Home Archive by category Fresh News (Page 3)

ಅಮೆರಿಕದಲ್ಲಿ ಕನ್ನಡಿಗ ನಾಪತ್ತೆ ಪ್ರಕರಣ: ವಿದ್ಯಾರ್ಥಿ ಸಾಕೇತ್ ಶವವಾಗಿ ಪತ್ತೆ

ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಮೃತದೇಹ ಪತ್ತೆಯಾಗಿದೆ ಎಂದು ಭಾರತದ ಕಾನ್ಸುಲೇಟ್ ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಮೃತದೇಹ ಪತ್ತೆಯಾಗಿರುವುದನ್ನು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಅವರ

ಉಳ್ಳಾಲ: ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ & ಸರ್ವೀಸ್ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್‌ನ ಮಳಿಗೆ ಶುಭಾರಂಭ

ಉಳ್ಳಾಲ ಬೈಲ್‌ನ ಮಾತಾ ಕಾಂಪ್ಲೆಕ್ಸ್‌ನಲ್ಲಿ ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವೀಸ್ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್‌ನ ಉದ್ಘಾಟನಾ ಸಮಾರಂಭ ನಡೆಯಿತು. ಸರ್ಫ್‌ರಾಝ್ ಮತ್ತು ಅಬ್ದುಲ್ ಲತೀಫ್ ಅವರ ಮಾಲಕತ್ವದಲ್ಲಿ ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವೀಸ್ ಮಳಿಗೆ ನೂತನವಾಗಿ ಶುಭಾರಂಭಗೊಂಡಿತು. ವಿಧಾನಸಭೆಯ ಸ್ಪೀಕರ್ ಮತ್ತು ಶಾಸಕರಾದ ಯು.ಟಿ. ಖಾದರ್ ಸಹಿತ ಗಣ್ಯರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಸ್ಪೀಕರ್

ಕಾರ್ಮಿಕ ಸಂಹಿತೆಗಳ ವಿರುದ್ದ ಅಖಿಲ ಭಾರತ ಮಹಾಮುಷ್ಕರ – ಮಂಗಳೂರಿನಲ್ಲಿ ರಸ್ತೆತಡೆ ಹಾಗೂ ಪ್ರತಿಭಟನಾ ಪ್ರದರ್ಶನ

ಕಾರ್ಮಿಕ ವರ್ಗದ 29 ಪ್ರಮುಖ ಕಾನೂನುಗಳನ್ನು ರದ್ದುಗೊಳಿಸಿ, ಕಾರ್ಪೊರೇಟ್ ಪರ 4 ಸಂಹಿತೆಗಳನ್ನು ಜಾರಿಗೊಳಿಸಿದ ಕೇಂದ್ರ ಸರಕಾರದ ವಿರುದ್ಧ ಇಂದು (ಫೆಬ್ರವರಿ – 12) ರೈತ ಕಾರ್ಮಿಕರ ನೇತ್ರತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ ಅತ್ಯಂತ ಯಶಸ್ವಿಯಾಗಿ ಜರುಗಿದ್ದು,ಅದರ ಭಾಗವಾಗಿ ಮಂಗಳೂರಿನ ಹೃದಯಭಾಗದ ಕ್ಲಾಕ್ ಟವರ್ ಬಳಿಯಲ್ಲಿ ವಿವಿಧ ವಿಭಾಗದ ಕಾರ್ಮಿಕರು ನೌಕರರು ಜತೆಯಾಗಿ ಸೇರಿ ರಸ್ತೆತಡೆ ನಡೆಸಿ ಬಳಿಕ ಪ್ರತಿಭಟನಾ ಸಭೆಯನ್ನು ನಡೆಸಿದರು 500ಕ್ಕೂ ಮಿಕ್ಕಿದ

