Home ಕರಾವಳಿ Archive by category ಉಳ್ಳಾಳ (Page 24)

ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿಯಲಿದ್ದೇವೆ : ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ

ಉಳ್ಳಾಲ: ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಪಕ್ಷದ ಆದೇಶದಂತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದರೂ ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ, ಪಕ್ಷಕ್ಕಾಗಿ ದುಡಿಯುವ ಕಾರ್ಯವನ್ನು ಹಿಂದಿನಿಂದ ಮಾಡುತ್ತಾ ಬಂದಿದ್ದೇವೆ, ಅಭ್ಯರ್ಥಿಯಾಗಲು ಅವಕಾಶ ಕಲ್ಪಿಸಿಕೊಟ್ಟ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳನ್ನು

ತೊಕ್ಕೊಟ್ಟಿನ ಥ್ರೆಡ್ ಹೌಸ್ ಮಳಿಗೆ ಮಾಲಕ ಆತ್ಮಹತ್ಯೆ

ತೊಕ್ಕೊಟ್ಟು ಜಂಕ್ಷನ್‍ನಲ್ಲಿರುವ ಥ್ರೆಡ್ ಹೌಸ್ ಮಳಿಗೆಯ ಮಾಲಕ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೂಲತ ಸೇವಂತಿಗುಡ್ಡೆ ನಿವಾಸಿಯಾಗಿದ್ದ ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿರುವ ಪ್ರವೀಣ್ ಆಳ್ವ (45) ಆತ್ಮಹತ್ಯೆಗೈದಿದ್ದು, ತೊಕ್ಕೊಟ್ಟು ಜಂಕ್ಷನ್ ಬಳಿ ಹೊಲಿಗೆ ನೂಲು ಸೇರಿದಂತೆ ಟೈಲರ್ ಅಂಗಡಿಗಳಿಗೆ ಹೊಲಿಗೆ ಸಂಬಂಧಿಸಿದ ಕಚ್ಚಾ ವಸ್ತುಗಳನ್ನು ಪೂರೈಸುವ ಥ್ರೆಡ್ ಹೌಸ್ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ

ಪಿಕಪ್ ಕಳವು: ಅಂತರಾಜ್ಯ ವಾಹನ ಚೋರನ ಬಂಧನ

ಉಳ್ಳಾಲ: ರಾ.ಹೆ66 ರ ಕೋಟೆಕಾರು ಬಳಿಯಿಂದ ಪಿಕಪ್ ವಾಹನ ಕಳವು ನಡೆಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತನಿಂದ ಕಳವು ನಡೆಸಿದ ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ. ಕೇರಳ ಮೇಲ್ಪರಂಬ ಮಾಂಗಡ್ ನಿವಾಸಿ ಅಹಮ್ಮದ್ ರಮ್ಸಾನ್ ಯಾನೆ ರಮ್ಸಾನ್ (26) ಬಂಧಿತ. ಜ.3 ರಂದು ಕೋಟೆಕಾರು ಸೌತ್ ಇಂಡಿಯಾ ಮರದ ಡಿಪೋ ಬಳಿ ನಿಲ್ಲಿಸಲಾಗಿದ್ದ ಪಿಕಪ್ ಕಳವು ನಡೆದಿತ್ತು.ಈ ಕುರಿತು ಮಾಲೀಕ ಮಹಮ್ಮದ್ ಶರೀಫ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಕುತ್ತಾರಿನಿಂದ ದೇರಳಕಟ್ಟೆವರೆಗೆ ಪೊಲೀಸ್ ಪಥಸಂಚಲನ

ಉಳ್ಳಾಲ: ಕರ್ನಾಟಕ ವಿಧಾನಸಭಾ ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಿಂದ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆವರೆಗೆ ಸಿಆರ್ ಪಿಎಫ್ , ಉಳ್ಳಾಲ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹಾಗೂ ಕೆಎಸ್ ಆರ್ ಪಿ ಅಸೈಗೋಳಿ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ , ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್, ಮಂಗಳೂರು ದಕ್ಷಿಣ

