Home Posts tagged #belthangady (Page 4)

ಬೆಳ್ತಂಗಡಿ : ನೇತ್ರಾವತಿ ಬಚಾವೋ ಆಂದೋಲನ ಸಮಿತಿ ಸಮಾವೇಶ

ನೇತ್ರಾವತಿ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸಮಾವೇಶವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಶನಿವಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಪ್ರಧಾನ ಸಂಚಾಲಕ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಿತ್ ಶಿವರಾಂ ರವರು ” ನಮ್ಮ ಜಿಲ್ಲೆಯ ಜೀವನದಿ

ವಿಷ ಪೂರಿತ ಅಣಬೆಯ ಸೇವನೆಯೇ : ಮೃತದೇಹ ಮನೆ ಅಂಗಳದಲ್ಲಿ

ಬೆಳ್ತಂಗಡಿ: ಪುದುವೆಟ್ಟು ಸಮೀಪದ ಪಲ್ಲದಪಲ್ಕೆ ಎಂಬಲ್ಲಿ ಒಂದೇ ಕುಟುಂಬದ ಇಬ್ಬರ ಮೃತದೇಹ ಮನೆ ಅಂಗಳದಲ್ಲಿ ಪತ್ತೆಯಾಗಿದ್ದು ಕಾಡಿನ ವಿಷ ಪೂರಿತ ಅಣಬೆಯ ಸೇವನೆಯೇ ಸಾವಿಗೆ ಕಾರಣ ಎಂದು ಸಂಶಯಿಸಲಾಗಿದೆ. ಮೃತರನ್ನು ಪಲ್ಲದಪಲ್ಕೆ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಇವರ ಪುತ್ರ ಓಡಿ(45) ಮೃತಪಟ್ಟವರು. ಬಡ ಕುಟುಂಬದ ಮನೆಯಲ್ಲಿ ಮನೆ ಯಾಜಮಾನ ಗುರುವ ಸಹಿತ ಇಬ್ಬರು ಪುತ್ರರು ವಾಸವಾಗಿದ್ದರು. ಮಂಗಳವಾರ ಇವರ ಇಬ್ಬರ ಮೃತದೇಹ‌ ಮನೆ ಮುಂಭಾಗ

ರಿಕ್ಷಾ ನಿಲ್ದಾಣದಲ್ಲಿ ಬೃಹತ್ ಗಾತ್ರದ ಅಪಾಯಕಾರಿ ಗುಂಡಿ

ಬೆಳ್ತಂಗಡಿ ಪಟ್ಟಣದಲ್ಲಿರುವ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿರುವ ಖಾಸಗಿ ರಿಕ್ಷಾ ನಿಲ್ದಾಣದಲ್ಲಿ ಬೃಹತ್ ಗಾತ್ರದ ಅಪಾಯಕಾರಿ ಗುಂಡಿಯೊಂದು ನಿರ್ಮಾಣವಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೊಯ್ಯೂರು ಖಾಸಗಿ ರಿಕ್ಷಾ ನಿಲ್ದಾಣದಲ್ಲಿ ಈ ಅಪಾಯಕಾರಿ ಗುಂಡಿ ನಿರ್ಮಾಣವಾಗಿದೆ. ಈಗಾಗಲೇ ಗುಂಡಿ ಬಿದ್ದು ವಾರವಾಗಿದ್ದರೂ ಕೂಡ ಪಟ್ಟಣ ಪಂಚಾಯತ್ ಆಡಳಿತ ಮೌನವಾಗಿದೆ. ಇಲ್ಲಿ ದಿನನಿತ್ಯ ನೂರಾರು ವಾಹನಗಳು ಚಲಿಸುತ್ತದೆ. ಸಮೀಪದ

