Home ಕರಾವಳಿ Archive by category ಮಂಗಳೂರು (Page 123)

ಸುರತ್ಕಲ್‍ : ಕ್ಷುಲ್ಲಕ ಕಾರಣಕ್ಕೆ ಯುವಕನಿಂದ ಚೂರಿ ಇರಿತ

ಸುರತ್ಕಲ್‍ನ ಜನತಾ ಕಾಲನಿಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಇಲ್ಲಿನ ಕಾನ ಕಾಲನಿ ನಿವಾಸಿ ಮುಹಮ್ಮದ್ ಶಾಫಿ(35) ಚೂರಿ ಇರಿತಕ್ಕೊಳಗಾದವರು. ಅದೇ ಪರಿಸರದ ಯುವಕ ತ್ವಾಹಿರ್ (24) ಚೂರಿಯಿಂದ ಇರಿದ ಆರೋಪಿ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಕಾನಕಾಲನಿ ಮಸೀದಿಯ ಬಳಿ ಇಬ್ಬರ

ಉಳ್ಳಾಲದ ಮನೆಯೊಂದಕ್ಕೆ 7 ಲಕ್ಷ ರೂ. ವಿದ್ಯುತ್ ಬಿಲ್ : ಬಿಲ್ ರೀಡರ್ ನ ಎಡವಟ್ಟು

ಕೆಇಆರ್‍ಸಿ ಆದೇಶದಂತೆ ಈ ತಿಂಗಳು ವಿದ್ಯುತ್ ದರ ಏರಿಕೆಯಾಗಿದ್ದು ಉಳ್ಳಾಲ ಬೈಲ್‍ನ ಮನೆಯೊಂದಕ್ಕೆ ಬರೋಬರಿ 7 ಲಕ್ಷ ವಿದ್ಯುತ್ ಬಿಲ್ ಬಂದದನ್ನ ಕಂಡು ಮನೆ ಮಾಲೀಕ ಶಾಕ್ ಆಗಿದ್ದಾರೆ. ಉಳ್ಳಾಲ ಬೈಲ್‍ನ ಸದಾಶಿವ ಆಚಾರ್ಯ ಅವರ ಮನೆಗೆ ನಿನ್ನೆ ಬಂದ ಬಿಲ್ ರೀಡರ್ ಬರೋಬರಿ 7,71,072 ಬಿಲ್ಲನ್ನ ನೀಡಿ ತೆರಳಿದ್ದಾನೆ. ಮನೆ ಮಂದಿ 7 ಲಕ್ಷ ಬಿಲ್ ನೋಡಿ ಹೌಹಾರಿದ್ದು ಬಿಲ್ ರೀಡಿಂಗ್ ಮಾಡಿದ ವ್ಯಕ್ತಿಯಲ್ಲಿ ವಿಚಾರಿಸಿದಾಗ ಅದೆಲ್ಲ ನನಗೆ ಗೊತ್ತಿಲ್ಲ

ಮತಾಂತರ ನಿಷೇಧ ಕಾಯ್ದೆ ವಾಪಸ್ ವಿಚಾರ : ಜಿಲ್ಲೆಯಲ್ಲಿ ಆಂದೋಲನದ ಮಾದರಿ ಹೋರಾಟ : ಶಾಸಕ ಡಾ. ವೈ ಭರತ್ ಶೆಟ್ಟಿ

ರಾಜ್ಯದ ಸಿದ್ದರಾಮಯ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡಲು ಉದ್ದೇಶಿಸುವ ಮೂಲಕ ಪರೋಕ್ಷ ಸಮರ ಸಾರಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆಂದೋಲನದ ಮಾದರಿ ಹೋರಾಟ ನಡೆಸಿ, ಹಿಂದುತ್ವದ ಉಳಿವಿಗಾಗಿ ಟಕ್ಕರ್ ನೀಡಲಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭಾರತ್ ಶೆಟ್ಟಿ ವೈ ಹೇಳಿದ್ದಾರೆ. ಬಿಜೆಪಿ ಸರ್ಕಾರ ಮತಾಂತರ ಹಾವಳಿಯನ್ನು ತಡೆಗಟ್ಟಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಬಹಳಷ್ಟು

