ತೆಲಂಗಾಣ ರಾಜ್ಯವಾದ ಬಳಿಕ ಕಾಂಗ್ರೆಸ್ ಪಕ್ಷದ ಮೊದಲ ಮತ್ತು ಆ ರಾಜ್ಯದ ಎರಡನೆಯ ಮುಖ್ಯಮಂತ್ರಿಯಾಗಿ ಎನುಮುಲ ರೇವಂತ್ ರೆಡ್ಡಿಯವರು ಉಪ ಮುಖ್ಯಮಂತ್ರಿ ಮತ್ತು 11 ಮಂತ್ರಿಗಳ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು. ಲಾಲ್ ಬಹದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು. ತೆಲಂಗಾಣದ ಉಪ
ಗೃಹರಕ್ಷಕ ದಳ ಎನ್ನುವುದು ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುವ ಸರ್ಕಾರದ ಅಧೀನದಲ್ಲಿರುವ ಸ್ವತಂತ್ರವಾದ ಶಿಸ್ತುಬದ್ಧವಾದ ಸಮವಸ್ರದಾರಿ ಸ್ವಯಂಸೇವಕರ ಸೇವಾ ಸಂಸ್ಥೆ ಆಗಿರುತ್ತದೆ. ‘ನಿಷ್ಕಾಮ ಸೇವೆ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದ ಆಸ್ತಿಪಾಸ್ತಿ ರಕ್ಷಣೆ ಮತ್ತು ಜನರ ಜೀವದ ರಕ್ಷಣೆ ಮಾಡುವ ದೇಶದೊಳಗಿನ ಸೈನಿಕರೇ ನಮ್ಮ ಗೃಹರಕ್ಷಕರು. ಹೇಗೆ ದೇಶದ ಗಡಿಗಳಲ್ಲಿ ಸೈನಿಕರು ನಮ್ಮ ದೇಶವನ್ನು ವೈರಿಗಳಿಂದ ಮತ್ತು
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟದವರು ಗುಂಪು ಫೋಟೋ ತೆಗೆಸಿಕೊಳ್ಳುವಾಗ ಮುಸ್ಲಿಮರ ಆಜಾನ್ ಹಾಕಿದ್ದರು, ಎಚ್ಚರ ಎಂಬ ಪೋಸ್ಟ್ ಒಂದು ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಅದು ಸುಳ್ಳು ಸುದ್ದಿ ಎಂದು ಕ್ವಿಂಟ್ ಫ್ಯಾಕ್ಟ್ ಚೆಕ್ ಹೇಳಿದೆ. ಇಲ್ಲಿ ಈ ಪೋಸ್ಟ್‌ಗೆ ಬಳಸಿದ ವೀಡಿಯೋ ಆಗಸ್ಟ್ 31, ಸೆಪ್ಟೆಂಬರ್ 1ರಂದು ಮುಂಬಯಿಯಲ್ಲಿ ನಡೆದ ಇಂಡಿಯಾ ಮೈತ್ರಿ ಕೂಟದ ಸಭೆಯದ್ದಾಗಿದೆ. ವೇದಿಕೆಯಲ್ಲಿ ಆ ಬ್ಯಾನರ್ ಇದೆ. ಈ ಸುದ್ದಿ ಆಗ ಎಲ್ಲ ಪತ್ರಿಕೆ, ಟೀವಿಗಳಲ್ಲಿ
ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿ ಹಾಗೂ ಜೂಗನಹಳ್ಳಿಯ ಬಂಗಲೆ ವಾಸಿ ಲಾಡುಲಾಲ್ ಪಿಟ್ಲಿಯಾ ಅವರು ಈಗ ರಾಜಸ್ತಾನದ ಸಹಾರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ 31 ಲಕ್ಷ ಮತ ಪಡೆದಿದ್ದರು. ಈ ಬಾರಿ ಬಿಜೆಪಿ ಟಿಕೆಟ್ ಪಡೆದು 1.17 ಲಕ್ಷ ಮತ ಪಡೆದು ಗೆದ್ದಿದ್ದಾರೆ. ಸೋತ ಕಾಂಗ್ರೆಸ್ ಅಭ್ಯರ್ಥಿ 55 ಸಾವಿರ ಮಾತ್ರ ಪಡೆದಿದ್ದಾರೆ.ಬೆಂಗಳೂರಿನ ಲಾಡುಲಾಲರ ವ್ಯವಹಾರವನ್ನು ಈಗ ಮಕ್ಕಳು ನೋಡಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಜೋರಮ್ ತಂಗ, ಉಪ ಮುಖ್ಯಮಂತ್ರಿ ಸಹಿತ ಹಲವು ಮಂತ್ರಿಗಳ ಸೋಲಿನೊಂದಿಗೆ ಮಿಜೋರಾಂ ನ್ಯಾಶನಲ್ ಫ್ರಂಟ್ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸಹ ಈ ಸರಕಾರದ ಭಾಗವಾಗಿತ್ತು. ಜೆಡ್‌ಪಿಎಂ ಮೈತ್ರಿ ಕೂಟವು 40 ಸದಸ್ಯ ಬಲದ ಮಿಜೋರಾಂನಲ್ಲಿ 27 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಎಂಎನ್ಎಫ್ ಬರೇ 10 ಕಡೆ ಗೆದ್ದಿದೆ. ಬಿಜೆಪಿ 2, ಕಾಂಗ್ರೆಸ್ 1 ಸ್ಥಾನ ಪಡೆದಿವೆ.
ವೈಸ್ ಎಡ್ಮಿರಲ್ ದಿನೇಶ್ ಕೆ ತ್ರಿಪಾಠಿಯವರನ್ನು ಭಾರತೀಯ ನೌಕಾ ಪಡೆಯ ಹೊಸ ಉಪ ಮುಖ್ಯಸ್ಥರನ್ನಾಗಿ ನೇಮಿಸಲು ಭಾರತೀಯ ಸರಕಾರವು ಒಪ್ಪಿಗೆ ಮುದ್ರೆ ಒತ್ತಿತು. ಇದೇ ವೇಳೆ ಹಲವು ಉನ್ನತ ನೇಮಕಾತಿಗಳಿಗೂ ಸರಕಾರದ ಒಪ್ಪಿಗೆ ಬಿತ್ತು. ಸದ್ಯ ನೌಕಾಪಡೆಯ ಪಶ್ಚಿಮ ಕಮಾಂಡಿನಲ್ಲಿ ಬಾವುಟ ಕಮಾಂಡಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈಸ್ ಎಡ್ಮಿರಲ್ ಸೂ ಸಿಂಗ್ ಅವರು ತ್ರಿಪಾಠಿಯವರ ಜಾಗಕ್ಕೆ ಬಡ್ತಿ ಪಡೆಯುತ್ತಿದ್ದಾರೆ. ಹಲವು ಬಡ್ತಿ ನಡೆದಿದ್ದು ಇವರೆಲ್ಲರೂ
ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಬಿಜೆಪಿಗೆ ಲಾಭ ನೀಡಿದೆ. ಕಾಂಗ್ರೆಸ್ ಬಲ ನಿಂತ ನೀರಾಗಿದೆ. ಭಾರತ, ಇಂಡಿಯಾಗಳು ಸೋತು ಹೋಗಿವೆ. ಬಿಜೆಪಿಯಯ 142 ಹೆಚ್ಚು ಶಾಸಕರನ್ನು ಗೆದ್ದಿದೆ. ನಾಲ್ಕು ರಾಜ್ಯಗಳಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆದಿದೆ. ಕಾಂಗ್ರೆಸ್ ಮತ ಭಾರ ಭಾರೀ ಇಳಿಯದಿದ್ದರೂ ಒಟ್ಟು 66 ಶಾಸಕರನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿ ಮಾತ್ರ ಅದು ತನ್ನ ಶಾಸಕ ಸಂಖ್ಯೆ ಹೆಚ್ಚಿಸಿಕೊಂಡು ಮೂರು ರಾಜ್ಯಗಳ ಕೊರತೆಯನ್ನು ಸ್ವಲ್ಪ ಭರ್ತಿ