ಡಿವೈಎಫ್ ಐ ನಿಂದ ಹರೇಕಳ ಸೇತುವೆ ಗೇಟ್ ತೆರವು : ಸಂಚಾರಕ್ಕೆ ಮುಕ್ತ

ಉಳ್ಳಾಲ : ಹರೇಕಳದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಗೆ ಅಳವಡಿಸಲಾಗಿದ್ದ ಗೇಟುಗಳನ್ನು ಡಿವೈಎಫ್ಐ ಕಾರ್ಯಕರ್ತರು ಸಾರ್ವಜನಿಕರ ಸಹಕಾರದಲ್ಲಿ ಕಿತ್ತೆಸೆದು ಸಂಚಾರ ಮುಕ್ತಗೊಳಿಸಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಏಪ್ರಿಲ್ ಒಂದರಿಂದ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿತ್ತು. ಸಣ್ಣ ನೀರಾವರಿ ಇಲಾಖೆ ಆದೇಶ ಸಿಗದೇ

ಕರ್ಕಷ ಹಾರ್ನ್ ಬಳಕೆ : ಮೂರು ದಿನದಲ್ಲಿ 130 ಪ್ರಕರಣಗಳು

ಉಳ್ಳಾಲ: ಕರ್ಕಷ ಹಾರ್ನ್ ಬಳಸುತ್ತಿದ್ದ ವಾಹನಗಳನ್ನು ತಡೆದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಮೂರು ದಿನಗಳಲ್ಲಿ ಒಟ್ಟು 130 ವಾಹನಗಳ ಹಾರ್ನ್ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಠಾಣಾಧಿಕಾರಿ ರಮೇಶ್ ಹಾನಾಪುರ ನೇತೃತ್ವದ ಪೊಲೀಸರ ತಂಡ ತಲಪಾಡಿಯಲ್ಲಿ ತಪಾಸಣೆ ನಡೆಸಿ ಕ್ರಮಕೈಗೊಂಡಿದ್ದಾರೆ. ಟ್ರಕ್ ಗಳಲ್ಲಿ ಕಾನೂನು ಉಲ್ಲಂಘಿಸಿ ಕರ್ಕಶವಾದ ಹಾರ್ನ್ ಬಳಕೆ ಮಾಡುತ್ತಿರುವ ಕುರಿತು ಸಾರ್ವಜನಿಕ ವಲಯದಿಂದ ದೂರುಗಳು ಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.

ತೊಕ್ಕೊಟ್ಟು : ಲಾರಿಯಿಂದ ಕೆಳಗೆ ಬಿದ್ದ ಪೈಪುಗಳು : ತಪ್ಪಿದ ಅನಾಹುತ

ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ಮೇಲೆ ಪೈಪ್ ಹೇರಿಕೊಂಡು ತೆರಳುತ್ತಿದ್ದ ಲಾರಿಯಿಂದ ಪೈಪುಗಳು ಕೆಳಗೆ ರಸ್ತೆಗೆ ಉರುಳಿ ಸಂಭಾವ್ಯ ಅನಾಹುತ ತಪ್ಪಿದೆ.ನೀರು ಸರಬರಾಜು ಮಾಡುವ ಹಳೇ ಪೈಪ್ ಗಳನ್ನು ನವಯುಗ ಸಂಸ್ಥೆಯವರು ಗೋರಿಗುಡ್ಡೆಯಿಂದ ತಲಪಾಡಿ ಟೋಲ್ ಬಳಿ ದಾಸ್ತಾನು ಇಡಲು ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ತೊಕ್ಕೊಟ್ಟು ಫ್ಲೈಓವರ್ ಮೇಲೆ ಲಾರಿ ತೆರಳುವ ಸಂದರ್ಭ , ಪೈಪ್ ಗಳನ್ನು ಕಟ್ಟಲಾಗಿದ್ದ ವಸ್ತು ತುಂಡಾಗಿ ಲಾರಿಯಿಂದ ಪೈಪುಗಳು ರಸ್ತೆಗೆ ಉರಳಿದೆ.

