Home Archive by category Fresh News (Page 440)

ಸಮುದಾಯ ಸ್ಥಳಗಳ ಪರಿಣಾಮಕಾರಿ ನಿರ್ವಹಣೆ ಕುರಿತು ತಜ್ಞರ ಸಭೆ : ಪ್ಲೇಸ್ ಮೇಕಿಂಗ್ ಇಂಡಿಯಾ ತಂಡದಿಂದ ಮಂಗಳೂರಿನಲ್ಲಿ ಸ್ಥಳ ಭೇಟಿ

ಮಂಗಳೂರು :- ನಗರ ವಾಸ್ತುಶಿಲ್ಪಿಗಳು, ನಗರ ಯೋಜಕರು, ತಜ್ಞರು, ವಿನ್ಯಾಸಕರು, ಮಾನವ ಭೂಗೋಳ ಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು, ಸ್ಥಳೀಯರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡ ಪ್ಲೇಸ್ ಮೇಕಿಂಗ್ ಇಂಡಿಯಾ ತಂಡದಿಂದ ಮಂಗಳೂರು ನಗರದಲ್ಲಿ ಸಮುದಾಯ ಸ್ಥಳಗಳ ಪರಿಣಾಮಕಾರಿ ನಿರ್ವಹಣೆ ಕುರಿತಂತೆ ಸುರತ್ಕಲ್ ನಲ್ಲಿರುವ ನಿರ್ಮಿತಿ

ಜಿಲ್ಲಾ ಮಟ್ಟದ ಸ್ವಚ್ಛ ಶನಿವಾರ ಅಭಿಯಾನಕ್ಕೆ ಚಾಲನೆ

-ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಮಟ್ಟದ ಗ್ರಾಮ ನೈರ್ಮಲ್ಯ ಹಾಗೂ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಶಾಲೆ, ಕಾಲೇಜು ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕ ಭಾಗಿತ್ವದಲ್ಲಿ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ ಸಹಕಾರ ದಲ್ಲಿ ಡಿ.3ರ ಶನಿವಾರ ಜಿಲ್ಲಾ ಮಟ್ಟದ ಸ್ವಚ್ಛ ಶನಿವಾರ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕರಾದ ಯು.ಟಿ. ಖಾದರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ

ಮಂಗಳೂರು: 2023 ಹೊಸ ವರ್ಷಾಚರಣೆಯ ಸೂಚನೆಗಳನ್ನು ಪಾಲಿಸುವಂತೆ ಕಮಿಷನರ್ ಸೂಚನೆ

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 2023ರ ಹೊಸ ವರ್ಷಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ನೀಡಿರುವ ಸೂಚನೆ ಹಾಗೂ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿರುತ್ತಾರೆ. ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು, ವ್ಯವಸ್ಥಾಪಕರು, ಆಡಳಿತ

ಇನ್ಟಿಮೇಟ್ ನಿವ್ ಟೈಯರ್‍ಸ್ ವೀಲ್ ಅಲೈನ್‌ಮೆಂಟ್ & ಬ್ಯಾಲೆಂಸಿಂಗ್ ಮಳಿಗೆ ಶುಭಾರಂಭ ( GRAND OPENING OF INTIMATE NEW TYRES )

ಮಣಿಪಾಲದ ಜನತಾ ಗ್ರೂಪ್ ಅವರ ನೂತನ ಘಟಕ ಇನ್ಟಿಮೇಟ್ ನಿವ್ ಟೈಯರ್‍ಸ್ ವೀಲ್ ಅಲೈನ್‌ಮೆಂಟ್ & ಬ್ಯಾಲೆಂಸಿಂಗ್, ಇದೀಗ ಇಂದ್ರಾಳಿಯ ಉಡುಪಿ-ಮಣಿಪಾಲ ಮುಖ್ಯರಸ್ತೆಯ ಬದಿಯ ಇಂದ್ರಾಳಿ ಪೆಟ್ರೋಲ್ ಪಂಪ್ ಬಳಿಯಿರುವ ರಾಮಸಧನ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ. ಈ ನೂತನ ಕಾರ್ ಟೈಯರ್ ಡೀಲರ್‍ಸ್ ಸ್ಟೋರ್‌ನ್ನು ಮಲಬಾರ್ ಟೈಯರ್‍ಸ್ ಶಿವಮೊಗ್ಗ ಮತ್ತು ದ್ವಾರಕ ಕನ್ವೆನ್ಷನ್ ಹಾಲ್ ಶಿವಮೊಗ್ಗ ಇದರ ಸಂಸ್ಥಾಪಕರಾದ ವಿ. ಕೆ ಗೋವಿಂದನ್ ನಾಯರ್

