KARKALA : ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ದಿಯ ರಿಪೋರ್ಟ್ ಕಾರ್ಡ್ ನೀಡುವುದು ನನ್ನ ಜವಾಬ್ದಾರಿ ಯಾಗಿದೆ. ಅಭಿವೃದ್ಧಿಗೆ ಹೊಸ ಸ್ಪರ್ಷ ನೀಡಿ ಸ್ವರ್ಣ ಕಾರ್ಕಳ ಪರಿಕಲ್ಪಯು ಈಡೇರುತ್ತಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳ ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆದ ಕ್ಷೇತ್ರದ ಸಾಧನೆಯ
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕಲ್ಲಿಮಾರ್ ವಿನಲ್ಲಿ ಪುರಾತನ ಕಾಲದ ನಾಗಕಲ್ಲು ಪತ್ತೆಯಾಗಿದೆ. ನಾಗ ಬನದ ಸಮೀಪ ಅಗೆಯುವಾಗ ಈ ಕಲ್ಲು ಪತ್ತೆಯಾಗಿದೆ. ನಾಗಕಲ್ಲು ತುಂಡಾಗಿದ್ದು ಬಹಳ ಪುರಾತನವಾದ ಅಪರೂಪದ ಶಿಲ್ಪ ಕಲೆ ಇದರಲ್ಲಿ ಗೋಚರಿಸುತ್ತಿದೆ. ರವಿಪ್ರಸಾದ್ ಭಟ್ ಸಹಕಾರದಲ್ಲಿ ಈ ಅಪರೂಪದ ಶಿಲ್ಪರೂಪದ ನಾಗಕಲ್ಲು ಪತ್ತೆಯಾಗಿದೆ. ಸುಮಾರು 500 ವರ್ಷಗಳ ಹಿಂದಿನ ಪುರಾತನ ಶಿಲ್ಪ ಕಲೆಯ ಹಾಗೆ ಕಂಡುಬರುತ್ತಿದೆ.
ಕಾರ್ಕಳ, ಶ್ರೀ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾ ಮಹೋತ್ಸವ ನಡೆಯುತ್ತಿದ್ದು, ಶ್ರೀ ಮುಖ್ಯ ಪ್ರಾಣ ದೇವರ ಅಷ್ಟಬಂಧ ಸಹಿತ ಪ್ರತಿಷ್ಠೆ ,ಪ್ರತಿಷ್ಠಾ ಕಲಶಾಭಿಷೇಕ , ಪ್ರಸನ್ನ ಪೂಜೆ,108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ , ಪ್ರಸನ್ನ ಪೂಜೆ, ನ್ಯಾಸ ಪೂಜೆ,ಚಂಡಿಕಾ ಯಾಗ, ಮಾರಿಯಮ್ಮ ಮತ್ತು ಉಚ್ಚಂಗಿ ಮಾರಿಯಮ್ಮ ನ ಬಿಂಬ ಶುದ್ದಿ ಪ್ರಕ್ರಿಯೆ, ಬಿಂಬ ಶುದ್ದಿ ಹೋಮ ಗಳು ಮನ್ಯುಸುಕ್ತ ಯಾಗ, ಕಾಳಿ ಗಾಯತ್ರಿ ಮಂತ್ರ ಹೋಮ, ಮದ್ಯಾಹ್ನ ಅನ್ನ ಸಂತರ್ಪಣೆ ಶ್ರೀ ಮಾರಿಯಮ್ಮ
ಕಾರ್ಕಳದ ಅಭಿವೃದ್ಧಿಯಲ್ಲಿ ಮೂಲಸೌಕರ್ಯ ಜೊತೆಗೆ ಸಾರ್ವಜನಿಕರ ವೇಗಕ್ಕೆ ತಕ್ಕಂತೆ ಮಹತ್ತರವಾದ ದೂರವನ್ನು ಅಭಿವೃದ್ಧಿ ಕ್ಷೇತ್ರದಲ್ಲಿ ಕ್ರಮಿಸಿದ್ದೇನೆ. 10 ದಿಕ್ಕಿನಲ್ಲೂ ರಸ್ತೆಗಳು ಹೊಸತನಕ್ಕೆ ಮಗ್ಗು ಬದಲಿಸಿಕೊಂಡಿವೆ. ಇಡೀ ಕಾರ್ಕಳಕ್ಕೆ ಹೊಸ ರೂಪ ನೀಡಲಾಗಿದೆ ಎಂದು ಇಂದಿನ ಸಚಿವ ಸುನಿಲ್ ಕುಮಾರ್ ಹೇಳಿದರು. ಕಾರ್ಕಳ ನಗರ ಭಾಗಕ್ಕೆ ಹತ್ತಿರದಲ್ಲಿರುವ ಜೋಡು ರಸ್ತೆಯಲ್ಲಿ 6.50 ಕೋಟಿ ವೆಚ್ಚದ ಸಮಗ್ರವಾಗಿ ಅಭಿವೃದ್ಧಿ ಕಾಮಗಾರಿ ಅಲಂಕಾರಿಕ ದೀಪ ಉದ್ಘಾಟಿಸಿ
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಕಾರ್ಕಳದಲ್ಲಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಂಡರು. ಕಾರ್ಕಳದ ಅನಂತಶಯನ ವೃತ್ತದಿಂದ ಅಜೇಕಾರ್ ವರೆಗೆ ಬೃಹತ್ ಬೈಕ್ ರ್‍ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುಮಾಕೇಶವ್ ರ್‍ಯಾಲಿಗೆ ಚಾಲನೆ ನೀಡಿದರು. ಸಚಿವರಾದ ವಿ. ಸುನಿಲ್ ಕುಮಾರ್ ಸೇರಿದಂತೆ ಸುಮಾರು 2000 ಬೈಕುಗಳು ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು.