ಹರೇಕಳ : ಆಕಸ್ಮಿಕ ಬೆಂಕಿ ಅವಘಡ, ಮನೆ ಸಂಪೂರ್ಣ ಭಸ್ಮ

ಉಳ್ಳಾಲ : ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿಯಾದ ನೇಬಿಸ (ದಿವಂಗತ ಅಬ್ದುಲ್ ಖಾದರ್) ರ ಮನೆಯಲ್ಲಿ ಇಂದು ಮುಸ್ಸಂಜೆ 6.50ರ ವೇಳೆ ಅಡುಗೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ರಭಸಕ್ಕೆ ಮನೆಯು ಸಂಪೂರ್ಣವಾಗಿ ಕರಕಲವಾಗಿದ್ದು, ಯಾವುದೇ ಪ್ರಾಣ ಹಾನಿ ನೋವು ಸಂಭವಿಸಿರುವುದಿಲ್ಲ. ರಂಝಾನ್ ಉಪವಾಸದ ಪ್ರಯುಕ್ತ ಇಫ್ತಾರ್’ನಲ್ಲಿ ನಿರತವಾಗಿದ್ದ ಮನೆಯವರ ಸಮಯ ಪ್ರಜ್ಞೆಯಿಂದ ಯಾರಿಗೂ ಪ್ರಾಣ ಹಾನಿಯಾಗಿರುವುದಿಲ್ಲ, ಆದರೆ ಮನೆಯು ಸಂಪೂರ್ಣವಾಗಿ

ತೊಕ್ಕೊಟ್ಟು : ಗೋವಾದಿಂದ ತಂದ 160 ಲೀ. ಮದ್ಯ ವಶಕ್ಕೆ

ಉಳ್ಳಾಲ: ತೊಕ್ಕೊಟ್ಟು ಮತ್ತು ಕಲ್ಲಾಪು ಭಾಗದಲ್ಲಿ 160 ಲೀ ಮದ್ಯವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಸಮಾರಂಭಕ್ಕೆಂದು ಗೋವಾದಿಂದ ತರಲಾಗುತ್ತಿದ್ದ ಮದ್ಯವನ್ನು ಚುನಾವಣಾ ಅಧಿಕಾರಿಗಳು ತೊಕ್ಕೊಟ್ಟು ಬಳಿ ಪತ್ತೆ ಹಚ್ಚಿದ್ದಾರೆ. ತೊಕ್ಕೊಟ್ಟು ಬಳಿ ವಶಕ್ಕೆ ಪಡೆದುಕೊಂಡು ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದಾಗ ಕಲ್ಲಾಪು ಭಾಗದಲ್ಲಿ 60 ಲೀ ಇರಿಸಿರುವ ಮಾಹಿತಿ ಸಿಕ್ಕಿದೆ. ಒಟ್ಟು 160 ಲೀ ಮದ್ಯ ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡು ಪ್ರಕರಣ

ತಲಪಾಡಿ:ಕೇರಳದಿಂದ ಸಾಗಾಟ ನಡೆಸುತ್ತಿದ್ದ : ದಾಖಲೆರಹಿತ ರೂ. 7,095,000 ,ವಶಕ್ಕೆ

ಉಳ್ಳಾಲ: ಕೇರಳದಿಂದ ದಾಖಲೆಗಳಿಲ್ಲದೆ ಹಣ ಸಾಗಾಟ ನಡೆಸುತ್ತಿದ್ದ ಕಾರನ್ನು ತಡೆಹಿಡಿದ ಉಳ್ಳಾಲ ಪೆÇಲೀಸರು, ಕಾರಿನಲ್ಲೊದ್ದ ರೂ. 7,095,000 ನಗದು ಸಹಿತ ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಕುತ್ರಿಕ್ಕೋಡು ನಿವಾಸಿ ಸುರೇಶ್ ಎಂಬವರಲ್ಲಿದ್ದ ದಾಖಲೆ ರಹಿತ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಪೆÇಲೀಸರು ಕೇರಳ ಗಡಿಭಾಗ ತಲಪಾಡಿಯಲ್ಲಿ ವಾಹನ ತಪಾಸಣೆಗೈಯ್ಯುತ್ತಿದ್ದಾಗ ನಗದು ಪತ್ತೆಯಾಗಿದೆ. ಚುನಾವಣಾ ಆಯೋಗದ ರಿಟೈನಿಂಗ್ ಅಧಿಕಾರಿಗಳಿಗೆ ನಗದು ಹಾಗೂ