ಪಿರ್ಕಿಲು ತುಳು ಸಿನಿಮಾ ಯಶಸ್ವಿ ಪ್ರದರ್ಶನ

ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಎಚ್.ಡಿ. ಆರ್ಯ ನಿರ್ದೇಶನದಲ್ಲಿ ತಯಾರಾದ `ಪಿರ್ಕಿಲು’ ತುಳು ಸಿನಿಮಾ ಕರಾವಳಿಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮಂಗಳೂರು, ಪಡುಬಿದ್ರಿ, ಉಡುಪಿ, ಕಾರ್ಕಳ ಮತ್ತು ಪುತ್ತೂರಿನ ಚಿತ್ರ ಮಂದಿರದಲ್ಲಿ ಪಿರ್ಕಿಲು ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸತೀಶ್ ಪೆರ್ನೆ ಹಾಗೂ ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಈ ಸಿನಿಮಾ ಹಾಸ್ಯಭರಿತ ಕೌಟುಂಬಿಕ ಕತೆಯ ಎಳೆಯನ್ನು ಹೊಂದಿದೆ. ತಾರಾ ಬಳಗದಲ್ಲಿ ಚಿತ್ರದ

ತುಳುವಿನ ಬಹುನಿರೀಕ್ಷೆಯ ಸಿನಿಮಾ “ಸರ್ಕಸ್” ಟಿಕೆಟ್ ಬುಕ್ಕಿಂಗ್ ಆರಂಭ

ತುಳು ಸಿನಿಮಾರಂಗದ ರಾಕ್ ಸ್ಟಾರ್, ಬಿಗ್‍ಬಾಸ್ 9ರ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷೆಯ ತುಳು ಸಿನಿಮಾ ಸರ್ಕಸ್ ಜೂನ್ 23ರಂದು ವಿಶ್ವದಾದ್ಯಾಂತ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದ್ದು, ಚಿತ್ರದ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಆನ್‍ಲೈನ್ ಇಲ್ಲವೇ ದೂರವಾಣಿ ಕರೆ ಮೂಲಕ ಟಿಕೆಟ್ ಬುಕ್ಕಿಂಗ್‍ಗೆ ಅವಕಾಶವಿದ್ದು ಪ್ರೇಕ್ಷಕರು ಇಚ್ಚಿಸುವ ಸಿನಿಮಾ ಮಂದಿರಗಳಲ್ಲಿ ಚಿತ್ರ ವೀಕ್ಷಿಸಬಹುದಾಗಿದೆ. ತುಳು ಸಿನಿಮಾರಂಗದ ರಾಕ್

ಜುಲೈ 3 ರಿಂದ ಕಾಂಗ್ರೆಸ್ ಸರಕಾರದ ವಿಧಾನಸಭೆ ಅಧಿವೇಶನ

ಕಾಂಗ್ರೆಸ್ ಸರಕಾರದ ವಿಧಾನಸಭೆ ಅಧಿವೇಶನವು ಜುಲೈ 3 ರಿಂದ 14 ರವರೆಗೆ ನಡೆಯಲಿದೆ ಎಂದು ವಿಧಾನಸಭಾ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಆದೇಶ ನೀಡಿದ್ದಾರೆಅಧಿವೇಶನದ ಮೊದಲ ದಿನ ಉಭಯ ಸಧನವನ್ನು ಉಧ್ದೇಶಿಸಿ ರಾಜ್ಯಪಾಲರು ಬಾಷನ ಮಾಡಲಿದ್ದಾರೆ, ಶಾಸಕರಿಗೆ ಪ್ರಶ್ನೆಗಳ ಸೂಚನ ಪತ್ರವನ್ನು ಸದನಕ್ಕೆ ಸಲ್ಲಿಸಲು ಜೂನ್ 16 ಕೊನೆಯ ದಿನವಾಗಿದೆ

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಎಂ.ಜಿ.ರೋಡ್‍ ತಿರುವು ರಸ್ತೆಯಲ್ಲಿ ಕೃತಕ ನೆರೆ

ಮಂಗಳೂರಿನ ಎಂ.ಜಿ.ರೋಡ್ ಬಲ್ಲಾಳ್‍ಬಾಗ್‍ನಿಂದ ತಿರುವು ಪಡೆದ ರಸ್ತೆಯ ಅಂಚಿನಲ್ಲಿ ಕೃತಕ ನೆರೆ ಸೃಷ್ಠಿಯಾಗಿದೆ. ಈ ರಸ್ತೆಯಲ್ಲಿ ನೀರು ಹರಿಯಲು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ರಸ್ತೆಯಂಚಿನಲ್ಲೇ ನಿಂತು ವ್ಯಾಪಾರ ಮಳಿಗೆಗಳ ಒಳಗೆ ನುಗ್ಗುತ್ತಿದೆ. ಮಂಗಳೂರಿನ ಬಲ್ಳಾಲ್‍ಬಾಗ್ ಎಂ.ಜಿ.ರೋಡ್ ರಸ್ತೆಯಿಂದ ತಿರುವು ಪಡೆದ ರಸ್ತೆಯ ಕೋಡಿಯಾಲ್ ಗುತ್ತು ಜನತಾ ಡೀಲಕ್ಸ್ ಹೋಟೆಲ್ ಬಳಿ ಚಿಕ್ಕ ಮಳೆ ಬಂದರೆ ಸಾಕು,

