ಸುಳ್ಯ :ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ: ವಿಶ್ವ ಅಂಗದಾನ ದಿನಾಚರಣೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಸುಳ್ಯದಲ್ಲಿ ದಿನಾಂಕ 13-08-2025ರಂದು ರಚನಾ ಶಾರೀರ ವಿಭಾಗದ ಮುಂದಾಳತ್ವದಲ್ಲಿ, ವಿಶ್ವ ಅಂಗಧಾನ ದಿನಾಚರಣೆ ಪ್ರಯುಕ್ತ ಮಾನವ ಶರೀರದ ಅಂಗಾಂಗ ಮಾದರಿಯ ವಸ್ತು ಪ್ರದರ್ಶನ, ಬೀದಿ ನಾಟಕ ಹಾಗೂ ಅಂಗಾಂಗ ದಾನದ ನೈಜ ಘಟನೆಯನ್ನಾದರಿಸಿದ ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಲೇಜಿನ ಶಲ್ಯ ತಂತ್ರ ವಿಭಾಗ ಮುಖ್ಯಸ್ಥರಾದ ಡಾ. ಹರ್ಷವರ್ಧನ ಕೆ., ವಹಿಸಿ ಅಂಗಾಂಗದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಅಂಗಾಂಗ ದಾನ ಮಾಡುವುದರಿಂದ ಒಂದಿಷ್ಟು ಜನರ ಬಾಳಿಗೆ ಆಸರೆಯಾಗುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸನತ್ ಕುಮಾರ್ ಡಿ. ಜಿ. ಯವರು ಅಂಗದಾನ ಮಾಡಲು ಎಲ್ಲರೂ ಮುಂದೆ ಬರಬೇಕು ಎಂಬುದಾಗಿ ಕರೆ ಕೊಟ್ಟರು.
ಕಾಲೇಜಿನ ರಚನಾ ಶರೀರ ವಿಭಾಗ ಮುಖ್ಯಸ್ಥರು ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳಾದ ಡಾ. ವಿನಯ್ ಶಂಕರ್ ಭಾರಧ್ವಾಜ್ ರವರು ಅಂಗಾಂಗ ದಿನದ ಇತಿಹಾಸ, ಮಹತ್ವ ವನ್ನು ಅಂಕಿ ಅಂಶಗಳ ಮೂಲಕ ವಿವರಿಸಿದರು.
ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಮಾನವ ಶರೀರದ ಅಂಗಾಂಗ ಮಾದರಿಯ ವಸ್ತು ಪ್ರದರ್ಶನ, ಬೀದಿ ನಾಟಕ ಹಾಗೂ ಅಂಗಾಂಗ ದಾನದ ನೈಜ ಘಟನಾಧರಿತ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿಧ್ಯಾರ್ಥಿಗಳು, ಕಲಿಕಾ ವೈದ್ಯರುಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕುಮಾರಿ ನೀಲಿಮಾ ಮತ್ತು ಬಳಗ ಪ್ರಾರ್ಥಿಸಿ, ಅಧ್ವಿಕಾ ಮತ್ತು ಮೇಘಾ ಕಾರ್ಯಕ್ರಮ ವನ್ನು ನಿರೂಪಿಸಿ,
ಧ್ಯಾನ ವಿಜಯ್ ಸ್ವಾಗತಿಸಿ , ಶ್ರಾವ್ಯ ಆರ್. ವಂದಿಸಿದರು.