ಇಸ್ರೇಲ್ ನಲ್ಲಿರುವ ಕರಾವಳಿಯ ಜನರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತದೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ಯಾರು ಭಯ ಪಡಬೇಕಾಗಿಲ.್ಲ ಇಸ್ರೇಲ್‍ನಲ್ಲಿ ಐದು ಸಾವಿರ ದ.ಕ ಜಿಲ್ಲೆಯ ಜನರು
ಒಳ್ಳೆಯ ದಿನಗಳು ಬರಲಿದೆ ಎಂದು ದೇಶದ ಜನತೆಗೆ ಮಂಕುಬೂದಿ ಎರಚಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರ ಕಳೆದ 9 ವರ್ಷಗಳಲ್ಲಿ ನಿರಂತರವಾಗಿ ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಮೂಲಕ ಜನಸಾಮಾನ್ಯರ ಬದುಕನ್ನು ಸರ್ವನಾಶಗೊಳಿಸಿದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಯವರ ಕೈಗೊಪ್ಪಿಸಿ ದೇಶದ ಆರ್ಥಿಕತೆಯನ್ನು ದಿವಾಳಿ ಮಾಡಿದೆ.ಇಂತಹ ಜನದ್ರೋಹಿ ಸರಕಾರ ಮತ್ತೆ ಅಧಿಕಾರಕ್ಕೇರಿದರೆ ದೇಶದ ಸ್ವಾತಂತ್ರ್ಯ ಸಮಗ್ರತೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಕಟ್ಟಿಟ್ಟ
ವಿಶ್ವ ಹಿಂದೂ ಪರಿಷತ್‍ನ 60ನೇ ವರ್ಷದ ಪ್ರಯುಕ್ತ ಬಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ಶೌರ್ಯ ಜಾಗರಣ ರಥಯಾತ್ರೆ ಇಂದು ಬೆಳಗ್ಗೆ ಮಂಗಳೂರು ಪ್ರವೇಶಿಸಿದ್ದು ಅಡ್ಯಾರ್‍ನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಈ ವೇಳೆ ವಿಎಚ್ ಪಿಯ ಶರಣ್ ಪಂಪ್ ವೆಲ್, ಪುರುಷೋತ್ತಮ್, ಎಂ.ಬಿ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು. ಅಪರಾಹ್ನ 2.30ಕ್ಕೆ ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದ ವರೆಗೆ ಭವ್ಯವಾದ ಶೋಭಾಯಾತ್ರೆ ನಡೆಯಲಿದ್ದು, ವಿವಿಧ ಟ್ಯಾಬ್ಲೋಗಳು
ಮಂಗಳೂರಿನ ಮೆರಿಹಿಲ್‌ನಲ್ಲಿರುವ ನೆಕ್ಸಾ ಮಾಂಡವಿ ಮೋಟಾರ್‍ಸ್‌ನಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ 100ಕ್ಕಿಂತಲೂ ಅಧಿಕ ಕಾರುಗಳು ಮಾರಾಟವಾಗಿದೆ. ಗ್ರಾಹಕರ ಅಚ್ಚುಮೆಚ್ಚಿನ ಕಾರುಗಳಾದ ಎಕ್ಸ್‌ಎಲ್ ೬, ಫೋನ್ಕ್ಸ್, ಬಲೆನೋ, ಗ್ರಾಂಡ್ ವಿಟಾರ, ಜಿಮ್ನಿ, ಇಗ್ನೀಸ್, ಇನ್ವಿಕ್ಟೋ, ಕಿಯಾಜ್ ಕಾರುಗಳು ಮಾರಾಟವಾಗಿದೆ. ಕಾರು ಮಾರಾಟ ಕ್ಷೇತ್ರದಲ್ಲಿ ಹೆಸರು ಪಡೆದುಕೊಂಡಿರುವ ನೆಕ್ಸಾ ಕಾರು ಶೋರೂಂ ದಾಖಲೆ ಮಟ್ಟದಲ್ಲಿ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿರುವ
ಬೀದಿ ಬದಿ ವ್ಯಾಪಾರಸ್ಥರ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಮಂಗಳೂರು ಪಾಲಿಕೆಗೆ ಮುತ್ತಿಗೆ ಹಾಕಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಂದ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. 3 ವರ್ಷಗಳಿಂದ ನಮ್ಮ ಪ್ರಮಾಣ ಪತ್ರವಾಗಲೀ, ಗುರುತಿನ ಚೀಟಿಯನ್ನಾಗಲೀ ನವೀಕರಿಸಿ ನೀಡಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದರು. ಬೀದಿ ಬದಿವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮಹಾ
ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಕಾಂಗ್ರೆಸ್ ಸರ್ಕಾರದ ಒಂದು ವರ್ಗಕ್ಕೆ ಮೀಸಲಾದ ಮೃದು ನೀತಿಯೇ ಕಾರಣ ಎಂದು ಶಾಸಕ ಡಾ. ಭರತ್ ಶೆಟ್ಟಿ ಆರೋಪ ಮಾಡಿದ್ದಾರೆ. ಸುರತ್ಕಲ್‍ನ ಶಾಸಕ ಕಚೇರಿಯಲ್ಲಿ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ವಿವಿಧಡೆ ಕೋಟಿ ಕೋಟಿ ಜನ ಸೇರುವ ಗಣೇಶ ಚತುರ್ಥಿ ಶಾಂತಿಯುತವಾಗಿ ನಡೆದಿದೆ. ಆದರೆ ಮುಸಲ್ಮಾನ ಬಾಂಧವರ ಹಬ್ಬದ ಸಂಭ್ರಮದ ವೇಳೆ ಇಂತಹ
ಬಿಎಂಆರ್ ಗ್ರೂಪ್ ವತಿಯಿಂದ ವಿನ್ ಯುವರ್ ಡ್ರೀಮ್ ಹೋಮ್‍ನ ಸೀಸನ್-3ರ ಡ್ರಾ ಕಾರ್ಯಕ್ರಮವು ಅಕ್ಟೋಬರ್ 5ರಂದು ಚೊಕ್ಕಬೆಟ್ಟುವಿನ ಎಮ್‍ಜೆಎಮ್ ಹಾಲ್‍ನಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಈ ಸ್ಕೀಮ್‍ನ 15ನೇ ಡ್ರಾ ದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಮನೆಯನ್ನು ಪಡೆಯುವ ವಿಜೇತರ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಬಿಎಂಆರ್ ಗ್ರೂಪ್‍ನ ಅಧ್ಯಕ್ಷರಾದ ಇಬ್ರಾಹಿಂ, ಬಿಎಂಆರ್
ಮಂಗಳೂರು : ಕದ್ರಿ ಕಂಬಳದಲ್ಲಿರುವ ತಮ್ಮ ನಿವಾಸದಲ್ಲಿ ಇಬ್ಬರು ವೃದ್ಧೆಯರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಗಳವಾರ ಅಕ್ಟೋಬರ್ 3 ರಂದು ನಡೆದಿದೆ. ಮೃತರನ್ನು 70 ವರ್ಷ ವಯಸ್ಸಿನ ಲತಾ ಭಂಡಾರಿ ಮತ್ತು ಅವರ ಸಹೋದರಿ ಸುಂದರಿ ಶೆಟ್ಟಿ (80) ಎಂದು ಗುರುತಿಸಲಾಗಿದೆ. ಲತಾ ಭಂಡಾರಿಯವರ ಪತಿ ಜಗನಾಥ ಭಂಡಾರಿ ಎಂದಿನಂತೆ ಯಶರಾಜ್ ಬಾರ್‌ಗೆ ಕೆಲಸಕ್ಕೆ ಹೋಗಿದ್ದರು. 4:30 ಕ್ಕೆ ಮನೆಗೆ ಹಿಂದಿರುಗಿದಾಗ, ಅವರು ತಮ್ಮ ಕೋಣೆಯಲ್ಲಿ ತಮ್ಮ ಹೆಂಡತಿ ಮತ್ತು ಅತ್ತಿಗೆ
ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯ ವಸ್ತುಗಳನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದಲ್ಲಿರುವ 17 ಗೋಮಾಳ ಜಮೀನಿನಲ್ಲಿ ಹಾಕಿ ಘಟಕ ನಿರ್ಮಾಣ ಮಾಡುವುದನ್ನು ವಿರೋಧಿಸಿ ಹಾಗೂ ಜಮೀನಿನಲ್ಲಿ ದಾಖಲು ಆಗಿರುವ ಮಂಜುರಾತಿಯನ್ನು ರದ್ದು ಮಾಡುವ ಬಗ್ಗೆ ಗ್ರಾಮಸ್ಧರಿಂದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್ ಮಾತನಾಡಿ ಕಿನ್ನಿಗೋಳಿ
ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾವೂರು ಇದರ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮಂಗಲಾ ರಾವ್ ವಹಿಸಿ ಮಾತನಾಡಿ, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದಲ್ಲಿ ಅಂಗನವಾಡಿ ಕೇಂದ್ರದ ಪ್ರಾಮುಖ್ಯತೆಯ ಬಗ್ಗೆ