ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ರವರಿಗೆ ಅಭಿನಂದನೆ

ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ರವರಿಗೆ ಅಭಿನಂದನಾ ಸಮಾರಂಭ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ.ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸಂಪಾಜೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ ಮುಂಡಡ್ಕ, ಮಾಜಿ ಅಧ್ಯಕ್ಷರಾದ ಕೆ ಪಿ ಜಗದೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ. ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಯಮುನಾ ಬಿ.ಎಸ್ ಸದಸ್ಯರು ಗಳಾದ ವಿಮಲಾ ಪ್ರಸಾದ್, ವಿಜಯ ಕುಮಾರ್,ಅನುಪಮ ಉಪಸ್ತಿತರಿದ್ದರು
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಟಿ ಎಂ ಶಾಹಿದ್ ತೆಕ್ಕಿಲ್ ರವರನ್ನು ಸನ್ಮಾನಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಏನು ಎಂಬುದನ್ನು ತಿಳಿಸಿದರು.
ಮಾಜಿ ಅಧ್ಯಕ್ಷರಾದ ಕೆ ಪಿ ಜಗದೀಶ್ ಮಾತನಾಡಿ ಶಾಹಿದ್ ತೆಕ್ಕಿಲ್ ಎಲ್ಲರನ್ನು ಪ್ರೀತಿಸುವ ವ್ಯಕ್ತಿ. ಸಂಪಾಜೆ ಗ್ರಾಮದಲ್ಲಿ ಅವರ ಕೊಡುಗೆ ಅಪಾರ ಪೇರಡ್ಕ ಗೂನಡ್ಕ ಸಂಪರ್ಕಿಸುವ ಸೇತುವೆ ನಿರ್ಮಾಣ ಕೋಟಿ ರೂಪಾಯಿ ಅನುಧಾನ ತರಿಸಿದ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕಿಶೋರ್ ಕುಮಾರ್ ಮಾತನಾಡಿ ಅವರಿಗೆ ಮೊದಲೇ ಅವಕಾಶ ಸಿಗಬೇಕಿತ್ತು. ಅವರು ಮಡಿದ ಕೆಲಸಕ್ಕೆ ಮಂತ್ರಿ ಸ್ಥಾನ ನೀಡಬೇಕು ಎಂದರು
ಸೊಸೈಟಿ ನಿರ್ದೇಶಕರಾದ ಗಣಪತಿ ಭಟ್ ಮಾತನಾಡಿ ಎಲ್ಲರನ್ನು ಪ್ರೀತಿಸುವ ಜನ ಪ್ರತಿನಿಧಿಗಳು ಅಲ್ಲದೆ ಇದ್ದರು ಅನುಧಾನ ತರಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಮೂಲಕ ಸಂಪಾಜೆ ಗ್ರಾಮ ಇನ್ನಷ್ಟು ಅಭಿವೃದ್ಧಿ ಆಗಲಿ ಎಂದು ಶುಭ ಹಾರೈಸಿದರು
ಸೊಸೈಟಿ ಉಪಾಧ್ಯಕ್ಷರಾದ ಯಮುನಾ ಬಿ . ಎಸ್.ಮಾತನಾಡಿ ಸಂಜೀವಿನಿ ಒಕ್ಕೂಟದ ಅಭಿವೃದ್ಧಿಗೆ ಸಹಾಯ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದರು ಹಾಗೂ ಶಾಹಿದ್ ಅವರು ಗ್ರಾಮಕ್ಕೆ ನೀಡಿದ ಕೊಡುಗೆ ಬಗ್ಗೆ ಪ್ರಸ್ತಾಪ ಮಾಡಿದರು
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ, ಜಗದೀಶ್ ರೈ, ಎಸ್ ಕೆ ಹನೀಫ್ಅಬುಸಾಲಿ ಶುಭ ಹಾರೈಸಿದರು
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ವಿವಿದ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂತಿ ಬಿ. ಎಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು