Home ಕರಾವಳಿ Archive by category ಮೂಡಬಿದರೆ (Page 61)

ಗಂಟಾಲ್ ಕಟ್ಟೆ ಚರ್ಚಿನಲ್ಲಿ ಸಂಭ್ರಮದ ಮೊಂತಿ ಫೆಸ್ತ್

ಮೂಡುಬಿದಿರೆಯ ನಿತ್ಯ ಸಹಾಯ ಮಾತಾ ದೇವಾಲಯ ಗಂಟಾಲ್ ಕಟ್ಟೆ ಇಲ್ಲಿ ಮೊಂತಿ ಫೆಸ್ತ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಚರ್ಚಿನ ಧರ್ಮಗುರು ರೆ/ಫಾ ರೊನಾಲ್ಡ್ ಡಿ’ಸೋಜಾ ಹಾಗೂ ಅತಿಥಿ ಧರ್ಮಗುರು ರಾಕೇಶ್ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಹಬ್ಬದ ಸಂದೇಶವನ್ನು ನೀಡಿದರು. ನಂತರ ಮನೆ ಮನೆಗೆ ಭತ್ತವನ್ನು ನೀಡಲಾಯಿತು. ಧರ್ಮಗುರು ರಾಕೇಶ್ ಮಥಾಯಿಸ್

ಮೂಡುಬಿದಿರೆಯ ವಾಲ್ಪಾಡಿಯಲ್ಲಿ ಸೋಣದ ಕೋಲ

ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ವಾಲ್ಪಾಡಿ ಗ್ರಾಮದಲ್ಲಿ ಶ್ರೀ ರಾಜಂದೈವ ಮತ್ತು ಬ್ರಹ್ಮ ಬೈದರ್ಕಳ ದೈವಸ್ಥಾನ ಇಲ್ಲಿ ಮಂಗಳವಾರ ಕೊಡಮಣಿತ್ತಾಯ ಮತ್ತು ಕುಕ್ಕಿನಂತ್ತಾಯ ದೈವಗಳಿಗೆ ಸೋಣದ ಕೋಲ ನಡೆಯಿತು. ಸುಮಾರು 105 ವರ್ಷಗಳ ಇತಿಹಾಸವಿರುವ ಈ ದೈವಸ್ಥಾನವನ್ನು ಏಳ್ನಾಡು ಗುತ್ತಿನವರು ಕಟ್ಟಿ ಬೆಳೆಸಿದ್ದರು. ನಂತರ ನಾಗಣ್ಣ ಹೆಗ್ಡೆ ಅವರ ಅವರ ನೇತೃತ್ವದಲ್ಲಿ ಪುನರ್ ನಿರ್ಮಾಣಗೊಂಡಿದ್ದು ಕಳೆದ 10 ವರ್ಷಗಳಿಂದ ಇಲ್ಲಿ ಸೋಣದ ಕೋಲ

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರಾಷ್ಟ್ರೀಯತೆಯ ಅರಿವು ಮೂಡಲು ಸಾಧ್ಯ : ಶಾಸಕ ಉಮಾನಾಥ ಕೋಟ್ಯಾನ್

ಮೂಡುಬಿದಿರೆ : ಪ್ರತಿಯೊಬ್ಬ ಮಗುವಿನಲ್ಲೂ ಅದರದ್ದೇ ಆದ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಹೊರಗೆಳೆಯುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ. ನಮ್ಮ ಉಸಿರು ಇರುವವರೆಗೆ ನಾವು ವಿದ್ಯಾರ್ಥಿಗಳೇ. ಹಾಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದಾಗ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿದಂತ್ತಾಗುತ್ತದೆ. ಅಲ್ಲದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ರಾಷ್ಟ್ರೀಯತೆಯ ಅರಿವು ಮೂಡಲು ಸಾಧ್ಯ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್

