ರೇಶಿಮೆಯ ಸೆಳೆತದಲ್ಲಿ ಮೂಲ ಮರೆತ ಜನರು

ಪಟ್ಟ್ ಸೀರೆ, ಪಟ್ಟು ರವ್ಕೆ, ಪಟ್ಟೆ ಕುಂಟು ಎಂದರೆ ಪಟ್ಟೆ ಬಟ್ಟೆ ಈ ಎಲ್ಲ ನುಡಿಗಳು ಇಂದಿನ ತಲೆಮಾರಿನವರಿಗೆ ಗೊತ್ತೇ ಇಲ್ಲ.

ಇದರಲ್ಲಿ ತುಳು ಕನ್ನಡ ಅಲ್ಲದೆ ದ್ರಾವಿಡದ ಮೂಲ ನುಡಿಗಳು ಅಡಗಿವೆ. ತುಳುವಿನಲ್ಲಿ ಪಕ್ಕಿದ ಪಟ್ಟ್ ಎಂದರೆ ಹಕ್ಕಿಯ ಗೂಡು ಎಂದು ಅರ್ಥ.
ರೇಶಿಮೆ ನೂಲನ್ನು ರೇಶ್ಮೆ ಹುಳುವಿನ ಗೂಡಿನಿಂದ ತೆಗೆಯುತ್ತಾರೆ. ಹಾಗಾಗಿ ಅದು ಪಟ್ಟ್, ಪಟ್ಟೆ; ಈಗಿನವರು ಈ ಪಟ್ಟೆ ಸೀರೆ ಎಂದರೆ ಕೇಳಿ ಅರಿಯರು; ರೇಶಿಮೆಯ ಸೆಳೆತದಲ್ಲಿ ಮೂಲ ಮರೆತಿದ್ದಾರೆ. ಇಂತಾ ಸಂದರ್ಭಗಳಲ್ಲಿ ಎರಡೂ ನುಡಿ ಬದಲಿಸಿ ಬಳಸುವುದನ್ನು ಕಲಿತಿರಬೇಕು.

ರೇಶಮ್ ಎಂಬ ಪರ್ಶಿಯನ್ ಅರಾಬಿಕ್ ನುಡಿಯಿಂದ ರೇಶಿಮೆ, ರೇಶ್ಮೆ ಬಂದಿದೆ. ಅದನ್ನು ರೇಷ್ಮೆ ಎಂದು ಬರೆಯುವುದು ತಪ್ಪು.
ಚೀನಾದಿಂದ ರೇಶಿಮೆ ನೂಲು ತರಿಸುತ್ತಿದ್ದರು; ಈಗಲೂ ತರಿಸುತ್ತಾರೆ. ಭಾರತದಲ್ಲಿ ಸ್ಥಳೀಯವಾಗಿ ಮೊದಲು ರೇಶ್ಮೆ ಕೃಷಿ ಆರಂಭಿಸಿದವನು ಟಿಪ್ಪು ಸುಲ್ತಾನ್.

Related Posts

Leave a Reply

Your email address will not be published.