Home ಕರಾವಳಿ Archive by category ಮಂಗಳೂರು (Page 96)

ಲಾರಿ ಮಾಲಕರು – ಟ್ರಾನ್ಸ್‌ಪೋರ್ಟರ್ಸ್ ನಡುವೆ ಸಂಧಾನ ವಿಫಲ : ಸೆ.29 ರಿಂದ ಲಾರಿ ಮುಷ್ಕರ

ಮಂಗಳೂರು : ಇಲ್ಲಿನ ಪಣಂಬೂರು ಪೊಲೀಸ್ ಉಪ ಆಯುಕ್ತರ ಕಚೇರಿಯಲ್ಲಿ ಸೆ.27 ರಂದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಲಾರಿ ಮಾಲಕರು ಹಾಗೂ ಟ್ರಾನ್ಸ್‌ಪೋರ್ಟರ್ಸ್ ನಡುವೆ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಸೆ.29 ರ ಶುಕ್ರವಾರದಿಂದ ಲಾರಿ ಮುಷ್ಕರ ನಡೆಯಲಿದೆ. ಸಭೆಯ ಬಳಿಕ ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ ಮಾತನಾಡಿ ‘ಲಾರಿ ಮಾಲಕರ

ಸಮುದ್ರ ಮಧ್ಯೆ ಹೃದಯಾಘಾತ : ಜೀವ ಉಳಿಸಿದ ಕೋಸ್ಟ್‌ ಗಾರ್ಡ್‌ ತಂಡ

ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದ ಮಧ್ಯೆ ಹೃದಯಾಘಾತಕ್ಕೆ ಒಳಗಾದ ಮೀನುಗಾರನಿಗೆ ಸಮುದ್ರದಲ್ಲೇ ಪ್ರಥಮ ಚಿಕಿತ್ಸೆ ನೀಡಿರುವ ಕೋಸ್ಟ್‌ ಗಾರ್ಡ್‌ ಮೀನುಗಾರನ ಜೀವ ಉಳಿಸಿದೆ. ಮೀನುಗಾರ ವಸಂತ ಎನ್ನುವವರಿ ಮೀನುಗಾರಿಕೆಗೆ ಹೋಗಿದ್ದ ಸಂದರ್ಭ ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್‌ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಉಸಿರಾಟದ ಸಮಸ್ಯೆ ಪ್ರಾರಂಭವಾಗಿದೆ. ಇದನ್ನು ಗಮನಿಸಿದ ಇನ್ನೊಂದು ಮೀನುಗಾರಿಕಾ ದೋಣಿಯ ಸಿಬ್ಬಂದಿ

ವಿಶ್ವ ರೇಬಿಸ್ ದಿನ, ಸೆಪ್ಟಂಬರ್ 28

ಪ್ರತಿ ವರ್ಷ ಸೆಪ್ಟಂಬರ್ 28ರಂದು ವಿಶ್ವದಾದ್ಯಂತ ವಿಶ್ವ ರೇಬಿಸ್ ದಿನ ಎಂದು ಆಚರಿಸಿ, ರೇಬಿಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 2007ನೇ ವರ್ಷದಿಂದ ಈ ಆಚರಣೆ ಜಾರಿಗೆ ಬಂದಿತು. 2023ನೇ ವರ್ಷದ ಆಚರಣೆಯ ಧ್ಯೇಯ ವಾಕ್ಯ “Rabies one health, Zero Deaths” ಅಂದರೆ “ರೇಬಿಸ್ ಒಂದೇ ಆರೋಗ್ಯ, ಶೂನ್ಯ ಸಾವು” ಎಂಬುದಾಗಿದೆ. ಸೆಪ್ಟಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಪ್ರೆಂಚ್ ರಸಾಯನ ಶಾಸ್ತ್ರ ತಜ್ಞ ಹಾಗೂ ಸೂಕ್ಷ್ಮ

ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ

ನಾವೆಲ್ಲಾ ಆಲ್ಜೀಮರ್ಸ್ ಬಗ್ಗೆ ಬಹಳಷ್ಟು ವಿಚಾರ ತಿಳಿದು ಕೊಂಡಿದ್ದರೂ, ಸಂಪೂರ್ಣವಾದ ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲದಿರುವುದೇ ವಿಷಾದದ ವಿಚಾರ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳನ್ನು ಅಲ್ಜೀಮರ್ಸ್ ತಿಳುವಳಿಕಾ ತಿಂಗಳು ಮತ್ತು ಸೆಪ್ಟೆಂಬರ್ 21 ರಂದು ಅಲ್ಜೀಮರ್ಸ್ ತಿಳುವಳಿಕಾ ದಿನ ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಹೆಚ್ಚಿನ ಜನರು ಈ ರೋಗ ಇಳಿ ವಯಸ್ಸಿನ ಜನರಲ್ಲಿ ಮಾತ್ರ ಬರುತ್ತದೆ ಎಂದು ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ತಮ್ಮ

ಮೀನುಗಾರ ಮುಂದಾಳು – ಹಿರಿಯ ಸಾಮಾಜಿಕ ಕಾರ್ಯಕರ್ತ ವಾಸುದೇವ ಬೋಳೂರು ನಿಧನ

ಮಂಗಳೂರು:- ಮೀನುಗಾರ ಸಮಾಜದ ಹಿರಿಯ ಮುಖಂಡ ಹಾಗೂ ನಾಡಿನ ವಿವಿಧ ಸಾಮಾಜಿಕ ಸಂಘಟನೆಗಳ ಮುಂದಾಳು ವಾಸುದೇವ ಬೋಳೂರು (87) ಅವರು ಮಂಗಳವಾರ ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಅವಿಭಜಿತ ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ, ಅಖಿಲ ಕರ್ನಾಟಕ ಮೀನುಗಾರ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕರಾವಳಿ ಮೀನುಗಾರ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅನೇಕ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ವಾಸುದೇವ ಬೋಳೂರು

ಎಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ “ಸ್ಕಿಲ್ ಅಪ್” ಕಾರ್ಯಕ್ರಮ

ಮಂಗಳೂರು: ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಎಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ “ಸ್ಕಿಲ್ ಅಪ್” ಎಂಬ ಒಂದು ನಿರ್ವಹಣೆ ವಿಕಸನ ಕಾರ್ಯಕ್ರಮವನ್ನು 2023 ರ ಸೆಪ್ಟೆಂಬರ್ 23 ರಂದು ಆಯೋಜಿಸಿತು.ಈ ಕಾರ್ಯಕ್ರಮವು ಆರೋಗ್ಯ ಕಾರ್ಯನಿರ್ವಾಹಕರಿಗೆ ಅಗತ್ಯವಾದ, ನಿರ್ದಿಷ್ಟ ಆಡಳಿತ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಬಗ್ಗುಟ್ಟಿತು.. “ಸ್ಕಿಲ್ ಅಪ್” ಎಂಬ ಈ ಪದವು ಏರಡು ಅವಧಿಗಳನ್ನು ಒಳಗೊಂಡಿರುವ ಒಂದು

ಎ.ಜೆ. ವಿಶ್ವ ಫಾರ್ಮಸಿಸ್ಟ್ ದಿನ ಆಚರಣೆ

ಮಂಗಳೂರು ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ಎಜೆ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಫಾರ್ಮಸಿಸ್ಟ್ ದಿನವನ್ನು ಆಚರಿಸಲಾಯಿತು.ಎಜೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶಾಶ್ವತ್ , ಆಡಳಿತ ವ್ಯವಸ್ಥಾಪಕಿ ಡಾ.ಸ್ವಾತಿ ರೈ, ನರ್ಸಿಂಗ್ ಅಧೀಕ್ಷಕಿ ಫೆಲ್ಸಿ, ಮಾನವ ಸಂಪನ್ಮೂಲ ವ್ಯವಸ್ಥಾಪಕ ಶ್ರೀಧರ್ ಆಚಾರ್ಯ, ಗುಣಮಟ್ಟ ಸಹಾಯಕ ವ್ಯವಸ್ಥಾಪಕಿ ರಂಜಿತಾ ಇವರುಗಳು ಫಾರ್ಮಸಿಸ್ಟ್‌ಗೆ ಹಾರೈಸಿದರು.ಆಡಳಿತ ಮಂಡಳಿಯವರು ಕಾರ್ಯಕ್ರಮವನ್ನು

ಮಂಗಳೂರು: ಮಾಂಡವಿ ಮೋಟಾರ್ಸ್ ನೆಕ್ಸಾ || ಮುದ್ದು ಕೃಷ್ಣ ಆನ್‍ಲೈನ್ ಫೋಟೋ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ

