ಮೂಡುಬಿದಿರೆ : ದೈವರಾಧನೆ ತುಳುನಾಡಿನ ಪರಂಪರೆ, ನಾವು ದೈವ-ದೇವರನ್ನು ಆರಾಧಿಸುತ್ತೇವೆ ಇದು ಇಲ್ಲಿನ ಮೂಲ ನಿವಾಸಿಗಳ ಸಂಸ್ಕೃತಿ’ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. ಅವರು ವಾಲ್ಪಾಡಿ ಮಾಡದಂಗಡಿ ಶಾಲಾ ವಠಾರದಲ್ಲಿ ನಡೆದ ತುಳುನಾಡ ದೈವರಾಧನೆ ರಕ್ಷಣಾ ಚಾವಡಿ ಮೂಡುಬಿದಿರೆ ವಲಯದ 5ನೇ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ
ಮೂಡುಬಿದರೆ ಆಳ್ವಾಸ್ ಕ್ಯಾಂಪಸ್‍ನಲ್ಲಿ ಡಿಸೆಂಬರ್ 21ರಿಂದ 27ರ ವರೆಗೆ ನಡೆಯಲಿರುವ ಸ್ಕೌಟ್ಸ್ & ಗೈಡ್ಸ್‍ನ ಅಂತರಾಷ್ಟ್ರೀಯ ಸಾಂಸ್ಕøತಿಕ ಜಾಂಬೂರಿಗೆ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವಾ ಅವರು ವಿವರ ನೀಡಿದರು. ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜನೆ ಮಾಡಲಾಗಿರುವ ಸ್ಕೌಟ್ಸ್ & ಗೈಡ್ಸ್‍ನ ಅಂತರಾಷ್ಟ್ರೀಯ ಸಾಂಸ್ಕøತಿಕ ಜಾಂಬೂರಿಗೆ ಮೂಡುಬಿದರೆಯ ಅಳ್ವಾಸ್
ಮೂಡುಬಿದಿರೆ: ಬಸ್ಸಿಗೆ ಢಿಕ್ಕಿ ಹೊಡೆದ ತಾಲೂಕಿನ ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಮೈನೇರು ಎಂಬಲ್ಲಿ ಇಂದು ಬೆಳಿಗ್ಗೆ ಕಾರೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಒಂದೂವರೆ ವರ್ಷದ ಮಗು ಸಹಿತ ಮೂರು ಮಂದಿ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರು ಮೂಲದ ದಂಪತಿ ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದಾಗ ಕಾರ್ಕಳದಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ವಿಶಾಲ್ ಬಸ್ಸಿಗೆ ಢಿಕ್ಕಿ ಹೊಡೆದು ಬಸ್ಸಿನ ಅಡಿಭಾಗದಲ್ಲಿ
ಮೂಡುಬಿದಿರೆ: ಹ್ಯೂಸ್ಟನ್ ಮೂಲದ ಮ್ಯಾನುಫ್ಯಾಕ್ಟರಿಂಗ್ ಹಾಗೂ ಲಾಜಿಸ್ಟಿಕ್ಸ್ ಸಂಬಂಧಿತ ಸೈಲಿಯ ‘ಇಂಕ್’ ಅಂತರಾಷ್ಟ್ರೀಯ ಕಂಪೆನಿಯ ಸಹಭಾಗಿತ್ವದಲ್ಲಿ ವಿಮಾನ ತಂತ್ರಜ್ಞಾನ ಆಧಾರಿತ ‘ಸ್ಟ್ರೆಲಿಯಂ ಟೆಕ್ನಾಲಜಿ ಆಂಡ್ ಸೆಂಟರ್‍ನ್ನು ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಅವರು ನೂತನ ಲ್ಯಾಬ್‍ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸ್ಟೆಲಿಯಂ
ಮೂಡುಬಿದರೆ : ವಸತಿ ಸಮುಚ್ಛಯಗಳಲ್ಲಿನ ಹಸಿಕಸವನ್ನು ಹಂದಿ ಸಾಕಾಣಿಕೆಗಾರರಿಗೆ ರವಾನಿಸಿ ವಿಲೇವಾರಿ ಮಾಡುವ ಪ್ರಕ್ರಿಯೆಯಲ್ಲಿ ಎರಡು ಮೂರು ಬಾರಿ ಅಡಚಣೆಯಾಗಿದ್ದು ಇದರಿಂದಾಗಿ ತ್ಯಾಜ್ಯ ದಲ್ಲಿ ಹುಳುಗಳಾಗಿರುವದರಿಂದ ತ್ಯಾಜ್ಯ ಸಂಗ್ರಹವಾಗಿಲ್ಲ, ವಿಲೇವಾರಿ ಮಾಡುವವರಿಗೆ ತಿಳಿಸಿದರೆ ಅವರು ಪುರಸಭೆಯ ಅಧಿಕಾರಿಗಳಿಗೆ ತಿಳಿಸಿ ಎಂದು ಹೇಳುತ್ತಾರೆ. ಹಾಗಾದರೆ ಪುರಸಭೆಯ ಸದಸ್ಯರಾಗಿರುವ ನಮಗೆ ಗೌರವವಿಲ್ಲವೇ. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ 23ಕೋಟಿಯಷ್ಟು ಹಣವನ್ನು
