ಪುತ್ತೂರು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ .2024-25ನೇ ಸಾಲಿನ ಸಾಧನೆಗಾಗಿ ನೀಡಲ್ಪಡುವ ಪ್ರಶಸ್ತಿಯನ್ನು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಮಹಾಸಭೆಯಲ್ಲಿ ಪ್ರದಾನ ಮಾಡಲಾಯಿತು.ಸತತ ಏಳನೇ ಬಾರಿಗೆ ಪ್ರಶಸ್ತಿಗೆ ಭಾಜನರಾಗಿರುವ ಆರ್ಯಾಪು ಸಹಕಾರಿ ಸಂಘಕ್ಕ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಹಾಗೂ ಮುಖ್ಯ ಕಾರ್ಯ
ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿನ ಶಾಲಾ ಶೈಕ್ಷಣಿಕ ಸಂಘಗಳ ಉದ್ಘಾಟನೆ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ನೆರವೇರಿತು. ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಗ್ರಾಫಿಕ್ ಡಿಸೈನರ್ ಶ್ರೀ ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೀವನ ಅನ್ನೋದು ಸದಾ ಗೆಲುವು ಅಲ್ಲ ಸತತ ಹೋರಾಟ. ಏನೇ ಕೆಲಸ ಮಾಡಿ ಅದರಲ್ಲಿ ಶ್ರದ್ದೆ ಇರಲಿ.ಸಾಮಾಜಿಕ ಜಾಲತಾಣ ವನ್ನು ಒಳಿತಿಗೆ ಬಳಸಿದ್ರೆ ಅದ್ಬುತ ಯಶಸ್ಸು ನಿಮ್ಮದಾಗತ್ತೆ ಎಂದರು.
ಪುತ್ತೂರು: ಪುತ್ತೂರಿನ ಕನ್ನಡದ ಕಟ್ಟಾಳು ಬನ್ನೂರು ನಿವಾಸಿ ಸೀತಾರಾಮ ರೈ ಬನ್ನೂರು(76ವ)ರವರು ಜು.15 ರಂದು ನಿಧನರಾದರು. ಪುತ್ತೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಹಿತ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಭಾಗವಹಿಸುತ್ತಿದ್ದ ಸೀತಾರಾಮ ರೈ ಬನ್ನೂರು ಅವರು ಹೃದಯಾಘಾತಕ್ಕೊಳಗಾಗಿ ಹಲವು ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ಪುತ್ರಿ ರೋಜಾ, ಪುತ್ರರಾದ ಬ್ಲಾಕ್ ಕಾಂಗ್ರೆಸ್
ಪುತ್ತೂರು: ಪಡೂರು ಗ್ರಾಮದ ಮುಂಡಾಜೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಪುತ್ತೂರು ಪಟ್ಟೂರು ಮುಂಡಾಜೆ ನಿವಾಸಿ ಗಿರಿಜಾ ದೇವಿ, ಮಂಟು ಪಾಸ್ವಾನ ದಂಪತಿ ಪುತ್ರಿ ರೂಪ (19ವ) ಜು.1ರಂದು ನಾಪತ್ತೆಯಾಗಿದ್ದರು. ಇದೀಗ ಅವರು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ರೂಪ ಅವರ ತಾಯಿ ಮಂಗಳೂರಿನ ನರ್ಸಿಂಗ್ ಹೋಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಂದೆ ಉಡುಪಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದು,
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತದ ದೈಹಿಕ ಸಂಪರ್ಕ ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ ಜೆ.ರಾವ್ ನನ್ನು ಪೊಲೀಸರು ಮೈಸೂರು ಸಮೀಪ ಬಂಧಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ. ಹೈಸ್ಕೂಲ್ ಓದುವ ಸಂದರ್ಭ ಸಹಪಾಠಿಯಾಗಿದ್ದು ಪ್ರಸ್ತುತ ಪದವಿ