ಬೆಳ್ತಂಗಡಿ : ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ನೆರಿಯ ಗ್ರಾಮದ ಅರ್ಹ ಫಲಾನುಭವಿಗಳಿಗೆ ಕೆಲವು ಅಶಕ್ತರ ಮನೆಗೆ ಮನೆಯ ಹಕ್ಕು ಪತ್ರ ತಂದು ನೀಡಿದರು. ಹಕ್ಕು ಪತ್ರ ವಿತರಣಾ ಸಮಾರಂಭ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಕಾಳಿಕಾಂಬ ದೇವಸ್ಥಾನದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ನೆರಿಯ ಗ್ರಾಮದ ಹಲವಾರು ಕುಟುಂಬಗಳಿಗೆ ಹಕ್ಕುಪತ್ರ ಸಿಗದೆ 70 ವರ್ಷಗಳಿಂದ ಅಲೆದಾಡುತಿದ್ದರು ಆದರೆ ಈಗ ಹಕ್ಕು ಪತ್ರವನ್ನು ಅವರ

ಬೆಳ್ತಂಗಡಿ : ರಸ್ತೆ ಗುಂಡಿಯಲ್ಲಿ ದೀಪಾವಳಿ

ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡದ ಸರ್ಕಾರ , ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಖಂಡಿಸಿ ದೀಪಾವಳಿ ಬಲಿಪಾಡ್ಯದ ಸಂಭ್ರಮದ ನಡುವೆಯೂ ಸಮಾನಮನಸ್ಕರ ಯುವಕರ ತಂಡ ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆ ಆಚರಣೆ ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆಯಿತು. ಬುಧವಾರ ಸಂಜೆ ಬೆಳ್ತಂಗಡಿ ಸಮೀಪದ ಲಾಯಿಲ ಗ್ರಾಮದ ರಾಘವೇಂದ್ರ ಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ

ಬೆಳ್ತಂಗಡಿಗೆ ತೆರಳುತ್ತಿದ್ದ ಶಾಸಕರ ಕಾರನ್ನು ಅಡ್ಡಗಟ್ಟಿ ತಲವಾರು ಝಳಪಿಸಿದ ದುಷ್ಕರ್ಮಿಗಳು

ದುಷ್ಕರ್ಮಿಗಳ ಗುಂಪೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಅಡ್ಡಗಟ್ಟಿ ತಲವಾರು ಝಳಪಿಸಿದ ಘಟನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.ಗುರುವಾರ ರಾತ್ರಿ 11.30ರ ವೇಳೆಗೆ ಘಟನೆ ನಡೆದಿದ್ದು, ಶಾಸಕರು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಬೆಳ್ತಂಗಡಿಗೆ ತೆರಳುತ್ತಿದ್ದರು. ತನ್ನ ಕಾರು ಬದಲಾಗಿ ಶಾಸಕರು ತಮ್ಮ ಸಂಬಂಧಿಯೋರ್ವರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪಡೀಲ್‌ನಿಂದ ಫರಂಗಿಪೇಟೆಯವರೆಗೆ ದುಷ್ಕರ್ಮಿಗಳು

ಬೆಳ್ತಂಗಡಿ: ಹಲ್ಲೆ ತಡೆಯಲು ಮುಂದಾದ ವ್ಯಕ್ತಿಯೇ ಸಾವು

ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಯುವಕರ ತಂಡವೊಂದು ಹಲ್ಲೆ ನಡೆಸಿದ್ದು, ಈ ವೇಳೆ ಜಗಳ ತಡೆಯಲು ಬಂದ ವ್ಯಕ್ತಿಗೂ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಬೆಳ್ತಂಗಡಿಯ ಪರಾರಿ ಶಾಂತಿನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ್ (55) ಅವರು ಯುವಕರ ತಂಡದಿಂದ ಹಲ್ಲೆಗೊಳಗಾಗಿ ಮೃತಪಟ್ಟವರು. ಜಾರಪ್ಪ ನಾಯ್ಕ್ ಅವರ

