Home ಕರಾವಳಿ Archive by category ಮಂಗಳೂರು (Page 119)

ಪಿಲಿಕುಳದಲ್ಲಿ ಮತ್ಸ್ಯೋತ್ಸವ

ಬಲೆಗೆ ಬಿದ್ದ ಕೆಜಿಗಟ್ಟಲೆ ತೂಕವಿರುವ ಮೀನು . ಬಲೆಯಿಂದ ಇಳಿಸುತ್ತಿದ್ದಂತೆ ಮೀನುಗಳ ಮಾರಾಟ. ಖರೀದಿಸಿದ ಮೀನು ಮಧ್ಯಾಹ್ನಕ್ಕೆ ಔತಣ. ಹೌದು.. ಈ ದೃಶ್ಯ ಕಂಡುಬಂದದ್ದು ಮಂಗಳೂರಿನ ಪಿಲಿಕುಳ ಮತ್ಸ್ಯೋತ್ಸವದಲ್ಲಿ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಮೀನುಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಪಿಲಿಕುಳದ ಲೇಕ್ ಗಾರ್ಡನ್ ಕೆರೆಯಲ್ಲಿ ಮತ್ಸ್ಯಬೇಟೆ ನಡೆದು ಅಲ್ಲಿಯೇ

ಮಂಗಳೂರು : ಮಣಿಪುರದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮಣಿಪುರ ರಾಜ್ಯದಲ್ಲಿ ಸುಮಾರು ಎರಡು ತಿಂಗಳುಗಳಿಂದ ಅಲ್ಲಿನ ಕ್ರೈಸ್ತ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಹಾಗೂ ಶಾಂತಿ ಮರು ಸ್ಥಾಪಿಸಿ ನೊಂದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸೀರೋ ಮಲಬಾರ್ ಕೆಥೊಲಿಕ್ ಅಸೋಸಿಯೇಶನ್ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಮಣಿಪುರ ಹಿಂಸಾಚಾರವನ್ನು ತಡೆಗಟ್ಟಲು ಕೇಂದ್ರ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಪ್ರಧಾನಿಯವರು ಮಣಿಪುರಕ್ಕೆ ಭೇಟಿ

ಮಂಗಳೂರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ

ಮಂಗಳೂರು : ಕನ್ನಡ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರದ ನೆನಪಿನಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಈ ಪತ್ರಿಕೆ ಹಾಗೂ ಅದರ ಸಂಪಾದಕ ಡಾ.ಹೆರ್ಮನ್ ಮ್ಯೋಗ್ಲಿಂಗ್ ಅವರ ಚರಿತ್ರೆಯನ್ನು ಜನತೆಯ ಮುಂದಿಡುವ ಕೆಲಸ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಹೇಳಿದರು. ಮಂಗಳೂರು ಬಲ್ಮಠ ಥಿಯೋಲಾಜಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ನಡೆದ ಪತ್ರಿಕಾ

ದೇರಳಕಟ್ಟೆ : ದೇಶದ ಮೊದಲ ಕೇಶ ವಿನ್ಯಾಸ ಕಾಲೇಜು – “ಶಿವಾಸ್” ಆಗಸ್ಟ್ ನಲ್ಲಿ ಕಾರ್ಯಾರಂಭ

ಮಂಗಳೂರು ವಿಶ್ವವಿದ್ಯಾನಿಲಯದಿಂದ ಅಂಗೀಕೃತವಾದ ದೇಶದ ಮೊತ್ತ ಮೊದಲ ಕೇಶ ವಿನ್ಯಾಸ ಕಾಲೇಜು ಆಗಸ್ಟ್ ನಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿ ಶಿವಾ’ಸ್ ಕಾಲೇಜು ಹೆಸರಲ್ಲಿ ಕಾರ್ಯಾರಂಭಗೊಳ್ಳಲಿದೆ. ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಮತ್ತು ಒಂದು ವರ್ಷದ ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪ್ರಮಾಣೀಕೃತ ಸರ್ಟಿಫಿಕೇಟ್ ಸಿಗಲಿದೆ. ಬಹು ಬೇಡಿಕೆಯಿರುವ ಕೇಶ ವಿನ್ಯಾಸ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಉದ್ಯೋಗವಕಾಶ ಒದಗಿಸುವ

ಕೋಮು ಗಲಭೆ ಪ್ರಚೋದಿಸುವ ಪೋಸ್ಟ್ ಗಳನ್ನು ಹರಿಯ ಬಿಡುವವರ ವಿರುದ್ಧ ಕ್ರಮಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಮನವಿ

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಭಾವನೆಗೆ ದಕ್ಕೆ ತರುವ, ಕೋಮು ಗಲಭೆ ಪ್ರಚೋದಿಸುವ ಪೋಸ್ಟ್ ಗಳನ್ನು ಹರಿಯಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿಯವರು ಮಂಗಳೂರು ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಅವರಿಗೆ ಮನವಿ ಮಾಡಿದ್ದಾರೆ. ಪೊಲೀಸ್ ಕಮೀಷನರ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿದ ಶಾಸಕರು ಸಾಮರಸ್ಯ, ಸಹಬಾಳ್ವೆ ಮತ್ತು ಶಾಂತಿ ಸುವ್ಯವಸ್ಥೆ ತುಂಬಿರುವ ಜಿಲ್ಲೆಯಲ್ಲಿ ಅವಹೇಳನಕಾರಿ ಪೋಸ್ಟ್ ಮೂಲಕ