ಪುತ್ತೂರು: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 6ನೇ ನೂತನ ಶಾಖೆಯು ಪುತ್ತೂರು ಮುಖ್ಯರಸ್ತೆ ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‍ನಲ್ಲಿ ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ಶ್ರೀ ಲಕ್ಷ್ಮಾಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿರುವ ಮಾಜಿ ಮಂತ್ರಿ ಜೆ.ಕೃಷ್ಣ ಪಾಲೆಮಾರ್ ಮತ್ತು ಜಿ.ಎಲ್ ಗ್ರೂಪ್‌ನ ಅಧ್ಯಕ್ಷ ಜಿ.ಎಲ್ ಬಲರಾಮ ಆಚಾರ್ಯ ಅವರು ಉದ್ಘಾಟಿಸಿದರು. ಶ್ರೀ ಲಕ್ಷಣಾನಂದ
ಪುತ್ತೂರು: ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮ ದಲ್ಲಿ ಮೈ ಭಾರತ್ ನವದೆಹಲಿಯ ಮೈ ಭಾರತ್ ನ ಯುವ ರಾಯಭಾರಿಯಾಗಿ ಪಾಲ್ಗೊಳ್ಳಲು ದಕ್ಷಿಣ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶ್ರೀಕಾಂತ್ ಪೂಜಾರಿ ಬಿರಾವು ಕರ್ನಾಟಕದಿಂದ ಆಯ್ಕೆಯಾಗಿ ಪ್ರತಿನಿದಿಸಲಿದ್ದಾರೆ.ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ಮೈ ಭಾರತ್ (ನೆಹರು ಯುವ ಕೇಂದ್ರ) ನವದೆಹಲಿ ಇದರ ವತಿಯಿಂದ ದೇಶದ ಪ್ರತಿ ರಾಜ್ಯದಿಂದ 15 ವರ್ಷ ದಿಂದ 28 ವರ್ಷ ವಯೋಮಿತಿ ವರೆಗಿನ
ಪುತ್ತೂರು: ಖುರತುಸ್ಸಾದಾತ್ ಕೂರತ್ ತಂಜಳ್ ಉರೂಸ್ ಪ್ರಯುಕ್ತ ಜೂ.29ರಂದು ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕ ಅನ್ನದಾನ ವಿತರಣೆ ನಡೆಯುತ್ತಿದ್ದು ರಾಜ್ಯದ ವಿವಿಧ ಕಡೆಗಳಿಂದ ಮತ್ತು ಕೇರಳದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅನ್ನದಾನ ಸ್ವೀಕರಿಸುತ್ತಿದ್ದಾರೆ.ಬೆಳಗ್ಗಿನಿಂದಲೇ ಕೂರತ್‌ನಲ್ಲಿ ಜನರು ಕಿಕ್ಕಿರಿದು ಸೇರಿದ್ದು, ಮದ್ಯಾಹ್ನದ ವೇಳೆಯಂತೂ ಸವಣೂರುವರೆಗೂ ಟ್ರಾಫಿಕ್ ಜಾಂ ಉಂಟಾಗಿತ್ತು. ಸ್ವಯಂ ಸೇವಕರು ಮತ್ತು ಪೊಲೀಸರು ಟ್ರಾಫಿಕ್ ಕಂಟ್ರೋಲ್
ಪೆರ್ನಾಜೆ:ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ).ಪಾಂಬಾರ್ ಇದರ ವತಿಯಿಂದ ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರ ಪುತ್ತುರಲ್ಲಿ ಜೂನ್ 15 ರಂದು ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು. ಆ ವೇದಿಕೆಯಲ್ಲಿ ವಿಶಿಷ್ಟ ವಿಶೇಷ ಬರಹಗಾರ ತಮ್ಮ ಕೃಷಿ ಜೇನು ಕೃಷಿ ಜೇನುಗಡ್ಡ ಸಂಶೋಧನೆ ಬರಹ ಕಲಾ ಸೇವೆಗಾಗಿ ಅಂತರ್ ರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿಗೆ, ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳನ್ನು
ಪುತ್ತೂರು ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಯಿತು. ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕಿಯಾದ ಶ್ರೀಮತಿ ಸಿಂಧು .ವಿ.ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪರಿಸರದ ಮಹತ್ವವನ್ನು ತಿಳಿಸಿದರು. ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿ ಹಾಗೂ ಜಾಗತಿಕ ತಾಪಮಾನ ಏರುವುದಕ್ಕೆ ಇರುವ ಅನೇಕ ಕಾರಣಗಳನ್ನು



