ಕಾರ್ಕಳ: ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲದ ಐದನೇ ಅಭ್ಯರ್ಥಿಗೆ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಜಯಶಾಲಿಯಾಗಲಿದ್ದೇವೆ ಎಂದು ಕಾರ್ಕಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ನೀರೆ ಕೃಷ್ಣ ಶೆಟ್ಟಿ, ಮಂಜುನಾಥ್ ಪೂಜಾರಿ ಮುದ್ರಾಡಿ, ಡಿ ಆರ್ ರಾಜು, ಸುರೇಂದ್ರ ಶೆಟ್ಟಿ ಪುನರುಚ್ಚರಿಸಿದ್ದಾರೆ. ಕಾರ್ಕಳ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೆಬ್ರಿ ಬ್ಲಾಕ್
ಪುರಸಭೆ ವ್ಯಾಪ್ತಿಯಲ್ಲಿ ಬಹುಕೋಟಿ ರೂಪಾಯಿ ವೆಚ್ಚದ ಒಳಚರಂಡಿ ಕಳಪೆ ಕಾಮಗಾರಿಕೆಯಿಂದ ಕೂಡಿದೆ ಪರಿಸರದ ನಿವಾಸಿಗಳ ಬಾವಿಗಳು ಮಲಿನಗೊಂಡಿವೆ ಇದಕ್ಕಾಗಿ ಒಳಚರಂಡಿ ಮಂಡಳಿ ವಿರುದ್ಧ ಕ್ರಿಮಿನಲ್ ದಾಖಲೆ ದಾಖಲಿಸುವಂತೆ ಶುಭದರಾವ್ ಆಗ್ರಹಿಸಿದರು . ಅಧ್ಯಕ್ಷ ಸುಮಕೇಶವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಮೂರು ಮಾರ್ಗದಿಂದ ರಥ ಬೀದಿ ಸೇರಿದಂತೆ ಒಳಚರಂಡಿ ಮೂಲಕ ಹಾದು ಹೋದ ಕಡೆಗಳಲ್ಲಿ ಮಲಿನ ನೀರು ಸೋರಿಕೆಯಾಗುತ್ತಿದೆ. ಒತ್ತಡ
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಬಡಿದು ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನೀರೆ ಗುಡ್ಡೆಯಂಗಡಿ ಬಳಿಯಲ್ಲಿ ಮಂಗಳವಾರ ನಡೆದಿದೆ. ಪ್ರಯಾಣಿಕರು ಪುತ್ತೂರು ಮೂಲದವರೆಂದು ತಿಳಿದು ಬಂದಿದೆ.ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಈ ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಕಳ: ರಾಜ್ಯದ ಪ್ರಮುಖ ನಗರವಾದ ಮೈಸೂರು ಹಾಗೂ ಬೆಂಗಳೂರಿಗೆ ಸೀಮಿತವಾಗಿದ್ದ ಪೊಲೀಸ್ ಕವಾಯತು ಕಾರ್ಕಳದಲ್ಲಿ ನಡೆಯುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು . ಅವರು ಸ್ವರಾಜ್ ಮೈದಾನದಲ್ಲಿ ನಡೆದ ವಿಶ್ವವಿಖ್ಯಾತ ಬೈಲೂರಿನ ಪರಶುರಾಮ ಧಿಂ ಪಾರ್ಕ್ ಲೋಕಾರ್ಪಣೆಗೆ ಪ್ರಯುಕ್ತ ಪೊಲೀಸ್ ಇಲಾಖೆ ಶ್ರೀ ಭುವನೇಂದ್ರ ಕಾಲೇಜು ಇವರ ಸಹಯೋಗದಲ್ಲಿ ನಡೆದ ಆಕರ್ಷಕ ಪಂಜಿನ ಕವಾಯತು ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಸಾಂಸ್ಕೃತಿಕತೆ ಜನತೆಗೆ ಎಲ್ಲ ಆಯಾಮಗಳಲ್ಲಿನ
ಕಾರ್ಕಳ: ಪರಶುರಾಮ ಥೀಮ್ ಪಾರ್ಕ್‍ನ ಸಮಾರೋಪ ಹಾಗು ಉಡುಪಿ ಜಿಲ್ಲಾ ರಜತಮಹೋತ್ಸವದ ಸಮಾರೋಪ ಏಕಕಾಲದಲ್ಲಿಯೆ ನಡೆಯುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು. ಅವರು ಪರಶುರಾಮ ಥೀಂ ಪಾರ್ಕ್‍ನ ಸಮಾರೋಪ ಸಮಾರಂಭ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಉತ್ಸವಗಳು ಅರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾಗಬೇಕು. ಕಾರ್ಕಳ ಉತ್ಸಾವವು ರಾಜ್ಯದಲ್ಲೆಲ್ಲ



























