Home Posts tagged #karkala (Page 8)

ಕಾರ್ಕಳ : ಉದಯಕುಮಾರ್ ಶೆಟ್ಟಿ ಮುನಿಯಾಲ್ : ಪಾದಯಾತ್ರೆ ಮೂಲಕ ಮತಯಾಚನೆ

ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲ್ ರವರು ಬೆಳ್ಮಣ್ ನಲ್ಲಿ ಪಾದಯಾತ್ರೆಯ ಮೂಲಕ ಮತಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಊರಿನವರು ಪಾಲ್ಗೊಂಡಿದ್ದರು.

ಕಾರ್ಕಳ : ಸುನಿಲ್ ಪರ ಮುಂಬಯಿ ಸಂಸದ ಗೋಪಾಲ ಶೆಟ್ಟಿ ಮತಯಾಚನೆ

ಕಾರ್ಕಳ ಕ್ಷೇತ್ರದಲ್ಲಿ ಕಳೆದ ೫ ವರ್ಷದ ಅವಧಿಯಲ್ಲಿ ಅಭಿವೃದ್ಧಿಯ ನವ ಶಕ್ತಿಯೇ ನಡೆದಿದೆ. ಅದನ್ನು ಬೈಲೂರಿನ ಉಮಿಕ್ಕಳ ಬೆಟ್ಟದ ಪರಶುರಾಮ ಪ್ರತಿಮೆಯುಳ್ಳ ಥೀಮ್ ಪಾರ್ಕ್‌ಗೆ ಭೇಟಿ ನೀಡಿದೆ. ನಿಜಕ್ಕೂ ಅದನ್ನು ಕಂಡು ದಿಗ್ಬ್ರಮೆಗೊಂಡೆ, ನೂರಕ್ಕೆ ನೂರು ದೂರದೃಷ್ಟಿಯ ದೃಷ್ಟಿಕೋನದ ಯೋಜನೆಯಿದು ಎಂದು ಮುಂಬಯಿ ಬೊರಿವಲಿಯ ಕ್ಷೇತ್ರದ ಸಂಸದ ಗೋಪಾಲ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕಾರ್ಕಳದ ಮಾಳ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದರು ಕೈಗೊಂಡು ಮಾತನಾಡಿದರು.

ಕಾರ್ಕಳದ ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಬಿರುಸಿನ ಪ್ರಚಾರ

ಕಾರ್ಕಳದ ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಅವರು ಕ್ಷೇತ್ರಾದ್ಯಂತ ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಕ್ಷೇತ್ರದ ಪ್ರಭಾವಿ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಆರೋಪಿಸಿದ್ದಾರೆ. ಕ್ಷೇತ್ರಾದ್ಯಂತ ಮತದಾರರು ಭ್ರಷ್ಟಾಚಾರದ ವಿರುದ್ಧ ನಿಂತಿದ್ದು ತನ್ನ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂದು ಡಾ. ಮಮತಾ ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ : ಕಾರ್ಕಳದ ವಿವಿಧೆಡೆ ಮತಪ್ರಚಾರ

ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಕಾವು ಏರತೊಡಗಿದೆ. ಒಂದು ಕಡೆಯಿಂದ ಬಿಸಿಲಿನ ತಾಪ. ಇನ್ನೊಂದು ಕಡೆಯಿಂದ ಚುನಾವಣಾ ಪ್ರಚಾರದ ಕಾವು ಈ ಮಧ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾದ ವಿ. ಸುನಿಲ್ ಕುಮಾರ್ ಅವರು ಮುಡಾರು ಗ್ರಾಮದ ಬಜೆಗೂಳಿಯಲ್ಲಿ ಪಾದಯಾತ್ರೆ ಮೂಲಕ ಮನೆಗಳಿಗೆ ಹಾಗೂ ಅಂಗಡಿ ಹೋಟೆಲ್ ಗಳಿಗೆ ಮತ್ತು ಗೇರು ಬೀಜದ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಬಳಿ ತಮ್ಮ ಅವಧಿಯಲ್ಲಿ ಆದ ಯೋಜನೆಗಳನ್ನು ಮನದಟ್ಟು ಮಾಡಿ ಇನ್ನು

ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನ ವಿಜೃಂಭಣೆಯಿಂದ ನಡೆದ ವಾರ್ಷಿಕ ರಥೋತ್ಸವ

ಕಾರ್ಕಳ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟ್ರಮಣ ದೇವಸ್ಥಾನದ ವಾರ್ಷಿಕ ರಥೋತ್ಸವ ವಿಜಂಭಣೆಯಿಂದ ನಡೆಯಿತು.ಊರ ಪರವೂರ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರರು, ದೇವಸ್ಥಾನದ ತಂತ್ರಿ ಹಾಗೂ ಅರ್ಚಕ ವೃಂದ ಹಾಗೂ ಆಡಳಿತ ಮಂಡಳಿಯ ಸದಸ್ಯರು ಜಿ. ಎಸ್. ಬಿ. ಸಮಾಜದ ಭಾಂದವರು ಶ್ರೀ ವೆಂಕಟ್ರಮಣ ದೇವಸ್ಥಾನದ ರಥೋತ್ಸವ ದಲ್ಲೀ ಭಾಗಿಯಾದರು.

