ಪೆರುವಾಯಿ ಸಮೀಪ ಮುಳಿಯ ಎಂಬಲ್ಲಿ KSRTC ಬಸ್ಸು ಮತ್ತು ಓಮ್ನಿ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಮ್ನಿಯಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ವಿಟ್ಲದಿಂದ ಪೆರುವಾಯಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮತ್ತು ಪಕಳಕುಂಜದಿಂದ ವಿಟ್ಲ ಕಡೆಗೆ ಬರುತ್ತಿದ್ದ KSRTC ಬಸ್ಸು ಮುಳಿಯ ಎಂಬಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ
ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಕುಮಾರ್ ಶೆಟ್ಟಿಯವರ ಪದಗ್ರಹಣ ಕಾರ್ಯಕ್ರಮ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಪ್ರಸನ್ನ ಮಾರ್ತ ಮತ್ತು ಬಿಜೆಪಿ ಮುಖಂಡರು ಭಾಗಿ. ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಕುಮಾರ್ ಶೆಟ್ಟಿಯವರ ಪದಗ್ರಹಣ ಕಾರ್ಯಕ್ರಮ ಪಟ್ಟಣ ಪಂಚಾಯತ್‌ನ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ
ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೈರಿಕಟ್ಟೆ ಎಂಬಲ್ಲಿ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಬಿಡಿ, ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಈ ರಸ್ತೆಯ ಒಂದು ಬದಿಗೆ ಇಂಟರ್ ಲಾಕ್ ಅಳವಡಿಸಿದ್ದು, ಅದೀಗ ಕಿತ್ತು ಹೋಗಿದೆ. ಈ ರಸ್ತೆ ವಿಟ್ಲದಿಂದ ಕನ್ಯಾನ, ಬಾಯಾರು, ಉಪ್ಪಳ, ಆನೆಕಲ್ಲು, ಮಂಜೇಶ್ವರ ಕಡೆಗೆ ಸಂಪರ್ಕ ಕಲ್ಲಿಸುತ್ತದೆ ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದೆ. ರಸ್ತೆ
ವಿಟ್ಲ: ಕಂಬಳಬೆಟ್ಟು ಮುಖ್ಯ ರಸ್ತೆಗೆ ಏಕಾಏಕಿ ಆಗಮಿಸಿದ ಬೈಕ್ ತಪ್ಪಿಸಲು ಪ್ರಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಬೈಕ್ ಗಳಿಗೆ ಡಿಕ್ಕಿಯಾಗಿ ಮಣ್ಣಿನ ದಿಬ್ಬದ ಮೇಲೆ ಮಗುಚಿ ಬಿದ್ದಿದೆ. ಬೈಕ್ ಸವಾರ ಅರ್ಕೆಜಾಲು ನಿವಾಸಿ ಯತೀಶ ಗಾಯಗೊಂಡಿದ್ದಾರೆ. ಕಾರು ಚಾಲಕ ಬೊಳಂತಿಮೊಗರು ನಿವಾಸಿ ಸನನ್ ಅಪಾಯದಿಂದ ಪಾರಾಗಿದ್ದಾರೆ. ವಿಟ್ಲ ಕಬಕ ರಸ್ತೆಯ ಕಂಬೆಟ್ಟುವಿನಲ್ಲಿ ಅರ್ಕೆಜಾಲು ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ನುಗ್ಗಿದ ಬೈಕ್ ಗೆ ನಿಯಂತ್ರಣ ಕಳೆದುಕೊಂಡ ಕಾರು