ಮಂಗಳೂರಿನ ಏಪೋರ್ಟ್ ರಸ್ತೆಯಲ್ಲಿರುವ ಮಾಂಡವಿ ಮೋಟಾರ್ಸ್ ನೆಕ್ಸಾ ಕಾರು ಶೋರೂಂ ವತಿಯಿಂದ ಮುದ್ದು ಕೃಷ್ಣ ಆನ್‍ಲೈನ್ ಫೋಟೋ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರು ಮಾರಾಟ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ತನ್ನದೇ ಆದ ಚಾಪು ಮೂಡಿಸಿರುವ ನಗರದ ಏರ್ಪೋರ್ಟ್ ರಸ್ತೆಯಲ್ಲಿರುವ ನೆಕ್ಸಾ ಕಾರು ಶೋರೂಂನಲ್ಲಿ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮುದ್ದು ಕೃಷ್ಣ ಆನ್‍ಲೈನ್ ಫೋಟೋ

ಮಂಗಳೂರು ಮಿಲಾಗ್ರಿಸ್ ವಿದ್ಯಾಸಂಸ್ಥೆಯಿಂದ 30-09-2023 ರಂದು ಮಾದಕ ದೃವ್ಯ ಜಾಗೃತಿ ಜಾಥಾ

ಮಂಗಳೂರು ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಪದವಿ, ಪದವಿ ಪೂರ್ವ, ಪ್ರೌಢ ಹಾಗೂ ಪ್ರಾಥಮಿಕ ವಿಭಾಗಗಳ ಜಂಟಿ ಆಶ್ರಯದಲ್ಲಿ “ಮಾದಕದೃವ್ಯ ಜಾಗೃತಿ ಜಾಥಾ”ವನ್ನು ಶನಿವಾರ, ಸಪ್ಟೆಂಬರ್ 30, 2023 ರಂದು ಬೆಳಗ್ಗೆ 9.15 ಕ್ಕೆ ಆಯೋಜಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಕೋರ್ಟ್ ವಾರ್ಡಿನ ಕಾರ್ಪೊರೇಟರ್ ಶ್ರೀ ಎ ಸಿ ವಿನಯರಾಜ್ ಇವರು ಜಾಥಾಕ್ಕೆ ಚಾಲನೆ ನೀಡಲಿರುವರು. ಮಂಗಳೂರಿನ ಸಹಾಯಕ ಪೆÇೀಲಿಸ್ ಆಯುಕ್ತರಾದ ಶ್ರೀ ಎಸ್. ಮಹೇಶ್ ಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ

ಮಂಗಳೂರು: ಘನತ್ಯಾಜ್ಯ ನಿರ್ವಹಣೆ ಪ್ಯಾಕೇಜ್ ರದ್ದು, ಪ್ಯಾಕೇಜ್ ಅವೈಜ್ಞಾನಿಕವಾಗಿದೆ ಎಂದ ವಿಪಕ್ಷ ಸದಸ್ಯರು

ಮಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಗುತ್ತಿಗೆ ನೀಡಿರುವ ಹೊಸ ಪ್ಯಾಕೇಜ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ಮೊದಲೇ ರದ್ದು ಮಾಡುವ ಮಹತ್ವದ ತೀರ್ಮಾನವನ್ನು ಮಂಗಳೂರು ಮಹಾನಗರ ಪಾಲಿಕೆಯ ಸಭೆ ನಿರ್ಣಯ ಕೈಗೊಂಡಿದೆ. ವೈಜ್ಞಾನಿಕ ಟೆಂಡರ್, ಅಧಿಕಾರಿಗಳ ಲೋಪ, ಹಿಂದಿನ ಟೆಂಡರ್‍ಗಿಂತ ಹಲವು ವಿಷಯ ಕೈಬಿಟ್ಟಿರುವ ಹಿನ್ನಲೆಯಲ್ಲಿ ಟೆಂಡರ್ ರದ್ದುಪಡಿಸಿ ಏಳು ವರ್ಷಗಳ ಅವಧಿಗೆ ಟೆಂಡರ್ ನೀಡಲು ಹೊಸ ಡಿಪಿಆರ್ ಮಂಡಿಸಲು ಮಹತ್ವದ ಸಭೆ