ಉಳ್ಳಾಲ : ಹಿಟ್ ಆಂಡ್ ರನ್ ಅಪಘಾತ-ಯುವಕ ಸಾವು

ಉಳ್ಳಾಲ: ರಾ.ಹೆ 66ರ ಸಂಕೊಳಿಗೆ ಸಮೀಪ ತಡರಾತ್ರಿ ಬೈಕ್‍ಗೆ ಕಾರು ಢಿಕ್ಕಿ ಹೊಡೆದು ಪರಾರಿಯಾದ ಹಿಟ್ ಆಂಡ್ ರನ್ ಪ್ರಕರಣದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಗಾಯಾಳು ಕೋಟೆಕಾರು ವೈದ್ಯನಾಥ ದೈವಸ್ಥಾನ ರಸ್ತೆ ನಿವಾಸಿ ತೇಜಸ್ ರಾಮ ಕುಲಾಲ್ (28) ಮೃತಪಟ್ಟಿದ್ದರು. ರಾ.ಹೆ 66ರ ಸಂಕೊಳಿಗೆ ಸಮೀಪ ತಡರಾತ್ರಿ ಬೈಕಿಗೆ ಪೆಟ್ರೋಲ್ ಹಾಕಿಸಲೆಂದು ಉಚ್ಚಿಲದ ಪೆಟ್ರೋಲ್ ಪಂಪ್ ಗೆ ತೆರಳುವಾಗ ಘಟನೆ ಸಂಭವಿಸಿತ್ತು. ಘಟನೆಯಿಂದ ಬೈಕ್ ಸವಾರ ಗಂಭೀರ

ಮಕ್ಕಳಲ್ಲಿ ಓದುವ ಗ್ರಹಿಕೆಯ ಸಾಮಾರ್ಥ್ಯವನ್ನು ಹೆಚ್ಚಿಸಲು ಸಂಗೀತವು ಒಂದು ಉತ್ತಮ ಮಾರ್ಗವಾಗಿದೆ – ಶ್ರೀಮತಿ ಪದ್ಮಶ್ರೀ ಭಟ್

ಸಂಗೀತವು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಪಠ್ಯದೊಂದಿಗೆ ಸಂಗೀತದಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯಲ್ಲಿ ಸುಧಾರಣೆ ಕಾಣಬಹುದಾಗಿದೆ. ಸಂಗೀತವನ್ನು ಸರಳವಾಗಿ ಆಲಿಸುವಾಗ ಉತ್ತಮ ನರ ಸಂಸ್ಕರಣೆಯನ್ನು ಕಾಣಬಹುದೆಂದು ಅಧ್ಯಯನ ಕಂಡು ಹಿಡಿದಿದೆ. ಸಂಗೀತದಲ್ಲಿ ತೊಡಗಿರುವ ಇತರ ಅಧ್ಯಯನಗಳು ಮಕ್ಕಳಲ್ಲಿ ಐಕ್ಯೂ ಪಾಯಿಂಟ್‌ಗಳ ಹೆಚ್ಚಳವನ್ನು ಕಂಡುಕೊಂಡಿದೆ. ಮಕ್ಕಳಲ್ಲಿ ಓದುವ ಗ್ರಹಿಕೆಯ ಸಾಮಾರ್ಥ್ಯವನ್ನು

ಮುಲ್ಕಿಯಲ್ಲಿ ಬಿಜೆಪಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಗೆಲುವು ಸಾಧ್ಯವಾಗಿದೆ. ಅದ್ದರಿಂದ ಕಾರ್ಯಕರ್ತರಿಗೆ ವಿಶೇಷ ಅಭಿನಂದನೆ ಸಲ್ಲಬೇಕಾಗಿದೆ ಎಂದು ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಧ ಕೋಟ್ಯಾನ್ ಹೇಳಿದರು. ಅವರು ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆ ಧರ್ಮಚಾವಡಿಯಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ವಿರೋಧ ಪಕ್ಷದವರು ಎಲ್ಲಾ ರೀತಿಯ ಅಪಪ್ರಚಾರ ಮಾಡಿದ್ದು ಆದರೆ ಯಾವುದೇ ಅಪಪ್ರಚಾರಕ್ಕೆ ನಾನು ಉತ್ತರ ನೀಡಲಿಲ್ಲ.