ಪಡುಬಿದ್ರಿ : “ಪಿಸು ಮಾತು” ಮ್ಯೂಸಿಕ್ ವಿಡಿಯೋ ಬಿಡುಗಡೆ ಕಾರ್ಯಕ್ರಮ

ಶುಭಾ ಶೆಟ್ಟಿ ಪ್ರೋಡಕ್ಷನ್ಸ್ ಬ್ಯಾನರ್‍ನಲ್ಲಿ ತಯಾರಾದ ಉಮೇಶ್ ಶೆಟ್ಟಿ ಮತ್ತು ಧನರಾಜ್ ಶೆಟ್ಟಿ ನಿರ್ಮಾಣದ “ಪಿಸುಮಾತು” ಕನ್ನಡ ಮ್ಯೂಸಿಕ್ ವಿಡಿಯೋದ ಬಿಡುಗಡೆ ಕಾರ್ಯಕ್ರಮವು ಪಡುಬಿದ್ರಿಯ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ನಡೆಯಿತು. ಈ ವಿನೂತನ ಕಥಾ ಹಂದರವನ್ನು ಹೊಂದಿರುವ ಮ್ಯೂಸಿಕ್ ವಿಡಿಯೋವನ್ನು ಕಾಪುವಿನ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಭವಾನಿ ಶಂಕರ್ ಹೆಗ್ಡೆ, ಸಂಜಯ್ ಕುಮಾರ್ ಶೆಟ್ಟಿ

ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬಾರದು : ಸಾಧು ಸಂತರಿಂದ ಸುದ್ದಿಗೋಷ್ಟಿ

ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬಾರದು. ಕಾಯ್ದೆ ವಾಪಸ್ ಪಡೆದಲ್ಲಿ ಸಮಾಜದಲ್ಲಿ ಅಶಾಂತಿ ಮೂಡಬಹುದು. ಸಂತರು ಸೇರಿಕೊಂಡು ಉಪವಾಸ ಸತ್ಯಾಗ್ರಹ ಮಾಡುವುದಕ್ಕೂ ರೆಡಿ ಇದ್ದೇವೆ. ಕಾಯ್ದೆ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವ, ರಾಜ್ಯಪಾಲರಿಗೆ ಮನವಿ ನೀಡುತ್ತೇವೆ ಎಂದು ಸಂತರು ತಿಳಿಸಿದ್ದಾರೆ.

ಸ್ಥಗಿತಗೊಂಡ ಸರ್ಕಾರಿ ಬಸ್ ಪುನರಾರಂಭಿಸಲು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ

ಸ್ಥಗಿತಗೊಂಡ ಸರ್ಕಾರಿ ಬಸ್ ಪುನರಾರಂಭಿಸಬೇಕು ಮತ್ತು ಜಿಲ್ಲೆಯ ವಿವಿಧ ಭಾಗಗಳಿಗೆ ಸರ್ಕಾರಿ ಬಸ್ ಒದಗಿಸಬೇಕೆಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆಗಳವರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದಲ್ಲಿ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಬಿ. ಶೆಟ್ಟಿ ಅವರು, ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಭರವಸೆಗಳನ್ನು ಮಾತ್ರ ಕೊಡುತ್ತಿದ್ದಾರೆ ಹೊರತು ಯಾವ

ಮಂಗಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಆಷಾಢ ಏಕಾದಶಿ

ಮಂಗಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಆಷಾಢ ಏಕಾದಶಿ ಯನ್ನು 28/6/2023 ರಂದು ಅಮೃತೇಶ್ವರಿ ಸಭಾಂಗಣದಲ್ಲಿ ಆಚರಿಸಲಾಯಿತು. ಆಷಾಢ ಏಕಾದಶಿ ಆಚರಣೆಯ ಮಹತ್ವ ದ ಬಗ್ಗೆ ದೃಶ್ಯಾವಳಿ ಯ ಮೂಲಕ ತಿಳಿಸಲಾಯಿತು.ಶಾಲಾ ಪುಟಾಣಿಗಳು ವಿಠೋಬ ಮತ್ತು ಸಂತರ ವೇಷ ಧರಿಸಿ ಎಲ್ಲರಲ್ಲೂ ಭಕ್ತಿ – ಭಾವವನ್ನು ತುಂಬಿಸಿದರು. ನಂತರ ವಿದ್ಯಾರ್ಥಿಗಳಿಂದ ಭಜನ ಕಾರ್ಯಕ್ರಮವು ನಡೆಯಿತು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಅಕ್ಷತಾ ಶೆಣೈ ಮಂಗಳಾರತಿ ಮಾಡಿ ಪ್ರಸಾದ

ಬಿಜೆಪಿಯಲ್ಲಿ ಮನೆಯೊಂದು 10 ಬಾಗಿಲು ಎಂಬಂತಾಗಿದೆ : ಮಂಗಳೂರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಟೀಕೆ

ಬಿಜೆಪಿಯಲ್ಲಿ ಮನೆಯೊಂದು ಬಾಗಿಲು ಹತ್ತು ಎಂಬಂತಾಗಿದೆ. ಯಾರು ಏನು ಮಾತನಾಡುತ್ತಾರೆಂದು ಗೊತ್ತಾಗುತ್ತಿಲ್ಲ. ರಾಜ್ಯ ಬಿಜೆಪಿಯ ಪರಿಸ್ಥಿತಿಯನ್ನು ನಿಯಂತ್ರಿಸಲು 56 ಇಂಚಿನ ಎದೆಯವರಿಗೂ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಟೀಕಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬಿಜೆಪಿಯಲ್ಲಿ ಉದ್ಭವಿಸಿರುವ ಗೊಂದಲಗಳನ್ನು ನಿವಾರಿಸಲು ಕೇಂದ್ರದ ವರಿಷ್ಠರಿಗೂ ಸಾಧ್ಯವಾಗದ