ಮೂಡುಬಿದಿರೆ ಗಣೇಶೋತ್ಸವ ಶೋಭಾಯಾತ್ರೆ : ತೆಂಗಿನ ಗೆರಟೆಯಲ್ಲಿ ಕಷಾಯ ಸೇವನೆ

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಉತ್ತಮ ಆರೋಗ್ಯದ ದೃಷ್ಠಿಯಿಂದಲೋ ಅಥವಾ ಆರ್ಥಿಕವಾಗಿ ಹಿಂದುಳಿದುದರಿಂದ ಗ್ಲಾಸ್ ಅಥವಾ ಸ್ಟೀಲ್ ಲೋಟಗಳನ್ನು ತೆಗೆದುಕೊಳ್ಳಲು ಅಸಹಾಯಕರಾಗಿರುವುದರಿಂದಲೋ ಏನೋ ತೆಂಗಿನ ಗೆರಟೆಯಲ್ಲಿಯೇ ಚಹಾ, ನೀರು ಅಥವಾ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು. ನಂತರದ ದಿನಗಳಲ್ಲಿ ನಾವು ಅಭಿವೃದ್ಧಿ ಹೊಂದುತ್ತಿದ್ದಂತೆ ಪ್ಲಾಸ್ಟಿಕ್ ಲೋಟ, ಸ್ಟೀಲ್ ಲೋಟ ಮತ್ತು ಪೇಪರ್ ಲೋಟಗಳಿಗೆ ಮಾರು ಹೋದೆವು. ಆದರೆ ಇದೀಗ ಮತ್ತೆ ನಾವು ಹಿಂದಿನ ಕಾಲದತ್ತ ಮುಖ

ಮೂಡುಬಿದರೆ: ಮನೆಗೆ ನುಗ್ಗಿ ಮಹಿಳೆಗೆ ತಲವಾರು ಝಳಪಿಸಿ ಕರಿಮಣಿ ಸರ ದರೋಡೆ

ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಬಡಗ ಮಿಜಾರು ಗ್ರಾಮದ ಬೇರಿಂಜೆಯ ಮನೆಯೊಂದಕ್ಕೆ ಮುಸುಕುಧಾರಿ ವ್ಯಕ್ತಿಗಳಬ್ಬರು ನುಗ್ಗಿ ತಲವಾರು ಝಳಪಿಸಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ದರೋಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ. ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ದುಡಿಯುತ್ತಿರುವ ಕಮಲ ಶೆಟ್ಟಿ ದರೋಡೆಗೊಳಗಾದ ಮಹಿಳೆ ಇವರ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದು, ಪತಿ ಕಳೆದ ವರ್ಷ ನಿಧನ ಹೊಂದಿದ್ದರು.

ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮೂಡುಬಿದಿರೆ ಮತ್ತು ಸಂತ ಥೋಮಸ್ ವಿದ್ಯಾ ಸಂಸ್ಥೆ ಆಲಂಗಾರು ಇವುಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಅಬಾಲ್ ಪಂದ್ಯಾಟವು ಆಲಂಗಾರು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ದೀಪ ಬೆಳಗಿಸಿ, ವಾಲಿಬಾಲ್‍ನ್ನು ರಿಬ್ಬನ್‍ನಿಂದ

ಮೂಡುಬಿದಿರೆ : ಸಿಸಿ ಕೆಮರಾ ಅಳವಡಿಸಿದ್ದಲ್ಲಿಯೇ ತ್ಯಾಜ್ಯದ ರಾಶಿ

ಮೂಡುಬಿದಿರೆ :ಪುರಸಭಾ ವ್ಯಾಪ್ತಿಯಲ್ಲಿ ಕಸದ ರಾಶಿ ಬೀಳುವುದನ್ನು ತಪ್ಪಿಸಲು ಹಾಗೂ ಯಾರು ಕಸವನ್ನು ತಂದು ಸುರಿಯುತ್ತಾರೆ ಎಂಬುದನ್ನು ಪತ್ತೆ ಹಚ್ಚಲು ಪುರಸಭೆಯ ವತಿಯಿಂದ ವಿವಿಧ ಕಡೆಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಆದರೆ ಸಿಸಿ ಕೆಮರಾದ ಬುಡದಲ್ಲಿಯೇ ಕಸದ ರಾಶಿ ತುಂಬುತ್ತಿದೆ. ಇದಕ್ಕೆ ಏನು ಕ್ರಮ ಕೈಗೊಳ್ಳುತ್ತೀರಿ ಈವರೆಗೆ ಯಾವ ಕ್ರಮವನ್ನು ಕೈಗೊಂಡಿದ್ದೀರಿ ಸಿಸಿ ಕೆಮರಾದ ಬಆಯೇ ಕಸದ ರಾಶಿ ಬೀಳುವುದಾದರೆ ಸಿಸಿ ಕೆಮರಾದ ಅಗತ್ಯವಿದೆಯೇ. ಪರಿಸರ