ನೇತ್ರ ಜ್ಯೋತಿ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಸಿವಿಲ್ ಡಿಫೆನ್ಸ್ ಕಮಾಂಡಿಂಗ್ ಆಫೀಸರ್ ಡಾ. ವಿಜೇಂದ್ರ ಸಿವಿಲ್ ಡಿಫೆನ್ಸ್ ಮಾಹಿತಿ ಕಾರ್ಯಗಾರ

ಉಡುಪಿ:ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ಸಿವಿಲ್ ಡಿಫೆನ್ಸ್ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಿಮಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಿವಿಲ್ ಡಿಫೆನ್ಸ್ ಕಮಾಂಡಿಂಗ್ ಆಫೀಸರ್ ಡಾ. ವಿಜೇಂದ್ರರವರು ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ರಕ್ಷಣೆ ಮತ್ತು ಮಾನವೀಯ ಸೇವೆ ಒದಗಿಸುವುದೇ ಸಿವಿಲ್ ಡಿಫೆನ್ಸ್. ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವಲ್ಲಿ ವಿಧ್ಯಾರ್ಥಿಗಳು ಮುಂದಾಗಬೇಕು. ಹೆಚ್ಚು ಹೆಚ್ಚು

ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವಾರ್ಷಿಕೋತ್ಸವ “ಉತ್ಕರ್ಷ್ 2026”

ಸುಳ್ಯದ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವಾರ್ಷಿಕೋತ್ಸವ “ಉತ್ಕರ್ಷ್ 2026” ಕಾರ್ಯಕ್ರಮವು ಫೆ.10 ರಂದು ಸುಳ್ಯದ ಲಯನ್ಸ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಭಾಗವಹಿಸಿ, ಮಾತನಾಡಿ ಮಕ್ಕಳೊಂದಿಗೆ ತಂದೆ ತಾಯಿಯ ಬಾಂಧವ್ಯ ಯಾವ ರೀತಿ ಇರಬೇಕೆಂದು ತಿಳಿ ಹೇಳಿ, ಶುಭ ಹಾರೈಸಿದರು. ಗೌರವಾನ್ವಿತ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯದ ವೆಂಕಟರಮಣ ಸಹಕಾರಿ ಸಂಘದ ಸಿಇಒ

ಬೆದ್ರ ಶ್ರೀಕೃಷ್ಣ ವೇಷಧಾರಿ ಯಕ್ಷಗಾನ ಹಿಮ್ಮೇಳ ಕಲಾವಿದ ಸುಧಾಕರ ಕುಲಾಲ್ (ದಾಸಪ್ಪ) ನಿಧನ

ಮೂಡುಬಿದಿರೆ: ಬೆದ್ರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಸರುಕುಡಿಕೆ ಉತ್ಸವದಲ್ಲಿ ಶ್ರೀಕೃಷ್ಣ ವೇಷಧಾರಿಯ ಯಕ್ಷಗಾನ ಹಿಮ್ಮೇಳ ತಂಡದ ನೇತೃತ್ವ ವಹಿಸುತ್ತಿದ್ದ ಹಿರಿಯ ಭಾಗವತಿಕೆ ಹಾಗೂ ಮದ್ದಳೆ ಕಲಾವಿದ ಸುಧಾಕರ ಕುಲಾಲ್ (ದಾಸಪ್ಪ) 78ಮಳಲಿಯಲ್ಲಿ ಅನಾರೋಗ್ಯದಿಂದ ನಿಧನರಾದರು. ಮೂಡುಬಿದಿರೆಯ ಯಕ್ಷಗಾನೀಯ ಪರಂಪರೆಯ ಮೊಸರುಕುಡಿಕೆ ಉತ್ಸವದ ಪ್ರಮುಖ ಹಿನ್ನೆಲೆದಾರರಾಗಿದ್ದ ಸುಧಾಕರ ಕುಲಾಲ್ ಮಂಗಳವಾರ ಮುಂಜಾನೆ ಅಲ್ಪಕಾಲದ ಅಸ್ವಸ್ಥತೆಯಿಂದ ಕೊನೆಯುಸಿರೆಳೆದರು. ಅವರು

