ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ವತಿಯಿಂದ ಸಾಮೂಹಿಕ ಸಮುದ್ರ ಪೂಜೆಯು ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ನಡೆಯಿತು.ಪ್ರತೀ ಗ್ರಾಮದಿಂದ ಸಂಗ್ರಹಿಸಿದ ಹಾಲು, ತೆಂಗಿನಕಾಯಿಗಳನ್ನು ಶ್ರೀ ಬ್ರಹ್ಮ ಬೊಬ್ಬರ್ಯ ದೈವಸ್ಥಾನದಲ್ಲಿರಿಸಿ, ಪ್ರಾರ್ಥನೆ ಸಲ್ಲಿಸಿ ನಂತರ ಭಜನೆಯೊಂದಿಗೆ ಕಡಲ ಕಿನಾರೆಗೆ ಆಗಮಿಸಿ ಗಂಗಾ ಮಾತೆಗೆ ಸಮರ್ಪಣೆ ಮಾಡಲಾಯಿತು. ಮುಂದಿನ ಮೀನುಗಾರಿಕೆಯ
ಮಂಗಳೂರಿನ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮಥ್ರ್ಯದ ವಸತಿಯುತ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಕೇರಳದ ಸಂಪ್ರದಾಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಏಕೈಕ ಹಬ್ಬವೇ ಓಣಂ. ಅಂತಹ ಓಣಂ ಹಬ್ಬವನ್ನು ಮಂಗಳೂರಿನಲ್ಲೂ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಮಂಗಳೂರಿನ ಸಾನಿಧ್ಯ ಸಂಸ್ಥೆಯಲ್ಲಿ ಓಣಂ ಹಬ್ಬದ ಸಂಕೇತವಾಗಿ ಪೂಕಳಂನ್ನು ರಚಿಸಿ ವಿಶೇಷವಾಗಿ ಆಚರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಪೊಲೀಸ್ ಉಪ ಆಯುಕ್ತರಾದ
ರಾಜ್ಯ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ನಗರದ ಪಡೀಲ್‍ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಕಾಮಗಾರಿಗಳನ್ನು ಪರಿಶೀಲಿಸಿ ಸಲಹೆ, ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟೀರಿಯ, ಕಂದಾಯ ಇಲಾಖೆಯ ಆಯುಕ್ತ ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ನಗರದ ಕೊಡಿಯಾಲ್‍ಬೈಲ್‍ನ ಪಿವಿಎಸ್ ಕಲಾಕುಂಜ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಿಸಲಾಗುವುದು ಎಂದು ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ ತಿಳಿಸಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 2 ಮತ್ತು 3ರಂದು ದೇವಾಲಯದ
ಗ್ಯಾರೇಜ್, ಕೆಫೆ, ಮತ್ತು ಆಟೋ ಪಾರ್ಟ್ಸ್ ಈ ಮೂರನ್ನೂ ಒಳಗೊಂಡ ಗ್ಯಾರೇಜ್ ಕೆಫೆ ಮಂಗಳೂರಿನ ನಾಗುರಿಯಲ್ಲಿ ಉದ್ಘಾಟನೆಗೊಂಡಿತು.ಎಲ್ಲವೂ ಒಂದೇ ಸೂರಿನಡಿಯಲ್ಲಿರುವ ಈ ನೂತನ ಸಂಸ್ಥೆಯನ್ನು ಅತಿಥಿಗಳು ಉದ್ಘಾಟಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಹುಲಿನಲಿಕೆ ಆಕರ್ಷಣೀಯವಾಗಿತ್ತು. ನಾಗುರಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮೋಟೋ ಕ್ಲೌನ್ಝ್, ಸ್ಲೈಸ್ ಆಫ್ ಹೆವೆನ್ ಮತ್ತು ಐಕ್ಯಂ ಆಟೋ ಸ್ಪಾ ಆಂಡ್ ಡಿಟೈಲಿಂಗ್ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುತ್ತದೆ.
ಮುಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾ ಸಭಾದ 77ನೇ ವಾರ್ಷಿಕ ಮಹಾಸಭೆ ಮತ್ತು ವಿದ್ಯಾ ವರ್ಧಕ ಸಂಘದ 33ನೇ ವಾರ್ಷಿಕ ಮಹಾಸಭೆ ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ನಡೆಯಿತು. ರಾಮದಾಸ್ ಶೆಟ್ಟಿಗಾರ್ ಮತ್ತು ಲಕ್ಷ್ಮಣ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪದ್ಮಶಾಲಿ ಸಾಮಾಜಿಕ ನಾಯಕತ್ವ ಪ್ರಶಸ್ತಿಯನ್ನು ವಿ.ನಾರಾಯಣ ಶೆಟ್ಟಿಗಾರ್ ವಕ್ವಾಡಿ ಯವರಿಗೆ ನೀಡಲಾಯಿತು. ಸಮಾಜದ ವಿವಿಧ ಕ್ಷೇತ್ರದ ಸಾಧಕರು,ಪ್ರತಿಭಾವಂತರನ್ನು ಮತ್ತು
ಮಾದಕ ವಸ್ತು `ಸಿಂಥೆಟಿಕ್ ಡ್ರಗ್ಸ್ ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಸುರತ್ಕಲ್ ಕಾಟಿಪಳ್ಳ 2ನೇ ಬ್ಲಾಕ್‍ನ ಶಾಕೀಬ್ ಯಾನೆ ಶಬ್ಬು (33), ಚೊಕ್ಕಬೆಟ್ಟು 8ನೆ ಬ್ಲಾಕ್‍ನ ನಿಸಾರ್ ಹುಸೈನ್ ಯಾನೆ ನಿಚ್ಚು (34) ಬಂಧಿತ ಆರೋಪಿಗಳು. ಇವರಿಂದ ಒಟ್ಟು 52 ಗ್ರಾಂ ತೂಕದ 2,60,000 ರೂ.ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕಾರು, 2 ಮೊಬೈಲ್ ಫೆÇೀನು, ನಗದು 1,800 ರೂ.,
ಪ್ರತೀ ವರ್ಷದಂತೆ ಈ ವರ್ಷವೂ ಓಣಂ ಸಂದರ್ಭ ಅಯ್ಯಪ್ಪ ಸ್ವಾಮಿ ಮಾಲೆಧರಿಸಿ ಯಾತ್ರೆಗೆ ಹೊರಟ ಸ್ಬಾಮಿಗಳ ಮೂಲಕ ಅಯ್ಯಪ್ಪನಿಗೆ ಬಹಳ ಪ್ರಿಯವಾದ ಪಡಿಪೂಜೆಯು ಮುಲ್ಕಿ ಅಯ್ಯಪ್ಪ ಮಂದಿರದಲ್ಲಿ ನಡೆಯಿತು. ಪೂಜೆಯ ಬಳಿಕ ಮಾತನಾಡಿದ ಗುರುಸ್ವಾಮಿ ಗಿರೀಶ್ ಪಲಿಮಾರು, ಜ್ಯೋತಿ ಸ್ವರೂಪನಾದ ಅಯ್ಯಪ್ಪನನ್ನು ಸಾಕ್ಷಾತ್ಕಾರಗೊಳಿಸುವ ನಿಟ್ಟಿನಲ್ಲಿ ಈ ದೀಪಾರಾಧನೆ ಅಂದರೆ ಪಡಿಪೂಜೆ ನಡೆಸಲಾಗಿದ್ದು, ಮಾಲೆಧಾರಿಗಳು ವೃತ ನೇಮ ನಿಷ್ಠೆಯಿಂದ ಓಣಂ ಪರ್ವಕಾಲದಲ್ಲಿ ಶಬರಿ ಸನ್ನಿಧಾನಕ್ಕೆ
ಮಂಗಳೂರಿನ ಪರಪಾದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಗೋಡೆ ಬರಹವನ್ನು ಮಂಗಳೂರು ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಅನಾವರಣಗೊಳಿಸಿದರು. ಕಾರ್ಯಕ್ರಮವು ಮುತ್ತೂಟ್ ಸಾಮಾಜಿಕ ಜವಾಬ್ದಾರಿ ವಿಭಾಗ ಮತ್ತು ಪ್ರಥ್ವಿ ಚಾರಿಟೇಬಲ್ ಟ್ರಸ್ಟ್ ಮೂಲಕ ನೆರವೇರಿತು. ಇದೇ ವೇಳೆ ಮಂಗಳೂರು ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಅವರು ಮಾತನಾಡಿ, ಮುತ್ತೂಟ್‍ನ ಸಿಎಸ್‍ಆರ್ ಕಾರ್ಯಕ್ರಮವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ
ಮಂಗಳೂರಿನ ಜ್ಯೋತಿ ಸರ್ಕಲ್‍ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ತನಿಷ್ಕ್ ಜ್ಯುವೆಲ್ಲರಿ ಶ್ರೀ ವರಮಹಾಲಕ್ಷ್ಮೀ ಪೂಜೆಯು ವಿಜೃಂಭಣೆಯಿಂದ ನಡೆಯಿತು. ವರಮಹಾಲಕ್ಷ್ಮೀ ಪೂಜೆಯ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‍ಗಳನ್ನು ನೀಡಲಾಗುತ್ತಿದೆ.ಕಾರ್ಯಕ್ರಮವನ್ನು ಗ್ರಾಹಕರಾದ ಭರತ್ ಉಳ್ಳಾಲ್ ದಂಪತಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಟಾಟಾ ಎಂದರೆ ಜಗತ್ತಿನಲ್ಲಿಯೇ ಒಂದು ನಂಬಿಕೆಯ ಹೆಸರಾಗಿದ್ದು,




