ಸುಳ್ಳು ಸುದ್ದಿ ಹರಡಿ ಲಕ್ಷಾಂತರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ಒಂಬತ್ತು ಫೇಕ್ ನ್ಯೂಸ್ ಚಾನೆಲ್‌ಗಳ ಪಟ್ಟಿ ಬಿಡುಗಡೆ ಆಗಿದೆ.ಸರ್ಕಾರಿ ಯೋಜನಾ ಅಫೀಶಿಯಲ್, ಸನ್ನಾನಿ ಲೈವ್, ಬಜರಂಗ್ ಎಜುಕೇಶನ್, ಆಫ್ ಕ ಗುರೂಜಿ, ಬಿಜೆ ನ್ಯೂಸ್, ಅಬ್ ಬೋಲೇಗಾ ಭಾರತ್, ಜಿವಿಟಿ ನ್ಯೂಸ್, ಡೈಲಿ ಸ್ಟಡಿ, ಭಾರತ್ ಏಕ್ತಾ ನ್ಯೂಸ್ ಇವೇ ಆ ಸುಳ್ಳು ಸುದ್ದಿ ಶೂರ ಯೂಟ್ಯೂಬ್ ಚಾನೆಲ್‌ಗಳು.ಇವುಗಳಲ್ಲಿ ಆಫ್ ಕ ಗುರೂಜಿ 34 ಲಕ್ಷ ಮತ್ತು ಬಜರಂಗ್ ಎಜುಕೇಶನ್ 25 ಲಕ್ಷ
ಏನಿದು ಏಡ್ಸ್ ?ಏಡ್ಸ್ ಎನ್ನುವುದು ಎಚ್.ಐ.ವಿ ಎಂಬ ವೈರಾಣುವಿನ ಸೋಂಕಿನಿಂದ ಉಂಟಾಗುವ ರೋಗ ಲಕ್ಷಣಗಳ ಗುಚ್ಚವಾಗಿರುತ್ತದೆ. ಎಚ್.ಐ.ವಿ ಎಂದರೆ ಹ್ಯೂಮನ್ ಇಮ್ಯೂನೋ ಡೆಫಿಷಿಯನ್‍ಸ್ಸಿ ವೈರಸ್ ಆಗಿರುತ್ತದೆ. ಈ ಎಚ್.ಐ.ವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೇಂದಿಲ್ಲ. ಆದರೆ ಏಡ್ಸ್ ಇರುವವರೆಲ್ಲಾ ಎಚ್.ಐ.ವಿ ವೈರಾಣುವಿನಿಂದ ಸೋಂಕಿತರಾಗಿರುತ್ತಾರೆ. ಏಡ್ಸ್ ಎನ್ನುವುದು ತಮ್ಮ ದೇಹದ ರೋಗ ನೀರೋಧಕ ಶಕ್ತಿಗೆ ಸಂಬಂಧಪಟ್ಟ
ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಎಚ್.ಐ.ವಿ ಎಂಬ ವೈರಸ್‍ನಿಂದ ಉಂಟಾಗುವ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು,ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದ ಒಳಗೆ ಬರುವ ಏಡ್ಸ್‍ರೋಗ ಮನುಕುಲದ ಬಹುದೊಡ್ಡ ಶತ್ರು. 2013ರ ಅಂಕಿಅಂಶಗಳ ಪ್ರಕಾರ ಸುಮಾರು 36 ಮಿಲಿಯನ್ ಮಂದಿ (1981-2012ರ ವರೆಗೆ) ಸಾವನ್ನಪ್ಪಿದ್ದಾರೆ