ಮಂಜೇಶ್ವರ :ತಲಪಾಡಿಯಲ್ಲಿ ಭೀಕರ ವಾಹನ ಅಪಘಾತ:ಹಲವರ ಸ್ಥಿತಿ ಗಂಭೀರ

ಮಂಜೇಶ್ವರ : ತಲಪಾಡಿಯಲ್ಲಿ ಭೀಕರ ವಾಹನ ಅಪಘಾತ ಕಾಸರಗೋಡು ಭಾಗದಿಂದ ಮಂಗಳೂರು ಕಡೆ ಪ್ರಯಾಣಿಕರನ್ನು ಹೇರಿ ಕೊಂಡು ಹೋಗುತಿದ್ದ ಕರ್ನಾಟಕ ಸಾರಿಗೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ಭಾಗದಲ್ಲಿ ನಿಲುಗಡೆಗೊಂಡಿದ್ದ ಆಟೋ ರಿಕ್ಷಾ ಹಾಗೂ ಬಸ್ಸಿಗಾಗಿ ಕಾಯತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡಿದಿದೆ.

ಹೊಡೆತದ ರಭಸಕ್ಕೆ ಆಟೋ ರಿಕ್ಷಾ ಪೂರ್ಣವಾಗಿ ಜಖಂ ಗೊಂಡಿದೆ. ಆಟೋ ರಿಕ್ಷಾದಲ್ಲಿದ್ದ ಕೆ ಸಿ ರೋಡ್ ನಿವಾಸಿಗಳಾದ ಆಯಿಷಾ, ನಸೀಮ, ಕದೀಜ, ಸೇರಿದಂತೆ 7 ಮಂದಿಯನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ . ಇನ್ನೂ ಮರಣ ಸಂಖ್ಯೆ ಅಧಿಕಗೊಳ್ಳುವ ಸಾಧ್ಯತೆ ಇದೆ.

ಕೆ ಸಿ ರೋಡ್ ನಿಂದ ತೂಮಿನಾಡಿನಲ್ಲಿರುವ ಸಂಬಂಧಿಕರ ಮನೆಗೆ ತೆರಳುತಿದ್ದ ಆಟೋ ರಿಕ್ಷಾದಲ್ಲಿ ಸಂಚರಿಸುತಿದ್ದ ಕುಟುಂಬ ಹಾಗೂ ಅಲ್ಲಿ ಬಸ್ಸಿಗಾಗಿ ಕಾಯುತಿದ್ದ ಇಬ್ಬರು ಸೇರಿ ಒಟ್ಟು 7 ಮಂದಿ ಅಪಘಾತಕ್ಕೀಡಾಗಿದ್ದಾರೆ