ಮೂಡುಬಿದರೆ: ನಿವೃತ್ತ ಸುಬೇದಾರ್ ರಾಮಚಂದ್ರ ಭಟ್ ನಿಧನ

ಮೂಡುಬಿದರೆಯ: ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ರಾಮಚಂದ್ರ ಭಟ್ ಮೂಡುಬಿದರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.ಮೂಡುಬಿದರೆಯ ಹನುಮಂತನಗರ ನಿವಾಸಿಯಾಗಿದ್ದಾರೆ,. 28ವರ್ಷಗಳ ಸುದೀರ್ಘ ಅವಧಿಯಲ್ಲಿ ಸೇನೆಯಲ್ಲಿ ಸೇವೆ, ಸಲ್ಲಿಸಿದ್ದರು, ಪಂಜಾಬ್, ಹರಿಯಾಣ, ಕೋಲ್ಕತ್ತಾ, ಬರೇಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶಪ್ರೇಮ ಮೆರೆದಿದ್ದಾರೆ, ಪತ್ನಿ ದೇವಕಿ ಭಟ್ ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ

ಮೂಡುಬಿದರೆಯಲ್ಲಿ ಬೋರುಗುಡ್ಡೆಯಲ್ಲಿ ಸಂಜೀವಿನಿ ಮಾಸಿಕ ಸಂತೆ

ಮೂಡುಬಿದಿರೆ: ತಾವು ಮನೆಯಲ್ಲಿ ಬೆಳೆಸಿದ ತರಕಾರಿಗಳಾದ ಬಸಳೆ, ಹೀರೆಕಾಯಿ, ಸೌತೆಕಾಯಿ, ಅಮಟೆಕಾಯಿ, ಬಾಳೆಕಾಯಿ, ಸ್ವ ಉದ್ಯೋಗಕ್ಕಾಗಿ ತಯಾರಿಸಿದ ಉಪ್ಪಿನಕಾಯಿ, ಹಿಡಿಸೂಡಿಯ ಕಟ್ಟುಗಳು, ಬೀಳುಗಳಿಂದ ತಯಾರಿಸಿದ ಬುಟ್ಟಿಗಳು, ತೆಂಗಿನ ಗೆರಟೆಯನ್ನು ಬಳಸಿ ಮಾಡಿದ ಸೌಟುಗಳು, ವೇಸ್ಟ್ ಬಟ್ಟೆಗಳನ್ನು ಬಳಸಿ ಮಾಡಿದ ಬಣ್ಣ ಬಣ್ಣದ ಕಾಲು ಒರೆಸುವ ಬಟ್ಟೆಗಳು, ತಿಂಡಿ-ತಿನಿಸುಗಳು, ಮಾರಾಟಗಳೊಂದಿಗೆ ಮಹಿಳೆಯರು ಭರ್ಜರಿ ವ್ಯಾಪಾರ-ವಹಿವಾಟನ್ನು ಮಾಡುವ ಮೂಲಕ ಸ್ವಾವಲಂಬಿಗಳಾಗಿ

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಮಿಜಾರು, ದ.ಕ. ಸಂಗ್ರಹಿಸಿದ ಧನ ಸಹಾಯ ಹಸ್ತಾಂತರ

ಲಂಗ್ಸ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಮೂಡುಬಿದ್ರೆಯ ತೋಡಾರಿನ ಬೇಬಿ ಹಾಗೂ‌ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಬೆಂಜನಪದವು ನಿವಾಸಿ ಹರೀಶ್ ಕುಲಾಲ್ ಇವರ ಚಿಕಿತ್ಸೆಗೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಸಂಗ್ರಹಿಸಿದ ಧನ ಸಹಾಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಪ್ಲಬೆಟ್ಟು ಒಕ್ಕೂಟದ ಸೇವಾ ಪ್ರತಿನಿಧಿ ಮಲ್ಲಿಕಾ ಶೆಟ್ಟಿ, ಚಂದ್ರಹಾಸ ಪೂಜಾರಿ ಕುಲತ್ತಕೋಡಿ ಕೃಷಿಕರು, ಪಧಾದಿಕಾರಿಗಳು ಹಾಗೂ ಸೇವಾಮಾಣಿಕ್ಯರ ಸಮ್ಮುಖದಲ್ಲಿ