ಮೂಡುಬಿದಿರೆ: ಭಯೋತ್ಪಾದನೆ ಹಾಗೂ ಲವ್ ಜಿಹಾದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ – ಬಜರಂಗದಳ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.ವಿಶ್ವ ಹಿಂದು ಪರಿಷತ್ ನ ಪ್ರಧಾನ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ದೇಶಾದ್ಯಂತ ಬಾಂಬನ್ನು ಸ್ಫೋಟಿಸಿ ಸಮಾಜದಲ್ಲಿ ಭಯವನ್ನು ನಿರ್ಮಿಸುವ ಕೆಲಸವನ್ನು ಉಗ್ರಗಾಮಿಗಳು ಮಾಡುತ್ತಿದ್ದಾರೆ. ಇಂದು ಭಯೋತ್ಪಾದನೆ ಎಂಬುದು ಕರಾವಳಿಗೆ
ಮೂಡುಬಿದಿರೆ: ಗಾಯಕ, ಉದ್ಯಮಿ ರಾಜು ಕೆ. (53) ಮೈಸೂರಿನ ತನ್ನ ನಿವಾಸದಲ್ಲಿ ರವಿವಾರ ನಿಧನ ಹೊಂದಿದರು. ಪತ್ನಿ, ಪುತ್ರ, ಪುತ್ರಿಯನ್ನು ಅವರು ಅಗಲಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಹೊನ್ನೆಲೆಗೆರೆ ಗ್ರಾಮದಲ್ಲಿ ಹುಟ್ಟಿದ ರಾಜು ಮೂಡುಬಿದಿರೆಯ ಮೈನ್ ಶಾಲೆ, ಜೈನ್ ಹೈಸ್ಕೂಲ್ ನಲ್ಲಿ ಓದಿ ಧವಲ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರೈಸಿದ್ದರು.ಜಾನಪದ, ಭಾವಗೀತೆ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದ ಅವರು ಐ.ಕೆ. ಬೊಳುವಾರು ನಿರ್ದೇಶಿತ ಚದುರಂಗ
ಅನಿವಾಸಿ ಉದ್ಯಮಿ, ಹೊಸನಾಡು ಕೊಡ್ಯಡ್ಕ ಶ್ರೀದೇವೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪಕ ಮತ್ತು ಆಡಳಿತ ಮೊಕ್ತೇಸರ ಡಾ. ಕೊಡ್ಯಡ್ಕ ಜಯರಾಮ ಹೆಗ್ಡೆ (73) ಅನಾರೋಗ್ಯದಿಂದ ನ.23, ಮಂಗಳವಾರ ಮಧ್ಯಾಹ್ನ ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ನಿಧನ ಹೊಂದಿದರು. ಪತ್ನಿ, ಪುತ್ರ , ಪುತ್ರಿಯನ್ನು ಅವರು ಅಗಲಿದ್ದಾರೆ. 23ನೇ ವಯಸ್ಸಿನಲ್ಲಿ ಮಸ್ಕತ್ ಗೆ ತೆರಳಿ ಇಲೆಕ್ಟ್ರಿಕಲ್ ಹಾರ್ಡ್ ವೇರ್ ಶೋರೂಮ್ ಆರಂಭಿಸಿದ್ದರು. ನಂತರ ಹೋಟೇಲ್ ಉದ್ಯಮಕ್ಕೆ ಕಾಲಿರಿಸಿ
ಮೂಡುಬಿದಿರೆ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ 4 ರ ರೂ 10 ಕೋಟಿ ಮೊತ್ತದ ಯೋಜನೆಯಲ್ಲಿ 4.46 ಕೋಟಿ ಮೊತ್ತದ 6 ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಹಾಗೂ ಪುರಸಭಾ ನಿಧಿ 2022-23ರಲ್ಲಿ ರೂ 1.36 ಕೋಟಿ ಮೊತ್ತದ 27 ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಒಂಟಿಕಟ್ಟೆಯಲ್ಲಿ ಗುದ್ದಲಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಕೋಟ್ಯಾನ್ ಅವರು ಪುರಸಭಾ ವ್ಯಾಪ್ತಿಗೆ ಬಹುದೊಡ್ಡ ಮೊತ್ತದ ಅನುದಾನದೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ
ಮೂಡುಬಿದಿರೆ: ಡಿ.24ರಂದು ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆಯುವ 20ನೇ ವರುಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವನ್ನು ಶೂನ್ಯ ತ್ಯಾಜ್ಯವಾಗಿ ಮತ್ತು ಕಾಂತಾರ ಸಿನೆಮಾ ದೊಂದಿಗೆ ವಿಭಿನ್ನವಾಗಿ ಜನಾಕರ್ಷಣೆಯೊಂದಿಗೆ ನಡೆಸಲುದ್ದೇಶಿಸಲಾಗಿದೆ ಎಂದು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ್ ತಿಳಿಸಿದರು. ಅವರು ಒಂಟಿಕಟ್ಟೆ ಕಡಲಕೆರೆ ಬಳಿಯ ಸೃಷ್ಟಿ ಗಾರ್ಡನ್ ಸಭಾಂಗಣದಲ್ಲಿ ಮಂಗಳವಾರ ಸಾಯಂಕಾಲ ನಡೆದ ಮೂಡುಬಿದಿರೆ ಕಂಬಳ ಸಮಿತಿಯ ಸಮಾಲೋಚನ ಸಭೆಯ