ಕಾರ್ಕಳ; ಕಡ್ತಲ ಬಿಜೆಪಿ ಕಾರ್ಯಕರ್ತರ ಸಭೆ

ಕಾರ್ಕಳ; ಕಾಂಗ್ರೆಸ್ಸಿಗೆ ಮತ ನೀಡಿದರೆ ಹಿಂದೂ ವಿರೋಧಿ ಶಕ್ತಿಗಳು ವಿಜ್ರಂಬಿಸುತ್ತವೆ, ಹಿಂದೂಗಳ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ಸಿನ ಆಸೆ, ಅಮಿಷ, ಜಾತಿ ರಾಜಕಾರಣಕ್ಕೆ ಮತ ಹಾಕದೆ ಅಭಿವೃ ದ್ಧಿಯನ್ನು ಬೆಂಬಲಿಸಿ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ವಿ ಸುನಿಲ್ ಕುಮಾರ್ ಹೇಳಿದರು. ಕಡ್ತಲ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮತೀಯವಾದಿಗಳ ಪರವಿದೆ, ಕಾಂಗ್ರೆಸ್ಸಿಗೆ ಹಾಕುವ ಒಂದೊಂದು

ಕಲ್ಯಾದ ಕೈರಬೆಟ್ಟುವಿನ ಕಾಂಗ್ರೆಸ್ಸ್ ಕಾರ್ಯಕರ್ತರು ಬಿಜೆಪಿಗೆ ಸೆರ್ಪಡೆ

ಕಾರ್ಕಳ: ಕಲ್ಯಾ ಗ್ರಾಮದ ಕೈರಬೆಟ್ಟು ಪರಿಸರದ ಸುಮಾರು 7 ಜನ ಕಾಂಗ್ರೆಸ್ಸ್ ಪಕ್ಷದ ಸಕ್ರೀಯ ಕಾರ್ಯಕರ್ತರು ಕಾರ್ಕಳ ಕ್ಷೇತ್ರದ ಶಾಸಕರು ಮತ್ತು ಸಚಿವರಾದ ಶ್ರೀ.ವಿ.ಸುನಿಲ್ ಕುಮಾರ್ ರವರ ಅಭಿವೃದ್ದಿ ಚಟುವಟಿಕೆಗಳು ಮತ್ತು ಕ್ಷೇತ್ರದ ಬಗೆಗಿನ ವಿಶೇಷ ಕಾಳಜಿಯನ್ನು ಮೆಚ್ಚಿ ಇಂದು ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.ಬಾಲೇಶ್ ಕುಮೆರೊಟ್ಟು, ಜಯ ನಾಯಕ್ ಕೈರಬೆಟ್ಟು, ಶೀನ ನಾಯಕ್ ಶೇಡಿ ಬಾಕ್ಯಾರು ರಾಧ ಕೈರಬೆಟ್ಟು, ಸುಪ್ರೀತ

ಜಿಲ್ಲಾ ಪಂಚಾಯತ್ ಸದಸ್ಯರಿಂದ ಕಾರ್ಕಳದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಟ್ಟಿ ಬಿಡುಗಡೆ

ಕಾರ್ಕಳ: ಕಾರ್ಕಳದ ಐದು ಮಂದಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ತಮ್ಮ ಅವಧಿಯಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಶಾಸಕರ ಅನುದಾನದಿಂದ ಆಗಿರುವಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ಪಟ್ಟಿ ಬಿಡುಗಡೆಗೊಳಿಸಿದರು. ಚುನಾವಣೆಯಲ್ಲಿ ನಮ್ಮ ಸಚಿವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕಾರ್ಯಕ್ಷೇತ್ರದ ಅಭಿವೃದ್ಧಿಯನ್ನು ಅವರಿಂದ ಮಾಡಿಸಿಕೊಳ್ಳಬೇಕು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯಕೋಟಿಯನ್, ಉದಯ ಶೆಟ್ಟಿ,

ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕಾರ್ಕಳ: ಕಾಂಗ್ರೆಸ್ ಪಕ್ಷ ರಾಷ್ಟ್ರ ಧ್ವಜ, ಸಂವಿಧಾನದ ಪರವಿರುವ ಪಕ್ಷ ಎಂದು ರಾಜ್ಯ ಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು. ಅವರು ಮಂಜುನಾಥ್ ಪೈ ಸಭಾಭವನದಲ್ಲಿ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದ ವಿಜಯಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಕಳೆದುಕೊಂಡಾಗ ನಮ್ಮ ಚುನಾಯಿತ ಪ್ರತಿನಿಧಿಗಳು ಯಾಕೆ ಪ್ರಶ್ನಿಸಿಲ್ಲ. ಕೊಡಗು ಭೂ ಕುಸಿತ, ಪ್ರವಾಹ, ಕೋವಿಡ್ ಸಮಯದಲ್ಲಿ ಮೃತಪಟ್ಟವರನ್ನು ಒಮ್ಮೆಯು

ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್ ನಾಮಪತ್ರ ಸಲ್ಲಿಕೆ

ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಾಲೂಕು ಕಚೇರಿಯಲ್ಲಿ ಚುನಾವಣೆ ಅಧಿಕಾರಿ ಮದನ್ ಮೋಹನ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಶ್ರೀರಾಮ ಸೇನೆಯ ಮುಖಂಡ ಗಂಗಾಧರ್ ಕುಲಕರ್ಣಿ, ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯ ಸುಭಾಸ್ ಹೆಗ್ಡೆ, ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ, ಪ್ರಮೋದ್ ಮುತಾಲಿಕ್ ಅಭಿಮಾನಿ ಸಂಘದ ಅಧ್ಯಕ್ಷ ಹರೀಶ ಅಧಿಕಾರಿ, ಚಿತ್ತರಂಜನ್ ಶೆಟ್ಟಿ ದುರ್ಗಾ