ರಸ್ತೆ ಬದಿಯ ಬೀದಿ ಬದಿಯ ಅಂಗಡಿಗಳ ತೆರವು : ಬೆಳ್ತಂಗಡಿಯಲ್ಲಿ ಸಿಪಿಐಎಂ ಪ್ರತಿಭಟನೆ

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ರಾಜ್ಯ ಹೆದ್ದಾರಿಯ ಬದಿಯಲ್ಲಿ ಬೀದಿ ಬದಿ ವ್ಯಾಪಾರದಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಂಗಡಿಯನ್ನು ದ್ವಂಸ ಮಾಡಿದ್ದನ್ನು ವಿರೋಧಿಸಿ ಅಲ್ಲಿನ ವ್ಯಾಪಾರಸ್ಥರು ಹಾಗೂ ಕಮ್ಯುನಿಸ್ಟ್ ಪಾರ್ಟಿಯ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನ್ಯಾಯವಾದಿಗಳಾದ ಬಿ. ಎಂ.ಭಟ್ ಮಾತನಾಡಿ ಕಾನೂನು ಹಾಗೂ ಸಂವಿಧಾನ ವಿರೋಧಿಸಿ ಸುಪ್ರೀಂ ಕೋರ್ಟಿನ ಆದೇಶವನ್ನು ಉಲ್ಲಂಘಿಸಿ pwd ಇಲಾಖೆ

ಕೃಷಿ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ : ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ

ಕೇಂದ್ರ ಸರಕಾರ ಮೂರು ಕೃಷಿ ಕಾಯಿದೆ ಹಿಂಪಡೆದ ಪರಿಣಾಮ ಬೆಳ್ತಂಗಡಿಯಲ್ಲಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ಮಾಜಿ ಶಾಸಕರಾದ ವಸಂತ ಬಂಗೇರಾ ಮಾತನಾಡಿ ಕೇಂದ್ರ ಸರಕಾರ ಮೂರು ಕೃಷಿ ಮಸೂದೆಗಳನ್ನು ವಾಪಸ್ ಪಡೆದು ಕೊಂಡಿದೆ ಈ ದೇಶದ ರೈತರ ಒಗ್ಗಟ್ಟಿನ ಹೋರಾಟ ಇದಕ್ಕೆ ಕಾರಣ,ಒಂದು ವರ್ಷದಿಂದ ಹೋರಾಟ ಮಾಡುತಿದ್ದ ರೈತರು ಈ ಹಂತಕ್ಕೆ ತಲುಪುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದವರು ಮಸೂದೆ ವಾಪಸ್ ಪಡೆದಿದ್ದಾರೆ, ನಾವು ಈ ವಿಚಾರವಾಗಿ

ತಂತ್ರಜ್ಞಾನದ ಕ್ರಿಯಾಶೀಲ ಸಾಧ್ಯತೆಗಳ ಮೂಲಕ ಜಾಗತಿಕ ವೃತ್ತಿಪರ ಅವಕಾಶ ಪಡೆಯಬಹುದು

ಉಜಿರೆ : ಡಿಜಿಟಲ್ ತಂತ್ರಜ್ಞಾನದ ಕ್ರಿಯಾಶೀಲ ನೈಪುಣ್ಯತೆಯೊಂದಿಗಿನ ತಂತ್ರಗಳನ್ನುರೂಢಿಸಿಕೊಳ್ಳುವ ಮೂಲಕ ಯುವಕರು ಜಾಗತಿಕ ವೃತ್ತಿಪರ ಅವಕಾಶಗಳನ್ನು ಪಡೆಯಬಹುದಾಗಿದೆ ಎಂದುಓಮನ್ ನ ಹಿರಿಯ ಕಲಾ ನಿರ್ದೇಶಕ ಲಕ್ಷ್ಮಿಕಾಂತ್ ಕಾನಂಗಿ ಹೇಳಿದರು. ಉಜಿರೆಯ ಎಸ್ ಡಿ ಎಂ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ, ವೃತ್ತಿ ಮಾರ್ಗದರ್ಶನ ಮತ್ತು ಮಾನವ ಸಂಪನ್ನೂಲ ಕೇಂದ್ರ ಮತ್ತು ಪ್ಲೇಸ್ಮೆಂಟ್ ಸೆಲ್ ನ ಜಂಟಿ ಆಶ್ರಯದಲ್ಲಿ ಆನ್ಲೈನ್ ವೇದಿಕೆಯಲ್ಲಿ ಆಯೋಜಿಸಿದ್ದ ಹಿರಿಯ