ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ — ಸಂಸ್ಕೃತ ಸಂಭಾಷಣಾ ಶಿಬಿರ ಉದ್ಘಾಟನೆ
ಸುಳ್ಯದ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 10 ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರವು ಡಿಸೆಂಬರ್ 08 ರಂದು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ಭವ್ಯವಾಗಿ ಉದ್ಘಾಟನೆಯಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ.ವಿ. ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ, ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು.

ಈ ಶಿಬಿರವನ್ನು ಸಂಸ್ಕೃತ ಭಾರತೀ ಕಾಸರಗೋಡು–ಮಂಗಳೂರು ಗ್ರಾಮಾಂತರ ವಿಭಾಗದ ಪ್ರಶಿಕ್ಷಕಿಯಾಗಿರುವ ಶ್ರೀಮತಿ ಸಂಧ್ಯಾ ಕುಮಾರಿ ಕುಂಟಾರು ಅವರು ಪ್ರಥಮ ವರ್ಷದ BAMS ವಿದ್ಯಾರ್ಥಿಗಳಿಗೆ માર્ગದರ್ಶನ ನೀಡುವ ಮೂಲಕ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕು. ಕೇತನ ಆಚಾರ್ – ಸ್ವಾಗತ, ಕು. ತನ್ವಿ ಬನ್ಸ್ಖೋ – ವಂದನೆ, ಕು. ಅನುಶ್ರೀ ಐ.ಕೆ. ಮತ್ತು ಬಳಗ – ಪ್ರಾರ್ಥನೆ, ಸಮರ್ಥ ಅರಳಿ ಹಾಗೂ ಕು. ಸನ್ನಿಧಿ ಎನ್. – ಕಾರ್ಯಕ್ರಮ ನಿರೂಪಣೆ ನಿರುಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಅಕಾಡೆಮಿಕ್ ಸಂಯೋಜಕರಾದ ಡಾ. ಕವಿತಾ ಬಿ.ಎಂ., ಸಂಹಿತಾ–ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ. ಶ್ರೀಜ ಎಸ್., ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಶಶಿಕಲಾ ದೇರ್ಲ, ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


















