Home Archive by category Fresh News (Page 100)

ಬೆಂಗಳೂರು ; ಹೋಟೆಲ್ ನಲ್ಲಿ ಮಹಿಳಾ ಎಸ್ಐಗೆ ದಮ್ಕಿ ಹೋಟೆಲಿನ ಮೂವರ ಬಂಧನ

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ತಡ ಇರುಳಿನ ಬಳಿಕ ಹೋಟೆಲ್ ನಡೆಸುತ್ತಿದ್ದವರನ್ನು ಸರಿಯಾಗಿ ಉತ್ತರಿಸದೆ ಮಹಿಳಾ ಪೋಲೀಸು ಜೊತೆಗೆ ಅನುಚಿತ ವರ್ತನೆ ತೋರಿಸಿದ್ದಕ್ಕಾಗಿ ಬಂಧಿಸಲಾಗಿದೆ. ಮುಖ್ಯ ಆರೋಪಿ ಹೋಟೆಲ್ ಮಾಲಿಕ ಸಂಜೀವ್ ಗೌಡ, ಕ್ಯಾಶಿಯರ್ ಸಂದೀಪ್ ಮತ್ತು ಹೇಮಂತ್ ಬಂಧಿತರು. ತಡ ರಾತ್ರಿ ಹೀಗೆ ಹೋಟೆಲ್ ನಡೆಸುವಂತಿಲ್ಲ ಎಂದುದಕ್ಕೆ 50,000 ಲಂಚ

ಕಟೀಲು ಶಿಕ್ಷಣ ಸಂಸ್ಥೆಯಿಂದ ಭ್ರಮರ ಇಂಚರ ಕಾರ್ಯಕ್ರಮ

ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿಗಳಿಗೆ, ಕಲಿಸುವ ಗುರುಗಳಿಗೆ ಮೊದಲು ಗೌರವ ಕೊಡಲು ಕಲಿಯಬೇಕು ಎಂದು ಸಿನೆಮಾ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದ ಶಿಕ್ಷಣ ಸಂಸ್ಧೆಗಳ ವತಿಯಿಂದ ನಡೆದ ಭ್ರಮರ ಇಂಚರ ಕಾರ್ಯಕ್ರಮದ ಸಿನೆಮಾ ಮತ್ತು ರಂಗಭೂಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳಿಗೆ ಅವಕಾಶ ಸಿಕ್ಕಾಗ ಇಂತಹ ವೇದಿಕೆಗಳನ್ನು ಬಳಸಿಕೊಂಡಾಗ ತಮ್ಮ ಲ್ಲಿರುವ ಪ್ರತಿಭೆಗಳನ್ನು ಹೊರತೆಗೆಯಲು ಸಾಧ್ಯವಾಗುತ್ತದೆ

ತರಬೇತಿ ವಿಮಾನ ಪತನ, ಇಬ್ಬರು ಐಎಎಫ್ ಪೈಲೆಟ್‍ಗಳ ಮರಣ

ಹೈದರಾಬಾದಿನ ಏರ್‍ಫೋರ್ಸ್ ಅಕಾಡೆಮಿಯಲ್ಲಿ ಪಿಲಾಟಸ್ ಪಿಸಿ 7 ತರಬೇತಿ ವಿಮಾನವು ಪತನಗೊಂಡುದರಿಂದ ಭಾರತೀಯ ವಾಯುಪಡೆಯ ಪೈಲಟ್‍ಗಳು ಇಬ್ಬರು ಸೋಮವಾರ ಬೆಳಿಗ್ಗೆ ಸಾವಿಗೀಡಾದರು.

ತಮಿಳುನಾಡು ಹೊಕ್ಕ ಮಿಚುಂಗ್ ಚಂಡಮಾರುತ

ಬಂಗಾಳ ಕೊಲ್ಲಿಯಲ್ಲಿ ಹುಟ್ಟಿದ ಮಿಚುಂಗ್ ಚಂಡಮಾರುತವು ತಮಿಳುನಾಡನ್ನು ಹೊಕ್ಕು 16 ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯನ್ನು ಸುರಿಸತೊಡಗಿದೆ. ಕಾಂಚೀಪುರಂ, ಚೆಂಗಲ್ ಪಟ್ಟು ಮೊದಲಾದ ಜಿಲ್ಲಾಡಳಿತಗಳು ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ. ಮಳೆಯಿಂದಾಗಿ ಜನಜೀವನವು ಅಸ್ತವ್ಯಸ್ತಗೊಂಡಿದೆ. ಚೆನ್ನೈ ಸಹಿತ, ತಿರುವಳ್ಳೂರು ಕರ್ನಾಟಕದೊತ್ತಿನ ಧರ್ಮಪುರಿಯವರೆಗೆ 16 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ

ನೆಲ್ಯಾಡಿ: ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಭಯ ಭೀತರಾದ ವಾಹನ ಸವಾರರು

ನೆಲ್ಯಾಡಿ: ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ವಾಹನ ಸವಾರರು ಭಯಭೀತರಾದರು. ಭಾನುವಾರ ಸಂಜೆ ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಒಂಟಿ ಸಲಗವೊಂದು ರಸ್ತೆಗೆ ಬಂದಿದ್ದರಿಂದ ವಾಹನಗಳು ಸಾಲು ಗಟ್ಟಿ ನಿಂತಿದ್ದವು.ಒಂಟಿ ಸಲಗವು ಬೃಹದಾಕಾರವಾಗಿದ್ದು ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲೇ ಇದ್ದು ನಂತರ ತಿರುವಿನಲ್ಲಿ ಅರಣ್ಯಕ್ಕೆ ಸಾಗಿದ್ದು ವಾಹನ ಸವಾರರು ಕಾಡಾನೆಯ ವೀಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಆದರೆ

ಬೈಂದೂರು: ಗ್ರಾಮ ಲೆಕ್ಕಾಧಿಕಾರಿ ದಾಖಲೆ ಪರಿಶೀಲಿಸದೆ ಆದಾಯ ಪತ್ರ ನೀಡಿದ್ದಾರೆ: ಗ್ರಾಮಸ್ಥರ ಆರೋಪ

ಬೈಂದೂರು: ಇಡೂರು ಕುಂಜ್ಞಾಡಿ ಗ್ರಾಮ ಲೆಕ್ಕಾಧಿಕಾರಿ ದಾಖಲೆ ಪರಿಶೀಲಿಸದೆ ಆದಾಯ ಪತ್ರ ನೀಡಿದ್ದಾರೆ: ಗ್ರಾಮಸ್ಥರ ಆರೋಪಬೈಂದೂರು ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಇಡೂರು ಕುಂಜ್ಞಾಡಿ ಗ್ರಾಮದ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಅಂದಿನ ಕುಂದಾಪುರ ತಹಸಿಲ್ದಾರ್ ಕಿರಣ್ ಗೋರಯ್ಯ ಮರುಪರಿಶೀಲಿಸಬೇಕು ಹಾಗೂ ನೀಡಿರುವ ದಾಖಲೆ ಪತ್ರಗಳನ್ನು ಹಿಂಪಡೆಯಬೇಕೆಂದು ಆದೇಶಿಸಿರುತ್ತಾರೆ ಆದರೆ ಕಾಣದ ಕೈಗಳು ಕೆಲಸ ಮಾಡಿ ಸರಕಾರದ ದಿಕ್ಕು ತಪ್ಪಿಸುವ ಕೆಲಸ ಆಗಿದೆ ಎಂದು

ಬಿಜೆಪಿಗೆ ನಾಲ್ಕರಲ್ಲಿ ಮೂರು ಎರಡು ಲಾಭ, ಹೇಗೆ? ಭಾರತ, ಇಂಡಿಯಾಕ್ಕೆ ಸೋಲು, ಎಲ್ಲಿ?

ನಾಲ್ಕು ರಾಜ್ಯಗಳ‌ ಚುನಾವಣೆಯ ಫಲಿತಾಂಶ ಬಿಜೆಪಿಗೆ ಲಾಭ ನೀಡಿದೆ. ಕಾಂಗ್ರೆಸ್ ಬಲ ನಿಂತ ನೀರಾಗಿದೆ. ಭಾರತ, ಇಂಡಿಯಾಗಳು ಸೋತು ಹೋಗಿವೆ. ಬಿಜೆಪಿಯಯ 142 ಹೆಚ್ಚು ಶಾಸಕರನ್ನು ಗೆದ್ದಿದೆ. ನಾಲ್ಕು ರಾಜ್ಯಗಳಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆದಿದೆ. ಕಾಂಗ್ರೆಸ್ ಮತ ಭಾರ ಭಾರೀ ಇಳಿಯದಿದ್ದರೂ ಒಟ್ಟು 66 ಶಾಸಕರನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿ ಮಾತ್ರ ಅದು ತನ್ನ ಶಾಸಕ ಸಂಖ್ಯೆ ಹೆಚ್ಚಿಸಿಕೊಂಡು ಮೂರು ರಾಜ್ಯಗಳ ಕೊರತೆಯನ್ನು ಸ್ವಲ್ಪ ಭರ್ತಿ

ಸುಳ್ಳು ಸುದ್ದಿ ಹರಡುವ 9 ಯೂಟ್ಯೂಬ್ ಚಾನೆಲ್‌ಗಳ ಪಟ್ಟಿ ಬಿಡುಗಡೆ

ಸುಳ್ಳು ಸುದ್ದಿ ಹರಡಿ ಲಕ್ಷಾಂತರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ಒಂಬತ್ತು ಫೇಕ್ ನ್ಯೂಸ್ ಚಾನೆಲ್‌ಗಳ ಪಟ್ಟಿ ಬಿಡುಗಡೆ ಆಗಿದೆ.ಸರ್ಕಾರಿ ಯೋಜನಾ ಅಫೀಶಿಯಲ್, ಸನ್ನಾನಿ‌ ಲೈವ್, ಬಜರಂಗ್ ಎಜುಕೇಶನ್, ಆಫ್ ಕ ಗುರೂಜಿ, ಬಿಜೆ ನ್ಯೂಸ್, ಅಬ್ ಬೋಲೇಗಾ ಭಾರತ್, ಜಿವಿಟಿ ನ್ಯೂಸ್, ಡೈಲಿ ಸ್ಟಡಿ, ಭಾರತ್ ಏಕ್ತಾ ನ್ಯೂಸ್ ಇವೇ ಆ ಸುಳ್ಳು ಸುದ್ದಿ ಶೂರ ಯೂಟ್ಯೂಬ್ ಚಾನೆಲ್‌ಗಳು.ಇವುಗಳಲ್ಲಿ ಆಫ್ ಕ ಗುರೂಜಿ 34 ಲಕ್ಷ ಮತ್ತು ಬಜರಂಗ್ ಎಜುಕೇಶನ್ 25 ಲಕ್ಷ

ತಮಿಳುನಾಡು ; ಲಂಚಕೋರ ಇಡಿ- ಜಾರಿ ನಿರ್ದೇಶನಾಲಯದ ಅಧಿಕಾರಿ ಬಂಧನ

ಸರಕಾರಿ ನೌಕರರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್ ತಿವಾರಿ ಅವರನ್ನು ತಮಿಳುನಾಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದವರು ಡಿಂಡಿಗಲ್‍ನಲ್ಲಿ ವಶಕ್ಕೆ ಪಡೆದರು. ಸ್ಥಳೀಯ ಕೋರ್ಟು ತಿವಾರಿಯನ್ನು ಡಿಸೆಂಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ಬೆನ್ನಿಗೇ ಮಧುರೈಯಲ್ಲಿರುವ ಇಡಿ- ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಗೆ ಭ್ರಷ್ಟಾಚಾರ ನಿಗ್ರಹ ದಳದವರು ಜಾರಿ ಮಾಡಿದರು. ಹಾಗೆಯೇ

ಬಾಂಗ್ಲಾದೇಶದಲ್ಲಿ ತೀವ್ರ ನಡುಕದ ಭೂಕಂಪ

ಬಾಂಗ್ಲಾದೇಶದ ಚಿತ್ತಗಾಂಗ್ ಪ್ರಾಂತ್ಯದ ರಾಮ್‍ಗಂಜ್‍ನಿಂದ ಹತ್ತು ಕಿಲೋಮೀಟರ್ ದೂರವನ್ನು ಕೇಂದ್ರವಾಗಿಟ್ಟುಕೊಂಡು ಶನಿವಾರ ಒಂದಷ್ಟು ಹಾನಿ ಉಂಟು ಮಾಡಿದ ನೆಲನಡುಕ ನಡೆದಿದೆ.ರಿಕ್ಟರ್ ಮಾಪಕದಲ್ಲಿ ಈ ಭೂಕಂಪವು 5.8 ತೀವ್ರತೆಯದಾಗಿತ್ತು. ಒಂದು ಕಡೆ ನೆಲ ಜರಿದ ಮತ್ತು ಸಣ್ಣ ಪ್ರಮಾಣದಲ್ಲಿ ಹಾನಿ ಎನ್ನಬಹುದಾದ ಪ್ರಮಾದವಲ್ಲದ ಭೂಕಂಪವಿದು ಎಂದು ಹವಾಮಾನ ಇಲಾಖೆ ಹೇಳಿದೆ