ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ ” ಕನ್ನಡ ವೀಡಿಯೋ ಅಲ್ಬಮ್ ಸಾಂಗ್ ಬಿಡುಗಡೆ

ಪಡುಬಿದ್ರಿ : ಪುರಾತನ ದೇವಸ್ಥಾನದ ಹಿನ್ನೆಲೆಯನ್ನು ಇಂದಿನ ಜನತೆಗೆ ತಿಳಿಯ ಪಡಿಸುವ ಕಾರ್ಯಗಳು ನಡೆಯಬೇಕಾಗಿದೆ. ಇಂದಿನ ಯುವ ಜನತೆ ನಮ್ಮ ಸಂಸ್ಕೃತಿ, ಸಂಪ್ರದಾಯದ ಊಳಿಸುವ ಕಾರ್ಯ ಮಾಡಬೇಕಾಗಿದೆ….ಇಂತಹ ಅಲ್ಬಮ್ ಸಾಂಗ್ ನ ಜೊತೆ ಚಲನಚಿತ್ರ ಕೂಡಾ ನಿರ್ಮಾಣವಾಗಲಿ ” ಎಂದು‌ ಮಾಜಿ.ತಾ.ಪಂ‌.ಸದಸ್ಯ ನವೀನಚಂದ್ರ ಶೆಟ್ಟಿ ‌ ಹೇಳಿದರು.

ಅವರು ಪಡುಬಿದ್ರಿ ಭಾರತ್ ಸಿನಿಮಾದಲ್ಲಿ ನಡೆದ “ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ” ಕನ್ನಡ ವಿಡಿಯೋ ಅಲ್ಬಮ್ ಸಾಂಗ್ ನ ಪ್ರದರ್ಶನ ವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಂದನಾ ರೈ, ಕಾಪು ರಕ್ಷಣಾಪುರ ಜವನರ್ ಅಧ್ಯಕ್ಷರಾದ *ನವೀನ್ ಎನ್ ಶೆಟ್ಟಿ, ಉಡುಪಿ ಜಿಲ್ಲಾ ಮೀನುಗಾರರ ‌ಕಾಂಗ್ರೇಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಕಾಪು ತಾಲೂಕು ಪತ್ರಕರ್ತರ ಸಂಘ ದ ಮಾಜಿ ಅಧ್ಯಕ್ಷ ಸುರೇಶ್ ಎರ್ಮಾಳ್, ಸಾಮಾಜಿಕ ಹೋರಾಟಗಾರ ಶೇಖರ್ ಹೆಜ್ಮಾಡಿ,ವ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ‌ಸಮಿತಿ ಅಧ್ಯಕ್ಷ ಕರುಣಾಕರ್ ಪೂಜಾರಿ, ಪಡುಬಿದ್ರಿ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷೆ ಗೀತಾ ಅರುಣ್ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ ಉಡುಪಿ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಅಧ್ಯಕ್ಷ ರಚನ್ ಸಾಲ್ಯಾನ್ ಇನ್ನರ್ ವೀಲ್ ಕ್ಲಬ್ ಪೂರ್ವ ಅಧ್ಯಕ್ಷೆ ನಮೃತಾ ಮಹೇಶ್ ನಿರ್ದೇಶಕ ಶರತ್ ಎಸ್ ಪೂಜಾರಿ, ನಿರ್ಮಾಪಕ ಸಂತೋಷ್ ಪಡುಬಿದ್ರಿ ನಾಯಕಿ ನಟಿ ಸುಪ್ರೀತಾ ಪೂಜಾರಿ ಪಾಂಗಾಳ, ಗಾಯಕಿ ನಮಿತಾ ಕಾರ್ಕಳ, ಭಜನಾ ಗಾಯಕ ಸುರೇಶ್ ಪಲಿಮಾರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.