ವಿಟ್ಲ: ಮನೆ ಅಡಿಸ್ಥಳದ ಹಕ್ಕು ಪತ್ರ ಪಡೆಯುವ ವಿಚಾರದಲ್ಲಿ ನಿರೀಕ್ಷಕರ ಕಛೇರಿಯಲ್ಲಿ ಕೆಲವು ವ್ಯಕ್ತಿಗಳು ಮೇಜಿನ ಗಾಜು ಪುಡಿ ಮಾಡಿ ದಾಂಧಲೆ ನಡೆಸಿದ ಘಟನೆ ವಿಟ್ಲದ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಬಂದೋಬಸ್ತು ಕಲ್ಪಿಸಿದ್ದಾರೆ.ವೀರಕಂಬ ನಿವಾಸಿ ಶೇಖ್ ಶಿಬಾನ್ ಎಂಬರು ಇತ್ತೀಚೆಗೆ ಸರ್ಕಾರಿ ಜಾಗದಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದರು. ಅಡಿಸ್ಥಳವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ನಿಟ್ಟಿನಲ್ಲಿ 94ಸಿ ಅಡಿಯಲ್ಲಿ
ಸಾಲೆತ್ತೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಭಾಗಶ: ಜಖಂಗೊಂಡ ಘಟನೆ ಸಾಲೆತ್ತೂರು ಜಂಕ್ಷನ್‌ನಲ್ಲಿ ನಡೆದಿದೆ. ಮುಡಿಪು ಕಡೆಯಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಟೊಯೊಟಾ ಅರ್ಬನ್ ಕ್ರೂಸರ್ ಕಾರು ಸಾಲೆತ್ತೂರು ಜಂಕ್ಷನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಭಾರಿ ಗಾತ್ರದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಭಾಗಶ: ಜಖಂಗೊಂಡಿದ್ದು ಅಪಘಾತದ
ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ
ಮಹಿಳೆಯೋರ್ವರನ್ನು ಕತ್ತು ಹಿಸುಕಿ ಕೊಲೆಗೈದ ಘಟನೆ ಪೆರ್ನೆ ಗ್ರಾ.ಪಂ ವ್ಯಾಪ್ತಿಯ ಬಿಳಿಯೂರಿನ ದರ್ಖಾಸ್ ನಲ್ಲಿ ನಡೆದಿದೆ. ಕೊಲೆಯ ಬಗ್ಗೆ ಅಕ್ಕನ ಮಗನಾದ ಅಪ್ರಾಪ್ತ ಬಾಲಕನ ಮೇಲೆ ತೀವ್ರ ಸಂಶಯ ವ್ಯಕ್ತವಾಗಿದೆ. ದರ್ಖಾಸ್ ನ ಹೇಮಾವತಿ ಮೃತ ಮಹಿಳೆಯಾಗಿದ್ದು, ಜೂನ್ 16 ರಂದು ಮಧ್ಯರಾತ್ರಿ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದಾರೆ. ಈ
ವಿಟ್ಲ: ವಿದ್ಯುತ್ ತಂತಿಗೆ ಸಿಲುಕಿ ನವಿಲು ಮೃತಪಟ್ಟ ಘಟನೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ. ನವಿಲು ಮೃತಪಟ್ಟ ಬಗ್ಗೆ ಇಲ್ಲಿನ ರಿಕ್ಷಾ ಚಾಲಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಮೃತ ನವಿಲನ್ನು ಸ್ಥಳದಿಂದ ಅನಂತಾಡಿ ಆರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ಹಸ್ತಾಂತರ ಮಾಡಿದ್ದಾರೆ.
ವಿಟ್ಲ: ಮಾಣಿ , ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ & ಗೈಡ್ಸ್ ವಾರ್ಷಿಕ ಶಿಬಿರವನ್ನು ಕಶೆಕೋಡಿಯ ಶ್ರೀ ಲಕ್ಷ್ಮೀವೆಂಕರಮಣ ದೇವಸ್ಥಾನ ಬಾಳ್ತಿಲ ಗ್ರಾಮದಲ್ಲಿ ಏಪ್ರಿಲ್ 6 ಮತ್ತು 7 ರಂದು ಹಮ್ಮಿಕೊಳ್ಳಲಾಯಿತು. ಶಿಬಿರವನ್ನು ಪೂರ್ವಾಹ್ನ 9.30ಕ್ಕೆ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಮತ್ತು ಬಾಲವಿಕಾಸ ಟ್ರಸ್ಟ್ ಮಾಣಿಯ ಅಧ್ಯಕ್ಷರೂ ಆಗಿರುವ ಶ್ರೀ ಪ್ರಹ್ಲಾದ ಶೆಟ್ಟಿ .ಜೆ ರವರು ಶಾಲಾ ಆವರಣದಲ್ಲಿ ಹಣ್ಣಿನ



