ಮೂಡುಬಿದಿರೆ: ಅಗ್ನಿವೀರ್ ನೇಮಕಾತಿ ರ್‍ಯಾಲಿ ಮುಕ್ತಾಯ : 8,500 ಮಂದಿ ಭಾಗಿ

ಮೂಡುಬಿದಿರೆ: ಅಗ್ನಿವೀರ್ ರ‍್ಯಾಲಿ ಆಡಳಿತ, ಸಂಘಟಿತ ವ್ಯವಸ್ಥೆ ಮತ್ತು ಸೇವಾಭಾವದ ಅಪರೂಪದ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಇದು ಕೇವಲ ನೇಮಕಾತಿ ಪ್ರಕ್ರಿಯೆಯಲ್ಲ; ಯುವ ಮನಸ್ಸುಗಳಲ್ಲಿ ದೇಶಸೇವೆಯ ಉತ್ಸಾಹವನ್ನು ಮತ್ತಷ್ಟು ಗಟ್ಟಿಗೊಳಿಸಿದ ಮಹತ್ವದ ಅಧ್ಯಾಯವಾಗಿದೆ. ಪುಣ್ಯದ ಕೆಲಸದಲ್ಲಿ ನಮ್ಮ ಸಂಸ್ಥೆಯು ಭಾಗಿಯಾಗಿರುವುದು ನಮ್ಮ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟರು. ಅವರು ಮೂಡುಬಿದಿರೆಯ ಸ್ವರಾಜ್ಯ

ಕಡಬ : ‘ಅನ್ವೇಷಣೆ–2026’ ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ರಂಗೋಲಿ ಸ್ಪರ್ಧೆ

ಕಡಬ, ಫೆ.10: ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಕಡಬ ಇಲ್ಲಿನ ವಿಜ್ಞಾನ ಸಂಘದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ‘ಅನ್ವೇಷಣೆ–2026’ ಎಂಬ ಶೀರ್ಷಿಕೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ, ರಂಗೋಲಿ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯದ ನಿವೃತ್ತ ಮುಖ್ಯಗುರುಗಳಾದ ಶ್ರೀ ಕೆ. ಯಶವಂತ ರೈ

ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ (ನಿ) ಆರೋಗ್ಯ ಸೇವಾ ಸಂಗಮ:ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರಮ

ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ (ನಿ) ಆರೋಗ್ಯ ಸೇವಾ ಸಂಗಮ 100ನೇ ಯ ಬೃಹತ್ ಉಚಿತ ವೈದ್ಯಕೀಯ ನೇತ್ರ, ದಂತ, ರಕ್ತದಾನ ಶಿಬಿರ, ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರವು ಹಾಗೂ 14ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಮಂಗಳೂರಿನ ಪಡೀಲ್‌ನಲ್ಲಿ ತನ್ನ ಕೇಂದ್ರ ಕಛೇರಿ “ಆತ್ಮ ಶಕ್ತಿ ಸೌಧ” ದಲ್ಲಿ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ “ಸಹಕಾರ ರತ್ನ”

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ:ಇಂದಿನಿಂದ ಜಾತ್ರೆ, ಕುಂಭ ಮಹೋತ್ಸವ

ಮಹಾನಗರ: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ, ಕುಂಭ ಮಹೋತ್ಸವ ಫೆ. 11ರಿಂದ 14ರ ವರೆಗೆ ನಡೆಯಲಿದೆ. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಆಶೀರ್ವಾ ದದೊಂದಿಗೆ ಶ್ರೀ ಕ್ಷೇತ್ರದ ತಂತ್ರಿ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಜನಾರ್ದನ ಭಟ್ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಫೆ. 11ರಂದು ಸುಮತಿ ಮತ್ತು ಶ್ರೀನಿವಾಸ್‌ ಅವರಿಂದ ದೀಪ ಪ್ರಜ್ವಲನೆ, 3ಕ್ಕೆ ಭಜನೆ, 5.45ಕ್ಕೆ ಜಾನಪದ