ಮಣಿಪಾಲದ ಈಜ಼ಿ ಬೈ ಮಳಿಗೆಯಿಂದ ಗ್ರಾಹಕರಿಗೆ ವರ್ಷಾಂತ್ಯದ ವಿಶೇಷ ಅತೀದೊಡ್ಡ ರಿಯಾಯಿತಿ ಕೊಡುಗೆ

ಉಡುಪಿ-ಮಣಿಪಾಲ ಮುಖ್ಯರಸ್ತೆಯಲ್ಲಿರುವ ನಗರದ ಈಜ಼ಿ ಬೈ ಸ್ಟೋರ್ ಕರ್ನಾಟಕದಲ್ಲಿನ 25ನೇ ಸ್ಟೋರ್ ಮತ್ತು ದೇಶದಲ್ಲಿ 125 ನೇ ಈಜ಼ಿ ಬೈ ಸ್ಟೋರ್ ಆಗಿದೆ. ಇದೀಗ ಮಣಿಪಾಲದ ಈಜ಼ಿ ಬೈ ಮಳಿಗೆ ಹಾಗೂ ಉಡುಪಿಯ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಮಳಿಗೆಯಲ್ಲಿ ತನ್ನ ಗ್ರಾಹಕರಿಗೆ ವರ್ಷಾಂತ್ಯದ ವಿಶೇಷ ಅತೀದೊಡ್ಡ ರಿಯಾಯಿತಿ ಕೊಡುಗೆ ಘೋಷಿಸಿದ್ದು, 4,000 ರೂಪಾಯಿಗಳ ಬಟ್ಟೆ ಅಥವಾ ಇತರೆ ವಸ್ತುಗಳನ್ನು ಖರೀದಿಸಿದ ಗ್ರಾಹಕರು ಕೇವಲ 2,000 ರೂಪಾಯಿಗಳನ್ನು ಪಾವತಿಸಿ, ಕೊಡುಗೆಯ

ವಿಜೃಂಭಣೆಯಿಂದ ನಡೆದ ಇತಿಹಾಸ ಪ್ರಸಿದ್ಧ ತಗ್ಗರ್ಸೆ ಕಂಬಳ ಮಹೋತ್ಸವ

ಇತಿಹಾಸ ಪ್ರಸಿದ್ಧ ತಗ್ಗರ್ಸೆ ಸಾಂಪ್ರದಾಯಕ ಹೆಗ್ಡೆಯವರ ಮನೆ ಅನುವಂಶಿಯವಾಗಿ ನಡೆದು ಬಂದ ಕಂಬಳ ಮಹೋತ್ಸವ ವಿಜೃಂಭಣೆ ನಡೆಯಿತು.ಈ ಬಾರಿ ಸೆನ್ಸಾರ್ ಮೂಲಕ ಕೋಣದ ಓಟದ ವೇಗಮಿತಿಯನ್ನು ಅಳೆಯುವ ಸಾಧನ ಅಳವಡಿಸಲಾಗಿರುತ್ತದೆ. ಪ್ರತಿಯೊಂದು ಕೋಣದ ಮಾಲೀಕರು ತಮ್ಮ ಕೋಣವನ್ನು ಸಿಂಗರಿಸಿ ಕೋಣಗಳ ತಲೆಗೆ ಸಿಂಗಾರು ಕೊನೆಯನ್ನು ಕಟ್ಟಿ ವಾದ್ಯದ ಮೂಲಕ ದೇವರ ಹೆಸರನ್ನು ಹೊಳಲು ಕೂಗುತ್ತಾ ಕಂಬಳ ಗದ್ದೆಗೆ ಇಳಿಸಿ ನಂತರ ಕಂಬಳ ಗದ್ದೆಯ ನೀರನ್ನು ಕೋಣಗಳಿಗೆ ಸಿಂಪಡಿಸಿ ಸ್ವಲ್ಪ

ನವಮಂಗಳೂರಿಗೆ ಆಗಮಿಸಿದ್ದ ಸೆವೆನ್ ಸೀಸ್ ಎಕ್ಸ್ ಪ್ಲೋರರ್ ಹಡುಗು

ನವ ಮಂಗಳೂರು ಬಂದರಿಗೆ `ಸೆವೆನ್ ಸೀಸ್ ಎಕ್ಸ್ ಪ್ಲೋರರ್ ‘ ಹಡಗು ಆಗಮಿಸಿದ್ದು, ಇದು ಈ ಋತುವಿನ ಎರಡನೇ ಕ್ರೂಸ್ ಹಡಗು ಆಗಿದೆ. ಈ ಹಡಗಿನಲ್ಲಿ 686 ಪ್ರಯಾಣಿಕರು ಮತ್ತು 552 ಸಿಬ್ಬಂದಿ ವರ್ಗದ ಸದಸ್ಯರಿದ್ದರು. ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ಎನ್‍ಎಂಪಿಎ ಮತ್ತು ಎಂಪಿಎ ಅಧ್ಯಕ್ಷ ಡಾ. ಎ.ವಿ. ರಮಣ ಸ್ವಾಗತ ಕೋರಿದರು. ಈ ತಂಡದ ಸದಸ್ಯರು ನಗರದ ಸಂತ ಅಲೋಶಿಯಸ್ ಚಾಪೆಲ್, ಕದ್ರಿ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಸ್ಥಳೀಯ ಮಾರುಕಟ್ಟೆ, ಗೋಡಂಬಿ

ಸುರತ್ಕಲ್ ಟೋಲ್ ಕಾರ್ಮಿಕರಿಗೆ ಉದ್ಯೋಗ ನೀಡಿದ ಪ್ರತಿಭಾ ಕುಳಾಯಿ!

ಇಲ್ಲಿನ ಟೋಲ್ ಗೇಟ್ ನಲ್ಲಿ ಉದ್ಯೋಗದಲ್ಲಿದ್ದು ಟೋಲ್ ತೆರವು ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡಿರುವ 35 ಮಂದಿಗೆ ಕೆಲಸ ನೀಡುವುದಾಗಿ ಹೇಳಿದ್ದ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಅವರು ತಮ್ಮನ್ನು ಸಂಪರ್ಕಿಸಿದ 19 ಮಂದಿಯಲ್ಲಿ ಹೆಚ್ಚಿನ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಪ್ರತಿಭಾ ಕುಳಾಯಿ ಅವರು, “ಸುರತ್ಕಲ್ ಟೋಲ್ ಗೇಟ್ ನಲ್ಲಿ ಉದ್ಯೋಗ ಕಳೆದುಕೊಂಡ 35

ಫುಟ್ಬಾಲ್ ದಂತಕತೆ ಡಿಗೊ ಮರಡೋನರ ಹ್ಯಾಂಡ್ ಆಫ್ ಗಾಡ್ : ಮಂಗಳೂರಿಗೆ ಆಗಮಿಸಿದ್ದ ಚಿನ್ನದ ಮೂರ್ತಿ

ಮಾದಕದ್ರವ್ಯ ವಿರುದ್ಧ ನಡೆಸುವ ಹೋರಾಟಕ್ಕಾಗಿ ಡಾ. ಬೋಬಿ ಚೆಮ್ಮನ್ನೂರು ನೇತೃತ್ವದಲ್ಲಿ ಖತರ್‍ಗೆ ಕೊಂಡೊಯ್ಯಲಾಗುವ ಫುಟ್ಬಾಲ್ ದಂತಕತೆ ಡಿಗೊ ಮರಡೋನ ಅವರ ಹ್ಯಾಂಡ್ ಆಫ್ ಗಾಡ್ ಚಿನ್ನದ ಮೂರ್ತಿಯನ್ನು ನಗರದ ಮೈದಾನಕ್ಕೆ ತರಲಾಯಿತು. ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯದ ವಿರುದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. ದಕ್ಷಿಣ ಕನ್ನಡ ಫುಟ್ಪಾಲ್ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಚಿತ್ರನಟ ಅರ್ಜುನ್ ಕಾಪಿಕಾಡ್, ಕಾರ್ಪೋರೇಟರ್ ಲತೀಫ್ ಕಂದಕ್

ಪಡುಬಿದ್ರಿ : ಡಾಮಾರು ಹುಡಿಯನ್ನು ರಸ್ತೆಯಲ್ಲೇ ಬಿಟ್ಟ ಪರಿಣಾಮ ಅಪಘಾತ ಹೆಚ್ಚಳ

ಹೆದ್ದಾರಿಗೆ ಹಾಕಲಾದ ಡಾಮಾರಿನ ಒಂದು ಪದರವನ್ನು ಯಂತ್ರದ ಮೂಲಕ ತೆಗೆಯುತಿದ್ದು, ತೆಗೆದ ಡಾಮಾರು ಹುಡಿಯನ್ನು ರಸ್ತೆಯಲ್ಲೇ ಬಿಟ್ಟು ಹೋದ ಪರಿಣಾಮ ದ್ವಿಚಕ್ರ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಘಟನೆ ಪಡುಬಿದ್ರಿಯ ಬೀಡು ಬಳಿ ರಾತ್ರಿ ನಡೆದಿದೆ.ಮಂಗಳೂರು ಕಡೆಯಿಂದಲೂ ಹೆದ್ದಾರಿ ಡಾಮಾರಿನ ಪದರವನ್ನು ಯಂತ್ರದ ಮೂಲಕ ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ರಾತ್ರಿ ಹೊತ್ತು ರಸ್ತೆಯ ಸುಸ್ಥಿತಿ ಗಮನಕ್ಕೆ ಬಾರದೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದ ಬೈಕ್ ಸವಾರರು