಿತು. ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ.ಶಾಂತರಾಂ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಒಬ್ಬ ಶಾಸಕನಾಗಿ, ಮಂತ್ರಿ ಆಗಿ ಜನರ ಒಳಿತಿಗಾಗಿ ಏನನ್ನು ಮಾಡಲು ಸಾಧ್ಯ ಎಂಬುದು ಖಾದರ್ ಅವರ ಮೂಲಕ ತಿಳಿದು ಕೊಳ್ಳಲು ಸಾಧ್ಯ. ಗ್ರಾಮ ಅಭಿವೃದ್ಧಿ ಆಗಲು ಸ್ಪೀಕರ್ ಯುಟಿ ಖಾದರ್ ಕಾರಣ ಎಂದು



























